ಮುಗಿಯುತ್ತಿಲ್ಲ ಬಿಗ್ ಬಾಸ್ ವಿನ್ನರ್ ರಂಪಾಟ; ಯೂಟ್ಯೂಬರ್​ ಮೇಲೆ ಹಲ್ಲೆ, ವಿಡಿಯೋ ವೈರಲ್

ಸಾಗರ್ ಅವರು ಇತ್ತೀಚೆಗೆ ಎಲ್ವಿಶ್ ಯಾದವ್ ಮೇಲೆ ಆರೋಪ ಒಂದನ್ನು ಮಾಡಿದ್ದರು. ಎಲ್ವಿಶ್ ಯಾದವ್ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಿದ್ದರು. ಈಗ ಇದಕ್ಕೆ ಸಾಕ್ಷಿ ಸಿಕ್ಕಿದೆ. ಸಾಗರ್ ಅವರು ಕೊಠಡಿಯಲ್ಲಿ ಕುಳಿತಿದ್ದರು. ಎಲ್ವಿಶ್ ಯಾದವ್ ಅವರು ಬರುತ್ತಿದ್ದಂತೆ ಹ್ಯಾಂಡ್​ಶೇಕ್ ಮಾಡಲು ಹೋಗಿದ್ದಾರೆ ಸಾಗರ್. ಈ ವೇಳೆ ಎಲ್ವಿಶ್ ಅವರು ಸಾಗರ್ ಮೇಲೆ ಹಲ್ಲೆ ಮಾಡಿದ್ದಾರೆ.

ಮುಗಿಯುತ್ತಿಲ್ಲ ಬಿಗ್ ಬಾಸ್ ವಿನ್ನರ್ ರಂಪಾಟ; ಯೂಟ್ಯೂಬರ್​ ಮೇಲೆ ಹಲ್ಲೆ, ವಿಡಿಯೋ ವೈರಲ್
ಎಲ್ವಿಶ್
Edited By:

Updated on: Mar 09, 2024 | 8:05 AM

‘ಬಿಗ್ ಬಾಸ್ ಹಿಂದಿ ಒಟಿಟಿ 2’ (Bigg Boss OTT) ಮೂಲಕ ಸಾಕಷ್ಟು ಸುದ್ದಿ ಆದವರು ಎಲ್ವಿಶ್​ ಯಾದವ್. ಅವರು ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಒಂದೊಂದೇ ರಂಪಾಟ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅವರು ರೆಸ್ಟೋರೆಂಟ್ ಒಂದರಲ್ಲಿ ಒಬ್ಬರಿಗೆ ಹೊಡೆದ ವಿಡಿಯೋ ವೈರಲ್ ಆಗಿತ್ತು. ಈಗ ಮತ್ತೊಂದು ಶಾಕಿಂಗ್ ವಿಡಿಯೋ ರಿವೀಲ್ ಆಗಿದೆ. ಇದರಲ್ಲಿ ಎಲ್ವಿಶ್ ಯಾದವ್ ಅವರು ಯೂಟ್ಯೂಬರ್ ಸಾಗರ್ ಠಾಕೂರ್ ಮೇಲೆ ಹಲ್ಲೆ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಸಾಗರ್ ಅವರು ಇತ್ತೀಚೆಗೆ ಎಲ್ವಿಶ್ ಯಾದವ್ ಮೇಲೆ ಆರೋಪ ಒಂದನ್ನು ಮಾಡಿದ್ದರು. ಎಲ್ವಿಶ್ ಯಾದವ್ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಿದ್ದರು. ಈಗ ಇದಕ್ಕೆ ಸಾಕ್ಷಿ ಸಿಕ್ಕಿದೆ. ಸಾಗರ್ ಅವರು ಕೊಠಡಿಯಲ್ಲಿ ಕುಳಿತಿದ್ದರು. ಎಲ್ವಿಶ್ ಯಾದವ್ ಅವರು ಬರುತ್ತಿದ್ದಂತೆ ಹ್ಯಾಂಡ್​ಶೇಕ್ ಮಾಡಲು ಹೋಗಿದ್ದಾರೆ ಸಾಗರ್. ಈ ವೇಳೆ ಎಲ್ವಿಶ್ ಅವರು ಸಾಗರ್ ಮೇಲೆ ಹಲ್ಲೆ ಮಾಡಿದ್ದಾರೆ. ಈ ಶಾಕಿಂಗ್ ವಿಡಿಯೋ ವೈರಲ್ ಆಗಿದೆ.

