ತೆಲುಗು ರಾಜ್ಯಗಳ ರಾಜಕೀಯ, ಸಿನಿಮಾ ರಂಗದಲ್ಲಿ ಭಾರಿ ದೊಡ್ಡ ಪ್ರಭಾವ ಹೊಂದಿರುವ ನಂದಮೂರಿ ಕುಟುಂಬ (Nandamuri Family) ಈಗ ಮೊದಲಿನಂತಿಲ್ಲ. ಚಂದ್ರಬಾಬು ನಾಯ್ಡು, ಬಾಲಕೃಷ್ಣ ಅವರದ್ದೇ ಒಂದು ಬಣವಾಗಿದ್ದರೆ, ಜೂ ಎನ್ಟಿಆರ್ ಹಾಗೂ ಅವರ ಸಹೋದರ ನಂದಮೂರಿ ಕಲ್ಯಾಣ್ ರಾಮ್ ಅವರದ್ದೇ ಒಂದು ಪ್ರತ್ಯೇಕ ಗುಂಪಾಗಿದೆ. ನಂದಮೂರಿ ಕುಟುಂಬದವರು, ಜೂ ಎನ್ಟಿಆರ್ ಹಾಗೂ ಅವರ ಸಹೋದರನನ್ನು ಕುಟುಂಬವೆಂದು ಪರಿಗಣಿಸುವುದನ್ನೇ ಬಿಟ್ಟಿದ್ದಾರೆ. ಮಾತ್ರವಲ್ಲ, ಈಗ ಬದ್ಧ ವೈರಿಯಂತೆ ನೋಡುತ್ತಿದ್ದಾರೆ. ಇದೀಗ ಬಾಲಕೃಷ್ಣ ಅವರ ಬಣದಲ್ಲಿ ಗುರುತಿಸಿಕೊಂಡಿರುವ ನಟ ನಂದಮೂರಿ ಚೈತನ್ಯ ಕೃಷ್ಣ, ಜೂ ಎನ್ಟಿಆರ್ ಅಭಿಮಾನಿಗಳಿಗೆ, ಪರೋಕ್ಷವಾಗಿ ಜೂ ಎನ್ಟಿಆರ್ಗೆ ಎಚ್ಚರಿಕೆ ನೀಡಿದ್ದಾರೆ.
ನಂದಮೂರಿ ಕುಟುಂಬಕ್ಕೆ ಸೇರಿದ ಚೈತನಯ ಕೃಷ್ಣ, ಫೇಸ್ಬುಕ್ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ನೇರವಾಗಿ ಜೂ ಎನ್ಟಿಆರ್ ಅಭಿಮಾನಿಗಳನ್ನು ಗುರಿಯಾಗಿಸಿ ಎಚ್ಚರಿಕೆ ನೀಡಿದ್ದಾರೆ. ‘ಜೂ ಎನ್ಟಾರ್ ಅಭಿಮಾನಿಗಳಿಗೆ ಇದು ಎಚ್ಚರಿಕೆ, ಯಾರ್ಯಾರು ವೈಸಿಪಿ (ಜಗನ್ ಪಕ್ಷ) ಅದರಲ್ಲಿಯೂ ಕೊಡಲಿ ನಾನಿ ಹಾಗೂ ವಲ್ಲಭನೇನಿ ವಂಶಿಗೆ ಬೆಂಬಲ ನೀಡಿದ್ದೀರೋ ನೀವೆಲ್ಲ ನಮ್ಮನ್ನು ಏನೂ ಮಾಡಲಾಗದು, ನಮ್ಮ ಕೂದಲು ಸಹ ಕೀಳಲಾರಿರಿ. ನಾನು ಇರಬೇಕಾದರೆ ಚಂದ್ರಬಾಬು ನಾಯ್ಡು ಹಾಗೂ ಚಿಕ್ಕಪ್ಪ ನಂದಮೂರಿ ಬಾಲಕೃಷ್ಣ ಅವರನ್ನು ಮುಟ್ಟಲು ಸಹ ಸಾಧ್ಯವಿಲ್ಲ. ನನ್ನ ಸಿನಿಮಾ ಬಿಡುಗಡೆ ಆದಾಗ ನೀವೆಲ್ಲ ಸೇರಿ ನನ್ನನ್ನು ಎಷ್ಟು ಟ್ರೋಲ್ ಮಾಡಿದಿರಿ, ಇನ್ನು ಮುಂದೆ ಎಚ್ಚರಿಕೆಯಿಂದಿರಿ’ ಎಂದಿದ್ದಾರೆ.
