ಈ ವಾರ ಒಟಿಟಿಗೆ ಬರುತ್ತಿವೆ ಕೆಲ ಬ್ಲಾಕ್ ಬಸ್ಟರ್ ಸಿನಿಮಾಗಳು
OTT Release: ಈ ಶುಕ್ರವಾರ ಚಿತ್ರಮಂದಿರದಲ್ಲಿ ದೊಡ್ಡ ಸ್ಟಾರ್ ನಟರ ಸಿನಿಮಾಗಳು ಯಾವುವೂ ಇಲ್ಲ. ಈ ಶುಕ್ರವಾರ ಸಿನಿಮಾ ಪ್ರೇಮಿಗಳಿಗೆ ತುಸು ನಿರಾಶಾದಾಯಕ ಶುಕ್ರವಾರವೇ ಸರಿ. ಆದರೆ ಒಟಿಟಿ ನಿರಾಸೆ ಮಾಡಿಲ್ಲ. ಕೆಲವು ಬ್ಲಾಕ್ ಬಸ್ಟರ್ ಸಿನಿಮಾಗಳು ಈ ವಾರ ಮತ್ತು ಇದರ ಹಿಂದಿನ ವಾರ ಬಿಡುಗಡೆ ಆಗಿವೆ. ಈ ವಾರ ಒಟಿಟಿಯಲ್ಲಿ ಬಿಡುಗಡೆ ಆದ ಕೆಲ ಮುಖ್ಯ ಸಿನಿಮಾಗಳ ಪಟ್ಟಿ ಇಲ್ಲಿದೆ.

ಈ ಶುಕ್ರವಾರ ಯಾವ ದೊಡ್ಡ ಸ್ಟಾರ್ ನಟರ ಸಿನಿಮಾಗಳು ಸಹ ಬಿಡುಗಡೆ ಆಗುತ್ತಿಲ್ಲ. ಕನ್ನಡ ಹಾಗೂ ತಮಿಳಿನಲ್ಲಿ ಒಂದೆರಡು ಆಸಕ್ತಿಕರ ಸಿನಿಮಾಗಳು ಬಿಟ್ಟರೆ ಈ ಶುಕ್ರವಾರ ಸಿನಿಮಾ ಪ್ರೇಮಿಗಳ ಪಾಲಿಗೆ ತುಸು ಡಲ್ ಶುಕ್ರವಾರ. ಆದರೆ ಒಟಿಟಿಯಲ್ಲಿ ಹಾಗಿಲ್ಲ. ಈ ವಾರ ಒಟಿಟಿಗೆ ಕೆಲವು ಬ್ಲಾಕ್ ಬಸ್ಟರ್ ಸಿನಿಮಾಗಳು ಲಗ್ಗೆ ಇಟ್ಟಿವೆ. ಅವುಗಳ ಜೊತೆಗೆ ಕೆಲ ಥ್ರಿಲ್ಲರ್ ವೆಬ್ ಸರಣಿಗಳು ಸಹ ಒಟಿಟಿಗೆ ಬಂದಿದ್ದು, ಸಿನಿಮಾ ಪ್ರಿಯರಿಗೆ ಈ ವಾರ ಒಟಿಟಿ ಭರ್ಜರಿ ಮನೊರಂಜನೆಯನ್ನೇ ಉಣಬಡಿಸಲು ಸಜ್ಜಾಗಿದೆ.
‘ಮ್ಯಾಕ್ಸ್’ ಕನ್ನಡ ಸಿನಿಮಾ
ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಕನ್ನಡ ಸಿನಿಮಾ ಕಳೆದ ವಾರವೇ ಒಟಿಟಿಯಲ್ಲಿ ಬಿಡುಗಡೆ ಆಗಿದೆ. ಫೆಬ್ರವರಿ 15 ರಿಂದಲೇ ಈ ಸಿನಿಮಾ ಜೀ5 ಒಟಿಟಿಯಲ್ಲಿ ಸ್ಟ್ರೀಂ ಆಗುತ್ತಿದೆ. ಒಂದು ರಾತ್ರಿಯಲ್ಲಿ ನಡೆಯುವ ಕತೆ ಒಳಗೊಂಡ ಈ ಸಿನಿಮಾದಲ್ಲಿ ಸುದೀಪ್ ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಚಿತ್ರಮಂದಿರದಲ್ಲಿ ಬ್ಲಾಕ್ ಬಸ್ಟರ್ ಆಗಿದೆ.
ಡಾಕೂ ಮಹಾರಾಜ್
ನಂದಮೂರಿ ಬಾಲಕೃಷ್ಣ ನಟನೆಯ ‘ಡಾಕೂ ಮಹಾರಾಜ್’ ಸಿನಿಮಾ ಕೆಲ ವಾರಗಳ ಹಿಂದೆ ಸಂಕ್ರಾಂತಿ ಹಬ್ಬಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ರಕುಲ್ ಪ್ರೀತ್ ಸಿಂಗ್ ನಾಯಕಿಯಾಗಿ ನಟಿಸಿರುವ ಈ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ತೆಲುಗಿನಲ್ಲಿ ಹಿಟ್ ಆದ ಬಳಿಕ ಈ ಸಿನಿಮಾವನ್ನು ಹಿಂದಿಯಲ್ಲಿಯೂ ಡಬ್ ಮಾಡಿ ಬಿಡುಗಡೆ ಮಾಡಲಾಯಿತು. ಇದೀಗ ಈ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ಫೆಬ್ರವರಿ 21 ರಂದು ಬಿಡುಗಡೆ ಆಗಿದೆ. ನೆಟ್ಫ್ಲಿಕ್ಸ್ನಲ್ಲೂ ಸಹ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ.
