ಟಾಲಿವುಡ್ ಸ್ಟಾರ್ ನಟ ನಾನಿ (Nani) ಅಭಿನಯದ ‘ದಸರಾ’ ಸಿನಿಮಾ ಈ ವರ್ಷ ತೆರೆಕಂಡು ಸೂಪರ್ ಹಿಟ್ ಆಯಿತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೂಡಿಬಂದ ಈ ಚಿತ್ರ ಕನ್ನಡ, ತೆಲುಗು, ಮಲಯಾಳಂ, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಬಿಡುಗಡೆ ಆಗಿತ್ತು. ಹಿಂದಿ ಹೊರತುಪಡಿಸಿ ಬೇರೆ ಎಲ್ಲ ಭಾಷೆಯ ವರ್ಷನ್ಗಳು ಏಪ್ರಿಲ್ 27ರಂದು ಒಟಿಟಿಯಲ್ಲಿ ಲಭ್ಯವಾಗಿದ್ದವು. ನೆಟ್ಫ್ಲಿಕ್ಸ್ನಲ್ಲಿ (Netflix) ಈ ಸಿನಿಮಾವನ್ನು ನೋಡಿ ಸೌತ್ ಇಂಡಿಯಾದ ಪ್ರೇಕ್ಷಕರು ಎಂಜಾಯ್ ಮಾಡಿದ್ದಾರೆ. ಆದರೆ ಉತ್ತರ ಭಾರತದ ಮಂದಿಗೆ ಹಿಂದಿಯಲ್ಲಿ ನೋಡುವ ಅವಕಾಶ ಸಿಕ್ಕಿರಲಿಲ್ಲ. ಅದಕ್ಕೆ ಈಗ ಕಾಲ ಕೂಡಿಬಂದಿದೆ. ‘ದಸರಾ’ (Dasara Movie) ಹಿಂದಿ ವರ್ಷನ್ ಪ್ರಸಾರಕ್ಕೆ ನೆಟ್ಫ್ಲಿಕ್ಸ್ ಸಜ್ಜಾಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ಮಾಹಿತಿ ಹಂಚಿಕೊಳ್ಳಲಾಗಿದೆ.
‘ಧೂಮ್ ಧಾಮ್ ಮುಗಿಯಿತು ಅಂದುಕೊಂಡ್ರಾ? ನಿಮ್ಮ ಊಹೆ ತಪ್ಪು. ನೆಟ್ಫ್ಲಿಕ್ನಲ್ಲಿ ಮೇ 25ರಂದು ದಸರಾ ಸಿನಿಮಾದ ಹಿಂದಿ ವರ್ಷನ್ ಬರುತ್ತಿದೆ’ ಎಂದು ಟ್ವಿಟರ್ನಲ್ಲಿ ಪೋಸ್ಟ್ ಮಾಡಲಾಗಿದೆ. ದಕ್ಷಿಣದ ಸಿನಿಮಾಗಳಿಗೆ ಉತ್ತರ ಭಾರತದಲ್ಲಿ ದೊಡ್ಡ ಮಾರುಕಟ್ಟೆ ಇದೆ. ಸೌತ್ ಹೀರೋಗಳ ಸಿನಿಮಾಗಳು ಹಿಂದಿಗೆ ಡಬ್ ಆಗುವುದರಿಂದ ಉತ್ತರ ಭಾರತದಲ್ಲಿನ ಪ್ರೇಕ್ಷಕರು ನೋಡಿ ಎಂಜಾಯ್ ಮಾಡುತ್ತಾರೆ.
If you thought that the Dhoom Dhaam was done, you’re wrong!
Dasara is coming to Netflix in Hindi on May 25th ?#Dasara #DasaraOnNetflix pic.twitter.com/a8ijaTaDA4
— Netflix India (@NetflixIndia) May 18, 2023
‘ದಸರಾ’ ಸಿನಿಮಾದಲ್ಲಿ ನಾನಿ ಅವರಿಗೆ ಜೋಡಿಯಾಗಿ ಕೀರ್ತಿ ಸುರೇಶ್ ನಟಿಸಿದ್ದಾರೆ. ಅನೇಕ ಸೆಲೆಬ್ರಿಟಿಗಳು ಚಿತ್ರಮಂದಿರದಲ್ಲಿ ಈ ಸಿನಿಮಾವನ್ನು ನೋಡಿ ಮೆಚ್ಚಿಗೆ ಸೂಚಿಸಿದ್ದರು. ರಾಜಮೌಳಿ ಕೂಡ ಫಿದಾ ಆಗಿದ್ದರು. ಮಾರ್ಚ್ 30ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಈ ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿತು. ರಿಲೀಸ್ ಆದ ಕೆಲವೇ ದಿನಗಳಲ್ಲಿ ನೂರು ಕೋಟಿ ಕಲೆಕ್ಷನ್ ಸಹ ದಾಟಿತು. ಇದು ನಾನಿ ವೃತ್ತಿ ಜೀವನದ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ. ಚೊಚ್ಚಲ ನಿರ್ದೇಶನದಲ್ಲೇ ಶ್ರೀಕಾಂತ್ ಒಡೆಲಾ ಭರ್ಜರಿ ಗೆಲುವು ಪಡೆದರು.
ಇದನ್ನೂ ಓದಿ: ಅವತಾರ್ 2 ಒಟಿಟಿ ಬಿಡುಗಡೆ ದಿನಾಂಕ ಪ್ರಕಟ: ಹೆಚ್ಚುವರಿ ಶುಲ್ಕ ಪಾವತಿಯ ಅಗತ್ಯವಿಲ್ಲ
‘ದಸರಾ’ ಸಿನಿಮಾದಲ್ಲಿ ನಟ ನಾನಿ ಅವರು ರಗಡ್ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲು ಈ ಚಿತ್ರದ ಟ್ರೇಲರ್ ಬಿಡುಗಡೆ ಆದಾಗ ಎಲ್ಲರೂ ‘ಪುಷ್ಪ’ ಸಿನಿಮಾಗೆ ಹೋಲಿಕೆ ಮಾಡಿದರು. ಆದರೆ ಸಿನಿಮಾ ರಿಲೀಸ್ ಆದಾಗ ಆ ಹೋಲಿಕೆ ಮಾಯವಾಯ್ತು. ಇದು ಬೇರೆಯದೇ ಕಥೆಯನ್ನು ಹೊಂದಿದೆ ಎಂಬುದು ಪ್ರೇಕ್ಷಕರಿಗೆ ತಿಳಿಯಿತು. ಒಂದು ವಾರಗಳ ಕಾಲ ಭರ್ಜರಿ ಪ್ರದರ್ಶನ ಕಂಡ ಬಳಿಕ ಈ ಸಿನಿಮಾ ಶತಕೋಟಿ ರೂಪಾಯಿ ಕ್ಲಬ್ ಸೇರಿತು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.