‘ಡಾಕು ಮಹಾರಾಜ್​’ ಆದ ಬಾಲಯ್ಯ; ಈಗ ಟೀಸರ್, ಸಂಕ್ರಾಂತಿಗೆ ಮಾಸ್ ಮಸಾಲ

‘ಡಾಕು ಮಹಾರಾಜ್​’ ಸಿನಿಮಾದ ಟೀಸರ್​ ರಿಲೀಸ್ ಮಾಡಲಾಗಿದೆ. ಮುಂದಿನ ವರ್ಷ ಸಂಕ್ರಾಂತಿ ಹಬ್ಬಕ್ಕೆ ಈ ಸಿನಿಮಾ ಬಿಡುಗಡೆ ಆಗಲಿದ್ದು, ಈಗ ಟೀಸರ್​ ಮೂಲಕ ಹೈಪ್ ಸೃಷ್ಟಿ ಮಾಡಲಾಗಿದೆ. ನಂದಮೂರಿ ಬಾಲಕೃಷ್ಣ ಅವರ ಅಭಿಮಾನಿಗಳು ಬಯಸುವಂತಹ ಎಲ್ಲ ಅಂಶಗಳು ಈ ಟೀಸರ್​ನಲ್ಲಿ ಕಾಣಿಸಿವೆ. ಸಿನಿಮಾ ಮೇಲೆ ಫ್ಯಾನ್ಸ್ ನಿರೀಕ್ಷೆ ಜಾಸ್ತಿ ಆಗಿದೆ.

‘ಡಾಕು ಮಹಾರಾಜ್​’ ಆದ ಬಾಲಯ್ಯ; ಈಗ ಟೀಸರ್, ಸಂಕ್ರಾಂತಿಗೆ ಮಾಸ್ ಮಸಾಲ
ನಂದಮೂರಿ ಬಾಲಕೃಷ್ಣ

Updated on: Nov 15, 2024 | 4:31 PM

ಮಾಸ್ ಕಮರ್ಷಿಯಲ್ ಸಿನಿಮಾಗಳ ಮೂಲಕ ಫೇಮಸ್ ಆಗಿರುವ ನಟ ನಂದಮೂರಿ ಬಾಲಕೃಷ್ಣ ಅವರ ಹೊಸ ಸಿನಿಮಾದ ಟೀಸರ್​ ಬಿಡುಗಡೆ ಆಗಿದೆ. ಈ ಸಿನಿಮಾದ ಹೆಸರು ‘ಡಾಕು ಮಹಾರಾಜ್’. ಇದರಲ್ಲಿ ಬಾಲಯ್ಯ ಅವರು ಡಕಾಯಿತನ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಕುದುರೆ ಏರಿ ಬಂದು ಅವರು ಖಡಕ್ ಆಗಿ ಡೈಲಾಗ್ ಹೊಡೆದಿದ್ದಾರೆ. ಬಾಲಯ್ಯ ಅವರ ಅಭಿಮಾನಿಗಳು ಬಯಸುವಂತಹ ಒಂದಷ್ಟು ಮಾಸ್ ಅಂಶಗಳು ‘ಡಾಕು ಮಹಾರಾಜ್’ ಟೀಸರ್​ನಲ್ಲಿ ಕಾಣಿಸಿದೆ. ಹಾಗಾದರೆ ಪೂರ್ತಿ ಸಿನಿಮಾ ಹೇಗಿರಬಹುದು ಎಂಬ ಕೌತುಕ ಮೂಡಿದೆ.

‘ಡಾಕು ಮಹಾರಾಜ್’ ಸಿನಿಮಾಗೆ ಬಾಬಿ ಕೊಲ್ಲಿ ಅವರು ನಿರ್ದೇಶನ ಮಾಡಿದ್ದಾರೆ. ಅಭಿಮಾನಿಗಳ ಸಮ್ಮುಖದಲ್ಲಿ ಟೀಸರ್​ ಬಿಡುಗಡೆ ಮಾಡಲಾಗಿದೆ. ಟೀಸರ್​ನ ಕೊನೆಯಲ್ಲಿ ಸಿನಿಮಾದ ರಿಲೀಸ್ ದಿನಾಂಕದ ಬಗ್ಗೆಯೂ ಅಪ್​ಡೇಟ್​ ನೀಡಲಾಗಿದೆ. 2025ರ ಸಂಕ್ರಾಂತಿ ಹಬ್ಬಕ್ಕೆ (ಜನವರಿ 12) ‘ಡಾಕು ಮಹಾರಾಜ್’ ಸಿನಿಮಾ ತೆರೆಕಾಣಲಿದೆ. ಹಾಗಾಗಿ ಬರುವ ಸಂಕ್ರಾಂತಿ ಹಬ್ಬವು ಬಾಲಯ್ಯ ಅಭಿಮಾನಿಗಳಿಗೆ ಮಾಸ್ ಆಗಿರಲಿದೆ.

ಇದನ್ನೂ ಓದಿ: ‘ರಾಷ್ಟ್ರ ಪ್ರಶಸ್ತಿ ವಿಚಾರದಲ್ಲಿ ನೋವಾಗಿತ್ತು’: ಬಾಲಯ್ಯ ಎದುರು ಅಲ್ಲು ಅರ್ಜುನ್ ಮಾತು

ನಂದಮೂರಿ ಬಾಲಕೃಷ್ಣ ಅವರು ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ‘ಡಾಕು ಮಹಾರಾಜ್’ ಸಿನಿಮಾದಲ್ಲಿ ಬಾಲಯ್ಯ ಅವರು ಯಾವುದೇ ಡ್ಯೂಪ್ ಇಲ್ಲದೇ ಸಾಹಸ ಮಾಡಿದ್ದಾರೆ ಎಂದು ನಿರ್ದೇಶಕರು ಹೇಳಿದ್ದಾರೆ. ಟೀಸರ್​ ನೋಡಿದ ಬಳಿಕ ಅಭಿಮಾನಿಗಳಲ್ಲಿ ಈ ಸಿನಿಮಾ ಬಗ್ಗೆ ನಿರೀಕ್ಷೆ ಜಾಸ್ತಿ ಆಗಿದೆ. ಎಷ್ಟು ಬೇಗ ಸಂಕ್ರಾಂತಿ ಹಬ್ಬ ಬರುತ್ತೋ ಎಂದು ಬಾಲಯ್ಯ ಫ್ಯಾನ್ಸ್ ಕಾಯುತ್ತಿದ್ದಾರೆ.

ಬಾಲಯ್ಯ ಅವರ ಸಿನಿಮಾ ಎಂದರೆ ಮಾಸ್ ಡೈಲಾಗ್​ಗಳು ಇರಲೇಬೇಕು. ‘ಡಾಕು ಮಹಾರಾಜ್’ ಟೀಸರ್​ನಲ್ಲೂ ಅದು ಮುಂದುವರಿದಿದೆ. ‘ಇದು ರಾಜ್ಯವೇ ಇಲ್ಲದೇ ಯುದ್ಧ ಮಾಡಿದ ರಾಜನ ಕಥೆ. ಸಾವಿಗೆ ನಡುಕ ಹುಟ್ಟಿಸಿದ ಮಹಾರಾಜನ ಕಥೆ ಇದು’ ಎಂದು ಬಾಲಯ್ಯ ಅವರ ಪಾತ್ರಕ್ಕೆ ಇಂಟ್ರೊಡಕ್ಷನ್​ ನೀಡಲಾಗಿದೆ. ತಮನ್ ಎಸ್. ಅವರು ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us