ಇತ್ತೀಚೆಗೆ ಬಿಡುಗಡೆ ಆದ ದಳಪತಿ ವಿಜಯ್ ನಟನೆಯ ‘ಗೋಟ್’ ಸಿನಿಮಾ ನಿರಾಸೆ ಮೂಡಿಸಿದೆ. ಕನ್ನಡದ ‘ಭೀಮ’, ‘ಕೃಷ್ಣಂ ಪ್ರಣಯ ಸಖಿ’, ‘ಪೆಪೆ’, ‘ಲಾಫಿಂಗ್ ಬುದ್ಧ’ ಸಿನಿಮಾಗಳು ಉತ್ತಮ ಪ್ರದರ್ಶನ ಕಾಣುತ್ತಿದ್ದವು. ಆದರೆ ‘ಗೋಟ್’ಗೆ ದಾರಿ ಮಾಡಿ ಕೊಡಲು ಹಲವು ಕಡೆ ಈ ಸಿನಿಮಾಗಳನ್ನು ಚಿತ್ರಮಂದಿರದಿಂದ ತೆಗೆದು ಹಾಕಲಾಗಿದೆ. ಇದೆಲ್ಲದರ ನಡುವೆ ಈ ವಾರ ಒಟಿಟಿಗೆ ಕೆಲವು ಉತ್ತಮ ಸಿನಿಮಾಗಳು ಬಂದಿವೆ. ವಿಶೇಷವೆಂದರೆ ಕನ್ನಡದ ಹಿಟ್ ಸಿನಿಮಾ ಒಂದು ಸಹ ಈ ವಾರ ಅಮೆಜಾನ್ನಲ್ಲಿ ಬಿಡುಗಡೆ ಆಗಿದೆ. ಪರಭಾಷೆಯ ಕೆಲವು ಒಳ್ಳೆಯ ಸಿನಿಮಾಗಳು ಒಟಿಟಿಗೆ ಬಂದಿವೆ.
ದುನಿಯಾ ವಿಜಯ್ ನಟಿಸಿ ನಿರ್ದೇಶನ ಮಾಡಿರುವ ‘ಭೀಮ’ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಸ್ಟ್ರೀಂ ಆಗುತ್ತಿದೆ. ಚಿತ್ರಮಂದಿರದಲ್ಲಿ ಉತ್ತಮ ಪ್ರದರ್ಶನ ಕಂಡಿರುವ ಈ ಸಿನಿಮಾ ಇದೀಗ ಅಮೆಜಾನ್ ಪ್ರೈಂಗೆ ಬಂದಿದೆ. ಸಿನಿಮಾ ಬಿಡುಗಡೆ ಆದ ಸಮಯದಲ್ಲಿ ಯಾವ ಒಟಿಟಿಯವರೂ ಸಹ ‘ಭೀಮ’ ಸಿನಿಮಾವನ್ನು ಖರೀದಿಸಿರಲಿಲ್ಲ. ಈಗ ಸಿನಿಮಾ ಹಿಟ್ ಆಗುತ್ತಿದ್ದಂತೆ ಅಮೆಜಾನ್ನವರು ‘ಭೀಮ’ನಿಗೆ ವೇದಿಕೆ ನೀಡಿದ್ದಾರೆ.
ಮಂಸೋರೆ ನಿರ್ದೇಶಿಸಿರುವ ನಿಜ ಘಟನೆ ಆಧರಿಸಿದ ಸಿನಿಮಾ ‘192021’ ಸಿನಿಮಾ ಇದೀಗ ಅಮೆಜಾನ್ ಪ್ರೈಂನಲ್ಲಿ ರೆಂಟ್ ಆಧಾರದಲ್ಲಿ ಲಭ್ಯವಿದೆ. ಸಾಮಾನ್ಯ ಯುವಕನೊಬ್ಬನ ಮೇಲೆ ಪೊಲೀಸರು ಸುಳ್ಳು ನಕ್ಸಲ್ ಪ್ರಕರಣ ದಾಖಲಿಸಿ ಅದಾದ ಬಳಿಕ ಆತ ಎದುರಿಸಿದ ಸಮಸ್ಯೆ, ನ್ಯಾಯಕ್ಕಾಗಿ ಮಾಡಿದ ಹೋರಾಟ ಇತರೆಗಳ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾ ಕಳೆದ ವರ್ಷ ಬಿಡುಗಡೆ ಆಗಿತ್ತು.
