ಲಾಕ್​ಅಪ್ ಶೋ ಗೆದ್ದ ಮುನಾವರ್ ಫರೂಖಿ; ವಿನ್ನರ್​ಗೆ ಸಿಕ್ಕ ಹಣ ಎಷ್ಟು, ಸವಲತ್ತುಗಳೇನು?

| Updated By: ರಾಜೇಶ್ ದುಗ್ಗುಮನೆ

Updated on: May 08, 2022 | 6:21 PM

‘ಲಾಕಪ್​’ ರಿಯಾಲಿಟಿ ಶೋನಲ್ಲಿ ಕಂಗನಾ ನಿರೂಪಣೆಗೂ ಮೆಚ್ಚುಗೆ ವ್ಯಕ್ತವಾದವು. ದಿನ ಕಳೆದಂತೆ ಶೋ ಜನಪ್ರಿಯತೆ ಹೆಚ್ಚಿತು. 70ಕ್ಕೂ ಹೆಚ್ಚು ದಿನ ಪ್ರಸಾರ ಕಂಡ ಈ ಶೋ ಈಗ ಪೂರ್ಣಗೊಂಡಿದೆ.

ಲಾಕ್​ಅಪ್ ಶೋ ಗೆದ್ದ ಮುನಾವರ್ ಫರೂಖಿ; ವಿನ್ನರ್​ಗೆ ಸಿಕ್ಕ ಹಣ ಎಷ್ಟು, ಸವಲತ್ತುಗಳೇನು?
ಲಾಕ್​ಅಪ್ ಶೋ ಗೆದ್ದ ಮುನಾವರ್
Follow us on

ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ನಿರೂಪಣೆಯಲ್ಲಿ ಮೂಡಿ ಬಂದ ‘ಲಾಕಪ್​’ ರಿಯಾಲಿಟಿ ಶೋ (Lock Upp Reality Show) ನೇರವಾಗಿ ಒಟಿಟಿಯಲ್ಲಿ ಪ್ರಸಾರವಾಗಿತ್ತು. ಈ ಶೋಗೆ ದೊಡ್ಡ ಅಭಿಮಾನಿಗಳು ಹುಟ್ಟಿಕೊಂಡಿದ್ದರು. ಈಗ ಈ ಶೋ ಫಿನಾಲೆ ಪೂರ್ಣಗೊಂಡಿದೆ. ಶನಿವಾರ (ಮೇ 7) ರಾತ್ರಿ ನಡೆದ ಅದ್ದೂರಿ ಫಿನಾಲೆಯಲ್ಲಿ ಮುನಾವರ್ ಫರೂಖಿ ಅವರು (Munawar Faruqui) ‘ಲಾಕಪ್​’ ಶೋನ ಕಪ್ ಎತ್ತಿದ್ದಾರೆ. ಫ್ಯಾನ್ಸ್ ಕಡೆಯಿಂದ ಮುನಾವರ್​ಗೆ ಬರೋಬ್ಬರಿ 18 ಲಕ್ಷ ವೋಟ್​ ಸಿಕ್ಕಿತ್ತು. ಇದಲ್ಲದೆ, ಕಂಗನಾ ಕೂಡ ಅವರಿಗೆ ವೋಟ್ ಮಾಡಿದರು. ಇದರಿಂದ ಮುನಾವರ್ ಗೆದ್ದು ಬೀಗಿದರು.

‘ಲಾಕಪ್​’ ರಿಯಾಲಿಟಿ ಶೋ ಆರಂಭದಲ್ಲಿ ಸಾಕಷ್ಟು ಚರ್ಚೆ ಹುಟ್ಟು ಹಾಕಿತ್ತು. ಈ ಶೋ ‘ಬಿಗ್​ ಬಾಸ್’ ರೀತಿಯಲ್ಲೇ ಇದೆ ಎನ್ನುವ ಆರೋಪಗಳು ಕೇಳಿ ಬಂದವು. ಹಲವು ವಿವಾದಾತ್ಮಕ ಸ್ಪರ್ಧಿಗಳು ಶೋನಲ್ಲಿ ಇದ್ದಿದ್ದರಿಂದ ಈ ಶೋ ನಿಧಾನವಾಗಿ ಜನಪ್ರಿಯತೆ ಪಡೆದುಕೊಂಡಿತು. ಅಷ್ಟೇ ಅಲ್ಲ, ಕಂಗನಾ ನಿರೂಪಣೆಗೂ ಮೆಚ್ಚುಗೆ ವ್ಯಕ್ತವಾದವು. ದಿನ ಕಳೆದಂತೆ ಶೋ ಜನಪ್ರಿಯತೆ ಹೆಚ್ಚಿತು. 70ಕ್ಕೂ ಹೆಚ್ಚು ದಿನ ಪ್ರಸಾರ ಕಂಡ ಈ ಶೋ ಈಗ ಪೂರ್ಣಗೊಂಡಿದೆ.