‘ಎಲ್ವಿಶ್ ನನ್ನನ್ನು ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾರೆ. ನಾನು ಒಬ್ಬನೇ ಇದ್ದೆ. ಎಲ್ವಿಶ್ ಹಲವು ಜನರನ್ನು ಕರೆ ತಂದಿದ್ದರು. ಇದರ ಪೂರ್ತಿ ವಿಡಿಯೋನ ಬೆಳಿಗ್ಗೆ ಪೋಸ್ಟ್ ಮಾಡುತ್ತೇನೆ. ನನ್ನ ಬಳಿಯೂ ರೆಕಾರ್ಡಿಂಗ್ ಇದೆ. ನನ್ನ ತುಟಿ ಬಳಿ ಗಾಯವಾಗಿದೆ’ ಎಂದು ಸಾಗರ್ ಆರೋಪ ಮಾಡಿದ್ದರು. ಇದಾದ ಬೆನ್ನಲ್ಲೇ ಅವರು ವಿಡಿಯೋ ರಿವೀಲ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ಬಳಿಕ ಎಲ್ವಿಶ್ ಯಾದವ್​ಗೆ ಎಲ್ಲರೂ ಛೀಮಾರಿ ಹಾಕುತ್ತಿದ್ದಾರೆ.

ಎಲ್ವಿಶ್ ಹಲ್ಲೆ ವಿಡಿಯೋ

ಸಾಗರ್ ಠಾಕೂರ್ ಅವರು ಈಗಾಗಲೇ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ. ವಿಡಿಯೋ ನೋಡಿದ ಬಳಿಕ ಎಲ್ವಿಶ್ ಯಾದವ್ ವಿರುದ್ಧ ಎಫ್​ಐಆರ್ ದಾಖಲು ಮಾಡಲಾಗಿದೆ.  ‘ನನ್ನನ್ನು ಭೇಟಿ ಮಾಡಬೇಕು ಎಂದು ಎಲ್ವಿಶ್ ಯಾದವ್ ಹೇಳಿದ್ದರು. ಮಾತಿನ ಮೂಲಕ ಚರ್ಚೆ ನಡೆಯಲಿದೆ ಎಂದು ನಾನು ಭಾವಿಸಿದ್ದೆ. ಆದರೆ, ಅವರು ನನಗೆ ಹೊಡೆದರು’ ಎಂದು ಸಾಗರ್ ದೂರಿನಲ್ಲಿ ತಿಳಿಸಿದ್ದಾರೆ. ಎಲ್ವಿಶ್ ಯಾದವ್ ಹಾಗೂ ಸಾಗರ್ ಮಧ್ಯೆ ಕಿರಿಕ್ ಶುರುವಾಗಿ ಬಹಳ ಸಮಯ ಕಳೆದಿದೆ. ಈಗ ಇದು ಬೇರೆ ಹಂತಕ್ಕೆ ಹೋಗಿದೆ.

ಇದನ್ನೂ ಓದಿ: ನೋಯ್ಡಾದಲ್ಲಿ ರೇವ್ ಪಾರ್ಟಿಗಳಿಗಾಗಿ ಹಾವಿನ ವಿಷ: ಯೂಟ್ಯೂಬರ್ ಎಲ್ವಿಶ್ ಯಾದವ್ ವಿರುದ್ಧ ಕೇಸ್

ಎಲ್ವಿಶ್ ಯಾದವ್ ಅವರು ರೇವ್ ಪಾರ್ಟಿಗಳಿಗೆ ಹಾವಿನ ವಿಷ ಪೂರೈಕೆ ಮಾಡುತ್ತಿದ್ದರು ಎನ್ನಲಾಗಿದೆ. ಅವರನ್ನು ಇತ್ತೀಚೆಗೆ ಅರೆಸ್ಟ್ ಮಾಡಲಾಗಿತ್ತು. ರಾಜಕಾರಣಿ ಹಾಗೂ ಪ್ರಾಣಿಗಳ ಹಕ್ಕು ರಕ್ಷಣಾ ಕಾರ್ಯಕರ್ತೆ ಮೇನಕಾ ಗಾಂಧಿ ಅವರು ಎಲ್ವಿಶ್ ಯಾದವ್ ಬಗ್ಗೆ ಮೊದಲು ಆರೋಪ ಮಾಡಿದ್ದರು. ಈ ಸಂಬಂಧ ಅವರನ್ನು ಪ್ರಶ್ನೆ ಮಾಡಲಾಯಿತು. ಆ ಬಳಿಕ ಹಲವು ವಿಚಾರಗಳು ರಿವೀಲ್ ಆದವು. ಇತ್ತೀಚೆಗೆ ರೆಸ್ಟೋರೆಂಟ್ ಒಂದರಲ್ಲಿ ಅವರು ವ್ಯಕ್ತಿಯೊಬ್ಬರಿಗೆ ಹೊಡೆದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us