ಬಾಲಿವುಡ್ ಖ್ಯಾತ ನಟ ನಾಸಿರುದ್ದೀನ್ ಷಾ ಆಸ್ಪತ್ರೆಯಿಂದ ಬಿಡುಗಡೆ: ಅಭಿಮಾನಿಗಳಿಗೆ ಹರ್ಷ
Naseeruddin Shah: ಬಾಲಿವುಡ್ನ ಜನಪ್ರಿಯ ನಟ ನಾಸಿರುದ್ದೀನ್ ಶಾ ಬುಧವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ನ್ಯುಮೋನಿಯಾದಿಂದ ಬಳಲುತ್ತಿದ್ದ ಅವರನ್ನು ಕಳೆದ ತಿಂಗಳು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬಾಲಿವುಡ್ನ ಖ್ಯಾತ ನಟ ನಾಸಿರುದ್ದೀನ್ ಶಾ ಅವರು ಪತ್ನಿ ರತ್ನ ಪಾಟಕ್ ಶಾ ಅವರೊಂದಿಗಿರುವ ಚಿತ್ರವನ್ನು ಪುತ್ರ ವಿವಾನ್ ಶಾ ಅವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡು ನಾಸಿರುದ್ದೀನ್ ಶಾ ಗುಣಮುಖರಾಗಿ ಮನೆ ಸೇರಿರುವ ವಿಚಾರವನ್ನು ಅಭಿಮಾನಿಗಳಿಗೆ ಬಹಿರಂಗಪಡಿಸಿದ್ದಾರೆ. ‘ಅವರು ಈಗಷ್ಟೇ ಮನೆಗೆ ಬಂದರು’ ಎಂದು ವಿವಾನ್ ಶಾ ಬರೆದುಕೊಂಡಿದ್ದಾರೆ. ಜೊತೆಗೆ ‘ಮರಳಿ ಮನೆಗೆ’ ಎಂದು ಪ್ರೀತಿ ಪೂರ್ವಕ ಇಮೋಜಿಯೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ರತ್ನ ಅವರು ರೂಮಿನಲ್ಲಿ ಕುಳಿತಿದ್ದು, ನಾಸಿರುದ್ದೀನ್ ಶಾ ಅವರು ತಮ್ಮ ಕೈಯನ್ನು ದಿಟ್ಟಿಸುತ್ತಿದ್ದಾರೆ.
ನಾಸಿರುದ್ದೀನ್ ಶಾಕಳೆದ ಮಂಗಳವಾರ 70 ವರ್ಷದ ನಾಸಿರುದ್ದೀನ್ ಶಾ ಅವರನ್ನು ಅನಾರೋಗ್ಯದ ನಿಮಿತ್ತ ಹಿಂದುಜಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ‘ಅವರಿಗೆ ಸಣ್ಣ ಮಟ್ಟದಲ್ಲಿ ಅನಾರೋಗ್ಯ ಕಾಣಿಸಿಕೊಂಡಿದೆ. ಚಿಕಿತ್ಸೆಗೆ ಸ್ಪಂದಿಸುತ್ತತಿದ್ದಾರೆ. ಸದ್ಯದಲ್ಲೇ ಗುಣಮುಖವಾಗಲಿದ್ದಾರೆ’ ಎಂದು ಅವರ ಪತ್ನಿ ರತ್ನಾ ಅವರು ಪಿಟಿಐಗೆ ತಿಳಿಸಿದ್ದರು. ಅದರಂತೆ ನಾಸಿರುದ್ದೀನ್ ಸಾ ಅವರು ಬಿಡುಗಡೆಯಾಗಿದ್ದು ಅವರ ಅಪಾರ ಅಭಿಮಾನ ಬಳಗ ಸಂತಸದ ನಿಟ್ಟುಸಿರು ಬಿಟ್ಟಿದೆ.
ನಾಸಿರುದ್ದೀನ್ ಶಾ ಅವರು ಪ್ರತಿಷ್ಠಿತ ರಾಷ್ಟ್ರೀಯ ನಾಟಕ ಶಾಲೆ (ಎನ್ಎಸ್ಡಿ) ಹಾಗೂ ಪುಣೆಯ ಭಾರತೀಯ ಚಲನಚಿತ್ರ ಹಾಗೂ ದೃಶ್ಯ ಮಾಧ್ಯಮ ಸಂಸ್ಥೆಯ ಹಳೆಯ ವಿದ್ಯಾರ್ಥಿಯಾಗಿದ್ದಾರೆ. ಕಮರ್ಷಿಯಲ್ ಸಿನಿಮಾಗಳ ಜೊತೆಜೊತೆಗೆ ಸಮಾಂತರ ಚಿತ್ರಗಳಲ್ಲೂ ಗುರುತಿಸಿಕೊಂಡಿರುವನಾಸಿರುದ್ದೀನ್ ಶಾ ಮೂರು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಇದರ ಜೊತೆಜೊತೆಗೆ ನಾಟಕಗಳಲ್ಲೂ ತಮ್ಮನ್ನು ಸತತವಾಗಿ ತೊಡಗಿಸಿಕೊಂಡಿದ್ದಾರೆ.
(Veteran Bollywood actor Naseeruddin Shah discharged from hospital son Vivaan shares his pic)
Published On - 11:20 am, Thu, 8 July 21