ಗೋವಿಂದಪುರ ಡ್ರಗ್ಸ್ ಕೇಸ್: ಕೆಂಪೇಗೌಡ ಸಿನಿಮಾ ನಿರ್ಮಾಪಕ ಶಂಕರ್ ಗೌಡ ಬಂಧನ
ಡ್ರಗ್ಸ್ ಪ್ರಕರಣದಲ್ಲಿ ನಿರ್ಮಾಪಕ ಶಂಕರ್ ಗೌಡ ಬಂಧನವಾಗಿದೆ. ಗೋವಿಂದಪುರ ಡ್ರಗ್ಸ್ ಕೇಸ್‌ನಲ್ಲಿ ಪೊಲೀಸರಿಂದ ಶಂಕರ್ ಗೌಡ ಅರೆಸ್ಟ್ ಆಗಿದ್ದಾರೆ. ಇದಲ್ಲದೆ, NDPS ಌಕ್ಟ್ 25, 27A, 29ರಡಿ ಮೊಕದ್ದಮೆ ದಾಖಲಾಗಿದೆ. ಮಾ.8ರಂದು ಶಂಕರ್ ಗೌಡ ನಿವಾಸದ ಮೇಲೆ ದಾಳಿ ನಡೆಸಲಾಗಿತ್ತು.
ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ನಿರ್ಮಾಪಕ ಶಂಕರ್ ಗೌಡ ಬಂಧನವಾಗಿದೆ. ಗೋವಿಂದಪುರ ಡ್ರಗ್ಸ್ ಕೇಸ್‌ನಲ್ಲಿ ಪೊಲೀಸರಿಂದ ಶಂಕರ್ ಗೌಡ ಅರೆಸ್ಟ್ ಆಗಿದ್ದಾರೆ. ಇದಲ್ಲದೆ, NDPS ಌಕ್ಟ್ 25, 27A, 29ರಡಿ ಮೊಕದ್ದಮೆ ದಾಖಲಾಗಿದೆ. ಮಾ.8ರಂದು ಶಂಕರ್ ಗೌಡ ನಿವಾಸದ ಮೇಲೆ ದಾಳಿ ನಡೆಸಲಾಗಿತ್ತು. ಗೋವಿಂದಪುರ ಪೊಲೀಸರು ದಾಳಿ ನಡೆಸಿ ಪರಿಶೀಲನೆ ಸಹ ನಡೆಸಿದ್ದರು. ಇದಲ್ಲದೆ, ನಿರ್ಮಾಪಕರ ಆಪ್ತರಿಗೂ ನೋಟಿಸ್ ನೀಡಿ ವಿಚಾರಣೆ ನಡೆಸಲಾಗಿತ್ತು.
ಇದೀಗ, NDPS ಌಕ್ಟ್ ಅಡಿ ಮೊಕದ್ದಮೆ ದಾಖಲಾಗಿದೆ. NDPS ಌಕ್ಟ್ 25(ಅಕ್ರಮ ಚಟುವಟಿಕೆಗೆ ಸ್ಥಳಾವಕಾಶ); NDPS ಌಕ್ಟ್ 27A(ಡ್ರಗ್ಸ್ ಪೆಡ್ಲರ್ಸ್‌ಗೆ ನೆರವು, ಡ್ರಗ್ಸ್ ಪೆಡ್ಲರ್ಸ್‌ಗೆ ಪ್ರತ್ಯಕ್ಷ, ಪರೋಕ್ಷವಾಗಿ ನೆರವು) ಹಾಗೂ ಌಕ್ಟ್ 29(ಕ್ರಿಮಿನಲ್ ಉದ್ದೇಶದಿಂದ ಪಾರ್ಟಿ ಆಯೋಜನೆ) ಅಡಿ ಮೊಕದ್ದಮೆ ದಾಖಲಾಗಿದೆ. ಇದೀಗ, ಶಂಕರ್ ಗೌಡಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಈ ಕುರಿತು, ಕೋರಮಂಗಲದ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರು ಆದೇಶ ನೀಡಿದ್ದಾರೆ.
