
ಧನುಶ್ (Dhanush), ರಶ್ಮಿಕಾ ಮಂದಣ್ಣ (Rashmika MandannaKu) ನಟಿಸಿರುವ ‘ಕುಬೇರ’ ಸಿನಿಮಾ ಕೆಲವೇ ವಾರಗಳ ಹಿಂದೆ ಚಿತ್ರಮಂದಿರಗಳಿಗೆ ಬಿಡುಗಡೆ ಆಗಿ ಭಾರಿ ದೊಡ್ಡ ಹಿಟ್ ಆಯ್ತು. ಶೇಖರ್ ಕಮ್ಮುಲ ನಿರ್ದೇಶನ ಮಾಡಿದ್ದ ಈ ಸಿನಿಮಾನಲ್ಲಿ ನಾಗಾರ್ಜುನ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಸಿನಿಮಾದ ಕತೆ, ಸಂಗೀತ, ನಟರುಗಳ ನಟನೆ ಎಲ್ಲವೂ ಜನರಿಗೆ ಬಹಳ ಇಷ್ಟವಾಗಿತ್ತು. ಫ್ಯಾಮಿಲಿ ಆಡಿಯೆನ್ಸ್ ಸಹ ಕುಟುಂಬ ಸಮೇತ ಚಿತ್ರಮಂದಿರಗಳಿಗೆ ಬಂದು ಸಿನಿಮಾ ನೋಡಿದರು. ಇದೇ ಕಾರಣಕ್ಕೆ ಈ ಸಿನಿಮಾ 100 ಕೋಟಿಗೂ ಹೆಚ್ಚು ಕಲೆಕ್ಷನ್ ಸಹ ಮಾಡಿತು. ಇದೀಗ ಈ ಸಿನಿಮಾ ಒಟಿಟಿಗೆ ಬರುತ್ತಿದೆ.
ಇದೀಗ ‘ಕುಬೇರ’ ಸಿನಿಮಾ ಒಟಿಟಿಗೆ ಬರುತ್ತಿದ್ದು, ಒಟಿಟಿ ಬಿಡುಗಡೆ ದಿನಾಂಕ ಘೋಷಣೆ ಆಗಿದೆ. ‘ಕುಬೇರ’ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಜುಲೈ 18 ರಂದು ಬಿಡುಗಡೆ ಆಗಲಿದೆ. ಭಾರತ ಮಾತ್ರವಲ್ಲದೆ ವಿಶ್ವದ ಹಲವಾರು ರಾಷ್ಟ್ರಗಳಲ್ಲಿ ಏಕಕಾಲಕ್ಕೆ ಈ ಸಿನಿಮಾ ತೆರೆಗೆ ಬರಲಿದೆ. ಒಟಿಟಿಯಲ್ಲಿ ತೆಲುಗು, ತಮಿಳು, ಕನ್ನಡ, ಹಿಂದಿ, ಮಲಯಾಳಂ ಭಾಷೆಗಳಿಗೆ ಡಬ್ ಆಗಿ ಬಿಡುಗಡೆ ಆಗುತ್ತಿದೆ. ಅಮೆಜಾನ್ ಪ್ರೈಂ ಸಹ ‘ಕುಬೇರ’ ಸಿನಿಮಾವನ್ನು ಚೆನ್ನಾಗಿ ಪ್ರಚಾರ ಮಾಡುತ್ತಿದೆ.
‘ಕುಬೇರ’ ಸಿನಿಮಾವು ಚಿತ್ರಮಂದಿರದಲ್ಲಿ ಬಿಡುಗಡೆ ಆಗುವ ಮುಂಚೆಯೇ ಅಮೆಜಾನ್ ಪ್ರೈಂ ಜೊತೆಗೆ ದೊಡ್ಡ ಮೊತ್ತದ ಡೀಲ್ಗೆ ಸಹಿ ಹಾಕಿತ್ತು. ಬರೋಬ್ಬರಿ 50 ಕೋಟಿ ರೂಪಾಯಿ ಹಣ ನೀಡಿ ‘ಕುಬೇರ’ ಸಿನಿಮಾದ ಡಿಜಿಟಲ್ ಹಕ್ಕುಗಳನ್ನು ಅಮೆಜಾನ್ ಪ್ರೈಂ ಖರೀದಿ ಮಾಡಿತ್ತು. ಅಮೆಜಾನ್ ಪ್ರೈಂನ ಮುನ್ನೋಟದಂತೆ ಸಿನಿಮಾ ದೊಡ್ಡ ಹಿಟ್ ಆಗಿದ್ದು, ಒಟಿಟಿಯಲ್ಲಿಯೂ ಸಹ ‘ಕುಬೇರ’ ಸಿನಿಮಾ ಸೂಪರ್ ಹಿಟ್ ಆಗುವ ಎಲ್ಲ ಭರವಸೆಗಳನ್ನು ಮೂಡಿಸಿದೆ.
ಇದನ್ನೂ ಓದಿ:‘ಕುಬೇರ’ ನಿರಾಕರಿಸಿ ಹಿಟ್ ಮಿಸ್ ಮಾಡಿಕೊಂಡ ಫ್ಲಾಪ್ ನಟ ಯಾರು ಗೊತ್ತೆ?
‘ಆನಂದ್’, ‘ಗೋಧಾವರಿ’, ‘ಲೀಡರ್’, ‘ಹ್ಯಾಪಿ ಡೇಸ್’, ‘ಫಿದಾ’ ರೀತಿಯ ಬ್ಲಾಕ್ ಬಸ್ಟರ್ ಕಲ್ಟ್ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಶೇಖರ್ ಕಮ್ಮುಲ ಅವರು ಈ ಸಿನಿಮಾ ನಿರ್ದೇಶಿಸಿದ್ದು, ಇದೊಂದು ಸಾಮಾಜಿಕ ಸಂದೇಶ ಹೊಂದಿರುವ ಆದರೆ ಥ್ರಿಲ್ಲರ್ ಗುಣವುಳ್ಳ ಕತೆಯನ್ನು ಒಳಗೊಂಡಿದೆ. ಸಿನಿಮಾನಲ್ಲಿ ಬಡವ ಶ್ರೀಮಂತನ ನಡುವಿನ ಅಂತರ, ಹಣವುಳ್ಳವರ ದುರಾಸೆ, ಬಡವರ ಅಸಹಾಯಕತೆಗಳನ್ನು ತೋರಿಸಲಾಗಿದೆ. ಸಿನಿಮಾನಲ್ಲಿ ಧನುಶ್ ನಟನೆಯನ್ನು ಸಿನಿಮಾ ನೋಡಿದವರೆಲ್ಲ ಕೊಂಡಾಡಿದ್ದಾರೆ. ರಶ್ಮಿಕಾ ಮತ್ತು ನಾಗಾರ್ಜುನ ನಟನೆ ಸಹ ಬಹಳ ಚೆನ್ನಾಗಿದೆಯಂತೆ. ದೇವಿ ಶ್ರೀ ಪ್ರಸಾದ್ ಈ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ. ರೀ ರೆಕಾರ್ಡಿಂಗ್ ಸಹ ಅವರದ್ದೆ. ಈ ಸಿನಿಮಾದ ನಟನೆಗೆ ಧನುಶ್ಗೆ ಮತ್ತೊಂದು ರಾಷ್ಟ್ರಪ್ರಶಸ್ತಿ ಸಿಗಲಿದೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:59 pm, Fri, 11 July 25