ಮನೋಜ್ ಬಾಜ್ಪಾಯಿ (Manoj Bajpayee) ಅವರ ನಟನೆಯ ‘ದಿ ಫ್ಯಾಮಿಲಿ ಮ್ಯಾನ್’ ಸರಣಿಯಲ್ಲಿ ಎರಡು ಸೀಸನ್ಗಳು ಮೂಡಿ ಬಂದಿವೆ. ಈ ಸೀರಿಸ್ನ ಅನೇಕರು ಇಷ್ಟಪಟ್ಟಿದ್ದಾರೆ. ಅವರು ನಿರ್ವಹಿಸಿರುವ ಶ್ರೀಕಾಂತ್ ತಿವಾರಿ ಪಾತ್ರ ಸೂಪರ್ ಹಿಟ್ ಆಗಿದೆ. ಈ ಪಾತ್ರದ ಮ್ಯಾನರಿಸಂ ಸಾಕಷ್ಟು ಜನರಿಗೆ ಕನೆಕ್ಟ್ ಆಗಿದೆ. ಈಗ ಈ ವೆಬ್ ಸೀರಿಸ್ನ ಮೂರನೇ ಸರಣಿ (The Family Man 3) ಬರಲಿದೆ. ಈ ಬಗ್ಗೆ ಮನೋಜ್ ಬಾಜ್ಪಾಯಿ ಅವರು ಮಾಹಿತಿ ನೀಡಿದ್ದಾರೆ.
2021ರಲ್ಲಿ ‘ದಿ ಫ್ಯಾಮಿಲಿ ಮ್ಯಾನ್ 2’ ರಿಲೀಸ್ ಆಯಿತು. ಮೊದಲ ಸೀಸನ್ನಲ್ಲಿ ಪಾಕ್ ಟೆರರಿಸ್ಟ್ಗಳ ಕಥೆ ಹೇಳಿದ್ದ ನಿರ್ದೇಶಕರಾದ ರಾಜ್ ಹಾಗೂ ಡಿಕೆ ಎರಡನೇ ಸೀಸನ್ನಲ್ಲಿ ಶ್ರೀಲಂಕಾ ರೆಬೆಲ್ಸ್ಗಳ ಕಥೆ ಹೇಳಿದ್ದರು. ಸಮಂತಾ ಪಾತ್ರ ಸಾಕಷ್ಟು ಇಷ್ಟ ಆಗಿತ್ತು. ಈ ಸೀಸನ್ ಕೊನೆಯಲ್ಲಿ ಮೂರನೇ ಪಾರ್ಟ್ ಬರಲಿದೆ ಎನ್ನುವ ಸೂಚನೆ ಸಿಕ್ಕಿತ್ತು. ವೈರಸ್ ಕಥೆ ಆಧರಿಸಿ ‘ದಿ ಫ್ಯಾಮಿಲಿ ಮ್ಯಾನ್ 3’ ಬರುತ್ತಿದೆ. ರಿಲೀಸ್ ದಿನಾಂಕದ ಬಗ್ಗೆ ಮನೋಜ್ ಬಾಜ್ಪಾಯಿ ಮಾಹಿತಿ ನೀಡಿದ್ದಾರೆ.
‘ಈ ಹೋಳಿ ಹಬ್ಬಕ್ಕೆ ನಿಮ್ಮ ಕುಟುಂಬದ ಎದುರು ನಮ್ಮ ಕುಟುಂಬದ ಜತೆ ಬರುತ್ತಿದ್ದೇನೆ’ ಎಂದು ಮನೋಜ್ ಬಾಜ್ಪಾಯಿ ಹೇಳಿದ್ದಾರೆ. ಈ ವಿಡಿಯೋ ಕ್ಯಾಪ್ಶನ್ಗೆ ‘ಕುಟುಂಬ ಸಮೇತ ಬರುತ್ತಿದ್ದೇನೆ. ನಮ್ಮನ್ನು ಸ್ವಾಗತಿಸುವುದಿಲ್ಲವೇ’ ಎಂದು ಅವರು ಕ್ಯಾಪ್ಶನ್ ನೀಡಿದ್ದಾರೆ. ಈ ಪೋಸ್ಟ್ಗೆ ಬಗೆಬಗೆಯ ಕಮೆಂಟ್ಗಳು ಬರುತ್ತಿವೆ. ಈ ವರ್ಷ ಮಾರ್ಚ್ 8ಕ್ಕೆ ಹೋಳಿ ಹಬ್ಬ ಇದೆ.
ಇದನ್ನೂ ಓದಿ: ಒಂದು ದಿನಕ್ಕೆ ಪ್ರಿಯಾಮಣಿ ಪಡೆಯುವ ಸಂಬಳ ಎಷ್ಟು? ‘ದಿ ಫ್ಯಾಮಿಲಿ ಮ್ಯಾನ್’ ನಟಿಯ ಸಂಭಾವನೆ ಏರಿಕೆ
‘ಬನ್ನಿ ಬನ್ನಿ ನಿಮಗಾಗಿ ಕಾಯುತ್ತಿದ್ದೆವು’ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ‘ಈ ದಿನಕ್ಕಾಗಿ ಎಷ್ಟೊಂದು ಸಮಯದಿಂದ ಕಾಯುತ್ತಿದ್ದೆವು. ಏಕೆ ಇಷ್ಟು ವಿಳಂಬ ಮಾಡಿದಿರಿ’ ಎಂದು ಕೆಲವರು ಕೇಳಿದ್ದಾರೆ. ರಾಜ್ ಹಾಗೂ ಡಿಕೆ ಒಟ್ಟಾಗಿ ಈ ಸೀರಿಸ್ ನಿರ್ದೇಶನ ಮಾಡಿದ್ದಾರೆ. ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಸೀರಿಸ್ ರಿಲೀಸ್ ಆಗಲಿದೆ. ಈ ಸೀಸನ್ನಲ್ಲಿ ಎಷ್ಟು ಎಪಿಸೋಡ್ಗಳು ಇರಲಿವೆ? ಸೀರಿಸ್ನ ಕಥೆ ಯಾವ ರೀತಿ ಇರಲಿದೆ? ಎಂಬಿತ್ಯಾದಿ ಕುತೂಹಲ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:44 am, Wed, 8 February 23