ವೆಬ್ ಸೀರಿಸ್ ಆರಂಭಕ್ಕೂ ಮೊದಲೇ ಬಂತು 120 ಕೋಟಿ ರೂಪಾಯಿ ಡೀಲ್; ಆರ್ಯನ್ ಖಾನ್ ನಿರ್ಧಾರವೇ ಬೇರೆ

ಶಾರುಖ್ ಖಾನ್​ಗೆ ಬಾಲಿವುಡ್​ನಲ್ಲಿ ದೊಡ್ಡ ಮಟ್ಟದ ಬೇಡಿಕೆ ಇದೆ. ಮಗನಿಗೆ ಒಳ್ಳೆಯ ನೆಲೆ ಸಿಗಬೇಕು ಎಂಬ ಕನಸು ಕಂಡಿದ್ದಾರೆ ಶಾರುಖ್ ಖಾನ್. ಈ ಕಾರಣದಿಂದಲೇ ಮಗನ ನಿರ್ದೇಶನದ ವೆಬ್​ ಸೀರಿಸ್​ಗೆ ತಾವೇ ಬಂಡವಾಳ ಹೂಡುತ್ತಿದ್ದಾರೆ. ಹಾಗಂತ ಅವರು ಮಗನ ನಿರ್ಧಾರದಲ್ಲಿ ಮೂಗು ತೂರಿಸುತ್ತಿಲ್ಲ.

ವೆಬ್ ಸೀರಿಸ್ ಆರಂಭಕ್ಕೂ ಮೊದಲೇ ಬಂತು 120 ಕೋಟಿ ರೂಪಾಯಿ ಡೀಲ್; ಆರ್ಯನ್ ಖಾನ್ ನಿರ್ಧಾರವೇ ಬೇರೆ
ಶಾರುಖ್​-ಆರ್ಯನ್

Updated on: Aug 10, 2023 | 6:30 AM

ಶಾರುಖ್ ಖಾನ್ ಮಗ ಆರ್ಯನ್ ಖಾನ್ (Aryan Khan) ಅವರು ಡ್ರಗ್ ಕೇಸ್ ಮೂಲಕ ಸಾಕಷ್ಟು ಸುದ್ದಿ ಆಗಿದ್ದರು. ಅವರು ಡ್ರಗ್ ಕೇಸ್​ನಲ್ಲಿ ಸಿಕ್ಕಿ ಬಿದ್ದಿದ್ದು ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿತ್ತು. ಈಗ ಆರ್ಯನ್ ಖಾನ್ ಅವರು ಸಿನಿಮಾ ವಿಚಾರದಲ್ಲಿ ಸುದ್ದಿ ಆಗುತ್ತಿದ್ದಾರೆ. ಅವರು ವೆಬ್ ಸೀರಿಸ್ ಒಂದನ್ನು ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಇದಕ್ಕಾಗಿ ಆರ್ಯನ್ ಖಾನ್ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ. ಅಚ್ಚರಿಯ ವಿಚಾರ ಎಂದರೆ ಈ ವೆಬ್ ಸೀರಿಸ್ ಆರಂಭ ಆಗುವುದಕ್ಕೂ ಮೊದಲೇ ಆರ್ಯನ್ ಖಾನ್​ಗೆ 120 ಕೋಟಿ ರೂಪಾಯಿ ಡೀಲ್ ಬಂದಿದೆ. ಆದರೆ, ಈ ಡೀಲ್​ನ ಅವರು ರಿಜೆಕ್ಟ್ ಮಾಡಿದ್ದಾರೆ.

