ತನ್ನದೇ ರಕ್ತ ಸುರಿಸಿ ‘ದಿ ಕಾಶ್ಮೀರ್​ ಫೈಲ್ಸ್​’ ಪೋಸ್ಟರ್​ ರಚಿಸಿದ ಮಹಿಳೆ; ‘ಇಂಥದ್ದೆಲ್ಲ ಮಾಡ್ಬೇಡಿ’ ಎಂದ ನಿರ್ದೇಶಕ

The Kashmir Files: ರಕ್ತದಲ್ಲಿ ‘ದಿ ಕಾಶ್ಮೀರ್​ ಫೈಲ್ಸ್​’ ಚಿತ್ರದ ಪೋಸ್ಟರ್​ ರಚಿಸಿದ ಮಹಿಳೆ ಹೆಸರು ಮಂಜೂ ಸೋನಿ. ತಮ್ಮ ದೇಹದಿಂದ 10 ಎಂಎಲ್​ ರಕ್ತವನ್ನು ತೆಗೆದುಕೊಂಡು ಅವರು ಈ ಕೆಲಸ ಮಾಡಿದ್ದಾರೆ.

ತನ್ನದೇ ರಕ್ತ ಸುರಿಸಿ ‘ದಿ ಕಾಶ್ಮೀರ್​ ಫೈಲ್ಸ್​’ ಪೋಸ್ಟರ್​ ರಚಿಸಿದ ಮಹಿಳೆ; ‘ಇಂಥದ್ದೆಲ್ಲ ಮಾಡ್ಬೇಡಿ’ ಎಂದ ನಿರ್ದೇಶಕ
ರಕ್ತದಲ್ಲಿ ‘ದಿ ಕಾಶ್ಮೀರ್​ ಫೈಲ್ಸ್​’ ಚಿತ್ರದ ಪೋಸ್ಟರ್​ ರಚಿಸಿದ ಮಹಿಳೆ
Follow us
| Updated By: ಮದನ್​ ಕುಮಾರ್​

Updated on: Mar 25, 2022 | 1:29 PM

ಬಾಲಿವುಡ್​ನ ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ (The Kashmir Files) ಸೃಷ್ಟಿಸಿರುವ ಕ್ರೇಜ್​ ಅಷ್ಟಿಷ್ಟಲ್ಲ. ಗಲ್ಲಾಪೆಟ್ಟಿಗೆಯಲ್ಲಿ 200 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿರುವ ಈ ಸಿನಿಮಾವನ್ನು ಹಲವು ರೀತಿಯಲ್ಲಿ ವಿಶ್ಲೇಷಿಸಲಾಗುತ್ತಿದೆ. ಚಿತ್ರದಲ್ಲಿ ತೋರಿಸಲಾದ ವಿಷಯಗಳ ಬಗ್ಗೆ ಪರ-ವಿರೋಧದ ಚರ್ಚೆ ನಡೆಯುತ್ತಿದೆ. ಕೆಲವರಂತೂ ‘ದಿ ಕಾಶ್ಮಿರ್​ ಫೈಲ್ಸ್​’ ಸಿನಿಮಾ ನೋಡಿದ ಬಳಿಕ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ (Director Vivek Agnihotri) ಅವರನ್ನು ಪರಿಪರಿಯಾಗಿ ಹೊಗಳುತ್ತಿದ್ದಾರೆ. ಅಕ್ಷಯ್​ ಕುಮಾರ್​, ಕಂಗನಾ ರಣಾವತ್​, ರಾಮ್​ ಗೋಪಾಲ್​ ವರ್ಮಾ, ನರೇಂದ್ರ ಮೋದಿ, ಬಸವರಾಜ ಬೊಮ್ಮಾಯಿ ಮುಂತಾದವರು ಈ ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಜನಸಾಮಾನ್ಯರು ಕೂಡ ‘ದಿ ಕಾಶ್ಮೀರ್​ ಫೈಲ್ಸ್’ ಚಿತ್ರಕ್ಕೆ ಫುಲ್​ ಮಾರ್ಕ್ಸ್​ ನೀಡಿದ್ದಾರೆ. ಸಿನಿಮಾದ ಬಗ್ಗೆ ತಮಗೆ ಇರುವ ಅಭಿಮಾನವನ್ನು ಹಲವು ಬಗೆಯಲ್ಲಿ ವ್ಯಕ್ತಪಡಿಸಲಾಗುತ್ತಿದೆ. ಪ್ರೇಕ್ಷಕರ ಭಾವನೆಯ ಮೇಲೆ ಈ ಸಿನಿಮಾ ಪ್ರಭಾವ ಬೀರಿದೆ ಎಂಬುದಕ್ಕೆ ಹಲವು ಉದಾಹರಣೆಗಳು ಸಿಗುತ್ತಿವೆ. ಅದಕ್ಕೆ ಲೇಟೆಸ್ಟ್​ ಸಾಕ್ಷಿ ಎಂದರೆ ಮಹಿಳೆಯೊಬ್ಬರು ತಮ್ಮ ರಕ್ತದಿಂದ ಈ ಸಿನಿಮಾ ಪೋಸ್ಟರ್ (The Kashmir Files Poster) ರಚಿಸಿರುವುದು! ಸದ್ಯ ಈ ಫೋಟೋಗಳು ವೈರಲ್​ ಆಗುತ್ತಿವೆ.

