Irrfan Khan: ಇರ್ಫಾನ್ ಅಭಿಮಾನಿಗಳಿಗೆ ಖುಷಿ ಸುದ್ದಿ; ಬರೋಬ್ಬರಿ 14 ವರ್ಷಗಳ ಬಳಿಕ ಓಟಿಟಿಯಲ್ಲಿ ತೆರೆಕಾಣಲಿದೆ ಈ ಚಿತ್ರ

| Updated By: shivaprasad.hs

Updated on: Dec 29, 2021 | 8:53 AM

Murder At Teesri Manzil 302: ನಟ ಇರ್ಫಾನ್ ಖಾನ್​ಗೆ ಅಭಿಮಾನಿಗಳು ಬಹಳ. ಅವರ 14 ವರ್ಷಗಳ ಹಳೆಯ ಚಿತ್ರವೊಂದು ಈಗ ಬಿಡುಗಡೆಗೆ ಸಿದ್ಧವಾಘಿದೆ. ಯಾವ ಚಿತ್ರ? ಎಲ್ಲಿ ಬಿಡುಗಡೆ? ಇಲ್ಲಿದೆ ಮಾಹಿತಿ.

Irrfan Khan: ಇರ್ಫಾನ್ ಅಭಿಮಾನಿಗಳಿಗೆ ಖುಷಿ ಸುದ್ದಿ; ಬರೋಬ್ಬರಿ 14 ವರ್ಷಗಳ ಬಳಿಕ ಓಟಿಟಿಯಲ್ಲಿ ತೆರೆಕಾಣಲಿದೆ ಈ ಚಿತ್ರ
ಇರ್ಫಾನ್ ಖಾನ್
Follow us on

ಬಾಲಿವುಡ್ ನಟ ಇರ್ಫಾನ್ ಖಾನ್ (Irrfan Khan) ಅಭಿನಯಕ್ಕೆ ಮಾರುಹೋಗದವರು ಇಲ್ಲವೆಂದೇ ಹೇಳಬೇಕು. ಅಷ್ಟರಮಟ್ಟಿಗೆ ಜನರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ನಟ ಹೊಂದಿದ್ದರು. ಆದರೆ ಇರ್ಫಾನ್ 2020ರಲ್ಲಿ ಕ್ಯಾನ್ಸರ್​ನಿಂದ ನಿಧನ ಹೊಂದಿದರು. ಭಾರತೀಯ ಚಿತ್ರರಂಗದ ಅಪ್ರತಿಮ ಕಲಾವಿದ ಇನ್ನಿಲ್ಲ ಎನ್ನುವುದನ್ನು ಚಿತ್ರರಂಗಕ್ಕೆ ಇನ್ನೂ ಒಪ್ಪಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಕಲಾವಿದರು ಅವರ ಚಿತ್ರಗಳಲ್ಲಿ ಸಾರ್ವಕಾಲಿಕವಾಗಿ ಬದುಕಿರುತ್ತಾರೆ ಎನ್ನುವ ಮಾತಿದೆ. ಅಂತೆಯೇ ಇರ್ಫಾನ್ ಅಭಿಮಾನಿಗಳಿಗೆ ಖುಷಿಯ ಸುದ್ದಿ ಇಲ್ಲಿದೆ. ಇರ್ಫಾನ್ ಅಭಿನಯದ ಬರೋಬ್ಬರಿ 14 ವರ್ಷಗಳ ಹಿಂದಿನ ಚಿತ್ರ ಈಗ ಬಿಡುಗಡೆಯಾಗಲಿದೆ. ಹಲವಾರು ಕಾರಣಗಳಿಂದ ಚಿತ್ರದ ಕೆಲಸಗಳು ವಿಳಂಬವಾಗಿದ್ದವು. ಇದೀಗ ಚಿತ್ರತಂಡ ಬಿಡುಗಡೆಗೆ ಸಿದ್ಧವಾಗಿದ್ದು, ಓಟಿಟಿಯಲ್ಲಿ (OTT) ಚಿತ್ರ ತೆರೆ ಕಾಣಲಿದೆ.

