ದಳಪತಿ ವಿಜಯ್ ಕೊನೆಯ ಚಿತ್ರಕ್ಕೆ ಸಂಭಾವನೆ ಕೇಳಿ ದೂರವೇ ಸರಿದ ನಿರ್ಮಾಪಕ

ವಿಜಯ್ ನಟಿಸುತ್ತಿರುವ ಎರಡು ಚಿತ್ರಗಳಲ್ಲಿ ಮೊದಲನೆಯದು ‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್'. ಈ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾ ಸೆಪ್ಟೆಂಬರ್ 5 ರಂದು ಬಿಡುಗಡೆಯಾಗಲಿದೆ. ಅವರ ಎರಡನೇ ಚಿತ್ರದ ಶೀರ್ಷಿಕೆ ಇನ್ನೂ ಅಂತಿಮಗೊಂಡಿಲ್ಲ. ಕೆಲವು ವರದಿಗಳ ಪ್ರಕಾರ ಅವರ ಕೊನೆಯ ಚಿತ್ರಕ್ಕೆ ನಿರ್ಮಾಪಕರೇ ಸಿಗುತ್ತಿಲ್ಲವಂತೆ.

ದಳಪತಿ ವಿಜಯ್ ಕೊನೆಯ ಚಿತ್ರಕ್ಕೆ ಸಂಭಾವನೆ ಕೇಳಿ ದೂರವೇ ಸರಿದ ನಿರ್ಮಾಪಕ
ವಿಜಯ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Jun 03, 2024 | 2:30 PM

ನಟ ವಿಜಯ್ ಅವರು ಸಿನಿಮಾ ರಂಗದಲ್ಲಿ ಕೊನೆಯ ದಿನಗಳನ್ನು ಕಳೆಯುತ್ತಿದ್ದಾರೆ. ಸದ್ಯ ಅವರು ‘ಗ್ರೇಟೆಸ್ಟ್ ಆಫ್ ಆಲ್ ಟೈಮ್’ (GOAT) ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಫಾರೆನ್​ನಲ್ಲಿ ನಡೆಯುತ್ತಿದೆ. ಅವರು ಇತ್ತೀಚೆಗೆ ರಾಜಕೀಯ ಸೇರೋ ಘೋಷಣೆ ಮಾಡಿದ್ದಾರೆ. ಅವರು ರಾಜಕೀಯ ಪಕ್ಷ ಕೂಡ ಅನೌನ್ಸ್. ಅವರು ನಟನೆಯನ್ನೂ ಬಿಡುವುದಾಗಿ ಹೇಳಿದ್ದಾರೆ. ಆದರೆ, ಚಿತ್ರರಂಗದಿಂದ ಹೊರಬರುವ ಮುನ್ನ ಅಭಿಮಾನಿಗಳಿಗೆ ಎರಡು ಸಿನಿಮಾಗಳನ್ನು ಉಡುಗೊರೆಯಾಗಿ ಅವರು ನೀಡಲಿದ್ದಾರೆ. ಆದರೆ, ಈಗ ಅವರ ಕೊನೆಯ ಸಿನಿಮಾ ಸಂಕಷ್ಟಕ್ಕೆ ಸಿಲುಕಿದೆಯಂತೆ. ಅವರ ಚಿತ್ರಕ್ಕೆ ನಿರ್ಮಾಪಕರು ಸಿಗುತ್ತಿಲ್ಲ ಎನ್ನಲಾಗುತ್ತಿದೆ.

ವಿಜಯ್ ನಟಿಸುತ್ತಿರುವ ಎರಡು ಚಿತ್ರಗಳಲ್ಲಿ ಮೊದಲನೆಯದು ‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್’. ಈ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾ ಸೆಪ್ಟೆಂಬರ್ 5 ರಂದು ಬಿಡುಗಡೆಯಾಗಲಿದೆ. ಅವರ ಎರಡನೇ ಚಿತ್ರದ ಶೀರ್ಷಿಕೆ ಇನ್ನೂ ಅಂತಿಮಗೊಂಡಿಲ್ಲ. ಸದ್ಯ ಆ ಯೋಜನೆಗೆ ‘ದಳಪತಿ 69’ ಎಂದು ಹೆಸರಿಡಲಾಗಿದೆ. ಈ ಚಿತ್ರಕ್ಕೆ ಅಟ್ಲಿ ನಿರ್ದೇಶನ ಮಾಡುತ್ತಾರೆ ಎನ್ನಲಾಗಿದೆ. ಕೆಲವು ವರದಿಗಳ ಪ್ರಕಾರ ಅವರ ಕೊನೆಯ ಚಿತ್ರಕ್ಕೆ ನಿರ್ಮಾಪಕರೇ ಸಿಗುತ್ತಿಲ್ಲವಂತೆ.

