ಕರ್ನಾಟಕ ನಾಗರಿಕ ಸೇವೆ ನಿಯಮಾವಳಿಗೆ ಮತ್ತಷ್ಟು ತಿದ್ದುಪಡಿ ಮಾಡಿ ಅಧಿಸೂಚನೆ ಹೊರಡಿಸಿದ ರಾಜ್ಯ ಸರ್ಕಾರ

ಯೋಜನಾ ನಿರಾಶ್ರಿತರ ವ್ಯಕ್ತಿಗಳು, ಕುಟುಂಬದ ಸದಸ್ಯರಿಗಾಗಿ ಮೀಸಲಿರಿಸಿದ ಐದು ಶೇಕಡಾವಾರು ಸಂಖ್ಯೆಗೆ ಸೂಕ್ತ ಅಭ್ಯರ್ಥಿಗಳು ಸಾಕಷ್ಟು ಸಂಖ್ಯೆಯಲ್ಲಿ ಲಭ್ಯವಾಗದಿದ್ದರೆ ಅಂಥ ರಿಕ್ತ ಸ್ಥಾನಗಳನ್ನು ಅದೇ ಪ್ರವರ್ಗಕ್ಕೆ ಸೇರಿದ ಇದರ ಅಭ್ಯರ್ಥಿಗಳಿಂದ ಭರ್ತಿ ಮಾಡಬೇಕು ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

ಕರ್ನಾಟಕ ನಾಗರಿಕ ಸೇವೆ ನಿಯಮಾವಳಿಗೆ ಮತ್ತಷ್ಟು ತಿದ್ದುಪಡಿ ಮಾಡಿ ಅಧಿಸೂಚನೆ ಹೊರಡಿಸಿದ ರಾಜ್ಯ ಸರ್ಕಾರ
ವಿಧಾನಸೌಧ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Jul 08, 2021 | 10:36 PM

ಬೆಂಗಳೂರು:  ಕರ್ನಾಟಕ ಸರ್ಕಾರ 1977 ಕರ್ನಾಟಕ ನಾಗರಿಕ ಸೇವೆ (ಸಾಮಾನ್ಯ ನೇಮಕಾತಿ) ನಿಯಮಾವಳಿಗೆ ಮತ್ತಷ್ಟು ತಿದ್ದುಪಡಿಗಳನ್ನು ಮಾಡಲು ಒಂದು ಅಧಿಸೂಚನೆಯನ್ನು ಗುರುವಾರ, 7 ಜುಲೈ 2021 ರಂದು ಹೊರಡಿಸಿದೆ. ಕರ್ನಾಟಕ ರಾಜ್ಯ ಸಿವಿಲ್ ಅಧಿನಿಯಮ 1978 (1990ರ ಅಧಿನಿಯಮ ಸಂಖ್ಯೆ 14) 3ನೇ ಪ್ರಕರಣದ ಒಂದನೇ ಉಪಪ್ರಕರಣವನ್ನು ಓದಿಕೊಂಡಂತೆ ಪದುತ್ತರವಾದ ಅಧಿಕಾರವನ್ನು ಚಲಾಯಿಸಿ ಕೆಳಕಂಡ ನಿಯಮಗಳನ್ನು ರಚಿಸಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ನಿಯಮಗಳು:

ಹೆಸರು ಮತ್ತು ಪ್ರಾರಂಭ:

i) ಈ ನಿಯಮಗಳು ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ತಿದ್ದುಪಡಿ ನಿಯಮಗಳು, 2021 ಅಂತ ಕರೆಯಬೇಕೆಂದು ಅಧಿಸೂಚನೆಯಲ್ಲಿ ಹೆಳಲಾಗಿದೆ.

ii) ಸದರಿ ನಿಯಮಗಳು ಅಧಿಕೃತವಾದ ರಾಜ್ಯಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ ಜಾರಿಗೆ ತರತಕ್ಕದ್ದು ಎಂದು ಅಧಿಸೂಚನೆ ತಿಳಿಸುತ್ತದೆ.

