ಒಟಿಟಿ ಮಂದಿಗೆ ಈ ವಾರ ಬಂಪರ್ ಆಫರ್​; ರಿಲೀಸ್ ಆಗಲು ರೆಡಿ ಇವೆ ಹಲವು ಸಿನಿಮಾ, ಸೀರಿಸ್​

| Updated By: ರಾಜೇಶ್ ದುಗ್ಗುಮನೆ

Updated on: Jan 18, 2023 | 12:19 PM

‘ಮಿಷನ್​ ಮಜ್ನು’ ಸಿನಿಮಾ ಜನವರಿ 20ರಂದು ಒಟಿಟಿಗೆ ಕಾಲಿಡುತ್ತಿದೆ. ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ-ಸಿದ್ದಾರ್ಥ್ ಮಲ್ಹೋತ್ರ ನಟಿಸಿದ್ದಾರೆ. ಶಾಂತನು ಬಾಗ್ಚಿ ಅವರು ಈ ಚಿತ್ರಕ್ಕೆ ಡೈರೆಕ್ಷನ್ ಮಾಡಿದ್ದಾರೆ.

ಒಟಿಟಿ ಮಂದಿಗೆ ಈ ವಾರ ಬಂಪರ್ ಆಫರ್​; ರಿಲೀಸ್ ಆಗಲು ರೆಡಿ ಇವೆ ಹಲವು ಸಿನಿಮಾ, ಸೀರಿಸ್​
ಕಾಪ ಹಾಗೂ ಮಿಷನ್ ಮಜ್ನು ಸಿನಿಮಾ ಪೋಸ್ಟರ್
Follow us on

ಕೊವಿಡ್ (Covid) ಕಾಣಿಸಿಕೊಂಡ ನಂತರದಲ್ಲಿ ಒಟಿಟಿ ವ್ಯಾಪ್ತಿ ಹಿರಿದಾಯಿತು. ಜನರು ಮನೆಯಲ್ಲೇ ಕುಳಿತು ಸಿನಿಮಾ ನೋಡುವುದಕ್ಕೆ ಹೆಚ್ಚು ಆದ್ಯತೆ ನೀಡುತ್ತಾ ಬಂದರು. ಈಗ ಒಟಿಟಿಯಲ್ಲಿ (OTT) ಅನೇಕ ಚಿತ್ರಗಳು ಹಾಗೂ ವೆಬ್​ ಸೀರಿಸ್​ಗಳು ಲಭ್ಯವಿದೆ. ಈ ವಾರ ಒಟಿಟಿಯಲ್ಲಿ ಹಲವು ಸಿನಿಮಾ ಹಾಗೂ ಸೀರಿಸ್​ ರಿಲೀಸ್ ಆಗುತ್ತಿವೆ. ಒಂದೊಳ್ಳೆ ಸಿನಿಮಾ ನೋಡಿ ವೀಕೆಂಡ್ ಕಳೆಯಬೇಕು ಎನ್ನುವವರಿಗೆ ಇಲ್ಲಿದೆ ಮಾಹಿತಿ.

ನೆಟ್​​ಫ್ಲಿಕ್ಸ್

‘ಮಿಷನ್​ ಮಜ್ನು’ ಸಿನಿಮಾ ಜನವರಿ 20ರಂದು ಒಟಿಟಿಗೆ ಕಾಲಿಡುತ್ತಿದೆ. ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ-ಸಿದ್ದಾರ್ಥ್ ಮಲ್ಹೋತ್ರ ನಟಿಸಿದ್ದಾರೆ. ಶಾಂತನು ಬಾಗ್ಚಿ ಅವರು ಈ ಚಿತ್ರಕ್ಕೆ ಡೈರೆಕ್ಷನ್ ಮಾಡಿದ್ದಾರೆ. ಈ ಸಿನಿಮಾದಲ್ಲಿ ಪಾಕ್ ಹುಡುಗಿಯಾಗಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ವೃತ್ತಿಜೀವನಕ್ಕೆ ಈ ಚಿತ್ರ ತುಂಬಾನೇ ಮುಖ್ಯವಾಗಿದೆ. ಇತ್ತೀಚೆಗೆ ರಿಲೀಸ್ ಆದ ಟ್ರೇಲರ್ ಸದ್ದು ಮಾಡಿತ್ತು.

ಪೃಥ್ವಿರಾಜ್​ ಸುಕುಮಾರನ್ ಅಭಿನಯದ ‘ಕಾಪ’ ಸಿನಿಮಾ ಜನವರಿ 19ರಂದು ನೆಟ್​ಫ್ಲಿಕ್ಸ್​ನಲ್ಲಿ ರಿಲೀಸ್ ಆಗುತ್ತಿದೆ. ಈ ಚಿತ್ರ ಡಿಸೆಂಬರ್ 22ರಂದು ಥಿಯೇಟರ್​ನಲ್ಲಿ ರಿಲೀಸ್ ಆಗಿ ಸದ್ದು ಮಾಡಿತ್ತು.

ರವಿತೇಜ ಹಾಗೂ ಕನ್ನಡತಿ ಶ್ರೀಲೀಲಾ ನಟನೆಯ ‘ಧಮಾಕ’ ಸಿನಿಮಾ 100 ಕೋಟಿ ರೂಪಾಯಿ ಕ್ಲಬ್ ಸೇರಿತ್ತು. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಸದ್ದು ಮಾಡಿದ ಬೆನ್ನಲ್ಲೇ ಒಟಿಟಿಲಿ ರಿಲೀಸ್ ಆಗುತ್ತಿದೆ. ಜನವರಿ 22ರಂದು ನೆಟ್​​ಫ್ಲಿಕ್ಸ್​ನಲ್ಲಿ ಸಿನಿಮಾ ರಿಲೀಸ್ ಆಗಲಿದೆ.

ಡಿಸ್ನಿ ಪ್ಲಸ್ ಹಾಟ್​ಸ್ಟಾರ್

‘ಜಾನ್ಸಿ’ ವೆಬ್​ ಸೀರಿಸ್ ಸದ್ದು ಮಾಡಿತ್ತು. ತೆಲುಗು ಭಾಷೆಯ ಈ ಸೀರಿಸ್ ಕಳೆದ ಅಕ್ಟೋಬರ್​ನಲ್ಲಿ ರಿಲೀಸ್ ಆಗಿತ್ತು. ಈಗ ಸೀಸನ್ 2 ರಿಲೀಸ್​ಗೆ ರೆಡಿ ಇದೆ. ಜನವರಿ 19ರಂದು ವೆಬ್ ಸೀರಿಸ್ ಡಿಸ್ನಿ ಪ್ಲಸ್ ಹಾಟ್​ಸ್ಟಾರ್ ಮೂಲಕ ಬಿಡುಗಡೆ ಆಗಲಿದೆ.

ಜೀ5

ಜನವರಿ 20ರಂದು ಜೀ5ನಲ್ಲಿ ಒಂದು ಸೀರಿಸ್ ಹಾಗೂ ಸಿನಿಮಾ ರಿಲೀಸ್ ಆಗುತ್ತಿದೆ. ‘ಛತ್ರಿವಾಲಿ’ ಹಿಂದಿ ಸಿನಿಮಾ ಜನವರಿ 20ಕ್ಕೆ ಪ್ರಸಾರ ಕಾಣುತ್ತಿದೆ. ತೆಲುಗು ಹಾಗೂ ತಮಿಳು ಭಾಷೆಯ ‘ಎಟಿಎಂ’ ಸೀರಿಸ್ ಪ್ರಸಾರ ಕಾಣುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