‘GOAT’ ಸಿನಿಮಾ ಅಭಿಮಾನಿಗಳಿಗೆ ದಳಪತಿ ವಿಜಯ್ ಸರ್​ಪ್ರೈಸ್; ಎರಡು ಹಾಡು ಹಾಡಿದ ನಟ

‘ಗೋಟ್’ ಸಿನಿಮಾ ಶೂಟಿಂಗ್ ಪೂರ್ಣಗೊಳ್ಳುವ ಹಂತ ತಲುಪಿದೆ. ಈ ಚಿತ್ರದ ಕ್ಲೈಮ್ಯಾಕ್ಸ್​ ಶೂಟ್​ಗೆ ತಂಡ ವಿದೇಶಕ್ಕೆ ತೆರಳಿದೆ. ಈ ಚಿತ್ರದ ಶೇ. 50 ಡಬ್ ಕೆಲಸಗಳನ್ನು ಕೂಡ ಪೂರ್ಣಗೊಳಿಸಲಾಗಿದೆ. ಈ ಚಿತ್ರದ ಸಂಗೀತ ಸಂಯೋಜಕ ಯುವಾನ್ ಶಂಕರ್ ರಾಜ ಅವರು ಒಂದು ಅಚ್ಚರಿಯ ವಿಚಾರ ರಿವೀಲ್ ಮಾಡಿದ್ದಾರೆ.

‘GOAT’ ಸಿನಿಮಾ ಅಭಿಮಾನಿಗಳಿಗೆ ದಳಪತಿ ವಿಜಯ್ ಸರ್​ಪ್ರೈಸ್; ಎರಡು ಹಾಡು ಹಾಡಿದ ನಟ
ವಿಜಯ್
Follow us
|

Updated on: May 28, 2024 | 12:40 PM

ಸೂಪರ್ ಸ್ಟಾರ್ ದಳಪತಿ ವಿಜಯ್ ‘GOAT’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅವರು ರಾಜಕೀಯದಲ್ಲಿ ಆ್ಯಕ್ಟೀವ್ ಆಗುವುದರಿಂದ ಇದು ಅವರ ಕೊನೆಯ ಸಿನಿಮಾ ಆಗಲಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಈ ಚಿತ್ರದಲ್ಲಿ ಅಭಿಮಾನಿಗಳಿಗೆ ಭರಪೂರ ಮನರಂಜನೆ ಸಿಗಲಿದೆ ಎನ್ನಲಾಗುತ್ತಿದೆ. ಈ ಸಿನಿಮಾದಿಂದ ಹೊಸ ಅಪ್​ಡೇಟ್ ಒಂದು ಸಿಕ್ಕಿದೆ. ಈ ಚಿತ್ರದ ಎರಡು ಹಾಡುಗಳನ್ನು ದಳಪತಿ ವಿಜಯ್ ಅವರೇ ಹಾಡಿದ್ದಾರಂತೆ. ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

‘ಗ್ರೇಟೆಸ್ಟ್ ಆಫ್ ಆಲ್ ಟೈಮ್’ ಅನ್ನೋದು​ ‘GOAT’ನ ವಿಸ್ತಾರ ರೂಪ. ಈ ಸಿನಿಮಾದಲ್ಲಿ ಅವರು ದ್ವಿಪಾತ್ರ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಪ್ರಭುದೇವ, ಪ್ರಶಾಂತ್, ಅಜ್ಮಲ್ ಅಮೀರ್, ಮೀನಾಕ್ಷಿ ಚೌಧರಿ, ಜಯರಾಮ್ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾ ಶೂಟಿಂಗ್ ಪೂರ್ಣಗೊಳ್ಳುವ ಹಂತ ತಲುಪಿದೆ. ಈ ಚಿತ್ರದ ಕ್ಲೈಮ್ಯಾಕ್ಸ್​ ಶೂಟ್​ಗೆ ತಂಡ ವಿದೇಶಕ್ಕೆ ತೆರಳಿದೆ. ಈ ಚಿತ್ರದ ಶೇ. 50 ಡಬ್ ಕೆಲಸಗಳನ್ನು ಕೂಡ ಪೂರ್ಣಗೊಳಿಸಲಾಗಿದೆ. ಈ ಚಿತ್ರದ ಸಂಗೀತ ಸಂಯೋಜಕ ಯುವಾನ್ ಶಂಕರ್ ರಾಜ ಅವರು ಒಂದು ಅಚ್ಚರಿಯ ವಿಚಾರ ರಿವೀಲ್ ಮಾಡಿದ್ದಾರೆ.

‘GOAT’ ಚಿತ್ರದ ‘ವಿಸಿಲ್ ಪೋಡು’ ಹಾಡಿಗೆ ವಿಜಯ್ ಧ್ವನಿ ಆಗಿದ್ದಾರೆ. ಈ ಹಾಡು ತಿಂಗಳ ಹಿಂದೆ ರಿಲೀಸ್ ಆಗಿದೆ. ಮತ್ತೊಂದು ಹಾಡನ್ನು ಕೂಡ ಅವರೇ ಹಾಡಲಿದ್ದಾರೆ. ಇದು ಅಭಿಮಾನಿಗಳ ಪಾಲಿಗೆ ದೊಡ್ಡ ಟ್ರೀಟ್ ಆಗಲಿದೆ. ‘ಮೊದಲ ಬಾರಿಗೆ ದಳಪತಿ ವಿಜಯ್ ಅವರು ಒಂದೇ ಸಿನಿಮಾದಲ್ಲಿ ಎರಡು ಹಾಡನ್ನು ಹಾಡಿದ್ದಾರೆ’ ಎಂದು ಕಾರ್ಯಕ್ರಮ ಒಂದರಲ್ಲಿ ಯುವಾನ್ ಶಂಕರ್ ರಾಜ ಮಾಹಿತಿ ರಿವೀಲ್ ಮಾಡಿದ್ದಾರೆ.

ಇದನ್ನೂ ಓದಿ: ಈ ನಟಿಗಾಗಿ ಎರಡು ಐಪಿಎಲ್ ಟಿಕೆಟ್ ಖರೀದಿಸಿದ ದಳಪತಿ ವಿಜಯ್

ದಳಪತಿ ವಿಜಯ್ ಅವರು ನಟನೆಯ ಜೊತೆಗೆ ಹಾಡುವ ಅಭ್ಯಾಸವನ್ನೂ ಇಟ್ಟುಕೊಂಡಿದ್ದಾರೆ. ‘ರಸಿಗನ್’ ಚಿತ್ರದ (1994) ‘ಬಾಂಬೆ ಸಿಟಿ..’, ‘ವಿಷ್ಣು’ ಚಿತ್ರದ ‘ತೊಟ್ಟ ಪೆಟ್ಟ..’ (1995) ಮೊದಲಾದ ಹಾಡನ್ನು ಹಾಡಿದ್ದಾರೆ. ಈಗ ಒಂದೇ ಸಿನಿಮಾದಲ್ಲಿ ಎರಡು ಹಾಡನ್ನು ಹಾಡಿರೋದು ಫ್ಯಾನ್ಸ್​ಗೆ ಖುಷಿ ನೀಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.