‘ಕೆಜಿಎಫ್ 2’ ಸಿನಿಮಾ (KGF: Chapter) ಬಾಕ್ಸ್ ಆಫೀಸ್ನಲ್ಲಿ 1200 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಬಾಲಿವುಡ್ನಲ್ಲಿ ಈ ಸಿನಿಮಾ 427 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಸಿನಿಮಾ ಒಟಿಟಿಯಲ್ಲಿ ಯಾವಾಗ ತೆರೆಕಾಣಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಈ ಚಿತ್ರ ಚಿತ್ರಮಂದಿರದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವಾಗಲೇ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ (Amazon Prime Video) ಪ್ರಸಾರ ಕಂಡಿದೆ. ನೀವು ಅಮೇಜಾನ್ ಪ್ರೈಮ್ ವಿಡಿಯೋ ಚಂದಾದಾರರಾದರೆ ಈ ಸಿನಿಮಾವನ್ನು ವೀಕ್ಷಿಸುವುದಕ್ಕೆ ಸಾಧ್ಯವಿಲ್ಲ! ಈ ಸಿನಿಮಾ ನೋಡಬೇಕು ಎಂದರೆ ನೀವು ಹೆಚ್ಚುವರಿಯಾಗಿ ಹಣ ಪಾವತಿಸಬೇಕು.
‘ಕೆಜಿಎಫ್ 2’ ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಬಿಡುಗಡೆ ಆಗಿತ್ತು. ಈಗ ಒಟಿಟಿಯಲ್ಲೂ ಐದೂ ಭಾಷೆಗಳಲ್ಲಿ ಚಿತ್ರ ರಿಲೀಸ್ ಆಗಿದೆ. ಈ ಸಿನಿಮಾವನ್ನು ನೀವು ರೆಂಟ್ ಪಡೆಯಬಹುದು. ಇದಕ್ಕೆ 199 ರೂಪಾಯಿ ಪಾವತಿಸಬೇಕು. ಹಾಗಿದ್ದರೆ ಮಾತ್ರ ನೀವು ‘ಕೆಜಿಎಫ್ 2’ ವೀಕ್ಷಿಸಬಹುದು.
199 ರೂಪಾಯಿ ಪಾವತಿಸಿ ಸಿನಿಮಾ ರೆಂಟ್ ಪಡೆದು ಒಮ್ಮೆ ಸಿನಿಮಾ ನೋಡೋಕೆ ಆರಂಭಿಸಿದರೆ 48 ಗಂಟೆಗಳ ಅವಧಿಯಲ್ಲಿ ವೀಕ್ಷಣೆ ಪೂರ್ಣಗೊಳಿಸಬೇಕು. ಒಂದೊಮ್ಮೆ ನೀವು ಸಿನಿಮಾ ರೆಂಟ್ಗೆ ಪಡೆದು ವೀಕ್ಷಿಸದೆ ಇದ್ದರೆ ಹಣ ಪಾವತಿಸಿದ ಸಮಯದಿಂದ 30 ದಿನಗಳ ಕಾಲ ಇದರ ವ್ಯಾಲಿಡಿಟಿ ಇರಲಿದೆ. ಈ ಅವಧಿಯಲ್ಲಿ ಯಾವಾಗ ಬೇಕಾದರೂ ಸಿನಿಮಾ ವೀಕ್ಷಿಸಬಹುದು.
thrill ×2 | craziness ×2 | K.G.F ×2 ?#EarlyAccessOnPrime, rent now pic.twitter.com/FDtYdtro0l
— amazon prime video IN (@PrimeVideoIN) May 16, 2022
ಜೀ5 ಆ್ಯಪ್ನಲ್ಲಿ ಈ ಮೊದಲು ಸಾಕಷ್ಟು ಸಿನಿಮಾಗಳು ಇದೇ ಮಾದರಿಯಲ್ಲಿ ರಿಲೀಸ್ ಆಗಿವೆ. ಸಲ್ಮಾನ್ ಖಾನ್ ನಟನೆಯ ‘ರಾಧೆ’ ಚಿತ್ರವನ್ನು ಇದೇ ರೀತಿಯಲ್ಲಿ ರಿಲೀಸ್ ಮಾಡಲಾಗಿತ್ತು. ಆದರೆ, ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಈ ರೀತಿಯ ಪ್ರಯೋಗ ನಡೆದಿರಲಿಲ್ಲ. ಈಗ ‘ಕೆಜಿಎಫ್ 2’ ಮೂಲಕ ಸಿನಿಮಾಗಳನ್ನು ರೆಂಟ್ಗೆ ನೀಡುವ ತಂತ್ರವನ್ನು ಆರಂಭಿಸಿದೆ.
‘ಕೆಜಿಎಫ್’ ಸಿನಿಮಾ ಬಾಲಿವುಡ್ನಲ್ಲಿ ಸಖತ್ ಹಿಟ್ ಆಗಿತ್ತು. ಈ ಚಿತ್ರದ ಸೀಕ್ವೆಲ್ ಆಗಿ ತೆರೆಗೆ ಬಂದಿದ್ದು ‘ಕೆಜಿಎಫ್ 2’ ಚಿತ್ರ. ಗರುಡನನ್ನು ಹತ್ಯೆ ಮಾಡಿದ ರಾಕಿ ಹೇಗೆ ತನ್ನ ಅಧಿಪತ್ಯ ಸಾಧಿಸುತ್ತಾನೆ ಅನ್ನೋದನ್ನು ‘ಕೆಜಿಎಫ್ 2’ ಸಿನಿಮಾದಲ್ಲಿ ತೋರಿಸಲಾಗಿದೆ. ಪ್ರಶಾಂತ್ ನೀಲ್ ಅವರು ಚಿತ್ರವನ್ನು ಅದ್ಭುತವಾಗಿ ಕಟ್ಟಿಕೊಡುವ ಮೂಲಕ ಭೇಷ್ ಎನಿಸಿಕೊಂಡಿದ್ದಾರೆ. ಬಾಲಿವುಡ್ ಮಂದಿ ಕೂಡ ಸಿನಿಮಾವನ್ನು ಸಖತ್ ಇಷ್ಟಪಟ್ಟಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.