ನಿಧಿ ಆಸೆಗಾಗಿ ದಾವಣಗೆರೆ ಹನುಮ ದೇವಾಲಯಕ್ಕೆ ವಾಮಾಚಾರ; ಗ್ರಾಮಸ್ಥರ ಆರೋಪ
ದಾವಣಗೆರಯಿಂದ 12 ಕೀಲೋಮೀಟರ್ ದೂರ ಇರುವ ತುಂಬಿಗೆರೆ ಗ್ರಾಮದಲ್ಲಿ ರಾಮನ ಭಂಟ ಹನುಮಾನದೇ ಸುದ್ದಿ ಹರಿದಾಡುತ್ತಿದೆ. ಊರಿನಿಂದ ಒಂದು ಕೀಲೋಮೀಟರ್ ದೂರದಲ್ಲಿ ಸುಮಾರು 200 ರಿಂದ 300 ವರ್ಷಗಳ ಕಾಲದ ಪುರಾತನ ಕಾಲದ ದೇವಸ್ಥಾನವಿದೆ. ಅದೆ ಹನುಮಾನ ದೇವಸ್ಥಾನ.
ದಾವಣಗೆರೆ: ಅನೇಕ ರಾಜ ಮನೆತನಗಳು ನಮ್ಮ ರಾಜ್ಯವನ್ನು ಆಳ್ವಿಕೆ ಮಾಡಿದ್ದಾರೆ. ಆ ಕಾಲದಲ್ಲಿ ಆಡಳಿತ ಮಾಡಿದ ರಾಜ ಮನೆತನಗಳು, ಬೆಳೆ ಬಾಳುವ ಬಂಗಾರ, ಬೆಳ್ಳಿ, ವಜ್ರ ಸೇರಿದಂತೆ ಅನೇಕ ವಸ್ತಗಳನ್ನು ದೇವಸ್ಥಾನದ ನೆಲ ಮಳಿಗೆಯಲ್ಲಿ ಇಟ್ಟು ರಕ್ಷಣೆ ಮಾಡಿಕೊಳ್ಳುತ್ತಿದ್ದರು ಎಂದು ಇತಿಹಾಸದಲ್ಲಿ ಓದಿ ತಿಳಿದ್ದುಕೊಂಡಿದ್ದೇವೆ. ಹೀಗೆ ತಿಳಿದುಕೊಂಡ ಕೆಲವರು ಶ್ರೀರಾಮನ ಭಂಟ ಹನುಮಾನನಿಗೆ ವಾಮಚಾರ ಮಾಡಿಸಿದ್ದಾರೆ.
ದಾವಣಗೆರಯಿಂದ 12 ಕೀಲೋಮೀಟರ್ ದೂರ ಇರುವ ತುಂಬಿಗೆರೆ ಗ್ರಾಮದಲ್ಲಿ ರಾಮನ ಭಂಟ ಹನುಮಾನದೇ ಸುದ್ದಿ ಹರಿದಾಡುತ್ತಿದೆ. ಊರಿನಿಂದ ಒಂದು ಕೀಲೋಮೀಟರ್ ದೂರದಲ್ಲಿ ಸುಮಾರು 200 ರಿಂದ 300 ವರ್ಷಗಳ ಕಾಲದ ಪುರಾತನ ಕಾಲದ ದೇವಸ್ಥಾನವಿದೆ. ಅದೆ ಹನುಮಾನ ದೇವಸ್ಥಾನ. ಕಳೆದ ಎರಡು ವರ್ಷಗಳ ಹಿಂದೆ ದೇವಸ್ಥಾನವನ್ನು ಊರಿನ ಗ್ರಾಮಸ್ಥರು ನವೀಕರಣ ಮಾಡಿದ್ದಾರೆ. ಆದರೆ ಈ ಹನುಮಾನ ದೇವಸ್ಥಾನದಲ್ಲಿ ನಿಧಿ ಇದೆ ಎಂದು ಕಳೆ ಹುಣ್ಣಿಮೆ ದಿನದೊಂದು ಯಾರೋ ವಾಮಾಚಾರ ಮಾಡಿಸಿದ್ದಾರೆ.
ಲಿಂಬೆ ಹಣ್ಣು, ಕುಂಕುಮಯಿಟ್ಟು ವಾಮಾಚಾರ ರಂಗಪ್ಪ ಎಂಬುವವರ ಹೊಲದಲ್ಲಿ ಈ ದೇವಸ್ಥಾನ ಇದೆ. ಆದರೆ ಊರಿನ ಹಿರಿಯರು ಈ ದೇವಸ್ಥಾನದಲ್ಲಿ ನಿಧಿ ಇದೆ ಎಂದು ಹೇಳುತ್ತಿದ್ದರು. ಸುಮಾರ ಆರು ಜನರ ತಂಡ ಈ ದೇವಸ್ಥಾನ ಸುತುಮುತ್ತಲ ಹೊಲ ಮಾರಾಟಕ್ಕೆ ಇದೆ ಎಂದು ಬಂದು ನೋಡಿದ್ದಾರೆ. ಅಲ್ಲೇ ಪಕ್ಕದಲ್ಲಿ ಇದ್ದ ಅದೇ ಊರಿನ ನಾಗರಾಜ್ ಎಂಬ ರೈತ ಈ ಹೊಲ ನನ್ನದ್ದು. ಮಾರಾಟಕ್ಕೆ ಇಟ್ಟಿಲ್ಲ ಎಂದು ಹೇಳಿದ್ದಾರೆ. ಅದರೆ ದೇವಸ್ಥಾನದ ಹತ್ತಿರ ಬಂದು ನೋಡಿದ ನಾಗರಾಜ್ ಎಂಬ ರೈತನಿಗೆ ಅಚ್ಚರಿ ಮೂಡಿತ್ತು. ಒಂದು ಪೇಪರ್ ತಟ್ಟೆಯಲ್ಲಿ ಲಿಂಬೆ ಹಣ್ಣು, ಅರಿಶಿಣ, ಕುಂಕುಮ, ಮೊಟ್ಟೆ ಇಟ್ಟು ಮಾಟ ಮಂತ್ರ ಮಾಡಿದ್ದಾರೆ. ಇದನ್ನು ನೋಡಿದ ಗ್ರಾಮದ ಜನರು ಭಯಭೀತರಾಗಿದ್ದಾರೆ. ಅಲ್ಲದೇ ದಿನ ನಿತ್ಯ ಹೊಲಗದ್ದೆಗಳಿಗೆ ಹೋಗಲು ಸಹ ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಿಧಿ ಆಸೆಗಾಗಿ ಊರಿನವರು ಯಾರೋ ಗೋತ್ತಿರುವರು ಈ ತರದ ಕೆಲಸ ಮಾಡಿದ್ದಾರೆ ಎಂದು ಹೊಲದ ಮಾಲೀಕರು ಆರೋಪ ಮಾಡುತ್ತಾರೆ.
