ಶ್ರೀಲೀಲಾ, ರಶ್ಮಿಕಾ ಅಲ್ಲ; ಅಜಿತ್ ಚಿತ್ರಕ್ಕೆ ಜೊತೆಯಾದ ಮತ್ತೋರ್ವ ಕನ್ನಡತಿ

Ajith Kumar: ತಮಿಳಿನ ಸ್ಟಾರ್ ನಟ ಅಜಿತ್ ಕುಮಾರ್ ತಮ್ಮ ಮೋಟಾರ್ ರೇಸಿಂಗ್ ಜೊತೆಗೆ ಸಿನಿಮಾಗಳಲ್ಲೂ ನಟಿಸುತ್ತಾ ಸಾಗುತ್ತಿದ್ದಾರೆ. ಅಜಿತ್ ಕುಮಾರ್ ಅವರ ಮುಂದಿನ ಸಿನಿಮಾಕ್ಕೆ ಕನ್ನಡತಿ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಆದರೆ ಅದು ಶ್ರೀಲೀಲಾ ಅಥವಾ ರಶ್ಮಿಕಾ ಮಂದಣ್ಣ ಅಲ್ಲ. ಮತ್ಯಾರು? ಇಲ್ಲಿದೆ ನೋಡಿ ಮಾಹಿತಿ...

ಶ್ರೀಲೀಲಾ, ರಶ್ಮಿಕಾ ಅಲ್ಲ; ಅಜಿತ್ ಚಿತ್ರಕ್ಕೆ ಜೊತೆಯಾದ ಮತ್ತೋರ್ವ ಕನ್ನಡತಿ
Ajith Kumar
Updated By: ಮಂಜುನಾಥ ಸಿ.

Updated on: Aug 08, 2025 | 1:21 PM

ಅಜಿತ್ ಕುಮಾರ್ (Ajith Kumar) ನಟಿಸಿದ ಕೊನೆಯ ಚಿತ್ರ ಗುಡ್ ಬ್ಯಾಡ್ ಅಗ್ಲಿ. ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಿದ್ದು, ಅಧಿಕ್ ರವಿಚಂದ್ರನ್ ನಿರ್ದೇಶಿಸಿದ್ದಾರೆ. ಈ ಚಿತ್ರ ಏಪ್ರಿಲ್ 10ರಂದು ಬಿಡುಗಡೆಯಾಯಿತು. ಈ ಚಿತ್ರದಲ್ಲಿ ನಟ ಅಜಿತ್ ಕುಮಾರ್ ಗ್ಯಾಂಗ್‌ಸ್ಟರ್ ಪಾತ್ರವನ್ನು ನಿರ್ವಹಿಸಿದ್ದಾರೆ. ನಟಿ ತ್ರಿಶಾ ಕೃಷ್ಣನ್ ಅವರ ಜೊತೆ ನಟಿಸಿದ್ದಾರೆ. ಅಜಿತ್ ತಮ್ಮ ಮುಂದಿನ ಚಿತ್ರಕ್ಕೆ ಅಧಿಕ್ ರವಿಚಂದ್ರನ್ ನಿರ್ದೇಶನ ಇರಲಿದೆ. ಈ ಚಿತ್ರದ ನಾಯಕಿಯರ ಬಗ್ಗೆ ಚರ್ಚೆ ಜೋರಾಗಿದೆ.

ಸದ್ಯ ವೈರಲ್ ಆಗುತ್ತಿರುವ ಮಾಹಿತಿಯ ಪ್ರಕಾರ, ನಟಿ ಶ್ರೀಲೀಲಾ ಅಜಿತ್ ಕುಮಾರ್ ಅವರ 64ನೇ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಈ ಪಾತ್ರ ಶ್ರೀನಿಧಿ ಶೆಟ್ಟಿಗೆ ಹೋಗಿದೆ ಎಂಬ ವರದಿಗಳೂ ಇವೆ. ಈ ಮಾಹಿತಿ ಎಷ್ಟರ ಮಟ್ಟಿಗೆ ನಿಜವೋ ತಿಳಿದಿಲ್ಲ. ಈ ಚಿತ್ರದ ಬಗ್ಗೆ ಅಧಿಕೃತ ಘೋಷಣೆಗಳು ಆಗಸ್ಟ್ 2025ರ ಅಂತ್ಯದ ವೇಳೆಗೆ ಹೊರಬೀಳಲಿವೆ ಎಂದು ಹೇಳಲಾಗುತ್ತಿದೆ.