2) ನಿಯಮ 9ಕ್ಕೆ ತಿದ್ದುಪಡಿ:

ಕರ್ನಾಟಕ ನಾಗರಿಕ ಸೇವೆ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 9 ರ ಉಪನಿಯಮ (1ಎಎ)ರಲ್ಲಿ

i) ಕರ್ನಾಟಕ ಸಿವಿಲ್ ಸೇವೆ (ಸಾಮಾನ್ಯ ನೇಮಕಾತಿ) (57ನೇ ತಿದ್ದುಪಡಿ) ನಿಯಮಗಳು 2000ರಲ್ಲಿ ಪ್ರಾರಂಭವಾದ ದಿನಾಂಕದಿಂದ20 ವರ್ಷಗಳ ಅವಧಿವರೆಗೆ ಎಂಬ ಪದಗಳು, ಸಂಖ್ಯೆಗಳು ಹಾಗೂ ಆವರಣದ ಬದಲಾಗಿ ದಿನಾಂಕ 23.11.2020ರಿಂದ ಜಾರಿಗೆ ಬರುವ ಹಾಗೆ ಇಪ್ಪತ್ತೈದು ವರ್ಷಗಳ ಅವಧಿವರೆಗೆ ಎಂಬ ಪದಗಳು, ಸಂಖ್ಯೆಗಳು ಹಾಗೂ ಆವರಣಗಳನ್ನು ಪ್ರಸ್ತಾಪಿಸತಕ್ಕದ್ದು ಎಂದು ಅಧಿಸೂಚನೆ ಹೇಳುತ್ತದೆ ಮತ್ತು

ii) ಮೂರನೇ ಪರಂತುಕದ ನಂತರ ವಿವರಣೆಯ ಮೊದಲು ಕೆಳಕಂಡ ಪರಂತುಕವನ್ನು ಸೇರಿಸತಕ್ಕದ್ದು ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

ಮತ್ತು ಪರಂತು ಯೋಜನಾ ನಿರಾಶ್ರಿತರ ವ್ಯಕ್ತಿಗಳು, ಕುಟುಂಬದ ಸದಸ್ಯರಿಗಾಗಿ ಮೀಸಲಿರಿಸಿದ ಐದು ಶೇಕಡಾವಾರು ಸಂಖ್ಯೆಗೆ ಸೂಕ್ತ ಅಭ್ಯರ್ಥಿಗಳು ಸಾಕಷ್ಟು ಸಂಖ್ಯೆಯಲ್ಲಿ ಲಭ್ಯವಾಗದಿದ್ದರೆ ಅಂಥ ರಿಕ್ತ ಸ್ಥಾನಗಳನ್ನು ಅದೇ ಪ್ರವರ್ಗಕ್ಕೆ ಸೇರಿದ ಇದರ ಅಭ್ಯರ್ಥಿಗಳಿಂದ ಭರ್ತಿ ಮಾಡಬೇಕು ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

ರಾಜ್ಯಪಾಲರ ಆದೇಶದ ಅನುಸಾರ, ಹೇಮಲತಾ ಜಿ, ಅಧೀನ ಕಾರ್ಯದರ್ಶಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಅವರು ಅಧಿಸೂಚನೆಗೆ ಸಹಿ ಹಾಕಿರುತ್ತಾರೆ.

ಇದನ್ನೂ ಓದಿ: KPSCಯಲ್ಲಿ ಇನ್ನೂ ನಡೀತಿದೆಯಾ ಪೋಸ್ಟಿಂಗ್ ಡೀಲಿಂಗ್?.. ಹುದ್ದೆಗಾಗಿ ಮನಿ ಡೀಲಿಂಗ್ ಆಡಿಯೋ ಆಯ್ತು ಫುಲ್​ ವೈರಲ್

ಇದನ್ನೂ ಓದಿ: KAS Mains ಪರೀಕ್ಷೆ ಮುಂದೂಡಿದ KPSC, ಆದ್ರೆ ವಾಣಿಜ್ಯ ವಿದ್ಯಾರ್ಥಿಗಳಿಗೆ ತಪ್ಪಲಿಲ್ಲ ಸಂಕಟ

Published On - 8:49 pm, Thu, 8 July 21

ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್