AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವಾರ ಒಟಿಟಿಗೆ ಬಂದಿವೆ ಜಬರ್ದಸ್ಥ್ ಸಿನಿಮಾಗಳು: ಪಟ್ಟಿ ಇಲ್ಲಿದೆ

ಈ ವಾರ ಚಿತ್ರಮಂದಿರದಲ್ಲಿ ಕೆಲ ಒಳ್ಳೆಯ ಸಿನಿಮಾಗಳು ಬಿಡುಗಡೆ ಆಗಿವೆ. ಅದರ ಜೊತೆಗೆ ಒಟಿಟಿಗೆ ಸಹ ಒಳ್ಳೆಯ ಹಿಟ್ ಸಿನಿಮಾಗಳೇ ಕಾಲಿಟ್ಟಿವೆ. ಕನ್ನಡ ಸೇರಿದಂತೆ ಬೇರೆ ಭಾಷೆಯ ಕೆಲ ಸ್ಟಾರ್ ನಟರ, ದೊಡ್ಡ ಬಜೆಟ್​​ನ ಹಿಟ್ ಸಿನಿಮಾಗಳು ಈ ವಾರ ಒಟಿಟಿಗೆ ಬಂದಿರುವುದು ವಿಶೇಷ. ಯಾವ ಸಿನಿಮಾಗಳು ಒಟಿಟಿಗೆ ಬಂದಿವೆ? ಅವನ್ನು ಎಲ್ಲಿ ನೋಡಬಹುದು? ಪೂರ್ಣ ಮಾಹಿತಿ ಇಲ್ಲಿದೆ...

ಮಂಜುನಾಥ ಸಿ.
|

Updated on: Nov 29, 2025 | 3:51 PM

Share
ಇತ್ತೀಚೆಗಷ್ಟೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಡಾರ್ಲಿಂಗ್ ಕೃಷ್ಣ ನಟನೆಯ ‘ಬ್ರ್ಯಾಟ್’ ಸಿನಿಮಾ ದಿಡೀರ್ ಎಂದು ಒಟಿಟಿಗೆ ಬಂದಿದೆ. ಕ್ರಿಕೆಟ್ ಬೆಟ್ಟಿಂಗ್ ಕುರಿತ ಕತೆಯುಳ್ಳ ಈ ಸಿನಿಮಾ ಒಳ್ಳೆಯ ಕಲೆಕ್ಷನ್ ಅನ್ನು ಮಾಡಿತ್ತು. ಈಗ ಹಠಾತ್ತನೆ ಅಮೆಜಾನ್ ಪ್ರೈಂನಲ್ಲಿ ಸ್ಟ್ರೀಮ್ ಆರಂಭಿಸಿದೆ. ಕನ್ನಡ ಸೇರಿದಂತೆ ದಕ್ಷಿಣದ ಭಾಷೆಗಳಲ್ಲಿ ಸಿನಿಮಾ ವೀಕ್ಷಿಸಲು ಲಭ್ಯವಿದೆ.

1 / 7
‘ಕಾಂತಾರ ಚಾಪ್ಟರ್ 1’ ಸಿನಿಮಾ ಅಕ್ಟೋಬರ್ 2 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಬಿಡುಗಡೆ ಆಗಿ ತಿಂಗಳು ಮುಗಿಯುವ ಮುನ್ನವೇ ಸಿನಿಮಾದ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಆವೃತ್ತಿಯಲ್ಲಿ ಒಟಿಟಿಗೆ ಬಿಡುಗಡೆ ಆಗಿತ್ತು. ಆದರೆ ಹಿಂದಿ ಆವೃತ್ತಿ ಬಿಡುಗಡೆ ಆಗಿರಲಿಲ್ಲ. ಇದೀಗ ಈ ವಾರದಿಂದ ಹಿಂದಿ ಆವೃತ್ತಿಯೂ ಸಹ ಬಿಡುಗಡೆ ಆಗಿದೆ.

