
ಬಾಲಿವುಡ್ ನಟ ಅನುಪಮ್ ಖೇರ್ (Anupam Kher) ಅವರು ಸಖತ್ ಆ್ಯಕ್ಟೀವ್ ಆಗಿದ್ದಾರೆ. ಹಲವು ಸಿನಿಮಾಗಳನ್ನು ಒಪ್ಪಿಕೊಂಡು ಅವರು ಮುನ್ನುಗ್ಗುತ್ತಿದ್ದಾರೆ. ಹಿಂದಿ ಮಾತ್ರವಲ್ಲದೇ ಬೇರೆ ಭಾಷೆಗಳಲ್ಲೂ ಅವರಿಗೆ ಬೇಡಿಕೆ ಇದೆ. ದೇಶಾದ್ಯಂತ ಅವರು ಅಭಿಮಾನಿಗಳನ್ನು ಹೊಂದಿದ್ದಾರೆ. ಅನುಪಮ್ ಖೇರ್ ಅವರಿಗೆ 68 ವರ್ಷ ವಯಸ್ಸು. ಈ ಪ್ರಾಯದಲ್ಲೂ ಅವರು ಫಿಟ್ನೆಸ್ ಕಾಯ್ದುಕೊಂಡಿದ್ದಾರೆ. ಈಗ ಅವರ ಹೊಸ ಸಿನಿಮಾ ಘೋಷಣೆ ಆಗಿದೆ. ಈ ಚಿತ್ರಕ್ಕೆ ‘ವಿಜಯ್ 69’ (Vijay 69)ಎಂದು ಶೀರ್ಷಿಕೆ ಇಡಲಾಗಿದೆ. ಇಂಥ ಟೈಟಲ್ ಇಟ್ಟಿದ್ದಕ್ಕೆ ವಿಶೇಷ ಕಾರಣ ಕೂಡ ಇದೆ. ಅನುಪಮ್ ಖೇರ್ ಅಭಿಮಾನಿಗಳು ಈ ಸಿನಿಮಾ ಮೇಲೆ ನಿರೀಕ್ಷೆ ಇಟ್ಟುಕೊಳ್ಳುವಂತಾಗಿದೆ. ವಯಸ್ಸಿಗೆ ತಕ್ಕಂತಹ ಪಾತ್ರವನ್ನು ಅನುಪಮ್ ಖೇರ್ ಆಯ್ಕೆ ಮಾಡಿಕೊಂಡಿದ್ದಾರೆ. ಶೀರ್ಷಿಕೆ ಅನೌನ್ಸ್ ಮಾಡುವುದರ ಜೊತೆಗೆ ಹೊಸ ಪೋಸ್ಟರ್ ಕೂಡ ಬಿಡುಗಡೆ ಮಾಡಲಾಗಿದೆ. ಫ್ಯಾನ್ಸ್ ವಲಯದಲ್ಲಿ ಈ ಪೋಸ್ಟರ್ ವೈರಲ್ ಆಗಿದೆ.
ಯಶ್ ರಾಜ್ ಫಿಲ್ಮ್ಸ್ ಸಂಸ್ಥೆಯ ‘ವೈಆರ್ಎಫ್ ಎಂಟರ್ಟೇನ್ಮೆಂಟ್’ ಒಟಿಟಿ ಮೂಲಕ ‘ವಿಜಯ್ 69’ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾ ನೇರವಾಗಿ ಒಟಿಟಿ ಮೂಲಕ ಸ್ಟ್ರೀಮಿಂಗ್ ಆಗಲಿದೆ. ಮನೀಶ್ ಶರ್ಮಾ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಅಕ್ಷಯ್ ರಾಯ್ ನಿರ್ದೇಶನ ಮಾಡುತ್ತಿದ್ದಾರೆ.
