KPSCಯಲ್ಲಿ ಇನ್ನೂ ನಡೀತಿದೆಯಾ ಪೋಸ್ಟಿಂಗ್ ಡೀಲಿಂಗ್?.. ಹುದ್ದೆಗಾಗಿ ಮನಿ ಡೀಲಿಂಗ್ ಆಡಿಯೋ ಆಯ್ತು ಫುಲ್ ವೈರಲ್
ಇತ್ತೀಚೆಗೆ ಎಫ್ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವಾಗಿ ಸುದ್ದಿಯಲ್ಲಿದ್ದ ಕೆಪಿಎಸ್ಸಿಯಲ್ಲಿ ಪೋಸ್ಟಿಂಗ್ಗಳಿಗಾಗಿ ಇನ್ನೂ ಡೀಲಿಂಗ್ ನಡೀತಿದೆಯಾ ಅನ್ನೋ ಪ್ರಶ್ನೆ ಹುಟ್ಟಿದೆ. ಇದಕ್ಕೆ ಪೂರಕವೆಂಬಂತೆ ಕೆಪಿಎಸ್‌ಸಿ ಸದಸ್ಯ ರಘುನಂದನ್ ರಾಮಣ್ಣ ಅವರ ಹೆಸರು ಬಳಸಿಕೊಂಡು ಕ್ಲಾಸ್ 1 ಅಥವಾ ಕ್ಲಾಸ್ 2 ಹುದ್ದೆ ಕೊಡಿಸಲು ಡೀಲ್ ನಡೆಸಲಾಗಿದೆ ಎಂಬ ಆಡಿಯೋ ಇದೀಗ ಜಿಲ್ಲೆಯಲ್ಲಿ ಸಿಕ್ಕಾಪಟ್ಟೆ ರೌಂಡ್ಸ್ ಹೊಡೆಯುತ್ತಿದೆ.
ರಾಮನಗರ: ಇತ್ತೀಚೆಗೆ ಎಫ್ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವಾಗಿ ಸುದ್ದಿಯಲ್ಲಿದ್ದ ಕೆಪಿಎಸ್ಸಿಯಲ್ಲಿ ಪೋಸ್ಟಿಂಗ್ಗಳಿಗಾಗಿ ಇನ್ನೂ ಡೀಲಿಂಗ್ ನಡೀತಿದೆಯಾ ಅನ್ನೋ ಪ್ರಶ್ನೆ ಹುಟ್ಟಿದೆ. ಇದಕ್ಕೆ ಪೂರಕವೆಂಬಂತೆ ಕೆಪಿಎಸ್‌ಸಿ ಸದಸ್ಯ ರಘುನಂದನ್ ರಾಮಣ್ಣ ಅವರ ಹೆಸರು ಬಳಸಿಕೊಂಡು ಕ್ಲಾಸ್ 1 ಅಥವಾ ಕ್ಲಾಸ್ 2 ಹುದ್ದೆ ಕೊಡಿಸಲು ಡೀಲ್ ನಡೆಸಲಾಗಿದೆ ಎಂಬ ಆಡಿಯೋ ಇದೀಗ ಜಿಲ್ಲೆಯಲ್ಲಿ ಸಿಕ್ಕಾಪಟ್ಟೆ ರೌಂಡ್ಸ್ ಹೊಡೆಯುತ್ತಿದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿರೋ ಈ ಮನಿ ಡೀಲಿಂಗ್ ಆಡಿಯೋ, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇದರಲ್ಲಿ, ಕೆಪಿಎಸ್‌ಸಿ ಸದಸ್ಯ ರಘುನಂದನ್ ರಾಮಣ್ಣ ಅವರ ಹೆಸರು