ಇದನ್ನೂ ಓದಿ:ಎನ್ಡಿಎ ಅಧಿಕಾರಕ್ಕೆ ಬಂದರೆ ಹಜ್ ಯಾತ್ರೆಗೆ 1 ಲಕ್ಷ ರೂ. ನೆರವು: ಚಂದ್ರಬಾಬು ನಾಯ್ಡು
ವೈಸಿಪಿ ಪಕ್ಷದಲ್ಲಿರುವ ಕೊಡಲಿ ನಾನಿ ಹಾಗೂ ವಲ್ಲಭನೇನಿ ವಂಶಿ ಜೂ ಎನ್ಟಿಆರ್ಗೆ ಅತ್ಯಾಪ್ತರು. ಅಸಲಿಗೆ ಈ ಇಬ್ಬರು ಮೊದಲಿಗೆ ನಂದಮೂರಿ ಕುಟುಂಬದ ಟಿಡಿಪಿ ಪಕ್ಷದಲ್ಲಿಯೇ ಇದ್ದರು. ಈಗ ನಂದಮೂರಿ ಕುಟುಂಬ ಜೂ ಎನ್ಟಿಆರ್ ಅನ್ನು ಕುಟುಂಬದಿಂದ ಹೊರಗಿಟ್ಟಿರುವ ಕಾರಣ ಜೂ ಎನ್ಟಿಆರ್ ಅಭಿಮಾನಿಗಳು ಟಿಡಿಪಿ ಪಕ್ಷದ ಬದಲಿಗೆ ವೈಸಿಪಿ ಪಕ್ಷವನ್ನು ಬೆಂಬಲಿಸಿದ್ದಾರೆ ಎನ್ನಲಾಗುತ್ತಿದೆ. ಜೂ ಎನ್ಟಿಆರ್ ಸಹ ಚುನಾವಣೆ ಸಂದರ್ಭದಲ್ಲಿ ಟಿಡಿಪಿ ಪರವಾಗಿ ಪ್ರಚಾರಕ್ಕೆ ಹೋಗಿರಲಿಲ್ಲ. ಅಲ್ಲದೆ ಅವರ ಪರವಾಗಿ ಟ್ವೀಟ್ ಸಹ ಮಾಡಿರಲಿಲ್ಲ.
ಈಗ ಜೂ ಎನ್ಟಿಆರ್ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿರುವ ಚೈತನ್ಯ ಕೃಷ್ಣ, ಸೀನಿಯರ್ ಎಂಟಿಆರ್ ಪುತ್ರ ನಂದಮೂರಿ ಜಯಕೃಷ್ಣ ಅವರ ಪುತ್ರ ಆಗಿದ್ದಾರೆ. ಚೈತನ್ಯ ಕೃಷ್ಣ ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು, ಕೆಲವು ಸಿನಿಮಾಗಳಲ್ಲಿ ನಾಯಕ ನಟನಾಗಿ ನಟಿಸಿದ್ದಾರೆ. ಇತ್ತೀಚೆಗೆ ಪೋಷಕ ಪಾತ್ರಗಳಲ್ಲಿ, ವಿಲನ್ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ನಂದಮೂರಿ ಬಾಲಕೃಷ್ಣ ಸಹ ನೇರವಾಗಿಯೇ ಜೂ ಎನ್ಟಿಆರ್ ಅನ್ನು ಟೀಕಿಸಿದ್ದರು. ಆದರೆ ನಂದಮೂರಿ ಕುಟುಂಬವು ಯಾವ ಕಾರಣಕ್ಕೆ ಜೂ ಎನ್ಟಿಆರ್ ಹಾಗೂ ಅವರ ಸಹೋದರನನ್ನು ದೂರ ಇಟ್ಟಿಗೆ ಎಂಬುದಕ್ಕೆ ಸ್ಪಷ್ಟ ಉತ್ತರ ಇಲ್ಲ. ಚಂದ್ರಬಾಬು ನಾಯ್ಡು ಪುತ್ರ ನಾರಾ ಲೋಕೇಶ್ ಅನ್ನು ಟಿಡಿಪಿಯ ಮುಂದಿನ ನಾಯಕನ್ನಾಗಿ ಮಾಡುವ ಕಾರಣಕ್ಕೆ ಭಾರಿ ದೊಡ್ಡ ಅಭಿಮಾನಿ ವರ್ಗ ಹೊಂದಿರುವ ಜೂ ಎನ್ಟಿಆರ್ ಅನ್ನು ಹೊರಗಿಟ್ಟಿದ್ದಾರೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