ಹಾವಿನ ವಿಷ ಪೂರೈಕೆ ಒಪ್ಪಿಕೊಂಡ ಬಿಗ್ ಬಾಸ್ ವಿನ್ನರ್; ಹೊರ ಬರಲಿದೆ ಗಣ್ಯರ ಹೆಸರು?

|

Updated on: Mar 18, 2024 | 10:53 AM

ಇತ್ತೀಚೆಗೆ ಎಲ್ವಿಶ್ ಯಾದವ್ ಅವರು ಸಖತ್ ಸುದ್ದಿಯಲ್ಲಿ ಇದ್ದಾರೆ. ಅವರು ಹೋದಲ್ಲೆಲ್ಲ ಕಿರಿಕ್ ಮಾಡಿಕೊಳ್ಳುತ್ತಿದ್ದಾರೆ. ಸಾರ್ವಜನಿಕವಾಗಿ ಎಲ್ಲರಿಗೂ ಹೊಡೆದು ಅವರು ಸುದ್ದಿ ಆಗುತ್ತಿದ್ದಾರೆ. ಭಾನುವಾರ (ಮಾರ್ಚ್ 17) ಅವರನ್ನು ನೋಯ್ಡಾ ಪೊಲೀಸರು ಬಂಧಿಸಿದ್ದಾರೆ.

ಹಾವಿನ ವಿಷ ಪೂರೈಕೆ ಒಪ್ಪಿಕೊಂಡ ಬಿಗ್ ಬಾಸ್ ವಿನ್ನರ್; ಹೊರ ಬರಲಿದೆ ಗಣ್ಯರ ಹೆಸರು?
ಎಲ್ವಿಶ್
Follow us on

ಯೂಟ್ಯೂಬರ್ ಹಾಗೂ ‘ಬಿಗ್ ಬಾಸ್ ಒಟಿಟಿ ಸೀಸನ್ 2’ ವಿನ್ನರ್ ಎಲ್ವಿಶ್ ಯಾದವ್​ಗೆ (Elvish Yadav) ಸಂಕಷ್ಟ ಹೆಚ್ಚಿದೆ. ರೇವ್ ಪಾರ್ಟಿಗೆ ಅವರು ಹಾವಿನ ವಿಷವನ್ನು ಪೂರೈಕೆ ಮಾಡುತ್ತಿದ್ದ ಆರೋಪದ ಮೇಲೆ ಅರೆಸ್ಟ್ ಆಗಿದ್ದಾರೆ. ಬಂಧನದ ಬಳಿಕ ಅವರು ಈ ವಿಚಾರವನ್ನು ಒಪ್ಪಿಕೊಂಡಿದ್ದಾರೆ ಎಂದು ವರದಿ ಆಗಿದೆ. ಹಾವಿನ ವಿಷ ಮಾರಾಟ ಅಪರಾಧ ಆಗಿದ್ದು, ಅವರಿಗೆ ಶಿಕ್ಷೆ ಆಗುತ್ತದೆಯೇ ಎನ್ನುವ ಪ್ರಶ್ನೆ ಕಾಡಿದೆ.

ಇತ್ತೀಚೆಗೆ ಎಲ್ವಿಶ್ ಯಾದವ್ ಅವರು ಸಖತ್ ಸುದ್ದಿಯಲ್ಲಿ ಇದ್ದಾರೆ. ಅವರು ಹೋದಲ್ಲೆಲ್ಲ ಕಿರಿಕ್ ಮಾಡಿಕೊಳ್ಳುತ್ತಿದ್ದಾರೆ. ಸಾರ್ವಜನಿಕವಾಗಿ ಎಲ್ಲರಿಗೂ ಹೊಡೆದು ಅವರು ಸುದ್ದಿ ಆಗುತ್ತಿದ್ದಾರೆ. ಭಾನುವಾರ (ಮಾರ್ಚ್ 17) ಅವರನ್ನು ನೋಯ್ಡಾ ಪೊಲೀಸರು ಬಂಧಿಸಿದ್ದಾರೆ. ಪಾರ್ಟಿಗಳಿಗೆ ಅವರು ಹಾವಿನ ವಿಷ ಪೂರೈಕೆ ಮಾಡುತ್ತಿದ್ದ ಆರೋಪ ಹೊತ್ತಿದ್ದಾರೆ.