ಇರ್ಫಾನ್ ಕಾಣಿಸಿಕೊಂಡಿರುವ ‘ಮರ್ಡರ್ ಅಟ್ ತೀಸ್ರಿ ಮನ್ಜಿಲ್ 302’ (Murder At Teesri Manzil 302) ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಜೀ5 (Zee5) ಓಟಿಟಿಯಲ್ಲಿ ಡಿಸೆಂಬರ್ 31ರಂದು ಚಿತ್ರ ತೆರೆಕಾಣಲಿದೆ. ಜೀ5 ಚಿತ್ರದ ಟ್ರೈಲರ್​ ಕೂಡ ಹಂಚಿಕೊಂಡಿದ್ದು, ಅದನ್ನು ನೋಡಿದ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಈ ರೊಮ್ಯಾಂಟಿಕ್ ಥ್ರಿಲ್ಲರ್ (Romantic Thriller) ಚಿತ್ರವನ್ನು ನಿರ್ದೇಶಿಸಿರುವವರು ನವ್ನೀತ್ ಬಾಜ್ ಸೈನಿ. ಚಿತ್ರದಲ್ಲಿ ರಣವೀರ್ ಶೋರೆ, ಲಕ್ಕಿ ಅಲಿ, ದೀಪಲ್ ಶಾ ಮೊದಲಾದವರು ಬಣ್ಣ ಹಚ್ಚಿದ್ದಾರೆ.

ಚಿತ್ರದ ಟ್ರೈಲರ್ ಇಲ್ಲಿದೆ:

ಇರ್ಫಾನ್ ಖಾನ್ ಅಭಿಮಾನಿಗಳಿಗೆ ಚಿತ್ರದ ಟ್ರೈಲರ್ ನೋಡಿದಾಗ ಅವರ ಈ ಹಿಂದಿನ ಚಿತ್ರಗಳಂತಿಲ್ಲ ಎನ್ನುವುದು ಅರಿವಾಗುತ್ತದೆ. ಅಲ್ಲದೇ ಚಿತ್ರ ಹಳೆಯದು ಎನ್ನುವುದೂ ಅನುಭವಕ್ಕೆ ಬರುತ್ತದೆ. ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಬರೆದುಕೊಳ್ಳುತ್ತಿದ್ದಾರೆ. ಆದರೆ 14 ವರ್ಷಗಳ ಹಿಂದಿನ ಚಿತ್ರ ಪೂರ್ಣಗೊಂಡು, ತೆರೆಕಾಣುತ್ತಿದೆ. ಅದರಲ್ಲಿ ಇರ್ಫಾನ್​ರನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳಬಹುದು ಎನ್ನುವ ವಿಚಾರ ಅಭಿಮಾನಿಗಳಿಗೆ ಸಾಕಷ್ಟು ಖುಷಿ ನೀಡಿದೆ.

ಕ್ಯಾನ್ಸರ್​ ವಿರುದ್ಧ ಹೋರಾಡುತ್ತಿದ್ದ ಇರ್ಫಾನ್ 2020ರ ಏಪ್ರಿಲ್​ 29ರಂದು ಇಹಲೋಕ ತ್ಯಜಿಸಿದರು. ಅವರು ಕೊನೆಯದಾಗಿ ಬಣ್ಣ ಹಚ್ಚಿದ್ದು ‘ಅಂಗ್ರೇಜಿ ಮೀಡಿಯಮ್’ ಚಿತ್ರದಲ್ಲಿ. ಆ ಚಿತ್ರದ ಪಾತ್ರ ಪೋಷಣೆಗೆ ಇರ್ಫಾನ್​ಗೆ ಫಿಲ್ಮ್​ಫೇರ್ ಪ್ರಶಸ್ತಿ ಲಭ್ಯವಾಗಿತ್ತು.

ಇದನ್ನೂ ಓದಿ:

Arun Vaidyanathan: ‘ಕೊವಿಡ್​ ಮಸಾಲಾ ಫಿಲ್ಮ್​ ಇದ್ದಂತೆ; ಲಾಜಿಕ್ ಇರೋದೇ ಇಲ್ಲ’ ಎಂದ ನಿರ್ದೇಶಕ!

ಕೊರೊನಾ ನೆಗೆಟಿವ್​ ಆಗುತ್ತಿದ್ದಂತೆಯೇ ಪಾರ್ಟಿ ಶುರು ಮಾಡಿಕೊಂಡ ಕರೀನಾ; ನೆಟ್ಟಿಗರಿಂದ ಹಿಗ್ಗಾಮುಗ್ಗಾ ಟ್ರೋಲ್​