2024 ರ ಅತ್ಯುತ್ತಮ ಸಿನಿಮಾ ರಾಷ್ಟ್ರಪ್ರಶಸ್ತಿ ಪಡೆದಿರುವ ಮಲಯಾಳಂ ಸಿನಿಮಾ ‘ಆಟ್ಟಂ’ ಕೆಲ ದಿನಗಳ ಹಿಂದಷ್ಟೆ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿದೆ. ‘ಆಟ್ಟಂ’ ಸಿನಿಮಾಕ್ಕೆ ಅತ್ಯುತ್ತಮ ಸಿನಿಮಾ. ಅತ್ಯುತ್ತಮ ಚಿತ್ರಕತೆ ಹಾಗೂ ಅತ್ಯುತ್ತಮ ಎಡಿಟಿಂಗ್ ಪ್ರಶಸ್ತಿ ಲಭಿಸಿತ್ತು.
ಹಿಂದಿ ಚಿತ್ರರಂಗದಲ್ಲಿ ಇದೀಗ ‘ಸ್ತ್ರೀ 2’ ಸಿನಿಮಾ ದೊಡ್ಡ ಹಿಟ್ ಆಗಿದೆ. ಆದರೆ ಕೆಲವು ವಾರಗಳ ಹಿಂದೆ ಬಿಡುಗಡೆ ಆಗಿದ್ದ ‘ಕಿಲ್’ ಸಿನಿಮಾಕ್ಕೆ ಬಹಳ ಪ್ರಶಂಸೆ ದೊರೆತಿತ್ತು. ಆ ಸಿನಿಮಾ ಸಹ ಹಿಟ್ ಆಗಿತ್ತು. ಒಂದು ರೈಲಿನಲ್ಲಿ ಇಬ್ಬರು ವ್ಯಕ್ತಿಗಳ ನಡುವೆ ನಡೆಯುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾ ಡಿಸ್ನಿ ಹಾಟ್ಸ್ಟಾರ್ನಲ್ಲಿ ವೀಕ್ಷಣೆಗೆ ಲಭ್ಯವಿದೆ.
ಬಿಜು ಮೆನನ್ ಮತ್ತು ಜಯಸೂರ್ಯ ನಟಿಸಿರುವ ‘ತಲವಾನ್’ ಸಿನಿಮಾ ಸೆಪ್ಟೆಂಬರ್ 10ಕ್ಕೆ ಸೋನಿ ಲಿವ್ನಲ್ಲಿ ಬಿಡುಗಡೆ ಆಗಲಿದೆ. ಇಬ್ಬರು ಪೊಲೀಸರ ನಡುವೆ ನಡೆಯುವ ತಿಕ್ಕಾಟದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ.
ಮಲಯಾಳಂನ ಹಾಸ್ಯಪ್ರಧಾನ ಸಿನಿಮಾ, ‘ಅಡಿಯೋಸ್ ಅಮಿಗೊ’ ಸಿನಿಮಾ ಇತ್ತೀಚೆಗಷ್ಟೆ ನಟ್ಫ್ಲಿಕ್ಸ್ನಲ್ಲಿ ತೆರೆಗೆ ಬಂದಿದೆ. ಸಿನಿಮಾಕ್ಕೆ ಬಹಳ ಒಳ್ಳೆಯ ಪ್ರತಿಕ್ರಿಯೆ ಲಭ್ಯವಾಗಿದ್ದು, ನೋಡಿದವರು ಮೆಚ್ಚಿಕೊಂಡಿದ್ದಾರೆ.
ವಿಲ್ ಸ್ಮಿತ್ ನಟಿಸಿರುವ ಯಶಸ್ವಿ ‘ಬ್ಯಾಡ್ ಬಾಯ್ಸ್’ ಸಿನಿಮಾದ ಹೊಸ ಸರಣಿ ಇತ್ತೀಚೆಗೆ ಬಿಡುಗಡೆ ಆಗಿತ್ತು. ಆ ಸಿನಿಮಾ ಇದೀಗ ನೆಟ್ಫ್ಲಿಕ್ಸ್ಗೆ ಬಂದಿದೆ. ದಶಕಗಳ ಬಳಿಕ ‘ಬ್ಯಾಡ್ ಬಾಯ್ಸ್’ ಸಿನಿಮಾದ ಸೀಕ್ವೆಲ್ ಮಾಡಲಾಗಿತ್ತು. ಸಿನಿಮಾ ಹಾಸ್ಯಪ್ರಧಾನ ಆಕ್ಷನ್ ಕತೆಯನ್ನು ಒಳಗೊಂಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