ಬಿಸಿ ನೀರಿಗೆ ಮದ್ಯ ಬೆರೆಸಿ ಕುಡಿಯುತ್ತಾರೆ ಬಾಲಯ್ಯ; ಅಳಿಯನೇ ರಿವೀಲ್ ಮಾಡಿದ ಸಂಗತಿ

|

Updated on: Jun 03, 2024 | 11:01 AM

‘ಗ್ಯಾಂಗ್ಸ್ ಆಫ್ ಗೋದಾವರಿ’ ಸಿನಿಮಾದ ಪ್ರೀ-ರಿಲೀಸ್ ಈವೆಂಟ್​ಗೆ ತೆರಳಿದ್ದರು ಬಾಲಯ್ಯ. ವೇದಿಕೆ ಮೇಲೆ ಅವರು ಅಂಜಲಿ ಅವರನ್ನು ತಳ್ಳಿದ್ದರು. ಇದಕ್ಕೂ ಮೊದಲು ಅವರ ಕಾಲಿನ ಸಮೀಪ ನೀರಿನ ಬಾಟಲಿಯಲ್ಲಿ ಮದ್ಯದ ರೀತಿಯ ದ್ರವ ಇತ್ತು. ಈಗ ಅವರ ಅಳಿಯ ಹೇಳಿರೋ ವಿಡಿಯೋ ವೈರಲ್ ಆಗಿದೆ.

ಬಿಸಿ ನೀರಿಗೆ ಮದ್ಯ ಬೆರೆಸಿ ಕುಡಿಯುತ್ತಾರೆ ಬಾಲಯ್ಯ; ಅಳಿಯನೇ ರಿವೀಲ್ ಮಾಡಿದ ಸಂಗತಿ
ಶ್ರೀಭರತ್- ಬಾಲಯ್ಯ
Follow us on

ನಂದಮೂರಿ ಬಾಲಕೃಷ್ಣ (Nandamuri Balakrishna) ಅವರು ಸದ್ಯ ಸುದ್ದಿಯಲ್ಲಿದ್ದಾರೆ. ಅವರು ನಟಿ ಅಂಜಲಿ ಅವರನ್ನು ವೇದಿಕೆಯ ಮೇಲೆ ತಳ್ಳಿದ್ದರು. ಇದು ಸಾಕಷ್ಟು ಸುದ್ದಿ ಆಗಿತ್ತು. ಅವರು ಈ ರೀತಿ ಮಾಡಿದ್ದು ಸರಿ ಅಲ್ಲ ಎಂದು ಕೆಲವರು ಹೇಳಿದ್ದರು. ಈ ವೇದಿಕೆ ಮೇಲೆ ಮದ್ಯ ಇದೆ ಎಂದು ಹೇಳಲಾದ ಬಾಟಲಿ ಕಾಣಿಸಿದ್ದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಹೀಗಿರುವಾಗ ಬಾಲಯ್ಯ ಅಳಿಯ ಶ್ರೀಭರತ್ ನೀಡಿದ ಹೇಳಿಕೆ ವೈರಲ್ ಆಗಿದೆ. ಬಿಸಿ ನೀರಿನೊಂದಿಗೆ ನಮ್ಮ ಮಾವ ಎಣ್ಣೆ ಕುಡಿಯುತ್ತಾರೆ ಎಂದಿದ್ದರು ಅವರು.

ವಿವಾದ ಏನು?

ಇತ್ತೀಚೆಗೆ ‘ಗ್ಯಾಂಗ್ಸ್ ಆಫ್ ಗೋದಾವರಿ’ ಸಿನಿಮಾದ ಪ್ರೀ-ರಿಲೀಸ್ ಈವೆಂಟ್​ಗೆ ತೆರಳಿದ್ದರು ಬಾಲಯ್ಯ. ವೇದಿಕೆ ಮೇಲೆ ಅವರು ಅಂಜಲಿ ಅವರನ್ನು ತಳ್ಳಿದ್ದರು. ಇದಕ್ಕೂ ಮೊದಲು ಅವರ ಕಾಲಿನ ಸಮೀಪ ನೀರಿನ ಬಾಟಲಿಯಲ್ಲಿ ಮದ್ಯದ ರೀತಿಯ ದ್ರವ ಇತ್ತು. ಕುಡಿದಿದ್ದರಿಂದಲೇ ಬಾಲಯ್ಯ ಈ ರೀತಿ ಮಾಡಿದ್ದರು ಎಂದು ಕೆಲವರು ಹೇಳಿದರು. ಇದನ್ನು ನಿರ್ದೇಶಕರು ತಳ್ಳಿ ಹಾಕಿದ್ದರು.

ಹಳೆಯ ವಿಡಿಯೋ ವೈರಲ್

ಬಾಲಯ್ಯ ಅವರ ಅಳಿಯ ಶ್ರೀಭರತ್ ನೀಡಿದ ಹೇಳಿಕೆ ಈಗ ವೈರಲ್ ಆಗುತ್ತಿದೆ. ಸ್ಟ್ರೀಟ್ ಬೈಟ್ ಹೆಸರಿನ ಫುಡ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಶ್ರೀಭರತ್ ಮಾತನಾಡಿದ್ದರು. ‘ನನ್ನ ಮಾವ ಕುಡಿಯೋ ಮದ್ಯದ ಹೆಸರು ಹೇಳಿದರೆ ಅದರ ಸ್ಟಾಕ್ ಬೆಲೆ ಏರಿಕೆ ಆಗುತ್ತದೆ’ ಎಂದು ಅವರು ಹೇಳಿದ್ದರು. ಆ ಬಳಿಕ ಅವರು ಬ್ರ್ಯಾಂಡ್ ಯಾವುದುದು ಎಂಬುದನ್ನು ರಿವೀಲ್ ಮಾಡಿದರು.

ಇದನ್ನೂ ಓದಿ: ‘ರೀ ಅದು ಎಣ್ಣೆ ಅಲ್ಲ, ಗ್ರಾಫಿಕ್ಸ್ ಬಾಟಲಿ’; ಬಾಲಯ್ಯ ವಿವಾದ ಮುಚ್ಚಿಹಾಕಲು ನಿರ್ಮಾಪಕ ಕೊಟ್ಟ ಉತ್ತರವಿದು

‘ನನ್ನ ಮಾವ ಮ್ಯಾನ್ಷನ್ ಹೌಸ್ ಬ್ರ್ಯಾಂಡ್​ನ ಕುಡಿಯುತ್ತಾರೆ. ಅವರು ಬಿಸಿ ನೀರಿಗೆ ಮದ್ಯ ಸೇವಿಸಿ ಕುಡಿಯುತ್ತಾರೆ’ ಎಂದಿದ್ದರು ಶ್ರೀಭರತ್. ‘ನನ್ನ ಮಾವ ಯಾವಾಗಲೂ ಒಂದು ಬ್ಯಾಗ್ ಇಟ್ಟುಕೊಳ್ಳುತ್ತಾರೆ. ಅದರಲ್ಲಿ ಬಿಸಿ ನೀರು ಇರುತ್ತದೆ. ಅಮೆರಿಕ್ಕೆ ಹೋಗುವಾಗಲೂ ಅವರು ಈ ಬ್ಯಾಗ್ ತೆಗೆದುಕೊಂಡು ಹೋಗಿದ್ದರು’ ಎಂದಿದ್ದಾರೆ ಶ್ರೀಭರತ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.