ಡಾಲಿ ಧನಂಜಯ್ ಮೊದಲ ಸಂಭಾವನೆ ಎಷ್ಟು? ಇಲ್ಲಿದೆ ವಿವರ..
2013ರಲ್ಲಿ ರಿಲೀಸ್ ಆದ ‘ಡೈರೆಕ್ಟರ್ ಸ್ಪೆಷಲ್’ ಚಿತ್ರದ ಮೂಲಕ ಡಾಲಿ ಧನಂಜಯ್ ಅವರು ಹೀರೋ ಆಗಿ ಮಿಂಚಿದರು. ಧನಂಜಯ್ ಯಶಸ್ಸು ಪಡೆಯಲು ನಾಲ್ಕೈದು ವರ್ಷ ಸೈಕಲ್ ಹೊಡೆಯಬೇಕಾದ ಅನಿವಾರ್ಯತೆ ಬಂದೊದಗಿತು.
ನಟ ಡಾಲಿ ಧನಂಜಯ್ ಅವರು ಸ್ಯಾಂಡಲ್ವುಡ್ನಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ತುಂಬಾನೇ ಸಾಮಾನ್ಯ ಕುಟುಂಬದಿಂದ ಬಂದ ಅವರು ಈಗ ಬೇಡಿಕೆಯ ಹೀರೋ ಆಗಿದ್ದಾರೆ. ‘ಟಗರು’ ಚಿತ್ರದಿಂದ ಅವರ ಬದುಕು ಸಂಪೂರ್ಣವಾಗಿ ಬದಲಾಗಿದೆ. ಬಡವರ ಮಕ್ಕಳನ್ನು ಅವರು ಬೆಳೆಸುವ ಕೆಲಸದಲ್ಲಿ ಇದ್ದಾರೆ. ತಮ್ಮ ನಿರ್ಮಾಣ ಸಂಸ್ಥೆ ಮೂಲಕ ಹೊಸಬರಿಗೆ ಅವಕಾಶ ನೀಡುತ್ತಿದ್ದಾರೆ. ಹಾಗಾದರೆ ಡಾಲಿ ಧನಂಜಯ್ ಅವರ ಮೊದಲ ಸಂಭಾವನೆ ಎಷ್ಟು? ಈ ಬಗ್ಗೆ ಅವರೇ ಹೇಳಿಕೊಂಡಿದ್ದರು. ಆ ಬಗ್ಗೆ ಇಲ್ಲಿದೆ ವಿವರ.
ಡಾಲಿ ಧನಂಜಯ್ ಅವರು ಇಂಜಿನಿಯರಿಂಗ್ ಓದಿದವರು. ಅವರು ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ‘ಜಯನಗರ 4th ಬ್ಲಾಕ್’ ಶಾರ್ಟ್ ಸಿನಿಮಾ ಮೂಲಕ. ನಂತರ ಅವರು ಹೀರೋ ಆದರು. 2013ರಲ್ಲಿ ರಿಲೀಸ್ ಆದ ‘ಡೈರೆಕ್ಟರ್ ಸ್ಪೆಷಲ್’ ಚಿತ್ರದ ಮೂಲಕ ಅವರು ಹೀರೋ ಆಗಿ ಮಿಂಚಿದರು. ಧನಂಜಯ್ ಯಶಸ್ಸು ಪಡೆಯಲು ನಾಲ್ಕೈದು ವರ್ಷ ಸೈಕಲ್ ಹೊಡೆಯಬೇಕಾದ ಅನಿವಾರ್ಯತೆ ಬಂದೊದಗಿತು.
