AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದಿನ ಹಲವು ಸ್ಟಾರ್​​ಗಳಿಗೆ ಅಂದು ಊಟ ಹಾಕಿ ಸಾಕಿದ್ದರು ರಾಜ್​ಪಾಲ್ ಯಾದವ್: ಈಗ ನೆರವಿಗೆ ಯಾರೂ ಇಲ್ಲ?

Rajpal Yadav: ಈಗ ಜೈಲಿನಲ್ಲಿರುವ ರಾಜ್​ಪಾಲ್ ಯಾದವ್ ಸ್ಟಾರ್ ನಟರುಗಳಿಗಿಂತಲೂ ಬ್ಯುಸಿ ಆಗಿದ್ದ ಬೇಡಿಕೆ ಹೊಂದಿದ್ದ ಸಮಯ ಒಂದಿತ್ತು. ಆದರೆ, ಈಗ ಅವರು ಜೈಲಿನಲ್ಲಿದ್ದಾರೆ. ದಶಕದ ಹಿಂದೆ ಸಿನಿಮಾ ನಿರ್ಮಿಸಲು ಹೋಗಿ ಕೈ ಸುಟ್ಟುಕೊಂಡು ಮಾಡಿದ ಸಾಲಗಳಿಂದಾಗಿ ಈಗ ಅವರು ಜೈಲು ಸೇರಿದ್ದಾರೆ. 9 ಕೋಟಿ ಸಾಲ ಮತ್ತು ಚೆಕ್ ಬೌನ್ಸ್ ಪ್ರಕರಣದಲ್ಲಿ ಅವರನ್ನು ದೋಷಿ ಎಂದು ನ್ಯಾಯಾಲಯ ಹೇಳಿದೆ. ಅಲ್ಲಲ್ಲಿ ಕೆಲವರು ರಾಜ್​​ಪಾಲ್ ನೆರವಿಗೆ ಧಾವಿಸಿದ್ದಾರಾದರೂ ಅವರಿಂದ ನಿಜಕ್ಕೂ ನೆರವು ಪಡೆದ ಹಲವರು ಮೌನವಾಗಿಯೇ ಉಳಿದಿದ್ದಾರೆ ಎನ್ನಲಾಗುತ್ತಿದೆ.

ಇಂದಿನ ಹಲವು ಸ್ಟಾರ್​​ಗಳಿಗೆ ಅಂದು ಊಟ ಹಾಕಿ ಸಾಕಿದ್ದರು ರಾಜ್​ಪಾಲ್ ಯಾದವ್: ಈಗ ನೆರವಿಗೆ ಯಾರೂ ಇಲ್ಲ?
Rajpal Yadav
ಮಂಜುನಾಥ ಸಿ.
|

Updated on:Feb 15, 2026 | 8:45 PM

Share

ಬಾಲಿವುಡ್‌ನ ಖ್ಯಾತ ಹಾಸ್ಯ ನಟ ರಾಜಪಾಲ್ ಯಾದವ್ (Rajpal Yadav) ಕೆಲವು ದಶಕಗಳಿಂದಲೂ ಸಿನಿಮಾ ಪ್ರೇಮಿಗಳನ್ನು ರಂಜಿಸುತ್ತಾ ಬಂದಿದ್ದಾರೆ. ರಾಜ್​ಪಾಲ್ ಅವರು ಸ್ಟಾರ್ ನಟರುಗಳಿಗಿಂತಲೂ ಬ್ಯುಸಿ ಆಗಿದ್ದ ಬೇಡಿಕೆ ಹೊಂದಿದ್ದ ಸಮಯ ಒಂದಿತ್ತು. ಆದರೆ, ಈಗ ಅವರು ಜೈಲಿನಲ್ಲಿದ್ದಾರೆ. ದಶಕದ ಹಿಂದೆ ಸಿನಿಮಾ ನಿರ್ಮಿಸಲು ಹೋಗಿ ಕೈ ಸುಟ್ಟುಕೊಂಡು ಮಾಡಿದ ಸಾಲಗಳಿಂದಾಗಿ ಈಗ ಅವರು ಜೈಲು ಸೇರಿದ್ದಾರೆ. 9 ಕೋಟಿ ಸಾಲ ಮತ್ತು ಚೆಕ್ ಬೌನ್ಸ್ ಪ್ರಕರಣದಲ್ಲಿ ಅವರನ್ನು ದೋಷಿ ಎಂದು ನ್ಯಾಯಾಲಯ ಹೇಳಿದೆ. ಅಲ್ಲಲ್ಲಿ ಕೆಲವರು ರಾಜ್​​ಪಾಲ್ ನೆರವಿಗೆ ಧಾವಿಸಿದ್ದಾರಾದರೂ ಅವರಿಂದ ನಿಜಕ್ಕೂ ನೆರವು ಪಡೆದ ಹಲವರು ಮೌನವಾಗಿಯೇ ಉಳಿದಿದ್ದಾರೆ ಎನ್ನಲಾಗುತ್ತಿದೆ.

