‘ಹೀರಾಮಂಡಿ’ ವಿಚಾರದಲ್ಲಿ ಸುಳ್ಳು ಹೇಳಿದ್ರಾ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ

ಯಾವುದೇ ಸೀರಿಸ್ ಹಿಟ್ ಆದರೂ ಅದರ ಬಗ್ಗೆ ಒಂದಷ್ಟು ವಾರಗಳ ಕಾಲ ಚರ್ಚೆ ಇರುತ್ತದೆ. ಆದರೆ, ‘ಹೀರಾಮಂಡಿ’ ಸೀರಿಸ್​ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿಲ್ಲ. ಇದನ್ನು ನೋಡಿದ ಅನೇಕರು ಮಿಶ್ರಪ್ರತಿಕ್ರಿಯೆ ನೀಡಿದ್ದಾರೆ. ಆದರೆ, ಬನ್ಸಾಲಿ ಹೇಳೋದೇ ಬೇರೆ.

‘ಹೀರಾಮಂಡಿ’ ವಿಚಾರದಲ್ಲಿ ಸುಳ್ಳು ಹೇಳಿದ್ರಾ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ
ಬನ್ಸಾಲಿ

Updated on: May 22, 2024 | 2:27 PM

ಸಂಜಯ್ ಲೀಲಾ ಬನ್ಸಾಲಿ (Sanjay Leela Bhansali) ಸಿನಿಮಾಗಳು ರಿಲೀಸ್ ಆದರೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದ ಕಾಲ ಒಂದಿತ್ತು. ಅವರ ನಿರ್ದೇಶನದಲ್ಲಿ ಮೂಡಿ ಬಂದ ‘ಗಂಗೂಬಾಯಿ​ ಕಾಠಿಯಾವಾಡಿ’ ಅಂದುಕೊಂಡ ಮಟ್ಟದಲ್ಲಿ ಗಮನ ಸೆಳೆದಿಲ್ಲ. ಈಗ ಅವರ ನಿರ್ದೇಶನದಲ್ಲಿ ‘ಹೀರಾಮಂಡಿ’ ವೆಬ್ ಸಿರೀಸ್ ಮೂಡಿ ಬಂದಿದೆ. ಆದರೆ, ಅಂದುಕೊಂಡ ಮಟ್ಟದಲ್ಲಿ ಈ ಸೀರಿಸ್ ಹೈಪ್ ಸೃಷ್ಟಿ ಮಾಡಿಲ್ಲ. ಈ ಬಗ್ಗೆ ನಿರ್ದೇಶಕ ಬನ್ಸಾಲಿ ಮಾತನಾಡಿದ್ದಾರೆ. ಅವರು ಈ ವಿಚಾರದಲ್ಲಿ ಸುಳ್ಳು ಹೇಳಿದರೇ ಎನ್ನುವ ಪ್ರಶ್ನೆ ಮೂಡಿದಿದೆ.

ಯಾವುದೇ ಸೀರಿಸ್ ಹಿಟ್ ಆದರೂ ಅದರ ಬಗ್ಗೆ ಒಂದಷ್ಟು ವಾರಗಳ ಕಾಲ ಚರ್ಚೆ ಇರುತ್ತದೆ. ಆದರೆ, ‘ಹೀರಾಮಂಡಿ’ ಸೀರಿಸ್​ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿಲ್ಲ. ಇದನ್ನು ನೋಡಿದ ಅನೇಕರು ಮಿಶ್ರಪ್ರತಿಕ್ರಿಯೆ ನೀಡಿದ್ದಾರೆ. ಆದರೆ, ಬನ್ಸಾಲಿ ಹೇಳೋದೇ ಬೇರೆ. ‘ಜನರ ಪ್ರತಿಕ್ರಿಯೆ ನೋಡಿ ಖುಷಿಯಾಗಿದೆ. ಒಂದೇ ಸ್ಟ್ರೆಚ್​ನಲ್ಲಿ ಈ ಸೀರಿಸ್​ನ ಎರಡು ಬಾರಿ, ಮೂರು ಬಾರಿ ನೋಡಿದವರು ಇದ್ದಾರೆ. ಈ ರೀತಿ ಪ್ರತಿಕ್ರಿಯೆ ಸಿಕ್ಕಿದ್ದು ಖುಷಿ ನೀಡಿದೆ. ಸಿನಿಮಾ ನೋಡಿ ನಾನಾ ರೀತಿಯ ಕಂಟೆಂಟ್​ಗಳನ್ನು ವಿಶ್ವಾದ್ಯಂತ ಸಿದ್ಧಪಡಿಸಲಾಗುತ್ತಿದೆ’ ಎಂದಿದ್ದಾರೆ ಬನ್ಸಾಲಿ.

‘ಈ ಸರಣಿಯ ಮ್ಯೂಸಿಕ್ ಜನರಿಗೆ ಇಷ್ಟ ಆಗಿದೆ. ಒಟಿಟಿಯಲ್ಲಿ ಈ ರೀತಿಯ ಶೋಗಳು ಅಪರೂಪ. ಈ ಭಾವನಾತ್ಮಕ ಪಯಣಕ್ಕೆ ಅನೇಕರು ಕನೆಕ್ಟ್ ಆಗಿದ್ದಾರೆ’ ಎಂದು ಬನ್ಸಾಲಿ ಹೇಳಿದ್ದಾರೆ. ನಿಜಕ್ಕೂ ಪ್ರೇಕ್ಷಕರು ಈ ಸೀರಿಸ್​ನ ಎರಡು-ಮೂರು ಬಾರಿ ನೋಡಿದ್ದಾರಾ ಎನ್ನುವ ಪ್ರಶ್ನೆಯನ್ನು ಅನೇಕರು ಕೇಳಿದ್ದಾರೆ. ಈ ವಿಚಾರದಲ್ಲಿ ಅವರು ಸುಳ್ಳು ಹೇಳುತ್ತಿದ್ದಾರೆ ಎಂದು ಕೆಲವರು ಅಭಿಪ್ರಾಯ ಹೊರಹಾಕಿದ್ದಾರೆ.

ಇದನ್ನೂ ಓದಿ: ‘ಹೀರಾಮಂಡಿ’ ಸೀರಿಸ್​ಗೆ ನಿರ್ದೇಶಕ ಬನ್ಸಾಲಿ ಹಾಗೂ ಸ್ಟಾರ್ ಕಲಾವಿದರು ಪಡೆದ ಸಂಭಾವನೆ ಎಷ್ಟು?

‘ಹೀರಾಮಂಡಿ: ದಿ ಡೈಮಂಡ್ ಬಜಾರ್’ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಮೊದಲ ವೆಬ್ ಸೀರಿಸ್​. ಈ ಸೀರಿಸ್ ಮೂಲಕ ಅವರು ಒಟಿಟಿಗೆ ಕಾಲಿಟ್ಟಿದ್ದಾರೆ. ನೆಟ್​ಫ್ಲಿಕ್ಸ್​ನಲ್ಲಿ ಈ ಸೀರಿಸ್ ಪ್ರಸಾರ ಕಂಡಿದೆ. ಈ ಸೀರಿಸ್​ನಲ್ಲಿ ರಿಚಾ ಚಡ್ಡಾ, ಸೋನಾಕ್ಷಿ ಸಿನ್ಹಾ, ಅದಿತಿ ರಾವ್ ಹೈದರಿ ಮೊದಲಾದವರು ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.