ಈ ವಾರ ಒಟಿಟಿಗೆ ಬರುತ್ತಿವೆ ಹಲವು ಹಿಟ್ ಸಿನಿಮಾ, ನಿಮ್ಮ ಆಯ್ಕೆ ಯಾವುದು?

Updated on: Sep 26, 2026 | 3:33 PM

ಪ್ರತಿ ವಾರದಂತೆ ಈ ವಾರವೂ ಸಹ ಹಲವು ಹೊಸ ಸಿನಿಮಾಗಳು ಒಟಿಟಿಗೆ ಬರುತ್ತಿವೆ. ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಹಿಟ್ ಆಗಿದ್ದ ಸಿನಿಮಾಗಳು, ವಿಮರ್ಶಕರಿಂದ ಮೆಚ್ಚುಗೆ ಗಳಿಸಿಕೊಂಡಿದ್ದ ಸಿನಿಮಾಗಳು ಜೊತೆಗೆ ಹಲವು ಹೊಸ ವೆಬ್ ಸರಣಿಗಳು ಡಾಕ್ಯುಮೆಂಟರಿಗಳು ಸಹ ಈ ವಾರ ಒಟಿಟಿಗೆ ಬಂದಿವೆ. ಈ ವಾರ ಒಟಿಟಿಯಲ್ಲಿ ರಿಲೀಸ್ ಆಗಿರುವ ಮುಖ್ಯವಾದ ಸಿನಿಮಾಗಳ ಪಟ್ಟಿ ಇಲ್ಲಿದೆ ನೋಡಿ...

1 / 6
ಸುದೀಪ್ ಅವರ ಅಕ್ಕನ ಮಗ ನಟನೆ ಮಾಡಿರುವ ‘ಮ್ಯಾಂಗೊ ಪಚ್ಚ’ ಸಿನಿಮಾ ಕೆಲ ತಿಂಗಳುಗಳ ಹಿಂದೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಇದೀಗ ಈ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗಿದ್ದು, ಜಿಯೋ ಹಾಟ್​​ಸ್ಟಾರ್​​ನಲ್ಲಿ ಲಭ್ಯವಿದೆ.

ಸುದೀಪ್ ಅವರ ಅಕ್ಕನ ಮಗ ನಟನೆ ಮಾಡಿರುವ ‘ಮ್ಯಾಂಗೊ ಪಚ್ಚ’ ಸಿನಿಮಾ ಕೆಲ ತಿಂಗಳುಗಳ ಹಿಂದೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಇದೀಗ ಈ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗಿದ್ದು, ಜಿಯೋ ಹಾಟ್​​ಸ್ಟಾರ್​​ನಲ್ಲಿ ಲಭ್ಯವಿದೆ.

2 / 6

ಮುಸ್ಲಿಂ ಕುಟುಂಬಗಳ ಕತೆಯನ್ನು ಒಳಗೊಂಡಿರುವ ಸಿನಿಮಾ ‘ಹಬೀಬಿ’. ಸಿನಿಮಾನಲ್ಲಿ ಮುಸ್ಲಿಂ ಯುವಕ-ಯುವತಿಯ ನಡುವೆ ಪ್ರೇಮಕತೆ, ಕುಟುಂಬದ ವಿರೋಧ, ಧರ್ಮ, ಬಡತನ ಹಲವು ಅಂಶಗಳನ್ನು ಒಳಗೊಂಡ ಕತೆ ‘ಹಬೀಬಿ’ ಸೋನಿ ಲಿವ್​​ನಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಿದೆ.

3 / 6

ನಯನತಾರಾ ಮುಖ್ಯ ಪಾತ್ರದಲ್ಲಿ ನಟನೆ ಮಾಡಿರುವ ರೊಮ್ಯಾಂಟಿಕ್ ಸಿನಿಮಾ ‘ಹಾಯ್’. ಪ್ರೀತಿ, ಕುಟುಂಬ, ಮದುವೆ ಹೀಗೆ ಹಲವು ವಿಷಯಗಳನ್ನೊಳಗೊಂಡ ಹಾಸ್ಯಮಯ ರೊಮ್ಯಾಂಟಿಕ್ ಸಿನಿಮಾ ‘ಹಾಯ್’ ಜೀ5 ನಲ್ಲಿ ವೀಕ್ಷಣೆಗೆ ಲಭ್ಯವಿದೆ.

4 / 6

‘ಟಾಕ್ಸಿಕ್’ ಸಿನಿಮಾನಲ್ಲಿ ಎಲಿಜಬೆತ್ ಪಾತ್ರದಲ್ಲಿ ನಟಿಸಿದ್ದ ಹುಮಾ ಖುರೇಷಿ ಮುಖ್ಯ ಪಾತ್ರದಲ್ಲಿ ನಟಿಸಿ ನಿರ್ಮಾಣವನ್ನೂ ಮಾಡಿರುವ ‘ಬೇಬಿ ಡು ಡೈ ಡು’ ಸಿನಿಮಾ ಈ ವಾರ ಒಟಿಟಿಗೆ ಬಂದಿದೆ. ವಿಮರ್ಶಕರಿಂದ ಉತ್ತಮ ವಿಮರ್ಶೆ ಪಡೆದಿದ್ದ ಈ ಸಿನಿಮಾವನ್ನು ಈಗ ನೆಟ್​​ಫ್ಲಿಕ್ಸ್​​ನಲ್ಲಿ ವೀಕ್ಷಿಸಬಹುದಾಗಿದೆ.

5 / 6

ಆಲಿಯಾ ಭಟ್ ನಿರ್ಮಾಣ ಮಾಡಿರುವ ಹೊಸ ಸಿನಿಮಾ ‘ಡೋಂಟ್ ಬಿ ಶೈ’ ಈ ವಾರ ಒಟಿಟಿಗೆ ಬಂದಿದೆ. ಅಮೆಜಾನ್ ಪ್ರೈಂ ವಿಡಿಯೋನಲ್ಲಿ ರಿಲೀಸ್ ಆಗಿರುವ ಈ ಸಿನಿಮಾ ಜೆನ್​​ ಜೀಗಳಿಗಾಗಿ ವಿಶೇಷವಾಗಿ ಮಾಡಲಾಗಿರುವ ಸಿನಿಮಾ ಆಗಿದೆ. ಸಿನಿಮಾನಲ್ಲಿ ಆಲಿಯಾ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ ಎನ್ನಲಾಗುತ್ತಿದೆ.

6 / 6

ವಿಶ್ವದ ಜನಪ್ರಿಯ ಅನಿಮೇಟೆಡ್ ಸಿನಿಮಾಗಳಲ್ಲಿ ಒಂದಾಗಿರುವ ‘ಟಾಯ್ ಸ್ಟೋರಿ’ಯ ಐದನೇ ಸರಣಿ ಇತ್ತೀಚೆಗಷ್ಟೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ದೊಡ್ಡ ಹಿಟ್ ಆಗಿತ್ತು. ಇದೀಗ ಈ ಸಿನಿಮಾ ಒಟಿಟಿಗೆ ಬಂದಿದೆ. ಸಿನಿಮಾ ಅನ್ನು ಜಿಯೋ ಹಾಟ್​​ಸ್ಟಾರ್​​ನಲ್ಲಿ ವೀಕ್ಷಿಸಬಹುದಾಗಿದೆ.

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us