ಈ ರೀತಿ ಪೋಸ್ಟರ್​ ರಚಿಸಿದ ಮಹಿಳೆ ಹೆಸರು ಮಂಜೂ ಸೋನಿ. ತಮ್ಮ ದೇಹದಿಂದ 10 ಎಂಎಲ್​ ರಕ್ತವನ್ನು ತೆಗೆದುಕೊಂಡು ಅವರು ಈ ಕೆಲಸ ಮಾಡಿದ್ದಾರೆ. ಆ ಕುರಿತು ಪತ್ರಿಕೆಗಳಲ್ಲಿ ಸುದ್ದಿ ಕೂಡ ಪ್ರಕಟ ಆಗಿದೆ. ಫೋಟೋಗಳು ವೈರಲ್​ ಆದ ಬಳಿಕ ಅದು ನಿರ್ದೇಶಕ ವಿವೇಕ್​​ ಅಗ್ನಿಹೋತ್ರಿ ಅವರ ಕಣ್ಣಿಗೂ ಬಿದ್ದಿದೆ. ಮೊದಲಿಗೆ ಈ ಪರಿ ಪ್ರೀತಿ ಕಂಡು ಅವರು ಹೊಗಳಿದ್ದಾರೆ. ‘ಓಹ್​ ಮೈ ಗಾಡ್​.. ಇದನ್ನು ನಂಬಲು ಸಾಧ್ಯವಿಲ್ಲ. ಏನು ಹೇಳಬೇಕು ಎಂಬುದೇ ತಿಳಿಯುತ್ತಿಲ್ಲ. ಮಂಜೂ ಅವರಿಗೆ ನಾನು ಹೇಗೆ ಧನ್ಯವಾದ ತಿಳಿಸಬೇಕು ಅಂತ ಗೊತ್ತಿಲ್ಲ. ಅವರಿಗೆ ನನ್ನ ಶತ ಶತ ಪ್ರಣಾಮಗಳು, ಕೃತಜ್ಞತೆಗಳು. ಅವರ ಪರಿಚಯ ನಿಮಗೆ ಯಾರಿಗಾದರೂ ಇದ್ದರೆ ನನಗೆ ಅವರ ನಂಬರ್​ ಮೆಸೇಜ್​ ಮಾಡಿ’ ಎಂದು ವಿವೇಕ್​ ಅಗ್ನಿಹೋತ್ರಿ ಟ್ವೀಟ್​ ಮಾಡಿದ್ದಾರೆ.