‘ಲಾಕಪ್​’ ರಿಯಾಲಿಟಿ ಶೋಅನ್ನು ಏಕ್ತಾ ಕಪೂರ್​ ನಿರ್ಮಾಣ ಮಾಡಿದ್ದರು. ಅವರು ಸೋಶಿಯಲ್ ಮೀಡಿಯಾದಲ್ಲಿ ಮುನಾವರ್ ವಿನ್ ಆದ ಬಗ್ಗೆ ಅವರು ಘೋಷಣೆ ಮಾಡಿದ್ದಾರೆ. ಇನ್ನು, ಪಾಯಲ್ ರೋಹಟ್ಗಿ ಅವರು ಮೊದಲ ರನ್ನರ್​ಅಪ್​ ಆಗಿ ಹೊರ ಹೊಮ್ಮಿದ್ದಾರೆ. ಅಂಜಲಿ ಅರೋರಾ ಎರಡನೇ ರನ್ನರ್​ಅಪ್ ಆಗಿದ್ದಾರೆ.

ಮುನಾವರ್ ಅವರು 20 ಲಕ್ಷ ರೂಪಾಯಿ ಹಣ ಗೆದ್ದಿದ್ದಾರೆ. ಜತೆಗೆ ಅವರಿಗೆ ಕಾರು, ಸುಂದರ ಟ್ರೋಫಿ ಸಿಕ್ಕಿದೆ. ಅವರ ಇಟಲಿ ಟ್ರಿಪ್​ನ ಸಂಪೂರ್ಣ ಖರ್ಚನ್ನು ನಿರ್ಮಾಣ ಸಂಸ್ಥೆ ನೋಡಿಕೊಳ್ಳಲಿದೆ. ಈ ಬಗ್ಗೆ ಫಿನಾಲೆಯಲ್ಲಿ ಘೋಷಣೆ ಮಾಡಲಾಗಿದೆ. ಮುನಾವರ್ ಕಪ್​ ಗೆದ್ದಿದ್ದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.

ಫಿನಾಲೆ ವೇಳೆ ಅಚ್ಚರಿಯ ಘೋಷಣೆ ಮಾಡಲಾಯಿತು. ಪ್ರಿನ್ಸ್​ ನರುಲಾ ಅವರು ಸ್ಪರ್ಧಿ ಆಗಿರಲಿಲ್ಲ. ಸಮಸ್ಯೆಗಳನ್ನು ಸೃಷ್ಟಿ ಮಾಡುವ ಉದ್ದೇಶದಿಂದ ಅವರನ್ನು ಈ ಶೋಗೆ ಕಳುಹಿಸಲಾಯಿತು ಎಂದು ಕಂಗನಾ ಹೇಳಿದ್ದಾರೆ. ಅವರು ಕಪ್​ ಗೆಲ್ಲದಿದ್ದರೂ ಆಲ್ಟ್​ ಬಾಲಜಿ ಅವರ ಲಾಕಪ್​ ಕಡೆಯಿಂದ ಅವರಿಗೆ ಪ್ರಾಜೆಕ್ಟ್​ ಒಂದನ್ನು ಆಫರ್ ಮಾಡಲಾಗಿದೆ.

ಮುನಾವರ್ ಅವರು ಈ ಶೋ ಮುಗಿದ ಬೆನ್ನಲ್ಲೇ ಮತ್ತೊಂದು ಶೋಗೆ ರೆಡಿ ಆಗುತ್ತಿದ್ದಾರೆ ಎನ್ನಲಾಗಿದೆ. ‘ಖತ್ರೋಂ ಕೆ ಖಿಲಾಡಿ 12’ ಶೋನಲ್ಲಿ ಅವರು ಸ್ಪರ್ಧಿ ಆಗಲಿದ್ದಾರೆ ಎಂದು ವರದಿ ಆಗಿದೆ.  ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರ ಬರಬೇಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.