ಚಾರ್ಮ್ ಕಳೆದುಕೊಳ್ಳುತ್ತಿದೆ ಕಪಿಲ್ ಶೋ; ಸುನೀಲ್ ಗ್ರೋವರ್ ಇಲ್ಲವಾದರೆ ಝೀರೋ?

ಕಪಿಲ್ ಶರ್ಮಾ ಶೋ ತನ್ನ ಚಾರ್ಮ್ ಕಳೆದುಕೊಳ್ಳುತ್ತಿದೆ. ಸುನೀಲ್ ಗ್ರೋವರ್ ಜೊತೆಗೂಡಿದರೂ, ನೆಟ್​ಫ್ಲಿಕ್ಸ್​ನ ನಾಲ್ಕನೇ ಸೀಸನ್​ಗೆ ವೀಕ್ಷಣೆ ಕಡಿಮೆಯಾಗುತ್ತಿದೆ. ಹಿಂದಿನ ಸೀಸನ್​ಗಳಲ್ಲಿ ಉತ್ತಮ ವೀಕ್ಷಣೆ ಕಂಡ ಶೋ, ಈಗ ಜಾಗತಿಕ ರ್ಯಾಂಕಿಂಗ್ ಪಡೆಯುತ್ತಿಲ್ಲ. ಇದು ಕಪಿಲ್​ಗೆ ಚಿಂತೆ ಮೂಡಿಸಿದೆ. ಸುನೀಲ್ ಗ್ರೋವರ್ ಪಾತ್ರವೇ ಶೋನ ಜೀವಾಳ ಎಂಬ ಮಾತು ಕೇಳಿಬರುತ್ತಿದ್ದು, ಹೊಸತನದ ಅವಶ್ಯಕತೆಯಿದೆ.

ಚಾರ್ಮ್ ಕಳೆದುಕೊಳ್ಳುತ್ತಿದೆ ಕಪಿಲ್ ಶೋ; ಸುನೀಲ್ ಗ್ರೋವರ್ ಇಲ್ಲವಾದರೆ ಝೀರೋ?
ಸುನೀಲ್-ಕಪಿಲ್

Updated on: Jan 29, 2026 | 1:33 PM

ಕಪಿಲ್ ಶರ್ಮಾ (Kapil Sharma) ಅವರ ಹಾಸ್ಯದ ಶೋಗಳಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಈ ಮೊದಲು ಸೋನಿ ಟಿವಿಯಲ್ಲಿ ಅವರು ಸಾಕಷ್ಟು ಶೋಗಳನ್ನು ಮಾಡುತ್ತಿದ್ದರು. ಆ ಬಳಿಕ ಅವರು ನೆಟ್​​​ಫ್ಲಿಕ್ಸ್​​ಗೆ ಬಂದರು. ಈ ವೇಳೆ ಸುನೀಲ್ ಗ್ರೋವರ್ ಜೊತೆ ಒಂದಾದರು. ಹಾಳಾಗಿದ್ದ ಗೆಳೆತನ ಸರಿ ಆಯಿತು. ಈಗ ಕಪಿಲ್ ಶರ್ಮಾ ಶೋ ತನ್ನ ಚಾರ್ಮ್ ಕಳೆದುಕೊಳ್ಳುತ್ತಿದೆ. ಸುನೀಲ್ ಗ್ರೋವರ್ ಇಲ್ಲವಾದಲ್ಲಿ ಶೋ ಝೀರೋ ಎಂದು ಅನೇಕರು ಮಾತನಾಡಿಕೊಳ್ಳುತ್ತಿದ್ದಾರೆ.

ಕಪಿಲ್ ಶರ್ಮಾ ಹಾಗೂ ಸುನೀಲ್ ಗ್ರೋವರ್ 2017ರಲ್ಲಿ ಬೇರೆ ಆದರು. ನೆಟ್​​ಫ್ಲಿಕ್ಸ್​​ನಲ್ಲಿ 2024ರಲ್ಲಿ ಬಂದ ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ಇವರನ್ನು ಒಂದು ಮಾಡಿತು. ಈಗ ಶೋಗೆ ನಾಲ್ಕನೇ ಸೀಸನ್ ನಡೆಯುತ್ತಿದೆ. ಆದರೆ, ಇದಕ್ಕೆ ವೀಕ್ಷಣೆ ಕಡಿಮೆ ಆಗುತ್ತಲೇ ಇದೆ. ಹೀಗಾಗಿ ಹೊಸತನ ಹುಡುಕುವ ಅನಿವಾರ್ಯತೆ ಇದೆ.