2 / 7
ತೆಲುಗು ಚಿತ್ರರಂಗದ ಮಾಸ್ ಮಹಾರಾಜ ಎಂದೇ ಹೆಸರಾಗಿರುವ ರವಿತೇಜ ಹಾಗೂ ಕನ್ನಡದ ನಟಿ ಶ್ರೀಲೀಲಾ ಒಟ್ಟಿಗೆ ನಟಿಸಿರುವ ಕಮರ್ಶಿಯಲ್ ಸಿನಿಮಾ ‘ಮಾಸ್ ಜಾತರ’ ಕೆಲ ವಾರಗಳ ಹಿಂದೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಸಾಧಾರಣ ಹಿಟ್ ಆಗಿತ್ತು. ಇದೀಗ ಈ ಸಿನಿಮಾ ನೆಟ್​​ಫ್ಲಿಕ್ಸ್​​ನಲ್ಲಿ ಬಿಡುಗಡೆ ಆಗಿದೆ.

3 / 7
ಹಾಸ್ಯ ಮಿಶ್ರಿತ ಥ್ರಿಲ್ಲರ್ ಕತೆ ಹೊಂದಿರುವ ‘ಪೆಟ್ ಡಿಟೆಕ್ಟಿವ್’ ಸಿನಿಮಾ ಅಕ್ಟೋಬರ್ 16ರಂದು ಚಿತ್ರಮಂದಿರದಲ್ಲಿ ಬಿಡುಗಡೆ ಆಗಿತ್ತು. ಸಿನಿಮಾ ಚೆನ್ನಾಗಿತ್ತು. ಇದೀಗ ಈ ಸಿನಿಮಾ ಒಟಿಟಿಗೆ ಬಂದಿದೆ. ಜೀ5ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಿದೆ. ಸಿನಿಮಾನಲ್ಲಿ ಅನುಪಮಾ ಪರಮೇಶ್ವರನ್ ನಾಯಕಿ.

4 / 7
‘ಶಸಿವದನೆ’ ತೆಲುಗಿನಲ್ಲಿ ಬಿಡುಗಡೆ ಆದ ರೊಮ್ಯಾಂಟಿಕ್ ಸಿನಿಮಾ. ಉತ್ತಮ ಲವ್ ಸ್ಟೋರಿ ಹೊಂದಿರುವ ಈ ಸಿನಿಮಾವನ್ನು ಸಾಯಿ ಮೋಹನ್ ಉಬ್ಬನ ನಿರ್ದೇಶಿಸಿದ್ದಾರೆ. ಅಕ್ಟೋಬರ್ 10ರಂದು ಬಿಡುಗಡೆ ಆಗಿದ್ದ ಸಿನಿಮಾ ಈ ವಾರ ಸನ್ ನೆಕ್ಸ್ಟ್​​ನಲ್ಲಿ ಬಿಡುಗಡೆ ಆಗಿದೆ.

5 / 7
ಜಾನ್ಹವಿ ಕಪೂರ್, ವರುಣ್ ಧವನ್, ಸಾನ್ಯಾ ಮಲ್ಹೋತ್ರಾ ಅವರುಗಳು ಮುಖ್ಯ ಪಾತ್ರದಲ್ಲಿ ನಟಿಸಿದ್ದ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ‘ಸನ್ನಿ ಸಂಸ್ಕಾರಿ ಕಿ ತುಲಸಿ ಕುಮಾರಿ’ ಸಿನಿಮಾ ಕೆಲ ವಾರಗಳ ಹಿಂದೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಅಟ್ಟರ್ ಫ್ಲಾಪ್ ಆಗಿತ್ತು. ಈ ವಾರ ಈ ಸಿನಿಮಾ ನೆಟ್​​ಫ್ಲಿಕ್ಸ್​​ನಲ್ಲಿ ಬಿಡುಗಡೆ ಆಗಿದೆ.

6 / 7
‘ಸ್ಟ್ರೇಂಜರ್ ಥಿಂಗ್ಸ್’ ವಿಶ್ವದ ಬಲು ಜನಪ್ರಿಯ ವೆಬ್ ಸರಣಿಗಳಲ್ಲಿ ಒಂದು ಈ ವೆಬ್ ಸರಣಿಯ ಐದನೇ ಸೀಸನ್ ಈ ವಾರ ಬಿಡುಗಡೆ ಆಗಿದೆ. ಒಂದು ಊರಿನಲ್ಲಿ ಕೆಲವು ಮಕ್ಕಳೊಡನೆ ನಡೆಯುವ ಚಿತ್ರ-ವಿಚಿತ್ರ ಘಟನೆಗಳೇ ‘ಸ್ಟ್ರೇಂಜರ್ ಥಿಂಗ್ಸ್’. ಇದು ನೆಟ್​​ಫ್ಲಿಕ್ಸ್​​ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ.

7 / 7
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್

ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?

ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ

ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ

ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!

ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ

ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್

ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ

ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