ಪೆಟ್ರೋಲ್ ಹಾಕಿಸಿಕೊಂಡು ಹಣ ನೀಡದೆ ಹಲ್ಲೆ; ಸಿಸಿ ಕ್ಯಾಮರಾ ದೃಶ್ಯ ಆಧರಿಸಿ ನಾಲ್ವರ ಬಂಧನ

ಫೆಬ್ರವರಿ 24 ರಂದು ಈ ನಾಲ್ವರು ಕುಡಿದು 300 ರೂಪಾಯಿ ಪೆಟ್ರೋಲ್ ಹಣ‌ ನೀಡದೆ, ಮಾರತ್ ಹಳ್ಳಿ ಹೆಚ್​ಪಿ ಪೆಟ್ರೋಲ್ ಬಂಕ್​ನ ಮಾಲೀಕ ದಿಲೀಪ್ ಮೇಲೆ ಹಲ್ಲೆ ಮಾಡಿದ್ದರು. ಹೀಗಾಗಿ ದಿಲೀಪ್ ಮಾರತ್​ ಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು. ಸಿಸಿ ಟಿವಿಯಲ್ಲಿನ ಕಾರ್ ನಂಬರ್ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಪೆಟ್ರೋಲ್ ಹಾಕಿಸಿಕೊಂಡು ಹಣ ನೀಡದೆ ಹಲ್ಲೆ; ಸಿಸಿ ಕ್ಯಾಮರಾ ದೃಶ್ಯ ಆಧರಿಸಿ ನಾಲ್ವರ ಬಂಧನ
ಪೆಟ್ರೋಲ್ ಹಾಕಿಸಿಕೊಂಡು ಹಣ ನೀಡದೆ ಹಲ್ಲೆ ಮಾಡುತ್ತಿರುವ ದೃಶ್ಯ
Follow us
preethi shettigar
| Updated By: ಸಾಧು ಶ್ರೀನಾಥ್​

Updated on: Mar 23, 2021 | 1:29 PM

ಬೆಂಗಳೂರು: ಪೆಟ್ರೋಲ್ ಹಾಕಿಸಿಕೊಂಡು ಹಣ ನೀಡದೆ ಕ್ಯಾಷಿಯರ್ ಮೇಲೆ ಹಲ್ಲೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಾರತ್ತಹಳ್ಳಿ ಠಾಣೆಯ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೋಜ್, ಮಣಿ, ವಿವೇಕ್, ಪವನ್​ರನ್ನು ಬಂಧಿಸಿದ್ದಾರೆ. ಫೆಬ್ರವರಿ 24ರಂದು ಮಾರತ್ತಹಳ್ಳಿಯಲ್ಲಿ ಹಲ್ಲೆ ನಡೆಸಲಾಗಿದ್ದು, ಸಿಸಿಟಿವಿ ದೃಶ್ಯ ಆಧರಿಸಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

ಫೆಬ್ರವರಿ 24 ರಂದು ಈ ನಾಲ್ವರು ಕುಡಿದು 300 ರೂಪಾಯಿ ಪೆಟ್ರೋಲ್ ಹಣ‌ ನೀಡದೆ, ಮಾರತ್ ಹಳ್ಳಿ ಹೆಚ್​ಪಿ ಪೆಟ್ರೋಲ್ ಬಂಕ್​ನ ಮಾಲೀಕ ದಿಲೀಪ್ ಮೇಲೆ ಹಲ್ಲೆ ಮಾಡಿದ್ದರು. ಹೀಗಾಗಿ ದಿಲೀಪ್ ಮಾರತ್​ ಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು. ಸಿಸಿ ಟಿವಿಯಲ್ಲಿನ ಕಾರ್ ನಂಬರ್ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

