Naseeruddin Shah: ‘ಹೊಸ ಧರ್ಮ ಸ್ಥಾಪಿಸಲು ಅಕ್ಬರ್​ ಪ್ರಯತ್ನಿಸಿದ್ದ ಎಂಬುದು ನಾನ್​ ಸೆನ್ಸ್​’: ನಟ ನಸಿರುದ್ದೀನ್ ಷಾ

|

Updated on: Feb 28, 2023 | 7:02 PM

Akbar | Taj Divided By Blood: ಅಕ್ಬರ್ ಹೊಸ ಧರ್ಮವನ್ನು ಸ್ಥಾಪಿಸಲು ಪ್ರಯತ್ನಿಸಿದ್ದ ಎಂಬ ಮಾತಿದೆ. ಈ ಬಗ್ಗೆ ಪಠ್ಯ ಪುಸ್ತಕಗಳಲ್ಲೂ ಉಲ್ಲೇಖ ಆಗಿದೆ. ಅದನ್ನು ನಸೀರುದ್ದೀನ್​ ಷಾ ಅವರು ಅಲ್ಲಗಳೆದಿದ್ದಾರೆ.

Naseeruddin Shah: ‘ಹೊಸ ಧರ್ಮ ಸ್ಥಾಪಿಸಲು ಅಕ್ಬರ್​ ಪ್ರಯತ್ನಿಸಿದ್ದ ಎಂಬುದು ನಾನ್​ ಸೆನ್ಸ್​’: ನಟ ನಸಿರುದ್ದೀನ್ ಷಾ
ನಸೀರುದ್ದೀನ್ ಷಾ
Follow us on

ಹಿರಿಯ ನಟ ನಸೀರುದ್ದೀನ್ ಷಾ (Naseeruddin Shah) ಅವರು ಅಭಿನಯದ ಜೊತೆಗೆ ತಮ್ಮ ನೇರ ನಡೆ-ನುಡಿಯ ಕಾರಣದಿಂದ ಗುರುತಿಸಿಕೊಂಡಿದ್ದಾರೆ. ಆಗಾಗ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಾರೆ. ಅದರಿಂದ ಅವರು ಕೆಲವರ ವಿರೋಧ ಕಟ್ಟಿಕೊಂಡಿದ್ದೂ ಉಂಟು. ಪ್ರಸ್ತುತ ಅವರು ‘ತಾಜ್​: ಡಿವೈಡೆಡ್​ ಬೈ ಬ್ಲಡ್​’ (Taj Divided By Blood) ವೆಬ್​ ಸರಣಿಯಲ್ಲಿ ಅಭಿನಯಿಸಿದ್ದಾರೆ. ಇದು ಮೊಘಲರ ಕುರಿತಾದ ವೆಬ್​ ಸಿರೀಸ್​. ಇದರಲ್ಲಿ ನಸೀರುದ್ದೀನ್​ ಷಾ ಅವರು ಅಕ್ಬರ್​ನ ಪಾತ್ರವನ್ನು ಮಾಡಿದ್ದಾರೆ. ‘ಜೀ5’ ಮೂಲಕ ಮಾರ್ಚ್​ 3ರಿಂದ ಈ ವೆಬ್​ ಸರಣಿ ವೀಕ್ಷಣೆಗೆ ಲಭ್ಯವಾಗಲಿದೆ. ಈ ಪ್ರಯುಕ್ತ ಅನೇಕ ಮಾಧ್ಯಮಗಳಿಗೆ ನಸೀರುದ್ದೀನ್​ ಷಾ ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಅವರು ಅಕ್ಬರ್​ (Akbar) ಬಗ್ಗೆ ಒಂದಷ್ಟು ಮಾತುಗಳನ್ನು ಆಡಿದ್ದಾರೆ.

ಹೊಸ ಧರ್ಮವನ್ನು ಸ್ಥಾಪಿಸಲು ಅಕ್ಬರ್​ ಪ್ರಯತ್ನಿಸಿದ್ದ ಎಂಬ ಮಾತಿದೆ. ಈ ಬಗ್ಗೆ ಪಠ್ಯ ಪುಸ್ತಕಗಳಲ್ಲೂ ಉಲ್ಲೇಖ ಆಗಿದೆ. ಅದನ್ನು ನಸೀರುದ್ದೀನ್​ ಷಾ ಅವರು ಅಲ್ಲಗಳೆದಿದ್ದಾರೆ. ‘ಆಕ್ಬರ್​ ಓರ್ವ ಹೃದಯವಂತ, ಸಭ್ಯ, ವಿಶಾಲ ಮನೋಭಾವದ ವ್ಯಕ್ತಿ ಆಗಿದ್ದ. ಆತ ಹೊಸ ಧರ್ಮ ಸ್ಥಾಪಿಸಲು ಬಯಸಿದ್ದ ಎಂಬುದೊಂದೆ ಆತನ ಮೇಲಿರುವ ಕಪ್ಪು ಚುಕ್ಕಿ. ಆದರೆ ಇತಿಹಾಸದ ಪುಸ್ತಕದಲ್ಲಿ ನಾವು ಓದಿದ ಈ ಮಾಹಿತಿ ಶುದ್ಧ ನಾನ್​ ಸೆನ್ಸ್​’ ಎಂದು ನಸೀರುದ್ದೀನ್​ ಷಾ ಹೇಳಿದ್ದಾರೆ.

