ಭರ್ಜರಿ ಗಳಿಕೆ ಮಾಡಿದ ‘ಢಾಕೂ ಮಹಾರಾಜ್’, ‘ಗೇಮ್ ಚೇಂಜರ್​’ಗೆ ಪೆಟ್ಟು

|

Updated on: Jan 13, 2025 | 3:35 PM

Nandamuri Balakrishna: ನಂದಮೂರಿ ಬಾಲಕೃಷ್ಣ ನಟನೆಯ ‘ಢಾಕೂ ಮಹಾರಾಜ್’ ಸಿನಿಮಾ ನಿನ್ನೆ (ಜನವರಿ 12) ಬಿಡುಗಡೆ ಆಗಿದೆ. ಕೇವಲ ತೆಲುಗು ಭಾಷೆಯಲ್ಲಿ ಮಾತ್ರವೇ ಸಿನಿಮಾ ತೆರೆಗೆ ಬಂದಿದೆ. ಪ್ಯಾನ್ ಇಂಡಿಯಾ ಸಿನಿಮಾ ಅಲ್ಲದೇ ಇದ್ದರೂ ಸಹ ಮೊದಲ ದಿನ ಭರ್ಜರಿ ಕಲೆಕ್ಷನ್ ಮಾಡಿದೆ ‘ಢಾಕೂ ಮಹಾರಾಜ್’. ಸಿನಿಮಾದ ಬಾಕ್ಸ್ ಆಫೀಸ್ ರಿಪೋರ್ಟ್ ಇಲ್ಲಿದೆ.

ಭರ್ಜರಿ ಗಳಿಕೆ ಮಾಡಿದ ‘ಢಾಕೂ ಮಹಾರಾಜ್’, ‘ಗೇಮ್ ಚೇಂಜರ್​’ಗೆ ಪೆಟ್ಟು
Daaku Maharaaj
Follow us on

ಸಂಕ್ರಾಂತಿಗೆ ತೆಲುಗು ಚಿತ್ರರಂಗ ಗರಿಗೆದರಿದೆ. ಮೂವರು ಸ್ಟಾರ್ ನಟರ ಸಿನಿಮಾಗಳು ಒಟ್ಟೊಟ್ಟಿಗೆ ಬಿಡುಗಡೆ ಆಗಿವೆ. ಕೇವಲ ಎರಡು ದಿನಗಳ ಅಂತರದಲ್ಲಿ ಎರಡು ಭಾರಿ ಬಜೆಟ್ ಸಿನಿಮಾಗಳು ತೆರೆಗೆ ಬಂದಿವೆ. ಜನವರಿ 10 ರಂದು ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ ಆಗಿತ್ತು. ನಿನ್ನೆ (ಜನವರಿ 12) ನಂದಮೂರಿ ಬಾಲಕೃಷ್ಣ ನಟನೆಯ ‘ಢಾಕೂ ಮಹಾರಾಜ್’ ಸಿನಿಮಾ ತೆರೆಗೆ ಬಂದಿದೆ. ಜನವರಿ 14 ಕ್ಕೆ ಅಂದರೆ ನಾಳೆ ವಿಕ್ಟರಿ ವೆಂಕಟೇಶ್ ನಟನೆಯ ‘ಸಂಕ್ರಾಂತಿಕಿ ವಸ್ತುನ್ನಾಮ್’ ಸಿನಿಮಾ ತೆರೆಗೆ ಬರಲಿದೆ. ಜನವರಿ 10ರಂದು ಬಿಡುಗಡೆ ಆಗಿದ್ದ ‘ಗೇಮ್ ಚೇಂಜರ್’ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡಿತ್ತು, ಆದರೆ ನಿನ್ನೆ ಬಿಡುಗಡೆ ಆದ ‘ಢಾಕೂ ಮಹಾರಾಜ್’ ಸಿನಿಮಾದಿಂದಾಗಿ ‘ಗೇಮ್ ಚೇಂಜರ್’ ಹೊಡೆತ ತಿಂದಿದೆ. ಮೊದಲ ದಿನ ‘ಢಾಕೂ ಮಹಾರಾಜ್’ ಒಳ್ಳೆಯ ಕಲೆಕ್ಷನ್ ಮಾಡಿದೆ.

ಬಾಲಕೃಷ್ಣ ನಟಿಸಿರುವ ‘ಢಾಕೂ ಮಹಾರಾಜ್’ ಕೇವಲ ತೆಲುಗು ಭಾಷೆಗಳಲ್ಲಿ ಮಾತ್ರವೇ ಬಿಡುಗಡೆ ಆಗಿದೆ. ಹಾಗಿದ್ದರೂ ಸಹ ಸಿನಿಮಾ ಮೊದಲ ದಿನ ಬಹಳ ಒಳ್ಳೆಯ ಕಲೆಕ್ಷನ್ ಮಾಡಿದೆ. ಕೇವಲ ತೆಲುಗು ಭಾಷೆಗಳಲ್ಲಿ ಮಾತ್ರವೇ ಬಿಡುಗಡೆ ಆಗಿದ್ದರೂ ಸಹ ಮೊದಲ ದಿನ 22 ಕೋಟಿಗೂ ಹೆಚ್ಚು ಮೊತ್ತವನ್ನು ‘ಢಾಕೂ ಮಹಾರಾಜ್’ ಸಿನಿಮಾ ಗಳಿಕೆ ಮಾಡಿದೆ. ಇದು ಸಾಮಾನ್ಯ ಮೊತ್ತವೇನಲ್ಲ.