ಆರ್ಯನ್ ಖಾನ್ ಅವರದ್ದು ಸಿನಿ ಕುಟುಂಬ. ಶಾರುಖ್ ಖಾನ್​ಗೆ ಬಾಲಿವುಡ್​ನಲ್ಲಿ ದೊಡ್ಡ ಮಟ್ಟದ ಬೇಡಿಕೆ ಇದೆ. ಮಗನಿಗೆ ಒಳ್ಳೆಯ ನೆಲೆ ಸಿಗಬೇಕು ಎಂಬ ಕನಸು ಕಂಡಿದ್ದಾರೆ ಶಾರುಖ್ ಖಾನ್. ಈ ಕಾರಣದಿಂದಲೇ ಮಗನ ನಿರ್ದೇಶನದ ವೆಬ್​ ಸೀರಿಸ್​ಗೆ ತಾವೇ ಬಂಡವಾಳ ಹೂಡುತ್ತಿದ್ದಾರೆ. ರೆಡ್ ಚಿಲ್ಲೀಸ್ ಎಂಟರ್​ಟೇನ್​ಮೆಂಟ್ ಮೂಲಕ ಆರ್ಯನ್ ಖಾನ್ ಮೊದಲ ವೆಬ್ ಸೀರಿಸ್ ಸಿದ್ಧವಾಗಲಿದೆ. ಶಾರುಖ್ ಖಾನ್ ಅವರು ಬಂಡವಾಳ ಹೂಡುತ್ತಿದ್ದರೂ, ಮಗನ ನಿರ್ಧಾರದಲ್ಲಿ ಮೂಗು ತೂರಿಸುತ್ತಿಲ್ಲ.

ಒಟಿಟಿ ಪ್ಲಾಟ್​ಫಾರ್ಮ್ ಒಂದು ಆರ್ಯನ್ ಖಾನ್ ವೆಬ್​ ಸೀರಿಸ್​ನ ಕೊಂಡುಕೊಳ್ಳಲು 120 ಕೋಟಿ ರೂಪಾಯಿ ಡೀಲ್​ನೊಂದಿಗೆ ಬಂದಿತ್ತು. ಆರ್ಯನ್ ಖಾನ್ ಮೊದಲ ವೆಬ್ ಸೀರಿಸ್ ಎಂದಾಗ ಸಹಜವಾಗಿಯೇ ನಿರೀಕ್ಷೆ ಇರುತ್ತದೆ. ಈ ಕಾರಣಕ್ಕೆ ಇಷ್ಟು ದೊಡ್ಡ ಮೊತ್ತದ ಹಣವನ್ನು ಆಫರ್ ಮಾಡಲಾಗಿತ್ತು. ಆದರೆ, ಆರ್ಯನ್ ಖಾನ್ ಅವರು ಇದಕ್ಕೆ ಒಪ್ಪಿಲ್ಲ.

ಇದನ್ನೂ ಓದಿ: ‘ಡಾನ್​ 3’ಗೆ ರಣವೀರ್ ಸಿಂಗ್ ಎಂಟ್ರಿ; ಶಾರುಖ್ ಖಾನ್ ಹೊರ ನಡೆದ ವಿಚಾರ ಖಚಿತವಾಯ್ತು

ವೆಬ್ ಸೀರಿಸ್ ಶೂಟ್ ಆಗಿ, ಪೋಸ್ಟ್ ಪ್ರೊಡಕ್ಷನ್ ಮುಗಿದು ಪೂರ್ತಿ ಕಾಪಿ ಸಿದ್ಧವಾಗುವರೆಗೂ ಇದರ ಹಕ್ಕನ್ನು ಯಾರಿಗೂ ಮಾರದೇ ಇರಲು ಆರ್ಯನ್ ಖಾನ್ ನಿರ್ಧರಿಸಿದ್ದಾರೆ. ವೆಬ್​ ಸೀರಿಸ್​ನ ಒಟಿಟಿ ಪ್ಲಾಟ್​ಫಾರ್ಮ್​ನವರಿಗೆ ತೋರಿಸಿದ ಬಳಿಕವೇ ಅದನ್ನು ಮಾರಾಟ ಮಾಡಬೇಕು ಎಂಬುದು ಆರ್ಯನ್ ಖಾನ್ ಉದ್ದೇಶ. ಈ ಕಾರಣದಿಂದಲೇ ಅವರು ಇಷ್ಟು ದೊಡ್ಡ ಮೊತ್ತದ ಡೀಲ್​ನ ರಿಜೆಕ್ಟ್ ಮಾಡಿದ್ದಾರೆ. ಇದಕ್ಕೆ ಶಾರುಖ್ ಖಾನ್ ಕೂಡ ಬೆಂಬಲವಾಗಿ ನಿಂತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