ತಮಿಳಿನ ‘ಅನ್ನಪೂರ್ಣಿ: ದಿ ಗಾಡೆಸ್ ಆಫ್ ಫುಡ್’ ಸಿನಿಮಾ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಈ ಸಿನಿಮಾದಲ್ಲಿ ರಾಮನ ಬಗ್ಗೆ ಇರುವ ಒಂದು ಅವಹೇಳನಕಾರಿ ಡೈಲಾಗ್ ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿತ್ತು. ಇದನ್ನು ಅನೇಕರು ವಿರೋಧಿಸಿದ್ದರು. BycottNetflix ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿತ್ತು. ಶಿವಸೇನೆ ಮಾಜಿ ನಾಯಕ ರಮೇಶ್ ಸೋಲಂಕಿ ಕೇಸ್ ಕೂಡ ದಾಖಲಿಸಿದ್ದರು. ಇದಾದ ಬಳಿಕ ನೆಟ್ಫ್ಲಿಕ್ಸ್ ಎಚ್ಚೆತ್ತುಕೊಂಡಿದ್ದು, ಸಿನಿಮಾನ ಡಿಲೀಟ್ ಮಾಡಿದೆ. ನಿರ್ಮಾಣ ಸಂಸ್ಥೆ ಜೀ ಸ್ಟುಡಿಯೋ (Zee Studio) ಕ್ಷಮೆ ಕೇಳಿದೆ.
ಕಳೆದ ವರ್ಷ ಡಿಸೆಂಬರ್ 1ರಂದು ಥಿಯೇಟರ್ನಲ್ಲಿ ‘ಅನ್ನಪೂರ್ಣಿ’ ಚಿತ್ರ ಬಿಡುಗಡೆ ಆಯಿತು. ನಂತರ ಸಿನಿಮಾ ಒಟಿಟಿಯಲ್ಲಿ ಪ್ರಸಾರ ಕಂಡಿತು. ಈ ಚಿತ್ರದಲ್ಲಿ ಬರುವ ಒಂದು ದೃಶ್ಯ ಸೆನ್ಸೇಷನ್ ಸೃಷ್ಟಿ ಮಾಡಿತ್ತು. ‘ವನವಾಸದ ಸಮಯದಲ್ಲಿ ರಾಮ, ಸೀತೆ ಹಾಗೂ ಲಕ್ಷ್ಮಣ ಹಸಿವಾದಾಗ ಪ್ರಾಣಿನ ಬೇಟೆ ಆಡಿ ಸೇವಿಸಿದ್ದರು. ರಾಮಾಯಣದಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ’ ಎಂಬ ಸಂಭಾಷಣೆಗೆ ಅನೇಕರು ಟೀಕೆ ಮಾಡಿದ್ದರು. ಹಿಂದೂ ಭಾವನೆಗೆ ದಕ್ಕೆ ಉಂಟಾಗಿದೆ ಎಂದು ಅನೇಕರು ಹೇಳಿದ್ದರು.
‘ಹಿಂದೂ ಅರ್ಚಕನ ಮಗಳು ಬಿರಿಯಾನಿ ಮಾಡಲು ನಮಾಜ್ ಮಾಡುತ್ತಾಳೆ. ಸಿನಿಮಾದಲ್ಲಿ ಲವ್ ಜಿಹಾದ್ ಪ್ರಮೋಷನ್. ಕಥಾ ನಾಯಕ ಶ್ರೀರಾಮ ಕೂಡ ಮಾಂಸಹಾರಿ ಎಂದು ಹೇಳುವ ಮೂಲಕ ನಾಯಕಿಗೆ ಮಾಂಸ ತಿನ್ನುವಂತೆ ಪ್ರೇರೇಪಿಸಿದ್ದಾನೆ. ಇದು ಹಿಂದೂ ಭಾವನೆಗೆ ಧಕ್ಕೆ ತಂದಂತಾಗಿದೆ’ ಎಂದು ರಮೇಶ್ ಸೋಲಂಕಿ ಹೇಳಿದ್ದರು. ನಯನತಾರಾ, ಜೈ, ನೀಲೇಶ್ ಕೃಷ್ಣ, ನಿರ್ಮಾಪಕ ಜತಿನ್ ಸೇತಿ, ಆರ್ ರವೀಂದ್ರನ್, ಪುನಿತ್, ಜೀ ಸ್ಟುಡಿಯೋ ಮುಖ್ಯ ಬಿಸ್ನೆಸ್ ಆಫೀಸರ್ ಶರೀಖ್ ಪಟೇಲ್ ಹಾಗೂ ನೆಟ್ಫ್ಲಿಕ್ಸ್ನ ಇಂಡಿಯಾದ ಮುಖ್ಯಸ್ಥೆ ಮೋನಿಕಾ ಶೆರ್ಗಿಲ್ ವಿರುದ್ಧ ಕೇಸ್ ದಾಖಲಾಗಿತ್ತು.