ಮಹಿಳೆ ಮಾಡಿರುವುದು ಸರಿಯಲ್ಲ ಎಂದು ನಂತರ ವಿವೇಕ್​ ಅಗ್ನಿಹೋತ್ರಿ ಅವರಿಗೆ ಅನಿಸಿದೆ. ಆ ಕುರಿತಾಗಿಯೂ ಅವರು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ. ‘ನಿಮ್ಮ ಭಾವನೆಗಳನ್ನು ನಾನು ಮೆಚ್ಚುತ್ತೇನೆ. ಆದರೂ ಕೂಡ ಈ ರೀತಿಯ ಯಾವುದನ್ನೂ ಪ್ರಯತ್ನಿಸಬೇಡಿ ಎಂದು ಗಂಭೀರವಾಗಿ ನಾನು ಮನವಿ ಮಾಡಿಕೊಳ್ಳುತ್ತೇನೆ. ಇದು ಒಳ್ಳೆಯದು ಅಲ್ಲವೇ ಅಲ್ಲ. ಮನೆಯಲ್ಲಿ ಇಂಥದ್ದನೆಲ್ಲ ಮಾಡಲೇಬೇಡಿ’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

1990ರಲ್ಲಿ ನಡೆದ ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆ ಆಧರಿಸಿ ಈ ಸಿನಿಮಾ ಮೂಡಿಬಂದಿದೆ. ಅನುಪಮ್​ ಖೇರ್​, ದರ್ಶನ್​ ಕುಮಾರ್​, ಪುನೀತ್​ ಇಸ್ಸಾರ್​, ಪಲ್ಲವಿ ಜೋಶಿ, ಮಿಥುನ್​ ಚಕ್ರವರ್ತಿ, ಪ್ರಕಾಶ್​ ಬೆಳವಾಡಿ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಈ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಹಲವು ಶಾಸಕರು ಮತ್ತು ಸಚಿವರು ಸಿನಿಮಾ ನೋಡಿದ ಬಳಿಕ ಚಿತ್ರಕ್ಕೆ ಪ್ರಚಾರ ಸಿಕ್ಕಿತು.

ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ ಕಮಾಲ್​ ಮಾಡಿದೆ. ಸ್ಟಾರ್​ ನಟರ ಕಮರ್ಷಿಯಲ್​ ಸಿನಿಮಾಗಳನ್ನೂ ಹಿಂದಿಕ್ಕೆ ಅತ್ಯುತ್ತಮ ಕಲೆಕ್ಷನ್​ ಮಾಡಿದೆ. ಭಾರತದ ಬಾಕ್ಸ್​ ಆಫೀಸ್​ನಲ್ಲಿ ಎರಡು ವಾರಕ್ಕೆ ಬರೋಬ್ಬರಿ 207 ಕೋಟಿ ರೂಪಾಯಿ ಗಳಿಸಿದೆ. ವಿದೇಶಿ ಗಳಿಕೆಯನ್ನೂ ಸೇರಿಸಿದರೆ ಈ ಮೊತ್ತ ಇನ್ನಷ್ಟು ಹೆಚ್ಚುತ್ತದೆ. ರಿಲೀಸ್​ ಆಗಿ ಎರಡು ವಾರ ಕಳೆದ ಬಳಿಕವೂ ಅನೇಕ ಕಡೆಗಳಲ್ಲಿ ಈ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.

ಇದನ್ನೂ ಓದಿ:

The Kashmir Files Review: ಕಾಶ್ಮೀರದ ಭಯಾನಕ ಇತಿಹಾಸ ಮರೆಯಬಾರದು; ಮರುಕಳಿಸಲೂಬಾರದು

‘ದಿ ಕಾಶ್ಮೀರ್ ಫೈಲ್ಸ್​ ಚಿತ್ರವನ್ನು ಹೇಟ್​ ಮಾಡ್ತೀನಿ’: ತಮ್ಮದೇ ಶೈಲಿಯಲ್ಲಿ ವಿಮರ್ಶೆ ಮಾಡಿದ ಆರ್​ಜಿವಿ

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!