ಪ್ರಸ್ತಾಪವಾಗಿರುವುದು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಅಂದ ಹಾಗೆ, ಜಿಲ್ಲೆಯ ಚನ್ನಪಟ್ಟಣದ ಕಾಂಗ್ರೆಸ್ ಮುಖಂಡರೊಬ್ಬರು ಮತ್ತು ಕೆಪಿಎಸ್‌ಸಿ ಹುದ್ದೆ ಅಕಾಂಕ್ಷಿಯ ತಂದೆ ವೆಂಕಟೇಗೌಡ ನಡುವಿನ ಆಡಿಯೋ ಇದಾಗಿದೆ ಎಂದು ಹೇಳಲಾಗಿದೆ. ಜಿಲ್ಲೆಯಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುವ ಆ ಆಡಿಯೋದಲ್ಲಿ ಕೆಪಿಎಸ್‌ಸಿ ಹುದ್ದೆ ಆಕಾಂಕ್ಷಿಯ ತಂದೆ ವೆಂಕಟೇಗೌಡ ತಮ್ಮ ಮಗನ ಹುದ್ದೆಗಾಗಿ ಚನ್ನಪಟ್ಟಣದ ಕಾಂಗ್ರೆಸ್ ಮುಖಂಡ ಪಿ.ಡಿ.ರಾಜು ಹಾಗೂ ಪ್ರಮೋದ್ ಎಂಬುವವರಿಗೆ 1 ಕೋಟಿ ಹಣ ಕೊಟ್ಟಿದ್ದಾರೆ ಎಂದು ಆಡಿಯೋದಲ್ಲಿ ಹೇಳಿರುವುದು ಕಂಡುಬಂದಿದೆ. ಜೊತೆಗೆ, ಆಡಿಯೋದಲ್ಲಿ ಕಾಂಗ್ರೆಸ್ ಮುಖಂಡ, ಕೆಪಿಸಿಸಿ ಸದಸ್ಯ ರಘುನಂದನ್ ರಾಮಣ್ಣ ಹೆಸರು ಪ್ರಸ್ತಾಪವಾಗಿರುವುದು ಸಹ ಕಂಡುಬಂದಿದೆ.
ಸಂಭಾಷಣೆಯ ವಿವರ ಹೀಗಿದೆ ಕಾಂಗ್ರೆಸ್ ಮುಖಂಡ: ನಮಸ್ಕಾರ ವೆಂಕಟೇಗೌಡರಿಗೆ ವೆಂಕಟೇಗೌಡ: ನಮಸ್ಕಾರ ಬುದ್ಧಿ ಕಾಂಗ್ರೆಸ್ ಮುಖಂಡ: ಈ ಮಧ್ಯೆ ಬ್ಯುಸಿ ಆದೆ. ಎಸಿ ಹಾಗೂ ರಿಟೈರ್ಡ್ ಡಿಸಿ ಇದ್ರು. ಅದೇನು ಬಂತಾ? ಎರಡು ಮೂರು ಸಾರಿ ಹೇಳಿದ್ರಿ. ಹೀಗೆ ಇದೇ ಎಂದು. ವೆಂಕಟೇಗೌಡ: ನಿನ್ನೆ, ಇವತ್ತು ಅವರು ಊರಿನಲ್ಲಿ ಇರಲಿಲ್ಲವಂತೆ ಕಾಂಗ್ರೆಸ್ ಮುಖಂಡ: ಯಾರು? ವೆಂಕಟೇಗೌಡ: ರಘುನಂದನ್, ಆಕ್ಚ್ಯುಲಿ ಅವರು ಇಲ್ಲ. ಯಾರದೋ ಮುಖಾಂತರ ಗೊತ್ತಾಯ್ತು. ಬರಲಿ ಅಂತಾ ಹೇಳುತ್ತಾರೆ ಕಾಂಗ್ರೆಸ್ ಮುಖಂಡ: ಅವರು ಏನು ಹೇಳುತ್ತಾರೆ ಎಂಬ ವಿಚಾರ ಗೊತ್ತಾಯ್ತು. ಕ್ಲಾಸ್ 2 