Gaami Movie: ಒಟಿಟಿಗೆ ಕಾಲಿಟ್ಟ ‘ಗಾಮಿ’ಗೆ ಮೆಚ್ಚುಗೆ; ವಿಶ್ವಕ್ ಸೇನ್ ಸಿನಿಮಾದ ಕಥೆ ಏನು?

|

Updated on: Apr 15, 2024 | 2:30 PM

ವಿಶ್ವಕ್ ಸೇನ್ ಅವರು ಶಂಕರ್ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಂಕರ್​ಗೆ ವಿಚಿತ್ರ ವ್ಯಕ್ತಿ. ಯಾವುದಾದರೂ ಮನುಷ್ಯನ ಸ್ಪರ್ಶ ಆದರೆ ಆತನ ದೇಹ ಇದನ್ನು ತಡೆದುಕೊಳ್ಳುವುದೇ ಇಲ್ಲ. ಇದಕ್ಕೆ ಪರಿಹಾರ ಏನು? ಅದರ ಹುಡುಕಾಟದಲ್ಲಿ ಆತ ಏನು ಮಾಡುತ್ತಾನೆ ಅನ್ನೋದು ‘ಗಾಮಿ’ ಸಿನಿಮಾದ ಕಥೆ.

Gaami Movie: ಒಟಿಟಿಗೆ ಕಾಲಿಟ್ಟ ‘ಗಾಮಿ’ಗೆ ಮೆಚ್ಚುಗೆ; ವಿಶ್ವಕ್ ಸೇನ್ ಸಿನಿಮಾದ ಕಥೆ ಏನು?
ಗಾಮಿ
Follow us on

ವಿಶ್ವಕ್ ಸೇನ್ ನಟನೆಯ ‘ಗಾಮಿ’ ಸಿನಿಮಾ (Gaami Movie) ಜೀ 5 ಮೂಲಕ ಪ್ರಸಾರ ಕಂಡು ಮೆಚ್ಚುಗೆ ಪಡೆದಿದೆ. ತೆಲುಗು ಸಿನಿಮಾ ಇದಾಗಿದ್ದು, ಕನ್ನಡ ಮೊದಲಾದ ಭಾಷೆಗೆ ಡಬ್ ಆಗಿ ಒಟಿಟಿಯಲ್ಲಿ ರಿಲೀಸ್ ಆಗಿದೆ. ಈ ಸಿನಿಮಾ ನೋಡಿ ಜನರು ಮೆಚ್ಚಿಕೊಂಡಿದ್ದಾರೆ. ಅಡ್ವೆಂಚರ್ ಥ್ರಿಲ್ಲರ್ ಸಿನಿಮಾ ಇದಾಗಿದ್ದು, ಸಾಕಷ್ಟು ಟ್ವಿಸ್ಟ್​ಗಳನ್ನು ಈ ಹೊಂದಿದೆ. ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ವಿಶ್ವಕ್ ಸೇನ್ ಅವರು ಶಂಕರ್ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಂಕರ್​ಗೆ ವಿಚಿತ್ರ ವ್ಯಕ್ತಿ. ಯಾವುದಾದರೂ ಮನುಷ್ಯನ ಸ್ಪರ್ಶ ಆದರೆ ಆತನ ದೇಹ ಇದನ್ನು ತಡೆದುಕೊಳ್ಳುವುದೇ ಇಲ್ಲ. ಇದಕ್ಕೆ ಪರಿಹಾರ ಏನು? ಅದರ ಹುಡುಕಾಟದಲ್ಲಿ ಆತ ಏನು ಮಾಡುತ್ತಾನೆ ಅನ್ನೋದು ‘ಗಾಮಿ’ ಸಿನಿಮಾದ ಕಥೆ. ‘ಗಾಮಿ’ಯಲ್ಲಿ ಈ ಕಥೆ ಪ್ರಮುಖವಾಗಿ ಸಾಗಿದರೆ ಇದರ ಜೊತೆಗೆ ಇನ್ನೂ ಎರಡು ಕಥೆಗಳು ತೆರೆಮೇಲೆ ಬರುತ್ತವೆ. ಅದು ಯಾರ ಕಥೆ? ಆ ಕಥೆಗೂ ಶಂಕರ್​ಗೂ ಏನು ಸಂಬಂಧ ಎನ್ನುವುದನ್ನು ಸಿನಿಮಾ ನೋಡಿ ತಿಳಿಯಬೇಕು.

ವಿದ್ಯಾಧರ್ ಕಗಿತ ಅವರು ‘ಗಾಮಿ’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಮೊದಲು ಅವರು ಅವರು ಶಾರ್ಟ್​ ಫಿಲ್ಮ್​ಗಳನ್ನು ನಿರ್ದೇಶನ ಮಾಡಿದ್ದರು. ಸಿನಿಮಾ ನಿರ್ದೇಶಕನಾಗಿ ಇದು ಅವರಿಗೆ ಮೊದಲ ಅನುಭವ. ಈ ಸಿನಿಮಾದಲ್ಲಿ ಅಲ್ಲಲ್ಲಿ ಒಂದಷ್ಟು ಗೊಂದಲಗಳು ಹುಟ್ಟಿಕೊಳ್ಳುತ್ತವೆ. ಅವುಗಳನ್ನು ಪರಿಹರಿಸುವತ್ತ ನಿರ್ದೇಶಕರು ಗಮನ ಹರಿಸಬೇಕಿತ್ತು. ಅಲ್ಲಲ್ಲಿ ವಿಜ್ಞಾನವೂ ಬರುತ್ತದೆ. ಕೆಲವು ದೃಶ್ಯಗಳು ಲಾಜಿಕ್​ನಿಂದ ದೂರ ಇದೆ. ಸಿನಿಮಾದಲ್ಲಿ ಬರೋ ಟ್ವಿಸ್ಟ್ ಗಮನ ಸೆಳೆಯೋ ರೀತಿಯಲ್ಲಿದೆ. ಚಿತ್ರದ ಬಹುತೇಕ ಶೂಟ್ ಗ್ರೀನ್ ಮ್ಯಾಟ್​ನಲ್ಲೇ ಮಾಡಿದಂತಿದೆ.

ಇದನ್ನೂ ಓದಿ: ನನ್ನ ಸಿನಿಮಾ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ: ನಟ ವಿಶ್ವಕ್ ಸೇನ್ ಆರೋಪ

‘ಗಾಮಿ’ ಜೀ 5ನಲ್ಲಿ ವೀಕ್ಷಣೆಗೆ ಲಭ್ಯವಿದೆ. ಈ ಸಿನಿಮಾ ಮಾರ್ಚ್ 8ರಂದು ಥಿಯೇಟರ್​ನಲ್ಲಿ ರಿಲೀಸ್ ಆಗಿತ್ತು. ಈ ಚಿತ್ರವನ್ನು ಕಾರ್ತಿಕ್ ಶಬರೀಶ್ ಅವರು ನಿರ್ಮಾಣ ಮಾಡಿದ್ದಾರೆ. ಏಪ್ರಿಲ್ 12ರಂದು ಈ ಚಿತ್ರ ಒಟಿಟಿಗೆ ಲಗ್ಗೆ ಇಟ್ಟಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:30 pm, Mon, 15 April 24