ಒಂದು ಕಾಲದಲ್ಲಿ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಡೇಟಿಂಗ್ ಮಾಡುತ್ತಿದ್ದರು ಎಂಬ ಸುದ್ದಿ ಕೇಳಿಬಂದಿತ್ತು. ಆದರೆ ಅವರಿಬ್ಬರ ಸಂಬಂಧ ಮುಂದುವರಿಯಲಿಲ್ಲ. ಹಾಗಂತ ಅದು ಅವರ ಸಿನಿಮಾ ಕೆರಿಯರ್ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಹಲವು ಸಿನಿಮಾಗಳಲ್ಲಿ ಕತ್ರಿನಾ ಮತ್ತು ಸಲ್ಮಾನ್ ಖಾನ್ ಜೊತೆಯಾಗಿ ನಟಿಸಿದರು. ಒಮ್ಮೆ ಚಿತ್ರೀಕರಣದ ಸಂದರ್ಭದಲ್ಲಿ ಕತ್ರಿನಾ ಕೈಫ್ ಜೊತೆ ಸಲ್ಮಾನ್ ಖಾನ್ ಅವರು ತಮ್ಮ ಲಿಮಿಟ್ ಮೀರಿ ವರ್ತಿಸಿದ್ದರು ಎಂದು ವರದಿ ಆಗಿತ್ತು. ಈ ಘಟನೆ ಬಗ್ಗೆ ಕೇಳಿದ ಎಲ್ಲರಿಗೂ ಅಚ್ಚರಿ ಆಗಿತ್ತು. ಕತ್ರಿನಾ ಕೈಫ್ಗೆ ಸಲ್ಮಾನ್ ಖಾನ್ ಹೊಡೆದಿದ್ದರು ಎಂಬ ಗುಸುಗುಸು ಜೋರಾಗಿ ಹಬ್ಬಿತ್ತು.
ಅದು 2011-12ರ ಸಮಯ. ‘ಏಕ್ ಥಾ ಟೈಗರ್’ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ಆಗಿತ್ತು ಎನ್ನಲಾದ ಘಟನೆ. ಚಿತ್ರೀಕರಣದ ಸೆಟ್ನಲ್ಲಿ ಹೀರೋಯಿನ್ ಕತ್ರಿನಾ ಕೈಫ್ಗಾಗಿ ಸಲ್ಮಾನ್ ಖಾನ್ ಕಾಯುತ್ತ ಕುಳಿತ್ತಿದ್ದರು. ಮೇಕಪ್ ಮತ್ತು ಕಾಸ್ಟ್ಯೂಮ್ನೊಂದಿಗೆ ರೆಡಿಯಾಗಲು ಸಮಯ ತೆಗೆದುಕೊಂಡ ಕತ್ರಿನಾ ಕೈಫ್ ಅವರು ನಂತರ ತಮ್ಮ ವ್ಯಾನಿಟಿ ವ್ಯಾನ್ನಿಂದ ಹೊರಬಂದರು. ಅವರನ್ನು ನೋಡಿದ ಸಲ್ಮಾನ್ ಖಾನ್ಗೆ ಶಾಕ್ ಆಯಿತು. ಅದಕ್ಕೆ ಕಾರಣ ಕತ್ರಿನಾ ಧರಿಸಿದ್ದ ಬಟ್ಟೆ.
ಅಗತ್ಯಕ್ಕಿಂತಲೂ ಅತಿಯಾಗಿ ಮೈ ಕಾಣುವಂತಹ ಬಟ್ಟೆಯನ್ನು ಕತ್ರಿನಾ ಕೈಫ್ ಧರಿಸಿದ್ದರಂತೆ. ಅದು ಸಲ್ಮಾನ್ ಖಾನ್ಗೆ ಕಿಂಚಿತ್ತೂ ಇಷ್ಟ ಆಗಲಿಲ್ಲ. ಯಾಕೆ ಇಂಥ ಕಾಸ್ಟ್ಯೂಮ್ ಎಂದು ಕೇಳಿದ್ದಕ್ಕೆ ನಿರ್ದೇಶಕರ ಕಡೆಗೆ ಕತ್ರಿನಾ ಕೈ ತೋರಿಸಿದರು. ಆ ಉತ್ತರದಿಂದ ಸಮಾಧಾನ ಆಗದ ಸಲ್ಲು, ಕತ್ರಿನಾಗೆ ಹೊಡೆದಿದ್ದರು ಎಂದು ಖಾಸಗಿ ಮ್ಯಾಗಜಿನ್ ವರದಿ ಮಾಡಿತ್ತು. ಆ ಸಂದರ್ಭದಲ್ಲಿ ಈ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಪಕ್ಕದಲ್ಲೇ ನಟಿ ಕರೀನಾ ಕಪೂರ್ ಅವರು ‘ಹೀರೋಯಿನ್’ ಚಿತ್ರಕ್ಕಾಗಿ ಶೂಟಿಂಗ್ ಮಾಡುತ್ತಿದ್ದರು. ಅವರು ಬಂದು ಕತ್ರಿನಾ ಮತ್ತು ಸಲ್ಮಾನ್ ನಡುವಿನ ಹೊಡೆದಾಟವನ್ನು ನಿಲ್ಲಿಸಿದರು ಎನ್ನಲಾಗಿತ್ತು. ಹೀಗೆ ನಡೆದಿದ್ದು ನಿಜ ಎಂದು ಪ್ರತ್ಯಕ್ಷದರ್ಶಿಗಳು ಕೂಡ ಹೇಳಿದ್ದಾರೆ ಎಂದು ಆ ಖಾಸಗಿ ಮ್ಯಾಗಜಿನ್ ಪ್ರಕಟಿಸಿತ್ತು. ನಂತರ ಅದು ಬರೀ ಗಾಸಿಪ್ ಎಂಬ ವಾದ ಕೂಡ ಕೇಳಿಬಂತು.
ಇದನ್ನೂ ಓದಿ:
ಸಲ್ಮಾನ್ ಖಾನ್ ಕೆರಿಯರ್ ನಾಶ ಮಾಡಿ ಬೀದಿಗೆ ತರುತ್ತೇನೆ; ಪ್ರತಿಜ್ಞೆ ಮಾಡಿದ ಕಮಾಲ್ ಖಾನ್
ಥಿಯೇಟರ್ನಲ್ಲಿ ಬಹುಕೋಟಿ ಬಾಚುತ್ತಿದ್ದ ಸಲ್ಮಾನ್ ಖಾನ್ ಈಗ ರಾಧೆ ಚಿತ್ರದಿಂದ ಮೊದಲ ದಿನ ಗಳಿಸಿದ್ದು ಬರೀ 10 ಸಾವಿರ