ಹೌದು, ರಾಜ್​​ಪಾಲ್ ಯಾದವ್ ಹಾಸ್ಯ ನಟರಾದರೂ ಸಹ ವಿಶಾಲ ಹೃದಯವುಳ್ಳವರಾಗಿದ್ದರು, ಒಂದು ಕಾಲದಲ್ಲಿ ತಮ್ಮ ಮನೆಯಲ್ಲಿ ಸುಮಾರು 20-25 ಜನ ನಟರಿಗೆ ಪ್ರತಿದಿನ ಊಟ ಹಾಕುತ್ತಿದ್ದರು. ಅವರೇ ಕಷ್ಟದಲ್ಲಿದ್ದರೂ ಸಹ ಕೆಲಸಕ್ಕಾಗಿ ಹುಡುಕುತ್ತಿದ್ದ ಪ್ರತಿಭಾವಂತರಿಗೆ ಆಸರೆ ಆಗಿದ್ದರು. ಸಿನಿಮಾ ಮಾಡಲು ಬಂದು ಅವಕಾಶ ಸಿಗದೆ ಅಲೆದಾಡುತ್ತಿದ್ದ ಹಲವರು ರಾಜ್​ಪಾಲ್ ಯಾದವ್ ಮನೆಯಲ್ಲಿ ಉಚಿತವಾಗಿ ತಂಗಿ ಅಲ್ಲಿಯೇ ಉಚಿತವಾಗಿ ಊಟ ಮಾಡುತ್ತಿದ್ದರು. ಹಾಗೆ ರಾಜ್​ಪಾಲ್ ಮನೆಯಲ್ಲಿ ಊಟ ಮಾಡಿದ ಹಲವರು ಇಂದು ಸ್ಟಾರ್ ನಟರಾಗಿದ್ದಾರೆ.

ಹಳೆಯ ಸಂದರ್ಶನದಲ್ಲಿ ಮಾತನಾಡಿದ್ದ ರಾಜ್​ಪಾಲ್ ಯಾದವ್ ತಮ್ಮ , ‘ನಾನು ಮುಂಬೈಗೆ ಬಂದ ಹೊಸತರಲ್ಲಿ ಒಂದು ಸಣ್ಣ ಕೋಣೆಯಲ್ಲಿ ವಾಸವಾಗಿದ್ದೆ. ನನ್ನ ಜೊತೆಗೆ ನನ್ನ ಹಳ್ಳಿಯಿಂದ ಬಂದವರು ಹಾಗೂ ಎನ್‌ಎಸ್‌ಡಿ (ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ) ಗೆಳೆಯರು ಸೇರಿದಂತೆ ಸುಮಾರು 20 ರಿಂದ 22 ಹುಡುಗರು ಇರುತ್ತಿದ್ದರು. ನಾವೆಲ್ಲರೂ ಸೇರಿ ಅಡುಗೆ ಮಾಡುತ್ತಿದ್ದೆವು. ಅಂದು ನನ್ನ ಬಳಿ ಹಣ ಇರಲಿ, ಇಲ್ಲದಿರಲಿ, ಬಂದವರೆಲ್ಲರಿಗೂ ಹೊಟ್ಟೆತುಂಬಾ ಊಟ ಸಿಗುವಂತೆ ನೋಡಿಕೊಳ್ಳುತ್ತಿದ್ದೆ, ಇಂದು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವ ನವಾಜುದ್ದೀನ್ ಸಿದ್ದಿಕಿ ಕೂಡ ಆಗಾಗ ನನ್ನ ಮನೆಗೆ ಬರುತ್ತಿದ್ದರು. ನಾವೆಲ್ಲರೂ ಸೇರಿ ಊಟ ಮಾಡುತ್ತಾ ಸಿನಿಮಾಗಳ ಬಗ್ಗೆ ಚರ್ಚಿಸುತ್ತಿದ್ದೆವು. ಅವರೆಲ್ಲರಿಗೂ ತಿನ್ನಲು ಅನ್ನ ನೀಡುವ ಶಕ್ತಿಯನ್ನು ದೇವರು ನನಗೆ ನೀಡಿದ್ದಕ್ಕೆ ನಾನು ಸದಾ ಚಿರಋಣಿ’ ಎಂದು ಭಾವುಕರಾಗಿ ನುಡಿದರು.