ನಮ್ಮ ತಾತ ಕಾಲದ ದೇವಸ್ಥಾನವಿದು. ನಮ್ಮ ಊರಿನಲ್ಲಿ ಇದೇ ಮೊದಲು ಅಲ್ಲ, ಸುಮಾರು ಆರು ಏಳು ಬಾರಿ ನಿಧಿಗಾಗಿ ಈ ರೀತಿ ಮಾಡಿದ್ದಾರೆ. ಈ ಹಿಂದೆ ಇದೇ ರೀತಿಯಲ್ಲಿ ಮಾಟ ಮಂತ್ರ ಮಾಡಿದ್ದರು. ಆ ಸಮಯದಲ್ಲಿ ಗ್ರಾಮಸ್ಥರು ಎಲ್ಲರೂ ಸೇರಿ ಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದೆವು. ಆದರೆ ಈ ರೀತಿ ನಿಧಿಗಾಗಿ ಆಸೆಗಾಗಿ ವಾಮಾವಾರ ಮಾಡಿ ಜನರಲ್ಲಿ ಭಯದ ವಾತಾವಾರಣ ಸೃಷ್ಟಿ ಮಾಡಿದ್ದಾರೆ. ಪುರಾತನ ಕಾಲದ ದೇವಸ್ಥಾನದಲ್ಲಿ ನಿಧಿ ಇರುವುದು ನಿಜ. ಆದರೆ ನಾವು ಯಾರು ನೋಡಿಲ್ಲ. ನಮ್ಮ ಹಿರಿಯರು ಹೇಳಿದ್ದಾರೆ. ಈ ಕೆಲಸವನ್ನು ಯಾರೋ ಇಲ್ಲಿನವರು ಮಾಡಿದ್ದಾರೆ ಎಂಬು ಗುಮಾನೆ ಇದೆ. ನಾವು ಪೊಲೀಸರಿಗೆ ಮಾಹಿತಿ ನೀಡುತ್ತೇವೆಂದು ಊರಿನ ಮುಖಂಡರು ಹೇಳಿದ್ದಾರೆ.
ಊರಿನಲ್ಲಿ ಹಲವು ಬಾರಿ ನಿಧಿಗಾಗಿ ಮಾಟ ಮಂತ್ರಗಳು ನಡೆದಿವೆ. ಒಂದು ಭಾರಿ ಕಳ್ಳರನ್ನು ಹಿಡಿದು ಪೋಲಿಸರಿಗೆ ಒಪ್ಪಿಸಿ ಆಗಿದೆ. ಪುರಾತನ ದೇವಸ್ಥಾನಗಳನ್ನು ಉಳಿಸಬೇಕು ಎಂದು ಒಂದು ಕಡೆಯಾದರೆ ಇನ್ನೊಂದು ಕಡೆ ನಿಧಿಗಳ್ಳರಿಂದ ದೇವಸ್ಥಾನಗಳನ್ನು ರಕ್ಷಣೆ ಮಾಡಿಕೊಳ್ಳುವಂತಾಗಿದೆ. ನಿಧಿಗಳ್ಳರಿನಿಂದ ನಮ್ಮ ಇತಿಹಾಸ ಸಾರುವ ದೇವಸ್ಥಾನಗಳನ್ನು ಸಂರಕ್ಷಣೆ ಮಾಡುವಂತಹ ಕೆಲಸ ಆಗಬೇಕಾಗಿದೆ.
ಇದನ್ನೂ ಓದಿ
ಕೊರೊನಾ ವ್ಯಾಕ್ಸಿನ್ ಹಾಕಿಸಿಕೊಂಡ ತುಮಕೂರು ಸಿದ್ದಗಂಗಾ ಮಠದ ಸ್ವಾಮೀಜಿ
ಬೆಲೆ ಸಿಗದ ಹಿನ್ನೆಲೆ ಟ್ರ್ಯಾಕ್ಟರ್ ಮೂಲಕ 2 ಎಕರೆಯಲ್ಲಿ ಬೆಳೆದಿದ್ದ ಎಲೆಕೋಸು ಬೆಳೆ ನಾಶ
Published On - 1:34 pm, Tue, 23 March 21