2024ರಲ್ಲಿ ಪ್ರಸಾರ ಕಂಡ ಮೊದಲ ಸೀಸನ್ 2.5 ಮಿಲಿಯನ್ ವೀವ್ಸ್ ಪಡೆದುಕೊಂಡಿತ್ತು. ಈ ವೇಳೆ 24 ಲಕ್ಷ ಗಂಟೆ ವೀಕ್ಷಣೆ ಕಂಡಿತ್ತು. ನೆಟ್​​ಫ್ಲಿಕ್ಸ್​​​ನಲ್ಲಿ ಗ್ಲೋಬಲ್ ರ್ಯಾಂಕಿಂಗ್ ಕೂಡ ಪಡೆದುಕೊಂಡಿತ್ತು. ಆ ಸೀಸನ್​ ಅಲ್ಲಿ ವೀಕ್ಷಣೆಯ ಅವಧಿ ಹೆಚ್ಚುತ್ತಲೇ ಹೋಗಿತ್ತು. ಆ ಸೀಸನ್ ಅಲ್ಲಿ 46 ಲಕ್ಷ ಗಂಟೆ ಶೋ ಕಂಡ ಎಪಿಸೋಡ್ ಇತ್ತು.

ಎರಡು ಹಾಗೂ ಮೂರನೇ ಸೀಸನ್​​ ಅಲ್ಲಿ ವೀಕ್ಷಣೆಯ ಅವಧಿ 40-45 ಲಕ್ಷ ಗಂಟೆಯಲ್ಲೇ ಇತ್ತು. ಆದರೆ, ಈ ಸೀಸನ್ ಕೈ ಕೊಟ್ಟಿದೆ. ಈಗಾಗಲೇ ಈ ಸೀಸನ್ 4 ಎಪಿಸೋಡ್ ಪ್ರಸಾರ ಕಂಡಿದೆ. ಇದು ಗ್ಲೋಬಲ್ ಮಟ್ಟದಲ್ಲಿ ರ್ಯಾಂಕ್ ಆಗುತ್ತಿಲ್ಲ. ವೀಕ್ಷಣಾ ಅವಧಿ 40 ಲಕ್ಷ ದಾಟುತ್ತಿಲ್ಲ. ಇದು ಕಪಿಲ್ ಚಿಂತೆಗೆ ಕಾರಣ ಆಗಿದೆ.

ಇದನ್ನೂ ಓದಿ: ಆ ಒಂದು ಶಬ್ದ ಬಳಕೆ ಮಾಡಿದ್ದಕ್ಕೆ ಭುಗಿಲೆದ್ದ ಆಕ್ರೋಶ; ಕಪಿಲ್ ಶರ್ಮಾ ಶೋ ನಿಲ್ಲಿಸೋ ಎಚ್ಚರಿಕೆ

ಸುನೀಲ್ ಗ್ರೋವರ್ ಅವರು ವಿವಿಧ ಸೆಲೆಬ್ರಿಟಿಗಳ ವೇಷದಲ್ಲಿ ಬರುತ್ತಾರೆ. ಅವರ ಮಿಮಿಕ್ರಿ ಮಾಡುತ್ತಾರೆ. ಇದುವೇ ಶೋನ ಜೀವಾಳ ಎನ್ನಲಾಗುತ್ತಿದೆ. ಉಳಿದಂತೆ ಯಾವುದು ಕೂಡ ಜನರ ಗಮನ ಸೆಳೆಯುತ್ತಿಲ್ಲ. ಕಪಿಲ್ ಶರ್ಮಾ ಹಳೆಯ ಟ್ರೆಂಡ್ ಫಾಲೋ ಮಾಡುತ್ತಿರುವುದೇ ಇದಕ್ಕೆ ಕಾರಣ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.