‘ಟೋಬಿ’, ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ’ ಈ ವಾರ ಒಟಿಟಿಗೆ

|

Updated on: Dec 21, 2023 | 6:39 PM

OTT release: ಎರಡು ಪ್ರಮುಖ ಕನ್ನಡ ಸಿನಿಮಾಗಳ ಜೊತೆಗೆ ಇನ್ನೂ ಕೆಲವು ಉತ್ತಮ ಸಿನಿಮಾಗಳು, ವೆಬ್ ಸರಣಿಗಳು ಈ ವಾರ ಒಟಿಟಿಯಲ್ಲಿ ಬಿಡುಗಡೆ ಆಗಲಿವೆ. ಇಲ್ಲಿದೆ ಪಟ್ಟಿ...

‘ಟೋಬಿ’, ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ’ ಈ ವಾರ ಒಟಿಟಿಗೆ
ಸಪ್ತಸಾಗರದಾಚೆ ಎಲ್ಲೋ
Follow us on

ಕನ್ನಡ ಸಿನಿಮಾಗಳನ್ನು (Kannada Cinema) ಒಟಿಟಿಗಳು (OTT) ಖರೀದಿಗೆ ಪರಿಗಣಿಸುವುದಿಲ್ಲ ಎಂಬ ಆದ ಗಟ್ಟಿಯಾಗಿ ಹರಿದಾಡುತ್ತಿದೆ. ಈ ನಡುವೆ ಕನ್ನಡದ ಎರಡು ಪ್ರಮುಖ ಸಿನಿಮಾಗಳು ಈ ವಾರ ಒಟಿಟಿಯಲ್ಲಿ ಬಿಡುಗಡೆ ಆಗಿವೆ. ಜೊತೆಗೆ ಇನ್ನೂ ಕೆಲವು ಜನಪ್ರಿಯ ಸಿನಿಮಾಗಳು ಈ ವಾರ ಒಟಿಟಿಗೆ ಬಂದಿದ್ದು, ಹೊಸ ವರ್ಷಕ್ಕೆ ಕೆಲವು ಒಳ್ಳೆಯ ಸಿನಿಮಾಗಳನ್ನು ಒಟಿಟಿಯಲ್ಲಿ ವೀಕ್ಷಿಸುವ ಖುಷಿ ಪ್ರೇಕ್ಷಕರದ್ದಾಗಲಿದೆ.

‘ಟೋಬಿ’

ರಾಜ್ ಬಿ ಶೆಟ್ಟಿ ಚಿತ್ರಕತೆ ಬರೆದು, ನಟಿಸಿದ್ದ ‘ಟೋಬಿ’ ಸಿನಿಮಾ ಈ ವಾರ ಒಟಿಟಿಗೆ ಬಂದಿದೆ. ಡಿಸೆಂಬರ್ 22ರಿಂದ ಈ ಸಿನಿಮಾ ಸೋನಿ ಲಿವ್​ನಲ್ಲಿ ಸ್ಟ್ರೀಮ್ ಆಗಲಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಬಹುಕಾಲದ ಬಳಿಕ ಈ ಸಿನಿಮಾ ಒಟಿಟಿಗೆ ಬಂದಿದೆ. ಚೈತ್ರಾ ಆಚಾರ್, ಸಂಯುಕ್ತ ಹೆಗಡೆ, ಗೋಪಾಲ ದೇಶಪಾಂಡೆ ಅವರುಗಳು ಸಹ ಈ ಸಿನಿಮಾದಲ್ಲಿ ನಟಿಸಿದ್ದು, ಸಿನಿಮಾ ಮಲಯಾಳಂ ಭಾಷೆಯಲ್ಲಿಯೂ ವೀಕ್ಷಣೆಗೆ ಲಭ್ಯವಿದೆ.

‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ’

ರಕ್ಷಿತ್ ಶೆಟ್ಟಿ ನಟಿಸಿ, ಹೇಮಂತ್ ರಾವ್ ನಿರ್ದೇಶನ ಮಾಡಿರುವ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಎರಡನೇ ಭಾಗ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗುತ್ತಿದೆ. ಡಿಸೆಂಬರ್ 22ರಿಂದ ಈ ಸಿನಿಮಾ ವೀಕ್ಷಣೆಗೆ ಲಭ್ಯವಿರಲಿದೆ. ಇದೇ ಸಿನಿಮಾದ ಮೊದಲ ಭಾಗವೂ ಅಮೆಜಾನ್ ಪ್ರೈಂನಲ್ಲಿ ಈಗಾಗಲೇ ಲಭ್ಯವಿದೆ. ಸಿನಿಮಾದ ನಾಯಕಿಯರಾದ ರುಕ್ಮಿಣಿ ವಸಂತ್ ಹಾಗೂ ಚೈತ್ರಾ ಆಚಾರ್​ ನಟನೆಯೂ ಅದ್ಭುತವಾಗಿದೆ.

ಇದನ್ನೂ ಓದಿ:ಒಟಿಟಿಯಲ್ಲೂ ಧಮಾಕ ಎಬ್ಬಿಸಿದ ‘ಘೋಸ್ಟ್’: 200 ಮಿಲಿಯನ್ ನಿಮಿಷ ವೀಕ್ಷಣೆ

‘ಬಾರ್ಬಿ’

ಇತ್ತೀಚೆಗೆ ಸಖತ್ ಟ್ರೆಂಡ್ ಆಗಿದ್ದ ಹಾಲಿವುಡ್​ನ ‘ಬಾರ್ಬಿ’ ಸಿನಿಮಾ ಇದೇ ವಾರ ಒಟಿಟಿಗೆ ಬಂದಿದೆ. ಜಿಯೋ ಸಿನಿಮಾಸ್​ನಲ್ಲಿ ಈ ಸಿನಿಮಾ ಸ್ಟ್ರೀಂ ಆಗಲಿದೆ. ಈ ಸಿನಿಮಾ ನೋಡಲು ಹೆಚ್ಚುವರಿ ಹಣ ಪಾವತಿಸಬೇಕಾದ ಅವಶ್ಯತೆ ಇದೆ. ಕ್ರಿಸ್ಟೊಫರ್ ನೋಲನ್​ರ ‘ಆಪನ್​ಹೈಮರ್​’ ಜೊತೆ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿತ್ತು. ‘ಆಪನ್​ಹೈಮರ್’ ಈಗಾಗಲೇ ಒಟಿಟಿಗೆ ಬಂದಿದೆ.

‘ಆದಿಕೇಶವ’

ಕನ್ನಡತಿ ಶ್ರೀಲೀಲಾ ನಾಯಕಿಯಾಗಿ ನಟಿಸಿರುವ ತೆಲುಗು ಸಿನಿಮಾ ‘ಆದಿಕೇಶವ’ ಈ ವಾರ ಒಟಿಟಿಗೆ ಬಂದಿದೆ. ಡಿಸೆಂಬರ್ 22ಕ್ಕೆ ಈ ಸಿನಿಮಾ ನೆಟ್​ಫ್ಲಿಕ್ಸ್​ನಲ್ಲಿ ಸ್ಟ್ರೀಂ ಆಗಲಿದೆ. ಕೆಲವು ವಾರಗಳ ಹಿಂದೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಫ್ಲಾಪ್ ಎನಿಸಿಕೊಂಡಿತ್ತು. ಒಟಿಟಿಯಲ್ಲಿ ಹಿಟ್ ಆಗಲಿದೆಯೇ ಕಾದು ನೋಡಬೇಕಿದೆ.

ಈ ಎಲ್ಲ ಪ್ರಮುಖ ಸಿನಿಮಾಗಳ ಜೊತೆಗೆ ಹಲವು ಹಾಲಿವುಡ್ ಸಿನಿಮಾಗಳು, ವೆಬ್ ಸರಣಿಗಳು ಸಹ ಬಿಡುಗಡೆ ಆಗುತ್ತಿವೆ. ತಮಿಳಿನ ‘ಕುಯಿಕೊ’, ಹಿಂದಿಯ ‘ಹೇ ಕಾಮಿನಿ’ ಇನ್ನೂ ಕೆಲವು ಸಿನಿಮಾಗಳು ಸಹ ಈ ವಾರ ಒಟಿಟಿಗೆ ಬಂದಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