ಅಶ್ಲೀಲ ಶೋಗಳ ಪ್ರದರ್ಶನ: ಉಲ್ಲು, ಆಲ್ಟ್ ಬಾಲಾಜಿ ಸೇರಿ 25 ಒಟಿಟಿಗಳ ನಿಷೇಧ

Ban on OTT and Apps: ಭಾರತದಲ್ಲಿ ನೂರಾರು ಒಟಿಟಿಗಳು ಮತ್ತು ಮನೊರಂಜನಾ ಅಪ್ಲಿಕೇಶನ್​ಗಳು ಕಾರ್ಯ ನಿರ್ವಹಿಸುತ್ತಿವೆ. ಇವುಗಳಲ್ಲಿ ಅಶ್ಲೀಲ ಕಂಟೆಂಟ್ ಅನ್ನು ಮಾತ್ರವೇ ಪ್ರಸಾರ, ಪ್ರಚಾರ ಮಾಡುವ ಹಲವಾರು ಒಟಿಟಿಗಳು ಅಪ್ಲಿಕೇಶನ್​ಗಳು ಇವೆ. ಕೆಲ ದೊಡ್ಡ ನಿರ್ಮಾಣ ಸಂಸ್ಥೆಗಳೇ ಇಂಥಹಾ ಒಟಿಟಿಗಳನ್ನು ಹೊಂದಿವೆ. ಇದೀಗ ಕೇಂದ್ರ ಸರ್ಕಾರ ಇಂಥಹಾ 25 ಅಪ್ಲಿಕೇಶನ್​ಗಳ ಮೇಲೆ ನಿಷೇಧ ಹೇರಿದೆ. ಇಲ್ಲಿದೆ ಪಟ್ಟಿ.

ಅಶ್ಲೀಲ ಶೋಗಳ ಪ್ರದರ್ಶನ: ಉಲ್ಲು, ಆಲ್ಟ್ ಬಾಲಾಜಿ ಸೇರಿ 25 ಒಟಿಟಿಗಳ ನಿಷೇಧ
Ullu Alt

Updated on: Jul 25, 2025 | 1:11 PM

ಕೋವಿಡ್ ಬಳಿಕ ಒಟಿಟಿಗಳು, ಮನರಂಜನಾ ಅಪ್ಲಿಕೇಶನ್​ಗಳ ದೊಡ್ಡ ಅಲೆಯೇ ವಿಶ್ವದೆಲ್ಲೆಡೆ ಬಂದಿದೆ. ಭಾರತವೂ ಇದಕ್ಕೆ ಹೊರತಲ್ಲ. ಅಮೆಜಾನ್, ನೆಟ್​ಫ್ಲಿಕ್ಸ್​, ಹಾಟ್​ಸ್ಟಾರ್, ಆಪಲ್ ಟಿವಿ, ಸನ್ ನೆಕ್ಸ್ಟ್, ಸೋನಿ, ಜೀ5, ಹೋಯಿಚೋಯಿ, ವೂಟ್, ಆಹಾ ಇನ್ನೂ ಹಲವಾರು ಒಟಿಟಿಗಳು ಭಾರತದಲ್ಲಿ ಸಕ್ರಿಯವಾಗಿವೆ. ಕೆಲವು ಮನೊರಂಜನೆಗೆ ಮಾತ್ರ ಸೀಮಿತವಾಗಿದ್ದರೆ ಇನ್ನು ಕೆಲವು ಒಟಿಟಿ ಮತ್ತು ಮನೊರಂಜನಾ ಅಪ್ಲಿಕೇಶನ್​ಗಳು ಅಶ್ಲೀಲ ಕಂಟೆಂಟ್ ನೀಡಿ ಹಣ ಮಾಡುತ್ತಿವೆ. ಆದರೆ ಇದೀಗ ಅಂಥಹಾ ಒಟಿಟಿಗಳಿಗೆ ಕೇಂದ್ರ ಸರ್ಕಾರ ಶಾಕ್ ನೀಡಿದೆ.

ಭಾರತದಲ್ಲಿ ಅಶ್ಲೀಲ ಕಂಟೆಂಟ್ಗೆ ಬಹಳ ಜನಪ್ರಿಯವಾಗಿರುವ ಆಪ್​ಗಳೆಂದರೆ ಉಲ್ಲು ಮತ್ತು ಆಲ್ಟ್ ಬಾಲಾಜಿ. ಈ ಎರಡೂ ಒಟಿಟಿಗಳು ಸೇರಿದಂತೆ ಬರೋಬ್ಬರಿ 25 ಒಟಿಟಿ ಮತ್ತು ಅಪ್ಲಿಕೇಶನ್​ಗಳ ಮೇಲೆ ನಿಷೇಧ ಹೇರಿ ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಇಲಾಖೆಯು ಆದೇಶ ಹೊರಡಿಸಿದೆ. ಉಲ್ಲು ಮತ್ತು ಆಲ್ಟ್ ಬಾಲಾಜಿ ಒಟಿಟಿಗಳು ಭಾರತದ ಟಾಪ್ 10 ಒಟಿಟಿಗಳಲ್ಲಿ ಸ್ಥಾನ ಪಡೆದಿದ್ದವು ಆದರೆ ಈಗ ಅವುಗಳ ಮೇಲೆ ಸರ್ಕಾರ ನಿಷೇಧ ಹೇರಿದೆ.

