ಶೀಘ್ರವೇ ಶುರು ‘ಬಿಗ್​ ಬಾಸ್​ ಒಟಿಟಿ’ ಹೊಸ ಸೀಸನ್​; ಆದರೆ ವೀಕ್ಷಕರಿಗೆ ಒಂದು ಕಹಿ ಸುದ್ದಿ

ವಿವಾದಾತ್ಮಕ ವ್ಯಕ್ತಿಗಳಿಂದಲೇ ಫೇಮಸ್​ ಆದ ‘ಬಿಗ್​ ಬಾಸ್​ ಒಟಿಟಿ’ ಶೋ ಮತ್ತೆ ಬರಲಿದೆ. ಅದಕ್ಕಾಗಿ ಸಕಲ ಸಿದ್ಧತೆ ನಡೆದಿದೆ. ಜೂನ್​ ಮೊದಲ ವಾರದಲ್ಲಿ ‘ಬಿಗ್​ ಬಾಸ್​ ಒಟಿಟಿ 3’ ಪ್ರಸಾರ ಆರಂಭ ಆಗಲಿದೆ ಎನ್ನಲಾಗಿದೆ. ಈ ಬಾರಿ ಶೋ ನೋಡಲು ಸಬ್​ಸ್ಕ್ರಿಪ್ಷನ್​ ಪಡೆಯಬೇಕಾಗಬಹುದು ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳುವುದು ಬಾಕಿ ಇದೆ.

ಶೀಘ್ರವೇ ಶುರು ‘ಬಿಗ್​ ಬಾಸ್​ ಒಟಿಟಿ’ ಹೊಸ ಸೀಸನ್​; ಆದರೆ ವೀಕ್ಷಕರಿಗೆ ಒಂದು ಕಹಿ ಸುದ್ದಿ
ಸಲ್ಮಾನ್​ ಖಾನ್​

Updated on: Apr 22, 2024 | 10:08 PM

ಕಿರುತೆರೆಯಲ್ಲಿ ಪ್ರಸಾರ ಆಗುವ ಬಿಗ್​ ಬಾಸ್​’ (Bigg Boss) ಶೋ ಬಗ್ಗೆ ಹೊಸದಾಗಿ ಹೇಳಬೇಕಾದ್ದಿಲ್ಲ. ಅಷ್ಟರಮಟ್ಟಿಗೆ ಈ ಕಾರ್ಯಕ್ರಮ ಫೇಮಸ್​. ಇತ್ತೀಚಿನ ವರ್ಷಗಳಲ್ಲಿ ಈ ಕಾರ್ಯಕ್ರಮದ ಒಟಿಟಿ ವರ್ಷನ್​ ಕೂಡ ಪ್ರಸಾರ ಕಂಡಿದೆ. ಹಿಂದಿಯಲ್ಲಿ ‘ಬಿಗ್​ ಬಾಸ್​ ಒಟಿಟಿ’ (Bigg Boss OTT) ಕಾರ್ಯಕ್ರಮದ ಎರಡು ಸೀಸನ್​ಗಳು ಯಶಸ್ವಿ ಆಗಿವೆ. ಈಗ 3ನೇ ಸೀಸನ್​ ಬಗ್ಗೆ ಸುದ್ದಿ ಕೇಳಿಬಂದಿದೆ. ವರದಿಗಳ ಪ್ರಕಾರ, ಜೂನ್​ ತಿಂಗಳಲ್ಲಿ ‘ಬಿಗ್​ ಬಾಸ್​ ಒಟಿಟಿ ಸೀಸನ್​ 3’ (Bigg Boss OTT 3) ಪ್ರಸಾರ ಆರಂಭ ಆಗಲಿದೆ. ಇದರ ಜೊತೆಗೆ ಪ್ರೇಕ್ಷಕರಿಗೆ ಒಂದು ಕಹಿ ಸುದ್ದಿ ಕೂಡ ಹರಿದಾಡುತ್ತಿದೆ. ಏನದು? ಈ ಬಾರಿ ಉಚಿತವಾಗಿ ‘ಬಿಗ್​ ಬಾಸ್​ ಒಟಿಟಿ’ ನೋಡಲು ಸಿಗುವುದು ಅನುಮಾನ.

