Oscars 2021: ಆಸ್ಕರ್​ ಪ್ರಶಸ್ತಿಯಲ್ಲಿ ಮಿಂಚಿದ ನೋಮಡ್​ಲ್ಯಾಂಡ್​; ಇಲ್ಲಿದೆ ವಿಜೇತರ ಫುಲ್​ ಲಿಸ್ಟ್​

|

Updated on: Apr 26, 2021 | 9:50 AM

Oscars Academy Awards: 93ನೇ ಆಸ್ಕರ್​ ಪ್ರಶಸ್ತಿ ಕೌತುಕಕ್ಕೆ ತೆರೆಬಿದ್ದಿದೆ. ‘ಮಾಂಕ್’​ ಚಿತ್ರದ ಅಭಿನಯಕ್ಕಾಗಿ ಆಂಥೊನಿ ಹಾಪ್ಕಿನ್ಸ್​ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ‘ನೋಮಡ್​ಲ್ಯಾಂಡ್’ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದೆ.

Oscars 2021: ಆಸ್ಕರ್​ ಪ್ರಶಸ್ತಿಯಲ್ಲಿ ಮಿಂಚಿದ ನೋಮಡ್​ಲ್ಯಾಂಡ್​; ಇಲ್ಲಿದೆ ವಿಜೇತರ ಫುಲ್​ ಲಿಸ್ಟ್​
ಕ್ಲೋಯಿ ಜಾವ್ - ಆಂಥೊನಿ ಹಾಪ್ಕಿನ್ಸ್
Follow us on

ಕೊರೊನಾ ವೈರಸ್​ ಹಾವಳಿ ನಡುವೆಯೂ 93ನೇ ಆಸ್ಕರ್​ ಪ್ರಶಸ್ತಿ ಸಮಾರಂಭ ನಡೆದಿದೆ. ಎಲ್ಲ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಭಾರತೀಯ ಕಾಲಮಾನದ ಪ್ರಕಾರ ಸೋಮವಾರ (ಏ.26) ಮುಂಜಾನೆ ಕಾರ್ಯಕ್ರಮ ನೆರವೇರಿದೆ. ಈ ಬಾರಿ ಸಮಾರಂಭದಲ್ಲಿ ಚೀನಾದ ಕ್ಲೋಯಿ ಜಾವ್ ನಿರ್ದೇಶಿಸಿರುವ ನೋಮಡ್​ಲ್ಯಾಂಡ್​ ಚಿತ್ರ ಗಮನ ಸೆಳೆದಿದೆ. ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ನಟಿ (ಫ್ರಾನ್ಸಿಸ್​ ಮೆಕ್​ಡೊರ್ಮಂಡ್) ಪ್ರಶಸ್ತಿಗಳು ಈ ಚಿತ್ರಕ್ಕೆ ಸಿಕ್ಕಿವೆ. ಈ ಬಾರಿ ಆಸ್ಕರ್​ ಪಡೆದವರ ಪೂರ್ಣ ಪಟ್ಟಿ ಇಲ್ಲಿದೆ…

 

ಅತ್ಯುತ್ತಮ ನಟ: ಆಂಥೊನಿ ಹಾಪ್ಕಿನ್ಸ್ (ಮಾಂಕ್​)

ಅತ್ಯುತ್ತಮ ನಟಿ: ಫ್ರಾನ್ಸಿಸ್​ ಮೆಕ್​ಡೊರ್ಮಂಡ್ (ನೋಮಡ್​ಲ್ಯಾಂಡ್)

ಅತ್ಯುತ್ತಮ ನಿರ್ದೇಶನ: ಕ್ಲೋಯಿ ಜಾವ್​ (ನೋಮಡ್​ಲ್ಯಾಂಡ್)

ಅತ್ಯುತ್ತಮ ಪೋಷಕ ನಟ: ಡ್ಯಾನಿಯಲ್​ ಕಲೂಯಾ (ಜೂಡಸ್​ ಆ್ಯಂಡ್​ ಬ್ಲಾಕ್​ ಮೆಶಿಯಾ)

ಅತ್ಯುತ್ತಮ ಪೋಷಕ ನಟಿ: ಯಾನ್​ ಯು ಜಂಗ್ (ಮಿನಾರಿ)

ಅತ್ಯುತ್ತಮ ಒರಿಜಿನಲ್​ ಸ್ಕ್ರೀನ್​ಪ್ಲೇ: ಎಮೆರಲ್ಡ್​ ಫೆನಲ್ (ಪ್ರಾಮಿಸಿಂಗ್​ ಎಂಗ್​ ವುಮನ್)

 

ಅತ್ಯುತ್ತಮ ಅಂತಾರಾಷ್ಟ್ರೀಯ ಫೀಚರ್​ ಫಿಲ್ಮ್: (ಅನದರ್​ ರೌಂಡ್​)

ಅತ್ಯುತ್ತಮ ವಿಶ್ಯುವಲ್​ ಎಫೆಕ್ಟ್​: ಟೆನೆಟ್

ಅತ್ಯುತ್ತಮ ಧ್ವನಿ ವಿನ್ಯಾಸ: ಸೌಂಡ್​ ಆಫ್​ ಮೆಟಲ್

ಅತ್ಯುತ್ತಮ ಸಂಕಲನ: ಸೌಂಡ್​ ಆಫ್​ ಮೆಟಲ್

ಅತ್ಯುತ್ತಮ ಕೇಶವಿನ್ಯಾಸ: ಮಾ ರೇನೀಸ್​ ಬ್ಲ್ಯಾಕ್​ ಬಾಟಮ್

ಅತ್ಯುತ್ತಮ ಮೇಕಪ್​: ಮಾ ರೇನೀಸ್​ ಬ್ಲ್ಯಾಕ್​ ಬಾಟಮ್

ಅತ್ಯುತ್ತಮ ಛಾಯಾಗ್ರಹಣ: ಮಾಂಕ್

ಅತ್ಯುತ್ತಮ ನಿರ್ಮಾಣ ವಿನ್ಯಾಸ: ಮಾಂಕ್

 

ಇದನ್ನೂ ಓದಿ: Oscars 2021: ಅತ್ಯುತ್ತಮ ನಿರ್ದೇಶಕಿ ಆಸ್ಕರ್​ ಪ್ರಶಸ್ತಿ ಪಡೆದು ದಾಖಲೆ ಬರೆದ ಕ್ಲೋಯಿ ಜಾವ್​

Darshan: ದರ್ಶನ್​ಗೆ ಆಸ್ಕರ್​ ಕೊಡಿ; ವೇದಿಕೆಯ ಮೇಲೆ ಬೇಡಿಕೆ ಇಟ್ಟ ರವಿಶಂಕರ್​!