AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಿಮೇಕ್ ಹೆಸರಲ್ಲಿ ದಕ್ಷಿಣದ ಮತ್ತೊಂದು ಚಿತ್ರವನ್ನು ಹಾಳು ಮಾಡಿದ ಬಾಲಿವುಡ್​; ಇಲ್ಲಿದೆ ಟ್ರೇಲರ್

‘ಬೆಂಗಳೂರು ಡೇಸ್​’ ಸಿನಿಮಾದಲ್ಲಿ ದುಲ್ಕರ್ ಸಲ್ಮಾನ್, ನಿವೀನ್ ಪೌಳಿ, ನಜ್ರಿಯಾ ನಜೀಮ್, ಫಹಾದ್ ಫಾಸಿಲ್ ನಟಿಸಿದ್ದರು. ಈ ಸಿನಿಮಾ ಸಿಂಪಲ್ ಆಗಿದ್ದ ಕಾರಣದಿಂದಲೇ ಚಿತ್ರವನ್ನು ಜನರು ಇಷ್ಟಪಟ್ಟರು. ಈಗ ಸಿನಿಮಾ ಹಿಂದಿಗೆ ರಿಮೇಕ್ ಆಗಿದೆ. ‘ಯಾರಿಯಾ 2’ ಹೆಸರಿನಲ್ಲಿ ಸಿನಿಮಾ ಮೂಡಿಬರುತ್ತಿದ್ದು, ಟ್ರೇಲರ್ ರಿಲೀಸ್ ಆಗಿದೆ.

ರಿಮೇಕ್ ಹೆಸರಲ್ಲಿ ದಕ್ಷಿಣದ ಮತ್ತೊಂದು ಚಿತ್ರವನ್ನು ಹಾಳು ಮಾಡಿದ ಬಾಲಿವುಡ್​; ಇಲ್ಲಿದೆ ಟ್ರೇಲರ್
ಯಾರಿಯಾನ್ 2
ರಾಜೇಶ್ ದುಗ್ಗುಮನೆ
|

Updated on:Sep 28, 2023 | 7:40 AM

Share

2014ರಲ್ಲಿ ರಿಲೀಸ್ ಆದ ‘ಬೆಂಗಳೂರು ಡೇಸ್’ ಸಿನಿಮಾ (Bangalore Days) ಸೂಪರ್ ಹಿಟ್ ಆಯಿತು. ಮಲಯಾಳಂನ ಈ ಸಿನಿಮಾ ಸಿಂಪಲ್ ಆಗಿತ್ತು. ಈ ಕಾರಣದಿಂದಲೇ ಜನರಿಗೆ ಇಷ್ಟವಾಯಿತು. ಇನ್ನು ಸಿನಿಮಾದ ಬಹುತೇಕ ಶೂಟಿಂಗ್ ಬೆಂಗಳೂರಿನಲ್ಲೇ ನಡೆದಿದ್ದರಿಂದ ಕರ್ನಾಟಕದವರಿಗೂ ಇಷ್ಟವಾಗಿತ್ತು. ಈಗ ಸಿನಿಮಾನ ಬಾಲಿವುಡ್​ನವರು ರಿಮೇಕ್ ಮಾಡಿದ್ದಾರೆ. ಚಿತ್ರದ ಟ್ರೇಲರ್ ನೋಡಿದ ಅನೇಕರು ಬಾಯಿಗೆ ಬಂದಂತೆ ಬೈದಿದ್ದಾರೆ. ಮೂಲ ಚಿತ್ರವನ್ನು ಹಾಳು ಮಾಡಲಾಗಿದೆ ಎಂದು ಅನೇಕರು ಆರೋಪಿಸಿದ್ದಾರೆ.

