Anupam Kher: ‘ಆ ವ್ಯಕ್ತಿಯೇ ಅಶ್ಲೀಲ, ಅವಕಾಶವಾದಿ’: ನಡಾವ್ ಲಪಿಡ್ ಬಗ್ಗೆ ಅನುಪಮ್ ಖೇರ್ ಗರಂ
The Kashmir Files | Anupam Kher: ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಬಗ್ಗೆ ಕಟು ಟೀಕೆ ಮಾಡಿದ ನಡಾವ್ ಲಪಿಡ್ ವಿರುದ್ಧ ನಟ ಅನುಪಮ್ ಖೇರ್ ಗರಂ ಆಗಿದ್ದಾರೆ. ಈ ಕುರಿತು ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆ ಕುರಿತು ತಯಾರಾದ ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಸಿನಿಮಾ ಬಿಡುಗಡೆ ಆದಾಗ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಈಗ ಮತ್ತೆ ಆ ಚಿತ್ರದ ಕುರಿತು ಪರ-ವಿರೋಧದ ಚರ್ಚೆ ಶುರುವಾಗಿದೆ. ಇತ್ತೀಚೆಗೆ ಸಮಾರೋಪಗೊಂಡ ಗೋವಾ ಸಿನಿಮೋತ್ಸವದಲ್ಲಿ ಜ್ಯೂರಿ ಕಮಿಟಿ ಅಧ್ಯಕ್ಷ ನಡಾವ್ ಲಪಿಡ್ (Nadav Lapid) ಅವರು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ಕಟುವಾಗಿ ಟೀಕಿಸಿದರು. ಅದಕ್ಕೆ ಅನೇಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಚಿತ್ರದ ನಟ ಅನುಪಮ್ ಖೇರ್ (Anupam Kher) ಅವರು ನಡಾವ್ ಲಪಿಡ್ ವಿರುದ್ಧ ಗರಂ ಆಗಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು ‘ಆ ವ್ಯಕ್ತಿಯೇ ಅಶ್ಲೀಲ ಮತ್ತು ಅವಕಾಶವಾದಿ’ ಎಂದು ನಡಾವ್ ಲಪಿಡ್ಗೆ ತಿರುಗೇಟು ನೀಡಿದ್ದಾರೆ.
‘ಅಭಿವ್ಯಕ್ತಿ ಸ್ವಾತಂತ್ರ್ಯ ಇರುವ ಎಲ್ಲ ದೇಶದಲ್ಲೂ ಇಂತಹ ಕೆಲವು ವ್ಯಕ್ತಿಗಳು ಈ ರೀತಿಯ ವೇದಿಕೆಯನ್ನು ತಮ್ಮ ವೈಯಕ್ತಿಕ ಅಭಿಪ್ರಾಯ ತಿಳಿಸಲು ಬಳಸಿಕೊಳ್ಳುತ್ತಾರೆ. ನಿಮಗೆ ಸಿನಿಮಾ ಇಷ್ಟ ಆಗಿಲ್ಲದೇ ಇದ್ದರೆ ಅದನ್ನು ಹೇಳಬಹುದು. ಆದರೆ ನೀವು ಜ್ಯೂರಿ ತಂಡದ ಸದಸ್ಯರಾಗಿರುವಾಗ ನಿಮಗೆ ಜವಾಬ್ದಾರಿ ಇರಬೇಕು. ನನಗೆ ಅನಿಸಿದಂತೆ ಆ ವ್ಯಕ್ತಿ ಅಶ್ಲೀಲವಾಗಿ ಮಾತಾಡಿದ್ದಾರೆ. ತಮ್ಮ ವಿಚಾರಗಳ ಪ್ರಚಾರಕ್ಕಾಗಿ ಈ ವೇದಿಕೆಯನ್ನು ಬಳಸಿಕೊಂಡ ಆ ವ್ಯಕ್ತಿಯೇ ಅಶ್ಲೀಲ ಮತ್ತು ಅವಕಾಶವಾದಿ’ ಎಂದು ಅನುಪಮ್ ಖೇರ್ ಕಿಡಿಕಾರಿದ್ದಾರೆ.
