ಈ ವಾರ ಒಟಿಟಿಗೆ ಬಂದಿವೆ ಹಿಟ್ ಸಿನಿಮಾಗಳು: ಪಟ್ಟಿ ಇಲ್ಲಿದೆ
OTT Release this week: ಡಿಸೆಂಬರ್ ತಿಂಗಳಲ್ಲಿ ಚಿತ್ರಮಂದಿರಗಳು ಬಲು ಬ್ಯುಸಿ ಆಗಿರುತ್ತವೆ. ಡಿಸೆಂಬರ್ ತಿಂಗಳಲ್ಲಿ ದೊಡ್ಡ ನಟರ, ದೊಡ್ಡ ಬಜೆಟ್ ಸಿನಿಮಾಗಳು ಚಿತ್ರಮಂದಿರಕ್ಕೆ ಬರುತ್ತಿವೆ. ಈ ಬಾರಿಯೂ ಸಹ. ಆದರೆ ಒಟಿಟಿಯಲ್ಲಿಯೂ ಸಹ ಈ ವಾರ ಒಳ್ಳೆಯ ಸಿನಿಮಾಗಳು ಬಂದಿವೆ. ಚಿತ್ರಮಂದಿರಗಳ ನೂಕು ನುಗ್ಗಲು ಇಷ್ಟವಿಲ್ಲದವರು, ಮನೆಯಲ್ಲೇ ಕೂತು ಒಟಿಟಿಯಲ್ಲಿ ಸಿನಿಮಾ ನೋಡಬೇಕಿದೆ. ಇಲ್ಲಿದೆ ನೋಡಿ ಈ ವಾರ ಒಟಿಟಿಗೆ ಬಂದಿರುವ ಸಿನಿಮಾಗಳ ಪಟ್ಟಿ...
Updated on: Dec 06, 2025 | 5:27 PM

ಕನ್ನಡದ ಹಾಸ್ಯ ಪ್ರಧಾನ ಸಿನಿಮಾ ‘ಅರಸಯ್ಯನ ಪ್ರೇಮ ಪ್ರಸಂಗ’ ಈ ವಾರ ಒಟಿಟಿಗೆ ಬಂದಿದೆ. ಹಲವು ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ನಟಿಸಿರುವ ಮಹಂತೇಶ ಹಿರೇಮಠ ‘ಅರಸಯ್ಯನ ಪ್ರೇಮ ಪ್ರಸಂಗ’ ಸಿನಿಮಾದ ಪ್ರಧಾನ ಪಾತ್ರದಲ್ಲಿ ನಟಿಸಿದ್ದು, ಸಿನಿಮಾವನ್ನು ಸನ್ ನೆಕ್ಸ್ಟ್ನಲ್ಲಿ ನೋಡಬಹುದಾಗಿದೆ.

ಕನ್ನಡಿಗರಾದ ರಶ್ಮಿಕಾ ಮಂದಣ್ಣ ಮತ್ತು ದೀಕ್ಷಿತ್ ಶೆಟ್ಟಿ ಒಟ್ಟಿಗೆ ನಟಿಸಿರುವ ತೆಲುಗು ಸಿನಿಮಾ ‘ದಿ ಗರ್ಲ್ಫ್ರೆಂಡ್’ ಸಿನಿಮಾ ಕೆಲವೇ ದಿನಗಳ ಹಿಂದೆ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಹಿಟ್ ಆಗಿತ್ತು. ಇದೀಗ ಈ ಸಿನಿಮಾ ಒಟಿಟಿಗೆ ಬಂದಿದೆ. ಸಿನಿಮಾ ಅನ್ನು ನೆಟ್ಫ್ಲಿಕ್ಸ್ನಲ್ಲಿ ವೀಕ್ಷಿಸಬಹುದಾಗಿದೆ.

ಒಂದು ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಮೂರು ಕೊಲೆ ನಡೆದಿವೆ. ಆ ಕೊಲೆಯನ್ನು ತನಿಖೆ ನಡೆಸಲು ಇಬ್ಬರು ಎಸಿಪಿಗಳು ಒಂದೇ ಠಾಣೆಗೆ ನಿಯೋಜನೆಗೊಂಡಿದ್ದಾರೆ. ಮುಂದಿನ ಕತೆ ತಿಳಿಯಲು ‘ಧೂಲ್ಪೇಟ್ ಪೊಲೀಸ್ ಸ್ಟೇಷನ್’ ಸಿನಿಮಾವನ್ನು ಆಹಾ ಒಟಿಟಿಯಲ್ಲಿ ನೋಡಬಹುದು.

‘ಸ್ಟೀಫನ್’ ಹೆಸರಿನ ತಮಿಳು ಸಿನಿಮಾ ಈ ವಾರ ಒಟಿಟಿಗೆ ಬಂದಿದೆ. ಥ್ರಿಲ್ಲಿಂಗ್ ಕತೆ ಹೊಂದಿರುವ ಈ ಸಿನಿಮಾ ವಿಮರ್ಶಕರ ಮನ ಗೆದ್ದಿದೆ. ಅದ್ಭುತ ಕತೆ, ನಟನೆ ಹೊಂದಿರುವ ಈ ಸಿನಿಮಾವನ್ನು ನೆಟ್ಪ್ಲಿಕ್ಸ್ನಲ್ಲಿ ವೀಕ್ಷಿಸಬಹುದಾಗಿದೆ.

ಮಲಯಾಳಂ ಸ್ಟಾರ್ ನಟ ಮೋಹನ್ಲಾಲ್ ಅವರ ಪುತ್ರ ಪ್ರಣವ್ ಮೋಹನ್ಲಾಲ್ ನಟಿಸಿರುವ ‘ಡಿಯಿಸ್ ಇರೆ’ ಸಿನಿಮಾ ಇದೇ ವಾರ ಒಟಿಟಿಗೆ ಬಂದಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಮೆಚ್ಚುಗೆ ಗಳಿಸಿದ್ದ ಈ ಹಾರರ್ ಸಿನಿಮಾವನ್ನು ಈಗ ಜಿಯೋ ಹಾಟ್ಸ್ಟಾರ್ನಲ್ಲಿ ವೀಕ್ಷಿಸಬಹುದಾಗಿದೆ.

ರಶ್ಮಿಕಾ ಮಂದಣ್ಣ ನಟಿಸಿರುವ ಹಿಂದಿ ಸಿನಿಮಾ ‘ಥಮ’ ಸಹ ಈ ವಾರ ಒಟಿಟಿಗೆ ಬಂದಿದೆ. ಈ ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ದೆವ್ವದ ಪಾತ್ರದಲ್ಲಿ ನಟಿಸಿದ್ದಾರೆ. ಆಯುಷ್ಮಾನ್ ಖುರಾನಾ ಈ ಸಿನಿಮಾದ ನಾಯಕ. ಸಿನಿಮಾವನ್ನು ಅಮೆಜಾನ್ ಪ್ರೈಂನಲ್ಲಿ ವೀಕ್ಷಿಸಬಹುದು. ಆದರೆ ಹಣ ಕೊಟ್ಟು, ಡಿಸೆಂಬರ್ 19ರ ಬಳಿಕ ಉಚಿತವಾಗಿ ನೋಡಬಹುದು.