ಅನುಪಮ್ ಖೇರ್ ಅವರ ರಿಯಲ್ ಲೈಫ್ ವ್ಯಕ್ತಿತ್ವಕ್ಕೂ ‘ವಿಜಯ್ 69’ ಚಿತ್ರಕ್ಕೂ ಸಾಮ್ಯತೆ ಇದೆ. ಯಾಕೆಂದರೆ, ಈ ವಯಸ್ಸಿನಲ್ಲಿ ಕೂಡ ಅನುಪಮ್ ಖೇರ್ ಅವರು ಹೊಸ ಸವಾಲುಗಳನ್ನು ಸ್ವೀಕರಿಸುತ್ತಿದ್ದಾರೆ. ಹೊಸ ಕೌಶಲಗಳನ್ನು ಕಲಿಯುತ್ತಿದ್ದಾರೆ. ಅದೇ ರೀತಿಯ ಪಾತ್ರದ ಕುರಿತು ‘ವಿಜಯ್ 69’ ಸಿನಿಮಾ ಮೂಡಿಬರಲಿದೆ. 69ನೇ ವಯಸ್ಸಿನಲ್ಲಿ ಟ್ರೈಥ್ಲಾನ್ ಸ್ಪರ್ಧೆಯಲ್ಲಿ ಭಾಗವಹಿಸಬೇಕು ಎಂದು ನಿರ್ಧರಿಸುವ ವ್ಯಕ್ತಿಯಾಗಿ ಅನುಪಮ್ ಖೇರ್ ನಟಿಸಲಿದ್ದಾರೆ.
‘ಘೋಸ್ಟ್’ ನಟ ಅನುಪಮ್ ಖೇರ್ಗೆ ಜನ್ಮದಿನದ ಸಡಗರ; 68ನೇ ವಯಸ್ಸಲ್ಲೂ ಫುಲ್ ಆ್ಯಕ್ಟೀವ್
ಹಲವು ವರ್ಷಗಳಿಂದ ಅನುಪಮ್ ಖೇರ್ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. 500ಕ್ಕೂ ಅಧಿಕ ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ. ಅನುಪಮ್ ಖೇರ್ ನಟಿಸುತ್ತಿರುವ 537ನೇ ಚಿತ್ರವಾಗಿ ‘ವಿಜಯ್ 69’ ಮೂಡಿಬರಲಿದೆ. ಈ ಸಿನಿಮಾದ ಪೋಸ್ಟರ್ನಲ್ಲಿ ಅನುಪಮ್ ಖೇರ್ ಅವರು ಸೈಕಲ್ ರೇಸ್ನಲ್ಲಿ ಭಾಗವಹಿಸಿರುವುದು ಹೈಲೈಟ್ ಆಗಿದೆ. ಅವರ ಹೊಸ ಸಿನಿಮಾಗೆ ಅಭಿಮಾನಿಗಳು ಶುಭ ಕೋರಿದ್ದಾರೆ.
Anupam Kher: ‘ಆ ವ್ಯಕ್ತಿಯೇ ಅಶ್ಲೀಲ, ಅವಕಾಶವಾದಿ’: ನಡಾವ್ ಲಪಿಡ್ ಬಗ್ಗೆ ಅನುಪಮ್ ಖೇರ್ ಗರಂ
2022ರಲ್ಲಿ ಅನುಪಮ್ ಖೇರ್ ನಟಿಸಿದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಬಿಡುಗಡೆ ಆಯಿತು. ಆ ಸಿನಿಮಾದಲ್ಲಿ ಅವರು ಮಾಡಿದ ಕಾಶ್ಮೀರಿ ಪಂಡಿತನ ಪಾತ್ರ ಜನಮೆಚ್ಚುಗೆ ಪಡೆದುಕೊಂಡಿತು. ‘ದಿ ಕಾಶ್ಮೀರ್ ಫೈಲ್ಸ್’ ಯಶಸ್ಸಿನ ಬಳಿಕ ಅನುಪಮ್ ಖೇರ್ ಅವರಿಗೆ ಇದ್ದ ಡಿಮ್ಯಾಂಡ್ ಹೆಚ್ಚಾಯಿತು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.