ಕ್ರೈಂ ಬೀಟ್
ದೆಹಲಿಯ ಕ್ರೈಂ ಕತೆ ಒಳಗೊಂಡಿರುವ ‘ಕ್ರೈಂ ಬೀಟ್’ ವೆಬ್ ಸರಣಿ ಇದೇ ಫೆಬ್ರವರಿ 21 ರಿಂದ ಸ್ಟ್ರೀಂ ಆಗಲಿದೆ. ಇದೊಂದು ಹಿಂದಿ ವೆಬ್ ಸರಣಿಯಾಗಿದ್ದು ಪತ್ರಕರ್ತ, ಪೊಲೀಸ್, ಭಯೋತ್ಪಾದಕ, ಶ್ರೀಮಂತ ಉದ್ಯಮಿ ಹೀಗೆ ಹಲವು ವ್ಯಕ್ತಿಗಳ ನಡುವೆ ನಡೆವ ಕಣ್ಣಾ-ಮುಚ್ಚಾಲೆ ಆಟದಂಥಹಾ ಥ್ರಿಲ್ಲರ್ ಕತೆಯನ್ನು ಈ ವೆಬ್ ಸರಣಿ ಒಳಗೊಂಡಿದೆ. ವೆಬ್ ಸರಣಿಯು ಜೀ5 ನಲ್ಲಿ ವೀಕ್ಷಣೆಗೆ ಲಭ್ಯ ಇದೆ.
ಇದನ್ನೂ ಓದಿ:ಒಟಿಟಿಯಲ್ಲಿ ಹೆಚ್ಚಿದೆ ಅಶ್ಲೀಲತೆ, ಕ್ರೌರ್ಯ: ಎಚ್ಚರಿಕೆ ನೀಡಿದ ಕೇಂದ್ರ ಸರ್ಕಾರ
ಊಪ್ಸ್, ಅಬ್ ಕ್ಯಾ?
ಊಪ್ಸ್, ಅಬ್ ಕ್ಯಾ? ಹಾಸ್ಯಮಯ ವೆಬ್ ಸರಣಿಯಾಗಿದ್ದು ಜಿಯೋ ಹಾಟ್ಸ್ಟಾರ್ನಲ್ಲಿ ಫೆಬ್ರವರಿ 20 ರಂದು ಬಿಡುಗಡೆ ಆಗಿದೆ. ಟಿವಿ ಹಾಸ್ಯ ಧಾರಾವಾಹಿ ಮಾದರಿಯನ್ನು ಅನುಸರಿಸಿ ಒಟಿಟಿಗಾಗಿ ಮಾಡಲಾಗಿರುವ ವೆಬ್ ಸರಣಿ ಇದಾಗಿದೆ. ವೈದ್ಯರ ತಪ್ಪಿನಿಂದ ಯುವತಿಯೊಬ್ಬಾಕೆ ಗರ್ಭವತಿ ಆಗಿಬಿಡುತ್ತಾಳೆ, ಆ ನಂತರ ನಡೆಯುವ ಘಟನೆಗಳನ್ನು ಈ ಸಿನಿಮಾ ಒಳಗೊಂಡಿದೆ.
ಜಾಕ್ ರೀಚರ್ 3
ಜಾಕ್ ರೀಚರ್, ಹಾಲಿವುಡ್ನ ಜನಪ್ರಿಯ ಆಕ್ಷನ್ ಹೀರೋ ಪಾತ್ರಗಳಲ್ಲಿ ಜಾಕ್ ರೀಚರ್ ಪಾತ್ರವೂ ಒಂದು. ಬುದ್ಧಿವಂತ ಜೊತೆಗೆ ಅಷ್ಟೆ ದೈತ್ಯನೂ, ಶಕ್ತಿವಂತನೂ ಆಗಿರುವ ಸೈನ್ಯಾಧಿಕಾರಿ ವಿವಿಧ ಪ್ರಕರಣಗಳನ್ನು ತನ್ನ ಬುದ್ಧಿವಂತಿಕೆ ಬಳಸಿ ಹೇಗೆ ಪರಿಹರಿಸುತ್ತಾನೆ, ಹೇಗೆ ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಮಾಡುತ್ತಾನೆ ಎಂಬುದು ಈ ವೆಬ್ ಸರಣಿಯ ಕತೆ. ಈಗಾಗಲೇ ಎರಡು ಸೀಸನ್ಗಳು ಬಿಡುಗಡೆ ಆಗಿದ್ದು, ಇದೀಗ ಜಾಕ್ ರೀಚರ್ ಮೂರನೇ ಸೀಸನ್ ತೆರೆಗೆ ಬಂದಿದೆ. ಅಮೆಜಾನ್ ಪ್ರೈಂನಲ್ಲಿ ವೀಕ್ಷಣೆಗೆ ಲಭ್ಯವಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