ಶಾನಯಾ ಕಪೂರ್ ಬೆಲ್ಲಿ ಡಾನ್ಸ್ ಅನ್ನ ತುಂಬಾ ಇಷ್ಟಪಡುತ್ತಾರೆ. ಹೀಗಾಗಿ ಅವರು ಮಂಗಳವಾರದಂದು ತಮ್ಮ ನೃತ್ಯ ಸೆಷನ್‌ನಿಂದ ಹೊಸ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು. ಕ್ಲಿಪ್ನಲ್ಲಿ, ಶಾನಯಾ ಕಪೂರ್ ತನ್ನ ನೃತ್ಯ ಬೋಧಕಿ ಸಂಜನಾ ಮುತ್ರೇಜಾ ಅವರೊಂದಿಗೆ ಬೆಲ್ಲಿ ಡಾನ್ಸ್ ಅನ್ನ ಅಭ್ಯಾಸ ಮಾಡುವುದನ್ನು ಕಾಣಬಹುದು. “ನಾವು ಹೀಗೆ ನೃತ್ಯವನ್ನು ಕಲಿಯುತ್ತೇವೆ! ಅತ್ಯುತ್ತಮ ನೃತ್ಯ ಸಂಯೋಜನೆ ಸಂಜನಾ ಮುತ್ರೇಜಾ” ಎಂದು ಶನಾಯ ಶೀರ್ಷಿಕೆಯಲ್ಲಿ ಬರೆದಿದ್ದಾರೆ.
ಆದರೆ, ವೀಡಿಯೊದಲ್ಲಿ ಶನಾಯ ಅವರ ನೃತ್ಯವನ್ನು ನೋಡಿದ ನಂತರ, ಆಕೆಯ ಸ್ನೇಹಿತೆ ಮತ್ತು ಅಮಿತಾಬ್ ಬಚ್ಚನ್ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ ಅವರಿಗೆ “ಹೊಟ್ಟೆ ನೋವು” ಬಂದಿದೆ. ಹೌದು, ಶನಾಯ ಕಪೂರ್ ಅವರ ಇತ್ತೀಚಿನ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿನ ಕಾಮೆಂಟ್ಗಳ ವಿಭಾಗದಲ್ಲಿ ನವ್ಯಾ, “ಇದನ್ನ ನೋಡಿ ನನಗೆ ಹೊಟ್ಟೆ ನೋವು” ಬಂತು ಎಂದು ಕಾಮೆಂಟ್ ಮಾಡಿದ್ದಾರೆ.
ಶನಾಯ ಕಪೂರ್ ಆಗಾಗ ತನ್ನ ಬೆಲ್ಲಿ ಡಾನ್ಸ್ ನ ತುಣುಕುಗಳನ್ನು ಹಂಚಿಕೊಳ್ಳುತ್ತಾರೆ. ಇದರ ಮೂಲ ಹಂತವನ್ನು ಕಲಿಯುವುದು ಅವಳಿಗೆ ಒಂದು ಸವಾಲಾಗಿತ್ತು ಆದರೆ ಹಲವು ಗಂಟೆಗಳ ಕಾಲ ಅಭ್ಯಾಸ ಮಾಡಿದ ನಂತರ ಅವಳು ಅದನ್ನು ಚೆನ್ನಾಗಿ ಕಲಿತಳು. “ಬೆಲ್ಲಿ ಡಾನ್ಸ್ ನ ಮೊದಲ ಹಂತವನ್ನು ಕಲಿಯುವುದೇ ಒಂದು ಸವಾಲಾಗಿತ್ತು! ನನ್ನನ್ನು ಪ್ರೋತ್ಸಾಹಿಸಿದಕ್ಕಾಗಿ ಸಂಜನಾ ಮುತ್ರೇಜಾ ಅವರಿಗೆ ಧನ್ಯವಾದಗಳು” ಎಂದು ಅವರು ಈ ವೀಡಿಯೊಗೆ ಶೀರ್ಷಿಕೆ ನೀಡಿದ್ದಾರೆ.
ಇನ್ನು ಕೆಲಸದ ವಿಷಯದಲ್ಲಿ, ಶನಾಯ ಕಪೂರ್ ಶೀಘ್ರದಲ್ಲೇ ಧರ್ಮ ಪ್ರೊಡಕ್ಷನ್ಸ್ ಯೋಜನೆಯ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ. ಅವರು ಕರಣ್ ಜೋಹರ್ ಅವರ ಧರ್ಮ ಕಾರ್ನರ್ ಸ್ಟೋನ್ ಏಜೆನ್ಸಿ (ಡಿಸಿಎ) ಗೆ ಸೇರಿದ್ದಾರೆ. ಮಾರ್ಚ್ನಲ್ಲಿ, ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮುಂಬರುವ ತನ್ನ ಹೊಸ ಚಿತ್ರದ ಬಗ್ಗೆ ಅವರು ಹೀಗೆ ಬರೆದಿದ್ದಾರೆ: “ಇಂದು ಬೆಳಗ್ಗೆ ನಾನು ಅತ್ಯಂತ ಖುಷಿ ಮತ್ತು ಕೃತಜ್ಞತಾ ಮನೋಭಾವನೆಯಿಂದ ಎಚ್ಚರಗೊಂಡೆ! ಧರ್ಮ ಕಾರ್ನರ್ ಸ್ಟೋನ್ ಏಜೆನ್ಸಿ ಕುಟುಂಬದೊಂದಿಗೆ ಮುಂದೆ ಒಂದು ದೊಡ್ಡ ಪ್ರಯಾಣ ಇಲ್ಲಿದೆ. ಈ ಜುಲೈನಲ್ಲಿ ಧರ್ಮ ಪ್ರೊಡಕ್ಷನ್ಸ್ ರವರೊಂದಿಗೆ ನನ್ನ ಮೊದಲ ಫಿಲ್ಮ್ (ಆಹ್!) ಅನ್ನು ಕಿಕ್ಸ್ಟಾರ್ಟ್ ಮಾಡಲು ಉತ್ಸುಕನಾಗಿದ್ದೇನೆ.