ಇದನ್ನೂ ಓದಿ:ಜೈಲು ಸೇರಿದ ರಾಜ್​ಪಾಲ್ ಯಾದವ್​​ಗೆ ಹರಿದು ಬರುತ್ತಿದೆ ನೆರವು

ಅಸಲಿಗೆ ನಟ ನವಾಜುದ್ದೀನ್ ಸಿದ್ಧಿಕಿ ಸಹ ಕಪಿಲ್ ಶರ್ಮಾ ಶೋನಲ್ಲಿ ಈ ವಿಷಯ ಹೇಳಿಕೊಂಡಿದ್ದರು. ತಾವು ಮಾತ್ರವೇ ಅಲ್ಲದೆ ಇಂದು ಒಳ್ಳೆಯ ಸ್ಥಾನದಲ್ಲಿರುವ ಹಲವಾರು ಮಂದಿ ಅಂದು ರಾಜ್​​ಪಾಲ್ ಯಾದವ್ ಮನೆಯಲ್ಲಿ ಊಟ ಮಾಡಿದ್ದಾರೆ ಎಂದು ಅವರು ಹೇಳಿದ್ದರು. ಬಾಲಿವುಡ್​​ನಲ್ಲಿ ಅವಕಾಶ ಸಿಗದೆ ರಾಜ್​ಪಾಲ್ ಯಾದವ್ ಮುಂಬೈ ಬಿಟ್ಟು ಹೋಗುವ ಮನಸ್ಸು ಮಾಡಿ ರೈಲ್ವೆ ನಿಲ್ದಾಣಕ್ಕೆ ಹೋದಾಗ ಅವರೊಟ್ಟಿಗೆ ನವಾಜುದ್ದೀನ್ ಸಿದ್ಧಿಖಿ ಸಹ ಇದ್ದರಂತೆ. ಆದರೆ ರಾಜ್​ಪಾಲ್ ಯಾದವ್ ಮುಂಬೈ ಬಿಡುತ್ತಿರುವ ವಿಷಯ ತಿಳಿದು ನಿರ್ದೇಶಕ ಅನುರಾಗ್ ಕಶ್ಯಪ್ ರೈಲ್ವೆ ನಿಲ್ದಾಣಕ್ಕೆ ಹೋಗಿ ಅವರನ್ನು ತಡೆದಿದ್ದಲ್ಲದೆ, ತಾವು ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಸಿನಿಮಾನಲ್ಲಿ ಪಾತ್ರವನ್ನೂ ಸಹ ಕೊಡಿಸಿದ್ದರು. ಅದೇ ಸಿನಿಮಾನಲ್ಲಿ ನವಾಜುದ್ದೀನ್​​ಗೆ ಹೋಟೆಲ್ ವೇಟರ್ ಪಾತ್ರ ಸಹ ಕೊಡಿಸಿದ್ದರು.

ರಾಜಪಾಲ್ ಯಾದವ್ ಅವರು 1999ರಲ್ಲಿ ‘ದಿಲ್ ಕ್ಯಾ ಕರೇ’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ನಂತರ ‘ಹಂಗಾಮಾ’, ‘ವಕ್ತ್’, ‘ಭೂಲ್ ಭುಲೈಯಾ’ ಮತ್ತು ‘ಚುಪ್ ಚುಪ್ ಕೆ’ ನಂತಹ ಚಿತ್ರಗಳ ಮೂಲಕ ಭಾರತದ ಶ್ರೇಷ್ಠ ಹಾಸ್ಯ ನಟರಲ್ಲಿ ಒಬ್ಬರಾಗಿ ಗುರುತಿಸಿಕೊಂಡರು. ಇತ್ತೀಚೆಗೆ ಬಿಡುಗಡೆಯಾದ ‘ಭೂಲ್ ಭುಲೈಯಾ 3’ ಮತ್ತು ‘ಧುರಂಧರ್’ ಚಿತ್ರಗಳಲ್ಲಿಯೂ ಅವರ ನಟನೆಗೆ ಪ್ರೇಕ್ಷಕರಿಂದ ಭರ್ಜರಿ ಮೆಚ್ಚುಗೆ ವ್ಯಕ್ತವಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:38 pm, Sun, 15 February 26