ನಿರ್ದೇಶಕ ಅಧಿಕ್ ರವಿಚಂದ್ರನ್ ಅವರು ಈಗಾಗಲೇ ಹಲವು ಹಿಟ್ ಚಿತ್ರಗಳನ್ನು ನೀಡಿದವರು. ಅವರು ಅಜಿತ್ ಜೊತೆ ಕೈ ಜೋಡಿಸಿದ್ದು, ದೊಡ್ಡ ಯಶಸ್ಸನ್ನು ನಿರೀಕ್ಷಿಸಲಾಗಿದೆ. ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್ ಅಜಿತ್ ಚಿತ್ರಕ್ಕೆ ಸಂಗೀತ ಸಂಯೋಜಿಸಲಿದ್ದಾರೆ. ಅಜಿತ್ ಕುಮಾರ್- ಅನಿರುದ್ಧ್ ಈಗಾಗಲೇ ‘ವಿದಮುಯರ್ಚಿ’, ‘ವಿವೇಗಂ’ ಮತ್ತು ‘ವೇದಾಲಂ’ ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ:ಬಲು ಬೇಗನೆ ಹೆಚ್ಚಾಯ್ತು ನಟಿ ಶ್ರೀಲೀಲಾ ಸಂಭಾವನೆ, ಬಾಲಿವುಡ್ ಸಿನಿಮಾಕ್ಕೆಷ್ಟು?

‘ಗುಡ್ ಬ್ಯಾಡ್ ಅಗ್ಲಿ’ ಚಿತ್ರದಲ್ಲಿ ಪ್ರಿಯಾ ಪ್ರಕಾಶ್ ವಾರಿಯರ್ ನಟಿಸಿದ್ದರು. ಈ ಪಾತ್ರದಲ್ಲಿ ಶ್ರೀಲೀಲಾ ಅವರು ಕಾಣಿಸಿಕೊಳ್ಳಬೇಕಿತ್ತು. ಆದರೆ, ಈ ಪಾತ್ರ ಪ್ರಿಯಾ ಪಾಲಾಯಿತು. ಈಗ ಅಜಿತ್ ಮುಂದಿನ ಸಿನಿಮಾ ವಿಚಾರದಲ್ಲೂ ಹೀಗೆಯೇ ಆಗಿದೆ ಎನ್ನಲಾಗಿದೆ. ಶ್ರೀಲೀಲಾ ಇನ್ನೂ ಯಂಗ್ ಆಗಿ ಕಾಣಿಸುತ್ತಾರೆ. ಅಜಿತ್ ಜೊತೆ ಸರಿಯಾಗಿ ಅವರು ಪೇರ್ ಆಗಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಅವರನ್ನು ಕೈ ಬಿಡಲಾಗಿದೆ ಎನ್ನಲಾಗಿದೆ.

ಶ್ರೀನಿಧಿ ಶೆಟ್ಟಿ ಅವರು ‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ ಬಳಿಕ ಕೆಲವೇ ಕೆಲವು ಸಿನಿಮಾ ಮಾಡಿದರು. ಅವರು ಈಗ ಅಜಿತ್ ಜೊತೆ ನಟಿಸೋ ಸಾಧ್ಯತೆ ಇದೆ ಎಂದು ವರದಿಗಳು ಹೇಳುತ್ತಿವೆ. ಈ ಬಗ್ಗೆ ತಂಡದವರು ಇನ್ನಷ್ಟೇ ಅಧಿಕೃತ ಮಾಹಿತಿ ನೀಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