ಲೈಂಗಿಕ ಕಿರುಕುಳ ಆರೋಪ ಸುಳ್ಳು ಎಂಬುದನ್ನು ಸಾಬೀತು ಮಾಡಲು ಬೇರೆ ಹಂತಕ್ಕೆ ಹೋದ ನಿವೀನ್ ಪೌಳಿ

|

Updated on: Sep 07, 2024 | 6:58 AM

ಲೈಂಗಿಕ ಕಿರುಕುಳದ ಘಟನೆ ನಡೆದಿದ್ದು ದುಬೈನಲ್ಲಿ ಎಂದು ಆರೋಪಿಸಲಾಗಿದೆ. ಹೀಗಾಗಿ, ತನಿಖಾ ಸಂದರ್ಭದಲ್ಲಿ ತಾವು ಅಲ್ಲಿಗೆ ತೆರಳುವುದಿಲ್ಲ ಎಂಬುದನ್ನು ಸಾಬೀತು ಮಾಡಲು ಈಗಾಗಲೇ ಅವರು ಪಾಸ್​ಪೋರ್ಟ್​​ನ ಪೊಲೀಸರಿಗೆ ನೀಡಿದ್ದಾರೆ. ಸತ್ಯ ಹೊರಬರಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಲೈಂಗಿಕ ಕಿರುಕುಳ ಆರೋಪ ಸುಳ್ಳು ಎಂಬುದನ್ನು ಸಾಬೀತು ಮಾಡಲು ಬೇರೆ ಹಂತಕ್ಕೆ ಹೋದ ನಿವೀನ್ ಪೌಳಿ
ನಿವೀನ್
Follow us on

ಮಲಯಾಳಂ ನಟ ನಿವೀನ್ ಪೌಳಿ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿತ್ತು. ತಮ್ಮ ತಪ್ಪು ಇಲ್ಲ ಎಂದು ಅವರು ಹೇಳಿಕೊಂಡಿದ್ದರು. ಈಗ ಅವರು ಪೊಲೀಸ್ ಮಹಾ ನಿರ್ದೇಶಕ ಹಾಗೂ ವಿಶೇಷ ತನಿಖಾ ತಂಡಕ್ಕೆ ಪತ್ರ ಬರೆದಿದ್ದಾರೆ. ಈ ಆರೋಪದಲ್ಲಿ ತಕ್ಷಣ ತನಿಖೆ ನಡೆಸುವಂತೆ ಅವರು ಕೋರಿದ್ದಾರೆ. ನಿವೀನ್ ಅವರನ್ನು ಬೆಂಬಲಿಸಿ ಅನೇಕರು ಮಾತನಾಡಿದ್ದರು. ಈಗ ಅವರು ತಮ್ಮ ತಪ್ಪಿಲ್ಲ ಎಂಬುದುನ್ನು ಸಾಬೀತು ಮಾಡಲು ತನಿಖೆಗೆ ಆದೇಶಿಸಿದ್ದಾರೆ.

ಈ ಘಟನೆ ನಡೆದಿದ್ದು ದುಬೈನಲ್ಲಿ ಎನ್ನಲಾಗಿದೆ. ಹೀಗಾಗಿ, ತನಿಖಾ ಸಂದರ್ಭದಲ್ಲಿ ತಾವು ಅಲ್ಲಿಗೆ ತೆರಳುವುದಿಲ್ಲ ಎಂಬುದನ್ನು ಸಾಬೀತು ಮಾಡಲು ಈಗಾಗಲೇ ಅವರು ಪಾಸ್​ಪೋರ್ಟ್​​ನ ಪೊಲೀಸರಿಗೆ ನೀಡಿದ್ದಾರೆ. ಸತ್ಯ ಹೊರಬರಬೇಕು ಎಂದು ಅವರು ಆಗ್ರಹಿಸಿದ್ದಾರೆ. ‘ನನ್ನ ವಿರುದ್ಧ ಬಂದಿರೋದು ಸುಳ್ಳು ಆರೋಪ. ಈ ಪ್ರಕರಣದಲ್ಲಿ ತನಿಖೆ ಆಗಬೇಕು. ಈ ಪ್ರಕರಣದಿಂದ ತಮ್ಮ ಹೆಸರನ್ನು ತೆಗೆದುಹಾಕಿ’ ಎನ್ನುವ ಕೋರಿಕೆ ಇಟ್ಟಿದ್ದಾರೆ.

