‘ಬಿಗ್ ಬಾಸ್ ಒಟಿಟಿ’ (Bigg Boss OTT) ಮೂರನೇ ವಾರಕ್ಕೆ ಕಾಲಿಟ್ಟಿದೆ. ವಾರದ ಮೊದಲ ದಿನ ಅಂದರೆ ಸೋಮವಾರ (ಆಗಸ್ಟ್ 22) ಎಲಿಮಿನೇಷನ್ಗೆ ನಾಮಿನೇಷನ್ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ವಾರ ಬಿಗ್ ಬಾಸ್ ಮನೆಯಲ್ಲಿ 7 ಜನರ ಮೇಲೆ ನಾಮಿನೇಷನ್ ತೂಗುಗತ್ತಿ ಇದೆ. ಕಳೆದ ಎರಡು ವಾರಗಳ ಕಾಲ ನಾಮಿನೇಟ್ ಆಗಿದ್ದ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಬಚಾವ್ ಆಗಿದ್ದಾರೆ. ಈ ವಾರ ಮನೆಯಿಂದ ಯಾರು ಹೊರ ಹೋಗುತ್ತಾರೆ ಅನ್ನೋದು ಸದ್ಯದ ಕುತೂಹಲ.
ಬಿಗ್ ಬಾಸ್ ಕಡೆಯಿಂದ ಎಲ್ಲರಿಗೂ ಒಂದು ಬಾಕ್ಸ್ ಕಳಿಸಲಾಗಿತ್ತು. ಆ ಬಾಕ್ಸ್ನಲ್ಲಿ ಎರಡು ವಸ್ತು ಇತ್ತು. ಒಂದರಲ್ಲಿ ಕಣ್ಣಿನ ಚಿತ್ರ ಇತ್ತು, ಮತ್ತೊಂದು ಬಾಕ್ಸ್ನಲ್ಲಿ ಕನ್ಫೆಷನ್ ರೂಮ್ ಎಂದು ಇತ್ತು. ಕಣ್ಣಿನ ಚಿತ್ರ ಇದ್ದವರು ಎಲ್ಲರ ಎದುರು ಸ್ಪರ್ಧಿಗಳನ್ನು ನಾಮಿನೇಟ್ಗೆ ಮಾಡಬೇಕು. ಕನ್ಫೆಷನ್ ರೂಮ್ ಎಂದು ಬರೆದುಕೊಂಡಿದ್ದವರು ಕನ್ಫೆಷನ್ ರೂಮ್ಗೆ ತೆರಳಿ ನಾಮಿನೇಟ್ ಮಾಡಬೇಕು.
ಈ ವಾರ ಉದಯ್, ರೂಪೇಶ್, ನಂದಿನಿ, ಅಕ್ಷತಾ, ಆರ್ಯವರ್ಧನ್, ಚೈತ್ರಾ, ಜಯಶ್ರೀಗೆ ಹೆಚ್ಚು ವೋಟ್ ಬಿದ್ದಿದ್ದರಿಂದ ಅವರು ನಾಮಿನೇಟ್ ಆದರು. ಸೋಮಣ್ಣ ಅವರನ್ನು ಕ್ಯಾಪ್ಟನ್ ಜಶ್ವಂತ್ ಅವರು ನೇರವಾಗಿ ನಾಮಿನೇಟ್ ಮಾಡಿದರು. ಎರಡು ಹಂತದಲ್ಲಿ ನಾಮಿನೇಟ್ ಪ್ರಕ್ರಿಯೆ ನಡೆಯಿತು.
ಮೂರನೇ ಹಂತದಲ್ಲಿ ನಾಮಿನೇಷ್ನಿಂದ ಒಬ್ಬರನ್ನು ಸೇವ್ ಮಾಡುವ ಪ್ರಕ್ರಿಯೆ ನಡೆಯಿತು. ಈ ಪ್ರಕ್ರಿಯೆಯಲ್ಲಿ ನಂದಿನಿ ಸೇವ್ ಆದರು. ಈ ಮೂಲಕ ಉದಯ್, ರೂಪೇಶ್, ಅಕ್ಷತಾ, ಆರ್ಯವರ್ಧನ್, ಚೈತ್ರಾ, ಜಯಶ್ರೀ, ಸೊಮಣ್ಣ ಮೇಲೆ ನಾಮಿನೇಷನ್ ತೂಗುಗತ್ತಿ ಇದೆ. ಇವರಲ್ಲಿ ಒಬ್ಬರು ಎಲಿಮಿನೇಟ್ ಆಗಲಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಅತಿ ಹೆಚ್ಚು ವೋಟ್ ಬಿದ್ದಿದ್ದು ಉದಯ್ಗೆ. ಅವರು ಡಬಲ್ ಗೇಮ್ ಆಡುತ್ತಾರೆ, ಹೆಣ್ಣುಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ ಎಂದು ಬಹುತೇಕರು ಅವರನ್ನು ನಾಮಿನೇಟ್ ಮಾಡಿದರು. ಈಗ ವೀಕ್ಷಕರಿಂದ ಯಾರು ಕಡಿಮೆ ವೋಟ್ ಪಡೆಯುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ನಾಮಿನೇಟ್ ಆಗದೇ ಇದ್ದರೂ ಬಿಗ್ ಬಾಸ್ ಮನೆಯಿಂದ ಅರ್ಜುನ್ ಔಟ್; ಏನಿದು ಟ್ವಿಸ್ಟ್?
ಆರಂಭದಲ್ಲಿ ಎಲ್ಲರಿಂದ ಟೀಕೆಗೆ ಒಳಗಾಗಿದ್ದ ಸೋನು ಶ್ರೀನಿವಾಸ್ ಗೌಡ ಅವರು ಮೊದಲ ಎರಡು ವಾರ ನಾಮಿನೇಟ್ ಆಗಿದ್ದರು. ಆದರೆ, ಈ ವಾರ ಅವರಿಗೆ ಯಾರೂ ವೋಟ್ ಮಾಡಿಲ್ಲ. ಹೀಗಾಗಿ, ಅವರ ಹೆಸರು ನಾಮಿನೇಷನ್ ಲಿಸ್ಟ್ನಲ್ಲಿ ಇಲ್ಲ. ಇದು ಅವರ ಖುಷಿಯನ್ನು ಹೆಚ್ಚಿಸಿದೆ.
Published On - 10:38 pm, Mon, 22 August 22