ಕಳೆದ 2 ಸೀಸನ್​ಗಳನ್ನು ‘ಜಿಯೋ ಸಿನಿಮಾ’ ಉಚಿತವಾಗಿ ಪ್ರಸಾರ ಮಾಡಿತ್ತು. ಕೋಟ್ಯಂತರ ಪ್ರೇಕ್ಷಕರು ‘ಬಿಗ್ ಬಾಸ್​ ಒಟಿಟಿ’ ಸಂಚಿಕೆಗಳನ್ನು ನೋಡಿದ್ದರು. ಅಲ್ಲದೇ, ಲೈವ್​ ನೋಡಿ ಕೂಡ ಎಂಜಾಯ್​ ಮಾಡಿದ್ದರು. ಸದ್ಯ ಹರಿದಾಡುತ್ತಿರುವ ಮಾಹಿತಿ ಪ್ರಕಾರ ‘ಬಿಗ್​ ಬಾಸ್​ ಸೀಸನ್​ 3’ ಕಾರ್ಯಕ್ರಮವನ್ನು ನೋಡಲು ವೀಕ್ಷಕರು ಸಬ್​ಸ್ಕ್ರಿಪ್ಷನ್​ ಪಡೆಯಬೇಕು ಎನ್ನಲಾಗಿದೆ. ಒಂದು ವೇಳೆ ಈ ಸುದ್ದಿ ನಿಜವಾದರೆ ವೀಕ್ಷಕರ ಜೇಬಿಗೆ ಕತ್ತರಿ ಬೀಳಲಿದೆ.

ಇದನ್ನೂ ಓದಿ: ನಿರ್ದೇಶಕ, ಬಿಗ್​ ಬಾಸ್​ ಮಾಜಿ ಸ್ಪರ್ಧಿ ಸೂರ್ಯ ಕಿರಣ್​ ಜಾಂಡಿಸ್​ನಿಂದ ನಿಧನ

ಕೆಲವೇ ದಿನಗಳ ಹಿಂದೆ ಜಿಯೋ ಸಿನಿಮಾದ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ‘ಬಿಗ್​ ಬಾಸ್​ ಒಟಿಟಿ 3’ ಬಗ್ಗೆ ಪೋಸ್ಟ್​ ಹಂಚಿಕೊಳ್ಳಲಾಗಿತ್ತು. ಆದರೆ ಕೆಲವು ಸಮಯದ ನಂತರ ಅದನ್ನು ಡಿಲೀಟ್​ ಮಾಡಲಾಯಿತು. ಅದನ್ನು ಗಮನಿಸಿದ ಕೆಲವರು ಶೋ ರದ್ದಾಗಿದೆ ಎಂದು ಸುದ್ದಿ ಹಬ್ಬಿಸಿದ್ದಾರೆ. ಆದರೆ ಜೂನ್​ ಮೊದಲ ವಾರದಲ್ಲೇ ‘ಬಿಗ್​ ಬಾಸ್​ ಒಟಿಟಿ 3’ ಆರಂಭ ಆಗಲಿದೆ ಎಂದು ಹೇಳಲಾಗುತ್ತಿದೆ. ಅಧಿಕೃತ ಮಾಹಿತಿ ಹೊರಬೀಳುವುದಷ್ಟೇ ಬಾಕಿ ಇದೆ.

ಸಲ್ಮಾನ್​ ಖಾನ್​ ಅವರು ‘ಬಿಗ್​ ಬಾಸ್​ ಒಟಿಟಿ ಸೀಸಸ್​ 3’ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ. ಈ ಬಾರಿ ಯಾವೆಲ್ಲ ವಿವಾದಾತ್ಮಕ ವ್ಯಕ್ತಿಗಳು ಬರುತ್ತಾರೆ ಎಂಬುದನ್ನು ಕಾದುನೋಡಬೇಕು. ಕೆಲವು ಹಳೇ ಸ್ಪರ್ಧಿಗಳು ಕೂಡ ದೊಡ್ಮನೆಗೆ ಎಂಟ್ರಿ ನೀಡುತ್ತಾರೆ ಎಂಬ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.