ಇತ್ತೀಚೆಗೆ ಹೇಮಾ ಸಮಿತಿ ವರದಿ ಬಹಿರಂಗ ಆಗಿತ್ತು. ಈ ವೇಳೆ ಮಲಯಾಳಂ ಚಿತ್ರರಂಗದ ಮಹಿಳೆಯರಿಗೆ ಸಾಕಷ್ಟು ತೊಂದರೆಗಳು ಆಗುತ್ತಿವೆ ಎನ್ನುವ ಬಗ್ಗೆ ಉಲ್ಲೇಖ ಆಗಿತ್ತು. ಈ ಬೆನ್ನಲ್ಲೇ ಅನೇಕರು ತಮಾಗದ ಕಹಿ ಅನುಭವ ಹೇಳಿಕೊಂಡಿದ್ದರು. ಅದೇ ರೀತಿ ಮಹಿಳೆಯೊಬ್ಬರು ತಮಗೆ ಲೈಂಗಿಕ ಕಿರುಕುಳ ಉಂಟಾಗಿದೆ ಎಂದು ಹೇಳಿದ್ದರು. ಜೊತೆಗೆ ನಿವೀನ್ ಸೇರಿ ಐವರ ವಿರುದ್ಧ ಕೇಸ್​ ದಾಖಲು ಮಾಡಿದ್ದರು.

ಇದನ್ನೂ ಓದಿ: ರಿಮೇಕ್ ಹೆಸರಲ್ಲಿ ದಕ್ಷಿಣದ ಮತ್ತೊಂದು ಚಿತ್ರವನ್ನು ಹಾಳು ಮಾಡಿದ ಬಾಲಿವುಡ್​; ಇಲ್ಲಿದೆ ಟ್ರೇಲರ್ 

‘ನನ್ನ ವಿರುದ್ಧ ಹೆಣ್ಣುಮಗಳು ಕಿರುಕುಳ ಆರೋಪ ಹೊರಿಸಿದ್ದಾರೆ. ಇದು ನಿಜವಲ್ಲ. ಇದು ಸುಳ್ಳು ಎಂಬುದನ್ನು ಸಾಬೀತು ಮಾಡಲು ನಾನು ಯಾವ ಹಂತಕ್ಕೆ ಹೋಗಲೂ ಸಿದ್ಧನಿದ್ದೇನೆ’ ಎಂದು ಅವರು ಹೇಳಿದ್ದರು. ಸಾಮಾನ್ಯವಾಗಿ ಈ ರೀತಿಯ ಪ್ರಕರಣದಲ್ಲಿ ಆರೋಪಿದಾರರು ತನಿಖೆ ಆಗಲಿ ಎಂದು ಕೋರುವುದು ಕಡಿಮೆ. ಆದರೆ, ನಿವೀನ್ ಅವರು ಬೇರೆ ಹಂತಕ್ಕೆ ತೆರಳಿದ್ದಾರೆ. ನಿವೀನ್ ಜೊತೆಗೆ ಮಲಯಾಳಂ ನಿರ್ಮಾಪಕ ಎಕೆ ಸುನೀಲ್ ಮೊದಲಾದವರ ವಿರುದ್ಧ ಈ ಆರೋಪ ಎದುರಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಎಸ್​ಐಟಿ ಪ್ರಕರಣ ವರ್ಗಾವಣೆ ಮಾಡುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.