ಕೆಂಪೇಗೌಡ ಸಿನಿಮಾದ ನಿರ್ಮಾಪಕ ಶಂಕರ್ ಗೌಡ ವಿದೇಶಿ ಡ್ರಗ್ ಪೆಡ್ಲರ್ ಜೊತೆ ನಂಟು ಹೊಂದಿದ್ದ ಆರೋಪವಿತ್ತು. ಹಾಗಾಗಿ, ಮಹತ್ವದ ಮಾಹಿತಿಗಳನ್ನ ಕಲೆ ಹಾಕಿ ಪೊಲೀಸರಿಂದ ದಾಳಿ ನಡೆದಿತ್ತು. ಸರ್ಚ್ ವಾರಂಟ್ ಪಡೆದು ದಾಳಿ ನಡೆಸಿರುವ ಪೊಲೀಸರು 4 ಅಂತಸ್ತಿನ ಕಟ್ಟಡದಲ್ಲಿ ಪರಿಶೀಲನೆ ನಡೆಸಿದ್ದರು. ಗೋವಿಂದಪುರ ಠಾಣೆಯ ಇನ್ಸ್‌ಪೆಕ್ಟರ್ ಪ್ರಕಾಶ್ ನೇತೃತ್ವದಲ್ಲಿ ದಾಳಿ ನಡೆದಿತ್ತು.
ಈ ಹಿಂದೆ, ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರು ಬಿಗ್ ಬಾಸ್ ಖ್ಯಾತಿಯ ಮಸ್ತಾನ್ ಚಂದ್ರನನ್ನ ವಶಕ್ಕೆ ಪಡೆದಿದ್ದರು. ವಿಚಾರಣೆ ವೇಳೆ ಶಂಕರ್ ಡ್ರಗ್ಸ್ ತರಿಸಿಕೊಳ್ಳುತ್ತಿದ್ದರು ಎಂಬುದರ ಬಗ್ಗೆ ಮಸ್ತಾನ್ ಬಾಯ್ಬಿಟ್ಟಿದ್ದ. ಮಸ್ತಾನ್ ಮಾಹಿತಿ ಮೇರೆಗೆ ಡಾಲರ್ಸ್ ಕಾಲೋನಿಯ ಶಂಕರ್ ಕಚೇರಿ ಮೇಲೆ ದಾಳಿ ನಡೆದಿತ್ತು.
ಇದಲ್ಲದೆ, ನಿರ್ಮಾಪಕ ಶಂಕರ್ಗೌಡ ಕಚೇರಿ ಮೇಲೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಟಾಲಿವುಡ್ ನಟ ತನೀಶ್ ಪೊಲೀಸ್ ಠಾಣೆಗೆ ಹಾಜರಾದರು. ಬೆಂಗಳೂರಿನ ಗೋವಿಂದಪುರ ಪೊಲೀಸ್ ಠಾಣೆಗೆ ಹಾಜರಾದರು. ಶಂಕರ್ಗೌಡ ಜೊತೆ ನಿಕಟ ಸಂಪರ್ಕ ಹೊಂದಿದ್ದ ನಟ ತನೀಶ್ ಶಂಕರ್ಗೌಡ ಆಯೋಜಿಸುತ್ತಿದ್ದ ಸಾಕಷ್ಟು ಪಾರ್ಟಿಗಳಲ್ಲಿ ಭಾಗಿಯಾಗಿದ್ದರು. ಹೀಗಾಗಿ, ಮಾ.12ರಂದು ತನೀಶ್ಗೆ ಪೊಲೀಸರು ನೋಟಿಸ್ ನೀಡಿದ್ದರು. ಅಂತೆಯೇ, ಟಾಲಿವುಡ್ ನಟ ತನೀಶ್ ಇಂದು ಠಾಣೆಗೆ ಹಾಜರಾಗಿದ್ದರು.
ಇದನ್ನೂ ಓದಿ: ಅಜ್ಜಿ ಮನೆಯಲ್ಲಿದ್ದ ಬಾಲಕಿಗೆ ಆಮಿಷವೊಡ್ಡಿ ಟೆನಿಸ್ ಕೋಚ್ನಿಂದ ಅತ್ಯಾಚಾರ
Published On - 10:10 pm, Tue, 23 March 21