‘ಟಗರು’ ಬಳಿಕ ಧನಂಜಯ್ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡಿದರು. ಸದ್ಯ ಅವರ ಕೈಯಲ್ಲಿ ‘ಜೀಬ್ರಾ’, ‘ಪುಷ್ಪ 2’, ‘ಉತ್ತರಕಾಂಡ’ ಮೊದಲಾದ ಸಿನಿಮಾಗಳು ಇವೆ. ಈಗ ಧನಂಜಯ್ ಅವರು ಕೋಟಿ ರೂಪಾಯಿವರೆಗೂ ಸಂಭಾವನೆ ಪಡೆಯುತ್ತಾರೆ. ಆದರೆ, ಅವರಿಗೆ ಮೊದಲು ಈ ರೀತಿ ಇರಲಿಲ್ಲ. ಈ ಬಗ್ಗೆ ಅವರು ಹೇಳಿಕೊಂಡಿದ್ದಾರೆ.
View this post on Instagram
ರ‍್ಯಾಪಿಡ್ ರಶ್ಮಿಗೆ ನೀಡಿದ ಸಂದರ್ಶನದಲ್ಲಿ ಡಾಲಿ ಧನಂಜಯ್ ಅವರು ಮಾತನಾಡಿದ್ದಾರೆ. ಮೊದಲ ಸಂಭಾವನೆ ಎಷ್ಟು ಎಂದು ಅವರಿಗೆ ಕೇಳಲಾಗಿದೆ. ‘ಇನ್ಫೋಸಿಸ್ನಲ್ಲಿ ಸ್ಯಾಲರಿ ತೆಗೆದುಕೊಂಡಿದ್ದು. ವರ್ಷಕ್ಕೆ 3 ಲಕ್ಷ ಇತ್ತು ಅನಿಸುತ್ತದೆ. 21-22 ಸಾವಿರ ಕೈಗೆ ಬರುತ್ತಿತ್ತು. ಎಜ್ಯುಕೇಶನ್ ಲೋನ್ ಕ್ಲಿಯರ್ ಮಾಡೋಕೆ ಆಗಿಲ್ಲ. ಮೂರ್ನಾಲ್ಕು ಸಿನಿಮಾ ಆದ್ಮೇಲೆ ಎಜ್ಯುಕೇಶನ್ ಲೋನ್ ಕ್ಲಿಯರ್ ಮಾಡಿದ್ದು. ಮೊದಲ ಸ್ಯಾಲರಿ ಬಂದಾಗ ಅಮ್ಮ ಹಾಗೂ ಅಕ್ಕನ ಇನ್ಫೋಸಿಸ್ ಕ್ಯಾಂಪಸ್ಗೆ ಕರೆದುಕೊಂಡುಬಂದು ತೋರಿಸಿದ್ದೆ. ಅವರಿಗೆ ಮೊದಲ ಸಂಬಳದಲ್ಲಿ ಸೀರೆ ಕೊಡಿಸಿದ್ದೆ. ಅವರಿಗೆ ಅದು ಹೆಮ್ಮೆ ಆಗುತ್ತಿತ್ತು’ ಎಂದಿದ್ದಾರೆ ಅವರು.
ಇದನ್ನೂ ಓದಿ: ‘ಶಾಂತಿಯ ತೋಟದ ಹಣ್ಣಿಗೆ ಬೆಲೆ ಇಲ್ಲ’; ಕ್ರಾಂತಿಯ ಕಥೆ ಹೇಳಲು ಬಂದ ಡಾಲಿ ಧನಂಜಯ್
ಧನಂಜಯ್ ಅವರ ಕೈಯಲ್ಲಿ ಈಗ ಹಲವು ಭಿನ್ನ ಪ್ರಾಜೆಕ್ಟ್ಗಳು ಇವೆ. ಸಿನಿಮಾದಿಂದ ಸಿನಿಮಾಗೆ ಅವರ ಪಾತ್ರದ ಆಯ್ಕೆ ಬದಲಾಗುತ್ತಿದೆ. ಹೀರೋ ಆಗಿ, ವಿಲನ್ ಆಗಿ, ಪೊಲೀಸ್ ಅಧಿಕಾರಿಯಾಗಿ ಅವರು ಮಿಂಚಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:41 am, Sat, 7 September 24