
ಮಲಯಾಳಂ ‘ದೃಶ್ಯಂ 3’ ಸಿನಿಮಾದ ರೀಮೇಕ್ ಆದರೂ ಬೇರೆಯದ್ದೇ ಮಾದರಿಯ ಕಥೆ ಹೊಂದಿರುವ ಹಿಂದಿ ‘ದೃಶ್ಯಂ 3’ ಸಿನಿಮಾ ಈ ವಾರ ಒಟಿಟಿಗೆ ಬಂದಿದೆ. ಅಜಯ್ ದೇವಗನ್ ನಟಿಸಿರುವ ಈ ಸಿನಿಮಾ ಅನ್ನು ನೆಟ್ಫ್ಲಿಕ್ಸ್ನಲ್ಲಿ ವೀಕ್ಷಣೆ ಮಾಡಬಹುದಾಗಿದೆ.
‘ಸೂಪರ್ ಮ್ಯಾನ್’ ಸಹೋದರಿ ‘ಸೂಪರ್ ಗರ್ಲ್’ ಕುರಿತಾದ ಮಹಿಳಾ ಪ್ರಧಾನ ಸೂಪರ್ ಹೀರೋ ಸಿನಿಮಾ ‘ಸೂಪರ್ ಗರ್ಲ್’ ಈ ವಾರ ಒಟಿಟಿಗೆ ಬಂದಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆ ಆದಾಗ ಅಷ್ಟೇನೂ ಹಿಟ್ ಆಗಿರದಿದ್ದ ಈ ಸಿನಿಮಾ ಇದೀಗ ಜಿಯೋ ಹಾಟ್ಸ್ಟಾರ್ನಲ್ಲಿ ವೀಕ್ಷಣೆಗೆ ಲಭ್ಯವಿದೆ.
‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ವಿಶ್ವದಾಖಲೆ ಬರೆದ ಸಿನಿಮಾ. ಈ ಸಿನಿಮಾ ಈ ಹಿಂದೆ ಬೇರೆ ಕೆಲ ಒಟಿಟಿಗಳಲ್ಲಿ ರೆಂಟ್ಗೆ ಲಭ್ಯವಿತ್ತು. ಆದರೆ ಈ ವಾರ ನೆಟ್ಫ್ಲಿಕ್ಸ್ನಲ್ಲಿ ರಿಲೀಸ್ ಆಗಿದ್ದು, ನೆಟ್ಫ್ಲಿಕ್ಸ್ಗೆ ಚಂದಾದಾರರಾಗಿದ್ದವರು ಹೆಚ್ಚುವರಿ ಹಣ ನೀಡದೆ ಸಿನಿಮಾ ನೋಡಬಹುದು.
ಮದುವೆಯಾದ ನವಜೋಡಿ ಹೊಸ ಮನೆಗೆ ಹೋದ ಬಳಿಕ ಒಂದು ದಿನ ಅಚಾನಕ್ಕಾಗಿ ಪತ್ನಿ ಕಾಣೆ ಆಗುತ್ತಾಳೆ. ಎಲ್ಲರೂ ಪತಿಯ ಮೇಲೆ ಅನುಮಾನ ವ್ಯಕ್ತಪಡಿಸುತ್ತಾರೆ. ಆದರೆ ಆ ನವ ವಧುವಿಗೆ ಏನಾಗಿದೆ? ಯಾಕೆ ನಾಪತ್ತೆ ಆದಳು ಎಂಬುದೇ ವೆಬ್ ಸರಣಿಯ ಕಥೆ. ಈ ತಮಿಳು ವೆಬ್ ಸರಣಿ ಜೀ5ನಲ್ಲಿ ಬಿಡುಗಡೆ ಆಗಿದೆ.
ಕನ್ನಡದ ಹೊಸ ವೆಬ್ ಸರಣಿ ‘ಕಾರ್ಪೊರೇಟ್ ಲವ್ ಸ್ಟೋರಿ’ ಈ ವಾರ ಸ್ಟ್ರೀಮಿಂಗ್ ಆರಂಭಿಸಿದೆ. ಹಾಸ್ಯ ಪ್ರಧಾನ ಪ್ರೇಮಕಥೆ ಹೊಂದಿರುವ ಈ ವೆಬ್ ಸರಣಿಯ ವಿಶೇಷ ಪಾತ್ರಗಳಲ್ಲಿ ಪ್ರಿಯಾಂಕಾ ಉಪೇಂದ್ರ, ದಿಗಂತ್ ಸಹ ಇದ್ದಾರೆ. ಜೀ5 ನಲ್ಲಿ ವೆಬ್ ಸರಣಿ ವೀಕ್ಷಣೆ ಮಾಡಬಹುದಾಗಿದೆ.
ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ದೆಹಲಿಯ ಒಂದು ಮನೆಯಲ್ಲಿ ಒಂದಾಗುವ ಅಪರಿಚಿತರ ನಡುವೆ ನಡೆಯುವ ಕಥೆಯನ್ನು ‘ಡೆಲ್ಲಿ 2021’ ಒಳಗೊಂಡಿದೆ. ಆಮ್ಲಜನಕದ ಕೊರತೆ, ಆಸ್ಪತ್ರೆ ಬೆಡ್ ಕೊರತೆ ಹೀಗೆ ಆ ವಿಷಮ ಸಮಯದ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾ ಜೀ5ನಲ್ಲಿ ವೀಕ್ಷಣೆಗೆ ಲಭ್ಯವಿದೆ.
‘ಬುರ್ರ ಕಥ’ ಪ್ರಸಂಗಗಳ ಗಾಯಕಿ ಗರಿವೀಡಿ ಲಕ್ಷ್ಮಿ ಜೀವನ ಆಧರಿಸಿದ ‘ಗರಿವೀಡಿ ಲಕ್ಷ್ಮಿ’ ಸಿನಿಮಾ ಈ ವಾರ ಒಟಿಟಿಗೆ ಬಂದಿದೆ. ಬಯೋಗ್ರಫಿ ಸಿನಿಮಾ ಇದಾಗಿದ್ದು, ಸಿನಿಮಾವನ್ನು ಪ್ರೈಂ ವಿಡಿಯೋನಲ್ಲಿ ವೀಕ್ಷಣೆ ಮಾಡಬಹುದಾಗಿದೆ.
ಎಐ ಬಳಸಿ ನಿರ್ಮಾಣ ಮಾಡಲಾಗಿರುವ ‘ಮಹಾಭಾರತ’ ಕಥೆ ಆಧರಿಸಿ ವೆಬ್ ಸರಣಿಯ ಎರಡನೇ ಸೀಸನ್ ಈ ವಾರ ಬಿಡುಗಡೆ ಆಗುತ್ತಿದೆ. ‘ಮಹಾಭಾರತ ಸೀಸನ್ 2’ ಅಮೆಜಾನ್ ಪ್ರೈಂ ವಿಡಿಯೋನಲ್ಲಿ ವೀಕ್ಷಣೆಗೆ ಲಭ್ಯವಿದೆ.
ಜನಪ್ರಿಯ ‘ಬ್ಲೇಡ್ ರನ್ನರ್’ ಸರಣಿಯ ಹೊಸ ಸಿನಿಮಾ ‘ಬ್ಲೇಡ್ ರನ್ನರ್ 2099’ ಸಿನಿಮಾ ಈ ವಾರ ಒಟಿಟಿಗೆ ಬಂದಿದೆ. ಆಕ್ಷನ್ ಮತ್ತು ಥ್ರಿಲ್ಲರ್ ಅಂಶಗಳುಳ್ಳ ಈ ಸಿನಿಮಾ ಅನ್ನು ಅಮೆಜಾನ್ ಪ್ರೈಂ ವಿಡಿಯೋನಲ್ಲಿ ವೀಕ್ಷಣೆ ಮಾಡಬಹುದಾಗಿದೆ.
ತೆಲುಗಿನ ಸ್ಟಾರ್ ನಟ ವೆಂಕಟೇಶ್, ಕನ್ನಡದ ನಟಿ ಶ್ರೀನಿಧಿ ಶೆಟ್ಟಿ ಒಟ್ಟಿಗೆ ನಟಿಸಿ, ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನ ಮಾಡಿರುವ ‘ಆದರ್ಶ ಕುಟುಂಬಂ ಹೌಸ್ ನಂಬರ್ 47’ ಈ ವಾರ ಒಟಿಟಿಗೆ ಬಂದಿದೆ. ಚಿತ್ರಮಂದಿರಗಳಲ್ಲಿ ಸಾಧಾರಣ ಯಶಸ್ಸು ಕಂಡಿದ್ದ ಈ ಸಿನಿಮಾ ಅನ್ನು ನೆಟ್ಫ್ಲಿಕ್ಸ್ನಲ್ಲಿ ವೀಕ್ಷಿಸಬಹುದಾಗಿದೆ.