ನಾನಿ (Nani), ಕೀರ್ತಿ ಸುರೇಶ್ (Keerthy Suresh) ಹಾಗೂ ಕನ್ನಡದ ದರ್ಶಿತ್ (Darshith) ನಟನೆಯ ಸೂಪರ್ ಹಿಟ್ ಪ್ಯಾನ್ ಇಂಡಿಯಾ ಸಿನಿಮಾ ದಸರಾ ಕೆಲವೇ ದಿನಗಳಲ್ಲಿ ಒಟಿಟಿಗೆ ಬರಲಿದೆ. ಚಿತ್ರಮಂದಿರಗಳಲ್ಲಿ ಈಗಾಗಲೇ ಸೂಪರ್ ಹಿಟ್ ಆಗಿ ನೂರು ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿರುವ ಈ ಸಿನಿಮಾ ಒಟಿಟಿಯಲ್ಲಿಯೂ ಅಬ್ಬರಿಸಲಿದ್ದು, ಜನಪ್ರಿಯ ಒಟಿಟಿಗೆ ಮಾರಾಟ ಮಾಡಿದೆ ಚಿತ್ರತಂಡ. ತನ್ನ ಕಚ್ಚಾತನದಿಂದ ಗಮನ ಸೆಳೆದಿದ್ದ ದಸರಾ ಸಿನಿಮಾ ಇತ್ತೀಚೆಗೆ ಹೆಚ್ಚು ಗಮನ ಸೆಳೆದ ದಕ್ಷಿಣ ಭಾರತದ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಒಂದೆನಿಸಿಕೊಂಡಿದ್ದು. ಹಿಟ್ ಆದ ದಕ್ಷಿಣದ ಇತರೆ ಪ್ಯಾನ್ ಇಂಡಿಯಾ ಸಿನಿಮಾಗಳ ಮಾದರಿಯಲ್ಲಿಯೇ ಈ ಸಿನಿಮಾ ಸಹ ನೆಟ್ಫ್ಲಿಕ್ಸ್ಗೆ ಸೇಲ್ ಆಗಿದೆ. ಅದೂ ಭರ್ಜರಿ ಮೊತ್ತಕ್ಕೆ.
ದಸರಾ ಸಿನಿಮಾವು ನೆಟ್ಫ್ಲಿಕ್ಸ್ ಪಾಲಾಗಿದ್ದು ಮುಂದಿನ ತಿಂಗಳಾಂತ್ಯಕ್ಕೆ ಅಂದರೆ ಮೇ 30ಕ್ಕೆ ನೆಟ್ಫ್ಲಿಕ್ಸ್ನಲ್ಲಿ ಪ್ರಸಾರವಾಗಲಿದೆ. ಈ ಸಿನಿಮಾವು ಮಾರ್ಚ್ 30 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಬಿಡುಗಡೆ ದಿನಾಂಕದ ಬರೋಬ್ಬರಿ ಎರಡು ತಿಂಗಳ ತರುವಾಯ ಒಟಿಟಿಯಲ್ಲಿ ದಸರಾ ಪ್ರದರ್ಶನ ಕಾಣಲಿದೆ. ನೆಟ್ಫ್ಲಿಕ್ಸ್ ಜೊತೆಗೆ ಮತ್ತೊಂದು ದೇಸಿ ಒಟಿಟಿಗೂ ಈ ಸಿನಿಮಾವನ್ನು ಸೇಲ್ ಮಾಡಲಾಗುತ್ತಿದೆ ಎನ್ನುವ ಸುದ್ದಿಗಳೂ ಸಹ ಇವೆ.
ದಸರಾ ಸಿನಿಮಾವು ಕಲ್ಲಿದ್ದಲು ಗಣಿಗಾರಿಕೆಯಲ್ಲಿ ನಿರತವಾಗಿರುವ ಹಳ್ಳಿಯೊಂದರಲ್ಲಿ ನಡೆಯುವ ಕತೆಯನ್ನು ಒಳಗೊಂಡಿದೆ. ಕೂಲಿ ಕಾರ್ಮಿಕರ ಶೋಷಣೆ, ಆಳುಗಳ ಮೇಲೆ, ಅನಕ್ಷರಸ್ಥರ ಮೇಲಿನ ದೌರ್ಜನ್ಯ, ಅನಿಷ್ಟ ಜಾತಿ ಪದ್ಧತಿ, ದೊರೆಗಳ ದಬ್ಬಾಳಿಕೆ ಇನ್ನಿತರೆ ವಿಷಯಗಳನ್ನು ತೋರಿಸಲಾಗಿದ್ದು, ನಾಯಕ ನಾನಿ ಇವುಗಳ ವಿರುದ್ಧ ಸಿಡಿದು ನಿಂತು ಹಿಂಸೆಯ ಮೂಲಕ ನ್ಯಾಯ ಧಕ್ಕಿಸಿಕೊಳ್ಳುವುದು ದಸರಾ ಸಿನಿಮಾದ ಕತೆ.
ಇದನ್ನೂ ಓದಿ:ನಾನಿ ನಟನೆಯ ‘ದಸರಾ’ ತಂಡಕ್ಕೆ ಬಂಪರ್ ಗಿಫ್ಟ್; ಸಿಕ್ತು ಬಿಎಂಡಬ್ಲ್ಯೂ ಕಾರ್, ಚಿನ್ನದ ನಾಣ್ಯ
ಮಾರ್ಚ್ 30 ರಂದು ತೆಲುಗು ಸೇರಿದಂತೆ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ದಸರಾ ಸಿನಿಮಾ ಬಿಡುಗಡೆ ಆಗಿ ಸೂಪರ್ ಹಿಟ್ ಎನಿಸಿಕೊಂಡಿತು. ಬಿಡುಗಡೆ ಆದ ಕೆಲವೇ ದಿನಗಳಲ್ಲಿ ನೂರು ಕೋಟಿ ಕಲೆಕ್ಷನ್ ಸಹ ದಾಟಿತು. ಇದು ನಾನಿ ವೃತ್ತಿ ಜೀವನದ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನಿಸಿಕೊಂಡಿದೆ. ಸಿನಿಮಾವನ್ನು ಶ್ರೀಕಾಂತ್ ಒಡೆಲಾ ನಿರ್ದೇಶನ ಮಾಡಿದ್ದು, ಇದು ಅವರ ಮೊದಲ ಸಿನಿಮಾ.
ಸಿನಿಮಾದಲ್ಲಿ ನಾನಿ ಜೊತೆಗೆ ಕನ್ನಡದ ದೀಕ್ಷಿತ್ ಸಹ ನಟಿಸಿದ್ದಾರೆ. ದಿಯಾ ಸಿನಿಮಾದಲ್ಲಿ ಸಹ ದೀಕ್ಷಿತ್ ಗಮನ ಸೆಳೆದಿದ್ದರು. ಸಿನಿಮಾದ ನಾಯಕಿ ಪಾತ್ರದಲ್ಲಿ ಕೀರ್ತಿ ಸುರೇಶ್ ಕಾಣಿಸಿಕೊಂಡಿದ್ದಾರೆ. ಇವರು ಮೂವರ ಜೊತೆಗೆ ಮಲಯಾಳಂನ ಜನಪ್ರಿಯ ನಟ ಶೈನ್ ಚಾಕೊ, ಸಮುದ್ರಕಿಣಿ, ಸಾಯಿಕುಮಾರ್ ಅವರುಗಳು ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