‘ಬೆಂಗಳೂರು ಡೇಸ್​’ ಸಿನಿಮಾದಲ್ಲಿ ದುಲ್ಕರ್ ಸಲ್ಮಾನ್, ನಿವೀನ್ ಪೌಳಿ, ನಜ್ರಿಯಾ ನಜೀಮ್, ಫಹಾದ್ ಫಾಸಿಲ್ ನಟಿಸಿದ್ದರು. ಈ ಸಿನಿಮಾ ಸಿಂಪಲ್ ಆಗಿದ್ದ ಕಾರಣದಿಂದಲೇ ಚಿತ್ರವನ್ನು ಜನರು ಇಷ್ಟಪಟ್ಟರು. ಈಗ ಸಿನಿಮಾ ಹಿಂದಿಗೆ ರಿಮೇಕ್ ಆಗಿದೆ. ‘ಯಾರಿಯಾ 2’ ಹೆಸರಿನಲ್ಲಿ ಸಿನಿಮಾ ಮೂಡಿಬರುತ್ತಿದ್ದು, ಟ್ರೇಲರ್ ರಿಲೀಸ್ ಆಗಿದೆ. ಮೂಲ ಸಿನಿಮಾ ನೋಡಿರುವ ಅನೇಕರು ಈ ಚಿತ್ರದ ಟ್ರೇಲರ್ ತೆಗಳಿದ್ದಾರೆ.

ರಾಧಿಕಾ ರಾವ್ ಹಾಗೂ ವಿನಯ್ ಸಪ್ರು ಅವರು ‘ಬೆಂಗಳೂರು ಡೇಸ್’ ಚಿತ್ರವನ್ನು ‘ಯಾರಿಯಾ 2’ ಹೆಸರಲ್ಲಿ ರಿಮೇಕ್ ಮಾಡಿದ್ದಾರೆ. ಟಿ-ಸೀರೀಸ್ ಬ್ಯಾನರ್ ಅಡಿಯಲ್ಲಿ ಭೂಷಣ್ ಕುಮಾರ್ ಮೊದಲಾದವರು ಸಿನಿಮಾನ ನಿರ್ಮಾಣ ಮಾಡಿದ್ದಾರೆ.  ದಿವ್ಯಾ ಖೊಸ್ಲಾ ಕುಮಾರ್, ಯಶ್ ದಾಸ್​ಗುಪ್ತಾ, ಅನಸ್ವರ ರಾಜನ್, ಮೀಜಾನ್ ಜಫ್ರಿ, ವಾಸಿಮ್ ಹುಸೇನ್, ಪ್ರಿಯಾ ಪ್ರಕಾಶ್ ವಾರಿಯರ್ ಮೊದಲಾದವರು ನಟಿಸಿದ್ದಾರೆ. ‘ಯಾರಿಯಾ 2’ ಚಿತ್ರ ಅಕ್ಟೋಬರ್ 20ರಂದು ರಿಲೀಸ್ ಆಗಲಿದೆ.

ಇದನ್ನೂ ಓದಿ: 80ರ ದಶಕದ ಈ ಸಿನಿಮಾದ ರಿಮೇಕ್ ‘ಜವಾನ್’? ಆ ಚಿತ್ರದ ಕಥೆಯೂ ಹೀಗೆಯೇ ಇದೆ

ತಮಿಳಿನ ‘ಕೈದಿ’ ಚಿತ್ರವನ್ನು ‘ಭೋಲಾ’ ಹೆಸರಲ್ಲಿ ಹಿಂದಿಗೆ ರಿಮೇಕ್ ಮಾಡಲಾಯಿತು. ಬಾಲಿವುಡ್​ ಫ್ಲೇವರ್ ಬೆರೆಸಲಾಯಿತು. ದಕ್ಷಿಣದ ಹಿಟ್ ಆದ ಈ ಚಿತ್ರ ಹಿಂದಿಯಲ್ಲಿ ಫ್ಲಾಪ್ ಆಯಿತು. ಅಜಯ್ ದೇವಗನ್ ಚಿತ್ರದಲ್ಲಿ ನಟಿಸಿದ್ದರು. ‘ಯಾರಿಯಾ 2’ ಚಿತ್ರದ ಕಥೆಯೂ ಹಾಗೆಯೇ ಆಗಲಿದೆ ಎಂದು ಅನೇಕರು ಹೇಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:37 am, Thu, 28 September 23

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