ವಿಜಯ್ ಚಿತ್ರಕ್ಕೆ ನಿರ್ಮಾಪಕರು ಯಾಕೆ ಸಿಗುತ್ತಿಲ್ಲ?

ವಿಜಯ್ ಅವರ 69ನೇ ಸಿನಿಮಾನ ಈ ಹಿಂದೆ ‘ಆರ್‌ಆರ್‌ಆರ್’ ಚಿತ್ರದ ಡಿವಿವಿ ದಾನಯ್ಯ ನಿರ್ಮಿಸಲಿದ್ದಾರೆ ಎಂದು ವರದಿಯಾಗಿತ್ತು. ಆದರೆ ಈಗ ಅವರು ಹಿಂದೆ ಸರಿದಿದ್ದಾರೆ. ದೊಡ್ಡ ಬಜೆಟ್ ಚಿತ್ರಗಳನ್ನು ನಿರ್ಮಾಣ ಮಾಡಲು ದಾನಯ್ಯ ಸಖತ್ ಫೇಮಸ್. ಆದಾಗ್ಯೂ ಅವರು ಈ ಸಿನಿಮಾ ನಿರ್ಮಾಣ ಮಾಡಲು ಆಸಕ್ತಿ ತೋರಿಸುತ್ತಿಲ್ಲ. ವಿಜಯ್ ಸಂಭಾವನೆಯೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.

ಸದ್ಯ ವಿಜಯ್ ಪ್ರತಿ ಚಿತ್ರಕ್ಕೆ 200 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ, ಆಗ ಅವರು 250 ಕೋಟಿ ರೂಪಾಯಿ ಸಂಭಾವನೆ ಪಡೆಯುವುದರ ಜೊತೆಗೆ ಎಚ್. ವಿನೋದ್ ಅವರನ್ನು ನಿರ್ದೇಶಕರನ್ನಾಗಿ ಸೇರಿಸಿಕೊಳ್ಳಲು ಸಲಹೆ ನೀಡಿದ್ದಾರೆ. ಆದರೆ, ವಿನೋದ್​ನ ನಂಬಿ ಇಷ್ಟು ದೊಡ್ಡ ಹಣ ಹೂಡಲು ನಿರ್ಮಾಪಕರು ರೆಡಿ ಇಲ್ಲವಂತೆ.

ಇದನ್ನೂ ಓದಿ: ‘GOAT’ ಸಿನಿಮಾ ಅಭಿಮಾನಿಗಳಿಗೆ ದಳಪತಿ ವಿಜಯ್ ಸರ್​ಪ್ರೈಸ್; ಎರಡು ಹಾಡು ಹಾಡಿದ ನಟ

ಸದ್ಯ ದಕ್ಷಿಣ ಭಾರತದಲ್ಲಿ ಈ ಬಗ್ಗೆ ಚರ್ಚೆ ಜೋರಾಗಿದೆ. ವಿಜಯ್ ಅವರು ತಮ್ಮ ಸಂಭಾವನೆಯನ್ನು ತಗ್ಗಿಸಿಕೊಳ್ಳುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ. ವಿಜಯ್ ಸಂಭಾವನೆಗೆ 250 ಕೋಟಿ ರೂಪಾಯಿ ಖರ್ಚಾದರೆ ಮುಂದೇನು ಎನ್ನುವ ಪ್ರಶ್ನೆ ಮೂಡಿದೆ.

ವಿಜಯ್ ನಟನೆ ಬಿಡಲು ಕಾರಣವೇನು?

ವಿಜಯ್ ಈಗ ಸಂಪೂರ್ಣವಾಗಿ ರಾಜಕೀಯಕ್ಕೆ ಸಮರ್ಪಿಸಿಕೊಳ್ಳಲು ಬಯಸುತ್ತಿರುವ ಕಾರಣ ನಟನೆಯನ್ನು ಬಿಡುತ್ತಿದ್ದಾರೆ. 2026ರಲ್ಲಿ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯತ್ತ ಗಮನ ಹರಿಸಲು ಬಯಸಿದ್ದಾರೆ. ತಾವು ಹುಟ್ಟು ಹಾಕಿರುವ ಪಕ್ಷಕ್ಕೆ ‘ತಮಿಳಗ ವೆಟ್ರಿ ಕಳಗಂ’ ಎಂದು ಹೆಸರಿಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:17 pm, Mon, 3 June 24

ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