
ರಾಜ್ ಮತ್ತು ಡಿಕೆ ಭಾರತದ ವೆಬ್ ಸೀರಿಸ್ ಲೋಕದಲ್ಲಿ ಡಾಮಿನೇಷನ್ ಸಾಧಿಸಿದ್ದಾರೆ ಎಂದರೂ ತಪ್ಪಾಗಲಾರದು. ಇವರು ಅದ್ಭುತ ವೆಬ್ ಸೀರಿಸ್ಗಳನ್ನು ನೀಡುತ್ತಿದ್ದಾರೆ. ಈಗ ‘ಫ್ಯಾಮಿಲಿ ಮ್ಯಾನ್ 3’ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಇದರಲ್ಲಿ ಮನೋಜ್ ಬಾಜ್ಪಾಯಿ ಹೀರೋ. ಈ ಸರಣಿಯ ಬಳಿಕ ‘ಫರ್ಜಿ 2’ (Farzi 2) ಬಗ್ಗೆ ಮಾಹಿತಿ ಸಿಕ್ಕಿದೆ. ಈ ಸರಣಿ ಯಾವಾಗ ರಿಲೀಸ್ ಆಗುತ್ತದೆ ಎನ್ನುವ ಮಾಹಿತಿ ನೀಡಲಾಗಿದೆ.
ರಾಜ್ ಮತ್ತು ಡಿಕೆ ಅವರು ‘ಫ್ಯಾಮಿಲಿ ಮ್ಯಾನ್’ ಸರಣಿ ಬಳಿಕ ಸಾಕಷ್ಟು ವೆಬ್ ಸೀರಿಸ್ಗಳನ್ನು ನಿರ್ದೇಶನ ಮಾಡಿದರು. ಇದರಲ್ಲಿ ಸಾಕಷ್ಟು ಗಮನ ಸೆಳೆದಿದ್ದರಲ್ಲಿ ‘ಫರ್ಜಿ’ ಕೂಡ ಒಂದು. ವಿಜಯ್ ಸೇತುಪತಿ, ಶಾಹಿದ್ ಕಪೂರ್ ಮೊದಲಾದವರು ನಟಿಸಿದ್ದರು. ಪೇಂಟ್ ಮಾಡುವ ಕಲಾಕಾರ ಹೇಗೆ ನಕಲಿ ನೋಟು ಮುದ್ರಿಸೋ ದಂಧೆಗೆ ಇಳಿಯುತ್ತಾನೆ ಎಂಬ ಕಥೆಯನ್ನು ಇದು ಹೊಂದಿದೆ.
ಈ ಸರಣಿಯ ಕ್ಲೈಮ್ಯಾಕ್ಸ್ನಲ್ಲಿ ದೊಡ್ಡ ತಿರುವು ನೀಡಲಾಗಿತ್ತು. ನಂತರ ಏನಾಗುತ್ತದೆ ಎಂಬ ಕುತೂಹಲ ವೀಕ್ಷಕರಿಗೆ ಮೂಡಿತ್ತು. ಇದಕ್ಕೆ ಉತ್ತರ ಸಿಗೋ ಸಮಯ ಬಂದಿದೆ. 2026 ಕೊನೆಯಲ್ಲಿ ಅಥವಾ 2027ರ ಆರಂಭದಲ್ಲಿ ‘ಫರ್ಜಿ 2’ ಸರಣಿ ರಿಲೀಸ್ ಆಗುವ ಸಾಧ್ಯತೆ ಇದೆಯಂತೆ.
ಈ ಬಗ್ಗೆ ಸರಣಿಯ ರಾಶಿ ಖನ್ನಾ ಅವರು ಹೇಳಿದ್ದಾರೆ. ಅವರು ಕೂಡ ‘ಫರ್ಜಿ’ಯಲ್ಲಿ ನಟಿಸಿದ್ದರು. ‘2026ರ ಜನವರಿಯಲ್ಲಿ ಫರ್ಜಿ ಶೂಟಿಂಗ್ ನಡೆಯಲಿದೆ. ಮುಂದಿನ ವರ್ಷ ಕೊನೆಯಲ್ಲಿ ಅಥವಾ 2027ರ ಆರಂಭದಲ್ಲಿ ಸರಣಿ ರಿಲೀಸ್ ಆಗಲಿದೆ. ಕಥೆ ಏನು ಎಂಬುದು ನನಗೆ ತಿಳಿದಿಲ್ಲ’ ಎಂದು ಅವರು ಹೇಳಿದ್ದಾರೆ. ಇದನ್ನು ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
ಇದನ್ನೂ ಓದಿ: ದರ್ಶನ್ ವಿಚಾರದಲ್ಲಿ ಲೀಲಾವತಿಗೆ ಕೊಟ್ಟ ಮಾತು ಉಳಿಸಿಕೊಂಡ ವಿನೋದ್ ರಾಜ್
ರಾಜ್ ಹಾಗೂ ಡಿಕೆ ಸರಣಿಯಲ್ಲಿ ಸಸ್ಪೆನ್ಸ್ ಹೈಲೈಟ್ ಆಗಿರುತ್ತದೆ. ‘ಫರ್ಜಿ’ ಸರಣಿ ಗಮನ ಸೆಳೆಯಿತು. ಈ ಸರಣಿಯಲ್ಲಿ ಶ್ರೀಕಾಂತ್ ತಿವಾರಿ ಫೋನ್ನಲ್ಲಿ ಮಾತನಾಡುತ್ತಾರೆ. ‘ಫ್ಯಾಮಿಲಿ ಮ್ಯಾನ್ 3’ನಲ್ಲಿ ವಿಜಯ್ ಸೇತುಪತಿ ಅವರ ಅತಿಥಿ ಪಾತ್ರ ಇದೆ. ಇದು ‘ಫರ್ಜಿ’ ಚಿತ್ರದ ಪಾತ್ರವೇ ಇಲ್ಲಿಯೂ ತೋರಿಸಲಾಗಿದೆ. ‘ಫರ್ಜಿ 2’ ಅಲ್ಲಿ ಶ್ರೀಕಾಂತ್ ತಿವಾರಿ ಬರಹಬುದು ಎನ್ನಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.