ಈ ವಿವಾದದ ಬಳಿಕ ನೆಟ್ಫ್ಲಿಕ್ಸ್ ಎಚ್ಚೆತ್ತುಕೊಂಡಿದೆ. ಈಗಾಗಲೇ ಸಿನಿಮಾನ ತೆಗೆಯಲಾಗಿದೆ. ವಿಶ್ವ ಹಿಂದೂ ಪರಿಷತ್ಗೆ ಜೀ ಸ್ಟುಡಿಯೋ ಕ್ಷಮೆ ಕೇಳಿದೆ. ಜೊತೆಗೆ ವಿವಾದಾತ್ಮಕ ದೃಶ್ಯವನ್ನು ತೆಗೆಯುವ ಭರವಸೆ ನೀಡಿದೆ. ‘ನಮಗೆ ಧಾರ್ಮಿಕ ಭಾವನೆಗೆ ಹಾನಿ ಮಾಡುವ ಯಾವುದೇ ಉದ್ದೇಶ ಇಲ್ಲ. ನಾವು ಕ್ಷಮೆ ಕೇಳುತ್ತೇವೆ’ ಎಂದು ನಿರ್ಮಾಣ ಸಂಸ್ಥೆ ಜೀ ಸ್ಟುಡಿಯೋ ತಿಳಿಸಿದೆ.
During vanvaas ram sita used to eat non veg whata pathetic scene by netflix they r targeting hindus now its time to boycott netflix😡
1 RT is equal to 10 slap on netflix #BoycottNetflix#BoycottAnnapoorani
pic.twitter.com/Th2NFY6nUL— Shruti🦋 (@Shruthiey) January 10, 2024
ಇದನ್ನೂ ಓದಿ: ‘ರಾಮನೂ ಮಾಂಸಾಹಾರ ಸೇವನೆ ಮಾಡಿದ್ದ’; ನಯನತಾರಾ ಸಿನಿಮಾ ಡೈಲಾಗ್ ವಿರುದ್ಧ ಎದ್ದಿದೆ ಅಪಸ್ವರ
ಅನ್ನಪೂರ್ಣಿ (ನಯನತಾರಾ) ಸಾಂಪ್ರದಾಯಿಕ ಕುಟುಂಬದಲ್ಲಿ ಹುಟ್ಟಿದವಳು. ಅವಳಿಗೆ ಅಡುಗೆ ಮಾಡುವ ಪ್ಯಾಷನ್ ಇರುತ್ತದೆ. ಸಂಪ್ರದಾಯ ಹಾಗೂ ಪ್ಯಾಷನ್ ಮಧ್ಯೆ ಸಿಕ್ಕಿ ಆಕೆ ಒದ್ದಾಡುತ್ತಾಳೆ. ಕಥಾ ನಾಯಕಿಗೆ ಮುಸ್ಲಿಂ ಧರ್ಮದ ಯುವಕನ ಜೊತೆ ಪ್ರೀತಿ ಆಗುತ್ತದೆ. ಇದನ್ನು ಅನೇಕರು ವಿರೋಧಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