ಸೆಲೆಕ್ಟ್ ಮಾಡಿದ್ದೇವೆ ಅಲ್ಲ, ಅದಕ್ಕೆ 50 ಲಕ್ಷ ಆಯ್ತು. ಅದಕ್ಕೆ ಕೊಟ್ಟಿದ್ದೇವೆ ಎನ್ನುತ್ತಾರೆ. ವೆಂಕಟೇಗೌಡ: ಯಾರಂತೇ ಇದನ್ನು ಹೇಳಿದ್ದು? ಕಾಂಗ್ರೆಸ್ ಮುಖಂಡ: ಮೊದಲೇ ಮಾತಾಡಿದ್ರೀ ಅಲ್ವಾ.. ಏನಂತಾ ಮಾತನಾಡಿದ್ರಿ? ವೆಂಕಟೇಗೌಡ: ಇಲ್ಲ ಇಲ್ಲ. ರಾಜು ಹೇಳಿದ್ದಾನೆ. ಫುಲ್ ಕೊಡೋಕೆ ಒಪ್ಪಿಕೊಂಡಿದ್ದಾನೆ. ಕೊಡ್ತಾರೆ ಅಂತಾ ಹೇಳಿದ್ದಾನೆ ಕಾಂಗ್ರೆಸ್ ಮುಖಂಡ: ಒಂದು ಕೋಟಿ ಕೊಟ್ಟರಲ್ಲ. ಕ್ಲಾಸ್ 1 ಆದ್ರೆ ಮಾತ್ರನಾ? ವೆಂಕಟೇಗೌಡ: ಹೌದು ಹೌದು. ಕ್ಲಾಸ್ 1 ಆದ್ರೆ ಮಾತ್ರ ಅಂತಾ ಹೇಳಿರೋದು. ಕೆಲಸ ಇಲ್ಲದೇ ಇರೋರಿಗೆ ಆದ್ರೆ ಕ್ಲಾಸ್ 2 ಅಂತಾ ಹೇಳಿರೋದು. ಆದ್ರೆ ಅವರಿಗೆ ಆಗಲಿಲ್ಲ. ಕಾಂಗ್ರೆಸ್ ಮುಖಂಡ: ಹೌದಾ? ವೆಂಕಟೇಗೌಡ: ಇಲ್ಲ ಸಾರ್.. ಅಣ್ಣ ಅವರು ಒಪ್ಪಿಕೊಂಡಿದ್ದಾರೆ. ಅವರು ಕೊಟ್ಟಾಗ ಅವರ ಬಳಿ ಪಡೆದು ಕೊಡ್ತಿವಿ ಅಂತಾ ಹೇಳಿದ್ದಾನೆ. ಅದಕ್ಕಾಗಿ ಇಷ್ಟು ದಿನ ಸುಮ್ಮನೆ ಇದ್ವಿ ಕಾಂಗ್ರೆಸ್ ಮುಖಂಡ: ಶನಿವಾರ ಅಂತಾ ಹೇಳಿದ್ರಿ ವೆಂಕಟೇಗೌಡ: ಶನಿವಾರ ಬರಲಿಲ್ಲ. ಭಾನುವಾರ ಎಲ್ಲೋ ಮೈಸೂರಿಗೆ ಹೋದರಂತೆ.. ಇನ್ನೂ ಬಂದಿಲ್ಲ ಕಾಂಗ್ರೆಸ್ ಮುಖಂಡ: ನಿಮ್ಮ ಬಳಿ ಹಣ ಪಡೆದು ಹೋದೋರೂ ರಘುನಂದನ್ ರಾಮಣ್ಣನಾ ಅಥವಾ ಪಿ.ಡಿ ರಾಜುನಾ? ವೆಂಕಟೇಗೌಡ: ಪಿ.ಡಿ ರಾಜು.. ರಘುನಂದನ್ ರಾಮಣ್ಣ ಹತ್ತಿರ ದುಡ್ಡು ತಗೊಂಡು ಹೋಗಲಿಲ್ಲ ಕಾಂಗ್ರೆಸ್ ಮುಖಂಡ: ನಿಮ್ಮ ಬಳಿ ಹಣ ಪಡೆದಿದ್ದು ಯಾರು? ವೆಂಕಟೇಗೌಡ: ಪಿ.