ಈ ಒಟಿಟಿಗಳು ಭಾರತದ ಪ್ರಸಾರ ಕಾಯ್ದೆಯನ್ನು ಉಲ್ಲಂಘಿಸಿ ಅಶ್ಲೀಲ ಕಂಟೆಂಟ್ ಅನ್ನು ಪ್ರಚಾರ ಮತ್ತು ಪ್ರಸಾರ ಮಾಡುತ್ತಿವೆ ಎಂಬ ಕಾರಣ ನೀಡಿ ಮಾಹಿತಿ ಮತ್ತು ಪ್ರಸಾರ ಇಲಾಖೆಯು 25 ಒಟಿಟಿಗಳ ಮೇಲೆ ನಿಷೇಧ ಹೇರಿದೆ. ಈ ಅಪ್ಲಿಕೇಶನ್, ಒಟಿಟಿಗಳು ಪ್ರಸ್ತುತ ಭಾರತದಲ್ಲಿ ಮಾತ್ರವೇ ನಿಷೇಧಗೊಳ್ಳಲಿವೆ. ಭಾರತದ ಹೊರಗೆ ಈ ಒಟಿಟಿಗಳು ಕಾರ್ಯ ನಿರ್ವಹಿಸಲಿವೆ.

ಇದನ್ನೂ ಓದಿ:ಈ ದಿನಂದು ‘ಕಣ್ಣಪ’ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಲಿದೆ?

ಈಗ ಬ್ಯಾನ್ ಆಗಿರುವ ಒಟಿಟಿಗಳಲ್ಲಿ ಖ್ಯಾತ ನಿರ್ಮಾಪಕಿ, ಟಿವಿ ಲೋಕದ ದೊರೆ ಎಂದೇ ಕರೆಯಲಾಗುವ ಏಕ್ತಾ ಕಪೂರ್ ಒಡೆತನದ ಆಲ್ಟ್ ಬಾಲಾಜಿ ಸಹ ಇದೆ. ಈ ಹಿಂದೆಯೂ ಸಹ ಏಕ್ತಾ ಒಡೆತನದ ಆಲ್ಟ್ ಬಾಲಾಜಿ ಒಟಿಟಿಯ ಕಂಟೆಂಟ್​ಗಳ ಮೇಲೆ ದೂರುಗಳು ದಾಖಲಾಗಿದ್ದವು. ಆದರೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈಗ ಒಮ್ಮೆಲೆ ನಿಷೇಧ ಹೇರಲಾಗಿದೆ. ಏಕ್ತಾ ಮತ್ತು ಇತರೆ ಒಟಿಟಿಗಳವರು ಸರ್ಕಾರದ ಆದೇಶದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರುವ ಸಾಧ್ಯತೆ ಇದೆ.

ಅಶ್ಲೀಲ ಕಂಟೆಂಟ್​ ಪ್ರಸಾರ ಮಾಡುವುದಕ್ಕೇ ಜನಪ್ರಿಯವಾಗಿದ್ದ ಉಲ್ಲು, ಆಲ್ಟ್ ಬಾಲಾಜಿ, ಬಿಗ್ ಶಾಟ್ಸ್, ಜಲ್ವಾ ಆಪ್, ದೇಸಿ ಫ್ಲಿಕ್ಸ್, ಹಾಟ್ ಎಕ್ಸ್ ವಿಐಪಿ, ಅಡ್ಡಾ ಟಿವಿ, ನವರಸ ಲೈಟ್, ಗುಲಾಬ್ ಆಪ್, ಮೂಡ್ ಎಕ್ಸ್, ಹಲ್​ಚಲ್ ಆಫ್, ಮೋಜ್​ಫ್ಲಿಕ್ಸ್, ಬೂಮೆಕ್ಸ್, ಶೋ ಎಕ್ಸ್, ಬುಲ್ ಆಪ್, ಕಂಗನಾ ಆಪ್ ಇನ್ನೂ ಕೆಲವು ಅಪ್ಲಿಕೇಶನ್ ಮತ್ತು ಒಟಿಟಿಗಳನ್ನು ಸರ್ಕಾರ ನಿಷೇಧ ಮಾಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