ಪಾಕ್ ನಾಯಕನೊಂದಿಗೆ ವಿಶ್ವಕಪ್​ನಲ್ಲೂ ಕೈಕುಲುಕುದ ಸೂರ್ಯ
ಪಾಕ್ ನಾಯಕನೊಂದಿಗೆ ವಿಶ್ವಕಪ್​ನಲ್ಲೂ ಕೈಕುಲುಕುದ ಸೂರ್ಯ
ಇಶಾ ಫೌಂಡೇಷನ್​​ನಲ್ಲಿ ಅದ್ದೂರಿ ಶಿವರಾತ್ರಿ ಸಂಭ್ರಮ; ನೇರ ಪ್ರಸಾರ ಇಲ್ಲಿದೆ
ಇಶಾ ಫೌಂಡೇಷನ್​​ನಲ್ಲಿ ಅದ್ದೂರಿ ಶಿವರಾತ್ರಿ ಸಂಭ್ರಮ; ನೇರ ಪ್ರಸಾರ ಇಲ್ಲಿದೆ
ಕರಾವಳಿ ಯುವತಿಯರೇ ಟಾರ್ಗೆಟ್: ಇದು ಮಂಗಳೂರು ಮನ್ಮಥನ ಭಯಾನಕ ಸ್ಟೋರಿ
ಕರಾವಳಿ ಯುವತಿಯರೇ ಟಾರ್ಗೆಟ್: ಇದು ಮಂಗಳೂರು ಮನ್ಮಥನ ಭಯಾನಕ ಸ್ಟೋರಿ
ಮಹಾಶಿವರಾತ್ರಿ ಸಂಭ್ರಮದ ಮಧ್ಯೆ ಶಿವಲಿಂಗ ಮೂರ್ತಿ ಭಗ್ನ: ರೊಚ್ಚಿಗೆದ್ದ ಜನ
ಮಹಾಶಿವರಾತ್ರಿ ಸಂಭ್ರಮದ ಮಧ್ಯೆ ಶಿವಲಿಂಗ ಮೂರ್ತಿ ಭಗ್ನ: ರೊಚ್ಚಿಗೆದ್ದ ಜನ
ದೇವದತ್ ಪಡಿಕ್ಕಲ್ ಶತಕ; ಬಲಿಷ್ಠ ಸ್ಥಿತಿಯಲ್ಲಿ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಬಲಿಷ್ಠ ಸ್ಥಿತಿಯಲ್ಲಿ ಕರ್ನಾಟಕ
ರಣಜಿ ಟ್ರೋಫಿ ಸೆಮಿಫೈನಲ್; ಸತತ 2ನೇ ಶತಕ ಸಿಡಿಸಿದ ರಾಹುಲ್
ರಣಜಿ ಟ್ರೋಫಿ ಸೆಮಿಫೈನಲ್; ಸತತ 2ನೇ ಶತಕ ಸಿಡಿಸಿದ ರಾಹುಲ್
ಗಂಡನ ಸ್ನೇಹಿತನ ಮನೇಲಿ ಸಿಕ್ಕಿಬಿದ್ದ ಆಂಟಿ: ಶಾಕಿಂಗ್ ಕಾರಣ ಬಿಚ್ಚಿಟ್ಟ SP
ಗಂಡನ ಸ್ನೇಹಿತನ ಮನೇಲಿ ಸಿಕ್ಕಿಬಿದ್ದ ಆಂಟಿ: ಶಾಕಿಂಗ್ ಕಾರಣ ಬಿಚ್ಚಿಟ್ಟ SP
ಏಕಪತ್ನಿ ವ್ರತಸ್ಥನಂತೆ ಪೋಸ್​​ ಕೊಟ್ಟವ ಸಿಕ್ಕಿಬಿದ್ದಿದ್ದು ಮತ್ತೊಬ್ಬಳ ಜೊತೆ
ಏಕಪತ್ನಿ ವ್ರತಸ್ಥನಂತೆ ಪೋಸ್​​ ಕೊಟ್ಟವ ಸಿಕ್ಕಿಬಿದ್ದಿದ್ದು ಮತ್ತೊಬ್ಬಳ ಜೊತೆ
ಮೀನ ರಾಶಿಯವರ ಮೇಲೆ ವರ್ಷದ ಮೊದಲ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಮೀನ ರಾಶಿಯವರ ಮೇಲೆ ವರ್ಷದ ಮೊದಲ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಕುಂಭ ರಾಶಿಯ ಮೇಲೆ ಹೇಗಿರಲಿದೆ?
ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಕುಂಭ ರಾಶಿಯ ಮೇಲೆ ಹೇಗಿರಲಿದೆ?