ಡಿ ರಾಜು ಹಾಗೂ ಪ್ರಮೋದ್ ಕಾಂಗ್ರೆಸ್ ಮುಖಂಡ: ಇಬ್ಬರು ಬಂದು ದುಡ್ಡು ಪಡೆದು ಹೋದ್ರಾ? ವೆಂಕಟೇಗೌಡ: ಹೌದು.. ಅವರು ಇಲ್ಲ ಅನ್ನೋ ಹಾಗೇ ಇಲ್ಲ. 50, ಐವತ್ತು ಅಂತಾ ಎರಡು ಸಾರಿ ಹಣ ಕೊಟ್ಟೆ. ಅವರು ಇಲ್ಲ ಅನ್ನೋ ಹಾಗೇ ಇಲ್ಲ. ಅವರು ವಾಪಾಸ್ ಇಟ್ಟುಕೊಂಡಿದ್ದಾರೆ. ಮತ್ತೆ ಕೊಡ್ತಾರೆ, ತಂದು ಕೊಡ್ತಿವಿ ಅಂತಾ ಹೇಳಿದ್ದಾರೆ. ಹೀಗಾಗಿ, ರಘುನಂದನ್ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಕಾಂಗ್ರೆಸ್ ಮುಖಂಡ: ರಘುಗೆ ಕೊಟ್ಟಿಲ್ಲ ಅಂದ್ರೆ, ನೀವು ಕೇಳೋ ಹಾಗೆ ಇಲ್ಲ.. ವೆಂಕಟೇಗೌಡ: ನಾವು ಅವರ ಹತ್ತಿರ ಹೋಗೋ ಹಾಗೇ ಇಲ್ಲ. ಇವನು ಹೋಗು ಅಂದಿದ್ದಕ್ಕೆ ಹೋಗಿದ್ವಿ ಕಾಂಗ್ರೆಸ್ ಮುಖಂಡ: ಆದ್ರು ಆರು ತಿಂಗಳು ಸುತ್ತಿದ್ರು ವೆಂಕಟೇಗೌಡ: ಅಲ್ಲ ಅವನು ನೀವು ಹೋಗಿ ಇಷ್ಟು ಹಣ ಬರುತ್ತೆ ಅಂತಾ ರಿಕ್ವೆಸ್ಟ್ ಮಾಡಿದ. ಅಮೌಂಟ್ ಬರುತ್ತೆ ಅಂತಾ ಹೇಳಿದ್ದಕ್ಕೆ ನಾವು ಅವರು ಹತ್ತಿರ ಹೋದ್ವಿ. ಕೊಡದಿದ್ರು ಹೋದ್ವಿ, ಆಯ್ತು ನೋಡ್ತಿನಿ ಅಂತಾ ಹೇಳಿದ್ರು. ಮತ್ತೊಂದು ಸಲ ಪಿ.ಡಿ ರಾಜು ಹತ್ತಿರ ಡೀಲ್ ಮಾಡಿಕೊಳ್ಳಿ. ನನ್ನ ಹತ್ತಿರ ಯಾವುದೇ ಹಣ ಇಲ್ಲ ಅಂತಾ ಹೇಳಿದ್ರು. ರಾಜುಗೆ ಹೀಗೆ ಹೇಳಿದ ಮೇಲೆ ನಡುಕ ಹುಟ್ಟಿದೆ. ಕಾಂಗ್ರೆಸ್ ಮುಖಂಡ: ಮತ್ತೆ ಇವರು ಮಿಸ್ಯೂಸ್ ಮಾಡಿಕೊಳ್ಳಲಿಲ್ವ? ಅವರು ನನಗೆ ಬಂದಿಲ್ಲ.. ನನಗೆ ಬಂದಷ್ಟು ಕೊಟ್ಟಿದ್ದೇನೆ ಎಂದ ಮೇಲೆ. 