‘ಇಂಥವರಿಂದ ಸತ್ಯದ ಮೇಲೆ ಪರಿಣಾಮ ಬೀರುವುದಿಲ್ಲ. ಒಬ್ಬರು ಅಥವಾ 10 ಜನರು ಇಡೀ ದೇಶದ ಮೇಲೆ ಪ್ರಭಾವ ಬೀರಲು ಸಾಧ್ಯವಿಲ್ಲ. ನೋವು ಜನರನ್ನು ಒಗ್ಗೂಡಿಸುತ್ತದೆ. ಇಸ್ರೇಲ್ನಿಂದಲೂ ನನಗೆ ಜನರು ಮೆಸೇಜ್ ಮಾಡಿದ್ದಾರೆ. ಅಲ್ಲಿನ ಜನರು ಒಳ್ಳೆಯ ಮಾತುಗಳನ್ನು ತಿಳಿಸಿದ್ದಾರೆ’ ಎಂದು ಅನುಪಮ್ ಖೇರ್ ಹೇಳಿದ್ದಾರೆ.
‘कश्मीर फ़ाइल्स’ का सच कुछ लोगो के गले में एक काँटे की तरह अटक गया है।वो ना उसे निगल पा रहे है ना उगल! इस सच को झूठा साबित करने के लिए उनकी आत्मा,जो मर चुकी है, बुरी तरह से छटपटा रही है।पर हमारी ये फ़िल्म अब एक आंदोलन है फ़िल्म नहीं।तुच्छ #Toolkit गैंग वाले लाख कोशिश करते रहें।? pic.twitter.com/ysKwCraejt
— Anupam Kher (@AnupamPKher) November 29, 2022
ನಡಾವ್ ಲಪಿಡ್ ಹೇಳಿದ್ದೇನು?
‘ಅಂತಾರಾಷ್ಟ್ರೀಯ ಸಿನಿಮಾ ಸ್ಪರ್ಧೆಯ ವಿಭಾಗದಲ್ಲಿ ನಾವು 15 ಚಿತ್ರಗಳನ್ನು ನೋಡಿದೆವು. 14 ಸಿನಿಮಾಗಳು ಗುಣಮಟ್ಟದಿಂದ ಕೂಡಿದ್ದು, ಚರ್ಚೆ ಹುಟ್ಟುಹಾಕಿದವು. ಆದರೆ 15ನೇ ಸಿನಿಮಾ ದಿ ಕಾಶ್ಮೀರ್ ಫೈಲ್ಸ್ ನೋಡಿ ನಮಗೆಲ್ಲ ಶಾಕ್ ಆಯಿತು. ಅದೊಂದು ಪ್ರಚಾರದ, ಅಶ್ಲೀಲ ಸಿನಿಮಾ ಅಂತ ನನಗೆ ಅನಿಸಿತು. ಇಂಥ ಪ್ರತಿಷ್ಠಿತ ಸಿನಿಮೋತ್ಸವದ ಸ್ಪರ್ಧಾತ್ಮಕ ವಿಭಾಗದಲ್ಲಿ ಇರಲು ಅದು ಸೂಕ್ತವಲ್ಲ ಎನಿಸಿತು. ಈ ವೇದಿಕೆಯಲ್ಲಿ ನನ್ನ ಅಭಿಪ್ರಾಯವನ್ನು ತಿಳಿಸಲು ನಾನು ಕಂಫರ್ಟಬಲ್ ಆಗಿದ್ದೇನೆ. ಸಿನಿಮೋತ್ಸವದಲ್ಲಿ ಈ ವಿಮರ್ಶಾತ್ಮಕ ಚರ್ಚೆಯನ್ನು ಒಪ್ಪಿಕೊಳ್ಳಬಹುದು. ಬದುಕಿಗೆ ಮತ್ತು ಕಲೆಗೆ ಅದು ಅವಶ್ಯಕ’ ಎಂದು ನಡಾವ್ ಲಪಿಡ್ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:00 pm, Tue, 29 November 22