‘ಢಾಕೂ ಮಹಾರಾಜ್’ ಸಿನಿಮಾ ಬಗ್ಗೆ ಧನಾತ್ಮಕ ಅಭಿಪ್ರಾಯಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿದ್ದು, ಎರಡನೇ ದಿನವೂ ಸಿನಿಮಾ ಒಳ್ಳೆಯ ಗಳಿಕೆ ಮಾಡುವ ನಿರೀಕ್ಷೆ ಹುಟ್ಟಿಸಿದೆ. ಮಾತ್ರವಲ್ಲದೆ ‘ಗೇಮ್ ಚೇಂಜರ್’ ಮತ್ತು ‘ಢಾಕೂ ಮಹಾರಾಜ್’ ಸಿನಿಮಾವನ್ನು ಪ್ರೇಕ್ಷಕರು ಹೋಲಿಸಿ ನೋಡುತ್ತಿದ್ದು, ‘ಗೇಮ್ ಚೇಂಜರ್’ಗಿಂತಲೂ ‘ಢಾಕೂ ಮಹಾರಾಜ್’ ಒಳ್ಳೆಯ ಸಿನಿಮಾ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ:ಸಿನಿಮಾ ಸಕ್ಸಸ್ ಪಾರ್ಟಿಯಲ್ಲಿ ನಟಿಯೊಂದಿಗೆ ಬಾಲಯ್ಯ ಸಖತ್ ಡ್ಯಾನ್ಸ್

‘ಗೇಮ್ ಚೇಂಜರ್’ ಸಿನಿಮಾ ಮೊದಲ ದಿನ 86 ಕೋಟಿ ಗಳಿಕೆ ಮಾಡಿತ್ತು. ಆದರೆ ಎರಡೇ ದಿನಕ್ಕೆ ಸಿನಿಮಾದ ಕಲೆಕ್ಷನ್ 17 ಕೋಟಿಗೆ ಕುಸಿದಿದೆ. ಇದಕ್ಕೆ ‘ಢಾಕೂ ಮಹಾರಾಜ್’ ಸಿನಿಮಾ ಬಿಡುಗಡೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ‘ಸಂಕ್ರಾಂತಿಕಿ ವಸ್ತುನಾಮ್’ ಸಿನಿಮಾ ನಾಳೆ ಬಿಡುಗಡೆ ಆಗುತ್ತಿದೆಯಾದರೂ ಅದು ಮಾಸ್ ಸಿನಿಮಾ ಅಲ್ಲ ಬದಲಿಗೆ ಕಾಮಿಡಿ ಸಿನಿಮಾ ಆಗಿರುವ ಕಾರಣ ಬಾಕ್ಸ್ ಆಫೀಸ್​ ಮೇಲೆ ಆ ಸಿನಿಮಾ ದೊಡ್ಡ ಪರಿಣಾಮ ಬೀರುವುದಿಲ್ಲ ಎನ್ನಲಾಗುತ್ತಿದೆ. ಹಾಗಾಗಿ ಈ ಸಂಕ್ರಾಂತಿಗೆ ‘ಢಾಕೂ ಮಹಾರಾಜ್’ ಗೆಲುವು ಸಾಧಿಸಲಿದೆ ಎಂದು ಬಾಕ್ಸ್ ಆಫೀಸ್ ವಿಶ್ಲೇಷಕರು ಹೇಳುತ್ತಿದ್ದಾರೆ.

‘ಢಾಕೂ ಮಹಾರಾಜ್’ ಸಿನಿಮಾದಲ್ಲಿ ಬಾಲಕೃಷ್ಣ ಎರಡು ಶೇಡ್​ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಊರ್ವಶಿ ರೌಟೆಲಾ, ಶ್ರದ್ಧಾ ಶ್ರೀನಾಥ್, ಪಾಯಲ್ ರಜಪೂತ್ ಅವರುಗಳು ಸಹ ನಟಿಸಿದ್ದಾರೆ. ಮಗುವೊಂದನ್ನು ಉಳಿಸುವ ವ್ಯಕ್ತಿಯ ಪಾತ್ರದಲ್ಲಿ ಬಾಲಕೃಷ್ಣ ನಟಿಸಿದ್ದಾರೆ. ಸಿನಿಮಾ ಅನ್ನು ಬಾಬಿ ಕೊಲ್ಲಿ ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಮಾಡಿರುವುದು ನಾಗ ವಂಶಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