50 ಲಕ್ಷ ಇವರೇ ಯೂಸ್ ಮಾಡಿಕೊಂಡಿದ್ದಾರಾ? ವೆಂಕಟೇಗೌಡ: ನಾವು ಕ್ಲಿಯರ್ ಆಗಿ ಹೇಳಿದ್ವಿ. ಕ್ಲಾಸ್ 1, ಕ್ಲಾಸ್ 2 ವಿಷಯವನ್ನ ರಾಜು ಹತ್ತಿರ ಮಾತನಾಡಿದ್ದೇ, ಆದರೆ ರಘು ಹತ್ತಿರ ಮಾತನಾಡಿರಲಿಲ್ಲ. ನಾವು ಹೋಗಿ ಅಪ್ರೋಚ್ ಮಾಡಿ, ನಮ್ಮ ಮಕ್ಕಳು ಹೀಗೆ ಇದ್ದಾರೆ ಅಂತಾ ಹೇಳಿ ಕೈಮುಗಿದು ಬಂದಿದ್ದೇವೆ ಅಷ್ಟೇ. ಇಂಟರ್ವ್ಯೂಗೂ ಮುಂಚೆ. ಆದ್ರೆ ದುಡ್ಡು ಕಾಸಿನ ವಿಚಾರ ರಾಜುದೇ. ನೋಡೊನಾ ಎಷ್ಟು ಕೊಡುತ್ತಾರೆ. ಆತನನ್ನು ಬಿಡುವುದಿಲ್ಲ ಅಂತಾ ಹೇಳಿದ್ದೇನೆ ಕಾಂಗ್ರೆಸ್ ಮುಖಂಡ: ರಘುನಂದನ್ ರಾಮಣ್ಣಗೆ 50 ಕೊಟ್ಟಿದ್ದು, ವಾಪಸ್. ಅವರಿಗೆ ಎಲ್ಲಿ ಕಾಯುತ್ತೀರೀ? ವೆಂಕಟೇಗೌಡ: ಯಾರೋ ಮಧ್ಯದವರು, ನಾನು ರಘುನಂದನ್ ಹತ್ತಿರ ಕರೆದುಕೊಂಡು ಹೋಗ್ತೇನೆ ಅಂತಾ ಹೇಳಿದ್ರು. ನೀವು ಬರಬೇಡಿ, ನಾವೇ ಕೇಳಿಕೊಂಡು ಬರುತ್ತೇವೆ ಅಂತಾ. ಆನಂತರ, ರಾಜು ಹತ್ತಿರ ವಸೂಲಿ ಮಾಡೋಣಾ ಅಂದಿದ್ರು. ಹೀಗಾಗಿ, ಒಂದು ಫೈನಲ್ ವರ್ಡ್ಗೆ ಕಾಯುತ್ತಿದ್ದೇನೆ. ಬೆಂಗಳೂರಿಗೆ ಬಂದಿದ್ದಾರಾ? ಕಾಂಗ್ರೆಸ್ ಮುಖಂಡ: ಬೆಂಗಳೂರಿಗೆ ಬಂದಿಲ್ಲ. ಬಂದಾಗ ಕಾಲ್ ಮಾಡುತ್ತೇನೆ.
ಇನ್ನು ಮೊಬೈಲ್ ಮೂಲಕ ಇಷ್ಟೆಲ್ಲಾ ಮಾತನಾಡಿರೋ ಆಡಿಯೋವನ್ನ ಕಾಂಗ್ರೆಸ್ ಮುಖಂಡರೇ ಸಾಮಾಜಿಕ ಜಾಣತಾಣಗಳಲ್ಲಿ ಹರಿಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಕ್ಲಾಸ್ 1 ಹಾಗೂ ಕ್ಲಾಸ್ 2 ಹುದ್ದೆಗಳಿಗೆ ಕೋಟಿ ಡೀಲ್ ನಡೆಸಲಾಗಿದೆ ಎಂಬ ಮಾಹಿತಿ ಇರುವ ಈ ಆಡಿಯೋ ಇದೀಗ ಜಿಲ್ಲೆಯಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಸರಿಯಾಗಿ ತನಿಖೆ ನಡೆದರೇ ಮಾತ್ರ ಸತ್ಯಾಂತ ಹೊರಬೀಳಲಿದೆ.
ಇದನ್ನೂ ಓದಿ: ಗೋವಿಂದಪುರ ಡ್ರಗ್ಸ್ ಕೇಸ್: ಕೆಂಪೇಗೌಡ ಸಿನಿಮಾ ನಿರ್ಮಾಪಕ ಶಂಕರ್ ಗೌಡ ಬಂಧನ