ಎಲ್ವಿಶ್ ಯಾದವ್ ಅವರು ಪೊಲೀಸರ ಎದುರು ಈ ವಿಚಾರವನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ರೇವ್ ಪಾರ್ಟಿಗಳಿಗೆ ಅವರು ತೆರಳಿ ವಿಷ ಪೂರೈಸುತ್ತಿದ್ದರು ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ಅವರು ಪಾರ್ಟಿಯಲ್ಲಿ ಅನೇಕರನ್ನು ಭೇಟಿ ಮಾಡಿದ್ದಾಗಿ ಹೇಳಿದ್ದಾರೆ. ಈ ಮೊದಲು ಎಲ್ವಿಶ್ ಯಾದವ್ ಅವರು ಈ ವಿಚಾರವನ್ನು ಅಲ್ಲಗಳೆದಿದ್ದರು. ಈಗ ಅವರು ಈ ವಿಚಾರವನ್ನು ಒಪ್ಪಿಕೊಂಡಿದ್ದಾರೆ. ನಾರ್ಕೋಟಿಕ್ ಡ್ರಗ್ಸ್ ಆ್ಯಕ್ಟ್ ಅಡಿಯಲ್ಲಿ ಎಲ್ವಿಶ್ ಯಾದವ್ ವಿರುದ್ಧ ಕೇಸ್ ದಾಖಲಾಗಿದೆ. ಸೆಕ್ಷನ್ 29 (ಡ್ರಗ್ಸ್ ಮಾರಾಟ ಮತ್ತು ಪೂರೈಕೆ) ಅಡಿಯಲ್ಲಿ ಅವರ ವಿರುದ್ಧ ಕೇಸ್ ದಾಖಲಾಗಿದೆ.

ಇದನ್ನೂ ಓದಿ: ಹಾವಿನ ವಿಷ ಮಾನವನ ರಕ್ತದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಗೊತ್ತಾ? ವಿಡಿಯೋ ವೈರಲ್​

ಕಳೆದ ವರ್ಷ ನವೆಂಬರ್​ನಲ್ಲಿ ರೇವ್ ಪಾರ್ಟಿ ಮಾಡಿದ ಐದು ಜನರನ್ನು ಬಂಧಿಸಲಾಗಿತ್ತು. ಈ ವೇಳೆ 20 ಎಂಎಲ್ ಹಾವಿನ ವಿಷ ಸಿಕ್ಕಿತ್ತು. ಈ ಪ್ರಕರಣದ ಜಾಡು ಹಿಡಿದು ಹೋದ ಪೊಲೀಸರಿಗೆ ಎಲ್ವಿಶ್ ಯಾದವ್ ಅವರ ಹೆಸರು ಸಿಕ್ಕಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ನವೆಂಬರ್​ನಲ್ಲಿ ವಿಚಾರಣೆ ಮಾಡಲಾಗಿತ್ತು. ಈಗ ಹೊಸ ಸಾಕ್ಷ್ಯಗಳೊಂದಿಗೆ ಎಲ್ವಿಶ್ ಯಾದವ್ ಅವರನ್ನು ಅರೆಸ್ಟ್ ಮಾಡಲಾಗಿದೆ. ಅವರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ. ಈ ವೇಳೆ ಅವರು ಹಲವರ ಹೆಸರು ಹೇಳುವ ಸಾಧ್ಯತೆ ಇದೆ. ಗಣ್ಯರ ಹೆಸರನ್ನು ಅವರು ಹೇಳುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