petrol bunk attack

ಕ್ಯಾಶಿಯರ್ ಮೇಲೆ ಹಲ್ಲೆ ಮಾಡುತ್ತಿರುವ ದೃಶ್ಯ

petrol bunk attack

ಸಿಸಿ ಕ್ಯಾಮರಾದದಲ್ಲಿ ಹಲ್ಲೆ ದೃಶ್ಯ ಸೆರೆ

ಹುಬ್ಬಳ್ಳಿಯಲ್ಲಿ ಡ್ರಗ್ಸ್ ಪೆಡ್ಲರ್ ಸೇರಿ ಇಬ್ಬರನ್ನು ಬಂಧಿಸಿದ ಸಿಸಿಬಿ ಪೊಲೀಸರು: ಮುಂಬೈ ಟು ಹುಬ್ಬಳ್ಳಿ ಡ್ರಗ್ಸ್ ಜಾಲವನ್ನು ಬೇಧಿಸಿದ ಸಿಸಿಬಿ ಪೊಲೀಸರು, ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ್ದಾರೆ. ಒರ್ವ ಡ್ರಗ್ ಪೆಡ್ಲರ್ ಸೇರಿದಂತೆ ಇಬ್ಬರ ಅರೆಸ್ಟ್ ಮಾಡಿದ ಸಿಸಿಬಿ ಅಪಾರ ಪ್ರಮಾಣದಲ್ಲಿ ಡ್ರಗ್ಸ್ ಜಪ್ತಿ ಮಾಡಿದ್ದಾರೆ. ಪೆಡ್ಲರ್ ಅಜಯರಾಮ್ ವೆಂಕಟೇಶ್ ರಾವ್ ಮತ್ತು ಸಿಮ್ರಾನ್ ಜಿತ್ ಕೌರ್ ಎಂಬ ಇಬ್ಬರನ್ನು ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ಅಜಯ್ ರಾವ್ ಮುಂಬಯಿಯನ ಅಂದೇರಿ ನಿವಾಸಿ ಪೆಡ್ಲರ್ ಆಗಿದ್ದು, ಇವನಿಂದ ಡ್ರಗ್ಸ್ ತಗೆದುಕೊಳ್ಳುತ್ತಿದ್ದ ಹುಬ್ಬಳ್ಳಿಯ ಸಿಮ್ರಾನ್ ಜಿತ್ ಕೌರ್ ಎಂಬ ಯುವತಿಯನ್ನು ಬಂಧಿಸಲಾಗಿದೆ. ಹುಬ್ಬಳ್ಳಿಯ ಪ್ರತಿಷ್ಠಿತ ಹೊಟೇಲ್ ಉದ್ಯಮಿಯ ಪುತ್ರಿಯಾಗಿರುವ ಸಿಮ್ರಾನ್. ಪೆಡ್ಲರ್​ನಿಂದ ಡ್ರಗ್ಸ್ ತೆಗೆದುಕೊಳ್ಳುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಸದ್ಯ ವಶದಲ್ಲಿರುವ ಇಬ್ಬರಿಂದ ಸಿಸಿಬಿ ಪೊಲೀಸರು ಹೆಚ್ಚಿನ ವಿಚಾರಣೆ‌ ನಡೆಸುತ್ತಿದ್ದಾರೆ.

drugs arrest

ಬಂಧಿತ ಆರೋಪಿಗಳು

ಇದನ್ನೂ: ಮದುವೆಯಾಗಿ 5ನೇ ದಿನಕ್ಕೆ ಅತ್ತೆ ಮಗನೊಂದಿಗೆ ಓಡಿ ಹೋದ ಯುವತಿ; ನನಗೆ ಹೆಂಡ್ತಿ ಬೇಕು ಎಂದು ಪದೇಪದೆ ಠಾಣೆಗೆ ಹೋಗುತ್ತಿರುವ ಪತಿ

30ಕ್ಕೂ ಹೆಚ್ಚು ಬೀದಿನಾಯಿಗಳನ್ನು ಅತ್ಯಾಚಾರ ಮಾಡಿದ್ದ 68ರ ವೃದ್ಧ ಅರೆಸ್ಟ್​; ‘ಅವು ಯಾವುದೇ ಪ್ರತಿರೋಧ ತೋರುತ್ತಿರಲಿಲ್ಲ’ ಎಂಬ ಸಮರ್ಥನೆ ಬೇರೆ !