ಇದನ್ನೂ ಓದಿ:ತಾಲಿಬಾನ್​ ಪರ ಇರುವ ಭಾರತದ ಮುಸ್ಲಿಮರಿಗೆ ನಟ ನಸೀರುದ್ದೀನ್​ ಷಾ ಛೀಮಾರಿ; ವಿಡಿಯೋ ವೈರಲ್​

ಇದನ್ನೂ ಓದಿ
Naseeruddin Shah: ‘ಮೊಘಲರು ಲೂಟಿ ಮಾಡಲು ಬಂದವರಲ್ಲ, ಭಾರತಕ್ಕೆ ಅವರ ಕೊಡುಗೆಯೂ ಇದೆ’: ನಸೀರುದ್ದೀನ್​ ಷಾ
ನಾಸಿರುದ್ದೀನ್​ ಶಾ ಜನ್ಮದಿನ: ಕನ್ನಡದಲ್ಲೂ ನಟಿಸಿದ ಈ ಕಲಾವಿದ ಮಾಡಿಕೊಂಡ ವಿವಾದಗಳು ಒಂದೆರೆಡಲ್ಲ
ತಾಲಿಬಾನ್​ ಪರ ಇರುವ ಭಾರತದ ಮುಸ್ಲಿಮರಿಗೆ ನಟ ನಸೀರುದ್ದೀನ್​ ಷಾ ಛೀಮಾರಿ; ವಿಡಿಯೋ ವೈರಲ್​
ಬಾಲಿವುಡ್​ ಖ್ಯಾತ ನಟ ನಾಸಿರುದ್ದೀನ್ ಷಾ ಆಸ್ಪತ್ರೆಯಿಂದ ಬಿಡುಗಡೆ: ಅಭಿಮಾನಿಗಳಿಗೆ ಹರ್ಷ

ಅಕ್ಬರ್​ ಬಳಿಕ ಆತನ ಮೂವರು ಮಕ್ಕಳ ಪೈಕಿ ಸಿಂಹಾಸನದ ಜವಾಬ್ದಾರಿ ಹೊರುವವರು ಯಾರು ಎಂಬುದನ್ನು ತೀರ್ಮಾನಿಸುವ ಸಮಯ ಬರುತ್ತದೆ. ವಯಸ್ಸಿನಲ್ಲಿ ಯಾರು ಹಿರಿಯರು ಎಂಬುದರ ಬದಲಿಗೆ ಸಾಮರ್ಥ್ಯದ ಆಧಾರದಲ್ಲಿ ಉತ್ತಾಧಿಕಾರಿಯನ್ನು ​ಆಯ್ಕೆ ಮಾಡಲು ಅಕ್ಬರ್​ ಮುಂದಾಗುತ್ತಾನೆ. ಆ ಕಥೆ ‘ತಾಜ್​: ಡಿವೈಡೆಡ್​ ಬೈ ಬ್ಲಡ್​​’ ವೆಬ್​ ಸೀರಿಸ್​ನಲ್ಲಿದೆ. ನಸೀರುದ್ದೀನ್​ ಷಾ ಜೊತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಸಲೀಂ ಪಾತ್ರದಲ್ಲಿ ಆಶಿಮ್​ ಗುಲಾಟಿ, ಮುರಾದ್​ ಪಾತ್ರದಲ್ಲಿ ತಹಾ ಷಾ, ಅನಾರ್ಕಲಿ ಪಾತ್ರದಲ್ಲಿ ಅದಿತಿ ರಾವ್​ ಹೈದರಿ, ಜೋಧಾ ಬಾಯ್​ ಆಗಿ ಸಂಧ್ಯಾ ಮೃದುಲ್​ ಅವರು ನಟಿಸಿದ್ದಾರೆ.

ಇದನ್ನೂ ಓದಿ: ನಾಸಿರುದ್ದೀನ್​ ಶಾ ಜನ್ಮದಿನ: ಕನ್ನಡದಲ್ಲೂ ನಟಿಸಿದ ಈ ಕಲಾವಿದ ಮಾಡಿಕೊಂಡ ವಿವಾದಗಳು ಒಂದೆರೆಡಲ್ಲ

‘ನಾದಿರ್​ ಷಾ, ತೈಮೂರ್​ ಮುಂತಾದವರು ಭಾರತವನ್ನು ಲೂಟಿ ಮಾಡಲು ಬಂದರು. ಆದರೆ ಮೊಘಲರು ಲೂಟಿ ಮಾಡಲು ಬರಲಿಲ್ಲ. ಈ ನೆಲವನ್ನು ತಮ್ಮ ಮನೆಯಾಗಿಸಿಕೊಳ್ಳಲು ಮೊಘಲರು ಬಂದರು. ಅದನ್ನೇ ಅವರು ಮಾಡಿದ್ದು. ಅವರ ಕೊಡುಗೆಯನ್ನು ಯಾರು ತೆಗೆದುಹಾಕಲು ಸಾಧ್ಯ?’ ಎಂದು ಮತ್ತೊಂದು ಸಂದರ್ಶನದಲ್ಲಿ ನಸೀರುದ್ದೀನ್​ ಷಾ ಪ್ರಶ್ನಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.